Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮನೆಯ ಗೋಡೆಯ ಬಣ್ಣ, ಹೀಗಿದ್ದರೆ ಚೆನ್ನ....
ಮನೆ ಮಂದಿರದಂತೆ ಇರಬೇಕೆಂಬ ಮಾತಿದೆ. ಮಂದಿರವೆಂದರೆ ನಾವು ದೇವರನ್ನು ಪೂಜಿಸುವಂತಹ ಸ್ಥಳ. ಅಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿರುತ್ತದೆ. ಮನೆ ಕೂಡ ಅದೇ ರೀತಿಯಲ್ಲಿ ಇರಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ಹೆಚ್ಚಿನವರಿಗೆ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.
ಅದರಲ್ಲೂ ನಾವು ವಾಸಿಸುವ ಕೋಣೆ ನೋಡುಗರನ್ನು ಆಕರ್ಷಿಸುವಂತಿರಬೇಕು. ಇಲ್ಲದಿದ್ದರೆ ಬಂದಂತವರು ಮನೆಯ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಹುದು. ಹೊರಗಿನವರು ಬಂದಾಗ ಅವರಿಗೆ ಮೊದಲು ಕಾಣಿಸುವುದೇ ವಾಸಿಸುವ ಕೋಣೆ.

ಈ ಕೋಣೆಯನ್ನು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಂಡರೆ ನಿಮ್ಮ ಮನೆಯ ಬಗ್ಗೆ ಪ್ರಶಂಸೆಯ ಮಳೆ ಸುರಿಯುತ್ತದೆ. ಪೀಠೋಪಕರಣಗಳನ್ನು ಇಟ್ಟುಕೊಂಡ ಮಾತ್ರಕ್ಕೆ ವಾಸಿಸುವ ಕೋಣೆ ಅಚ್ಚುಕಟ್ಟಾಗಿದೆ ಎಂದು ಹೇಳಿಕೊಳ್ಳಲಾಗದು. ಯಾಕೆಂದರೆ ಕೇವಲ ಪೀಠೋಪಕರಣದಿಂದ ಯಾರನ್ನೂ ಸೆಳೆಯಲು ಸಾಧ್ಯವಿಲ್ಲ.
ಅದರ ಬಣ್ಣ ಮತ್ತು ಗೋಡೆಗಳ ಬಣ್ಣ ಕೂಡ ಮಹತ್ವವನ್ನು ಪಡೆಯುತ್ತದೆ. ಹೊಸ ಬಣ್ಣ ಮನೆಯ ಯಾವುದೇ ಭಾಗಕ್ಕೂ ಹೊಸ ಕಳೆಯನ್ನು ನೀಡುವುದು. ನೀವು ವಾಸಿಸುವ ಕೋಣೆಗೆ ಯಾವ ರೀತಿಯ ಬಣ್ಣಗಳನ್ನು ಬಳಿಯಬೇಕು ಎನ್ನುವ ಬಗ್ಗೆ ನಾವು ನಿಮಗೆ ನೆರವಾಗಲಿದ್ದೇವೆ. ಈ ಲೇಖನವನ್ನು ಓದಿಕೊಂಡ ಬಳಿಕ ನೀವು ವಾಸಿಸುವ ಕೋಣೆಯನ್ನು ಸರಿಪಡಿಸಿಕೊಳ್ಳಿ.
ಭೂಮಿಬಣ್ಣ ಮತ್ತು ನೀಲಿ
ನೀಲಿ ಬಣ್ಣವನ್ನು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇಂತಹ ನೀಲಿ ಬಣ್ಣವನ್ನು ಭೂಮಿಯ ಬಣ್ಣಗಳಾದ ಮರ, ಮರಳು ಕಂದು ಮತ್ತು ಶ್ರೀಮಂತ ಕಂದು ಬಣ್ಣದ ಜತೆ ಸೇರಿಸಿ ಬಳಿದಾಗ ಆಗ ಕೋಣೆಗೆ ಒಂದು ವಿಶೇಷ ಹೊಳಪು ಬರುವುದು. ನೀಲಿ, ಕಡುನೀಲಿ, ಆಕಾಶನೀಲಿ ಅಥವಾ ಬೇಬಿ ನೀಲಿ ಬಣ್ಣಗಳು ವಾಸದ ಕೋಣೆಗೆ ಆಕರ್ಷಕವಾಗಿ ಕಾಣಿಸುತ್ತದೆ.
ಬೂದು ಮತ್ತು ಹಳದಿ
ಈ ಮಿಶ್ರಣದ ಬಣ್ಣಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಈ ಬಣ್ಣವು ವಾಸಿಸುವ ಕೋಣೆಗೆ ವಿಶೇಷ ಮೆರಗು ನೀಡಿ ಶಕ್ತಿಯನ್ನು ತುಂಬುವುದು. ಈ ಬಣ್ಣವನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.
ವಧು ಗುಲಾಬಿ ಮತ್ತು ಕಡು ಕಂದು ಬಣ್ಣ
ವಾಸಿಸುವ ಕೋಣೆಗೆ ವಧು ಗುಲಾಬಿ ಬಣ್ಣವನ್ನು ಹಚ್ಚಬೇಕು ಮತ್ತು ಕೆಲವು ಭಾಗಗಳಿಗೆ ಕಡು ಕಂದುಬಣ್ಣವನ್ನು ಹಚ್ಚುವುದರಿಂದ ಕೋಣೆಗೆ ಹೊಸ ರೂಪ ನೀಡಿದಂತಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಪೀಠೋಪಕರಣಗಳಿಗೆ ಕೂಡ ಕಡು ಕಂದು ಬಣ್ಣವನ್ನು ಬಳಿದರೆ ಮತ್ತಷ್ಟು ಸುಂದರವಾಗುವುದು.
ಕಡುಹಸಿರು ಮತ್ತು ಬಿಳಿ ಬಣ್ಣ
ಮಿಶ್ರಣವು ನಿಮ್ಮ ವಾಸಿಸುವ ಕೋಣೆಯ ಅಂದವನ್ನುಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಈ ಬಣ್ಣಗಳು ನಿಮ್ಮ ಕೋಣೆಯನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಆದರೆ ಕಣ್ಣಿಗೆ ಮುದ ನೀಡುವುದು. ಹಸಿರು ಮತ್ತು ಬಿಳಿ ಬಣ್ಣಗಳನ್ನು ಸಮತೋಲಿತವಾಗಿ ಬಳಿದರೆ ಕೋಣೆ ನೋಡುಗರನ್ನು ಆಕರ್ಷಿಸುವುದು.



Click it and Unblock the Notifications



