For Quick Alerts
ALLOW NOTIFICATIONS  
For Daily Alerts

ಚಕಿತಗೊಳಿಸುವ ವಾಸ್ತು ದೋಷದ ಮಹಾ ರಹಸ್ಯ!

By Super
|

ಯಾವುದೇ ಮನೆಯಲ್ಲಿ ನೆಮ್ಮದಿ, ಶಾಂತಿ ಸಮೃದ್ಧಿ ತುಳುಕಲು ವಾಸ್ತುವಿನ ಪ್ರಕಾರ ಮನೆಯ ಭಾಗಗಳನ್ನಿರಿಸುವುದರ ಅಗತ್ಯತೆ ಈಗ ಎಲ್ಲರಿಗೂ ತಿಳಿದಿದೆ. ಗೃಹಪ್ರವೇಶದ ಬಳಿಕವೂ ಅರಿವಿರದೇ ಆಗುವ ಕೆಲವೊಂದು ತಪ್ಪುಗಳ ಕಾರಣ ವಾಸ್ತುದೋಷ ಕಂಡುಬರುತ್ತದೆ. ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ವಾಸ್ತು ಪಂಡಿತರ ಪ್ರಕಾರ ವಾಸ್ತುದೋಷಕ್ಕೆ ಒಟ್ಟು ಐದು ಬಗೆಯ ವಸ್ತುಗಳು ಕಾರಣವಾಗಿವೆ. ವಾಸ್ತುದೋಷಕ್ಕೆ ಕಾರಣವಾಗಿರುವ ಈ ಐದು ವಸ್ತುಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅಮೂಲ್ಯ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ಪ್ರಕಾರವನ್ನು ನಿಮಗೆ ಅರಿವಿಲ್ಲದೇ ಅನುಸರಿಸಿದ್ದರೆ ತಕ್ಷಣ ಇದನ್ನು ಸರಿಪಡಿಸಿ ಮನೆಯಲ್ಲಿ ಶಾಂತಿ ನೆಮ್ಮದಿ ಮತ್ತು ಸಮೃದ್ಧಿ ಬರುವಂತಾಗುವಲ್ಲಿ ಸಹಕರಿಸಿ...

ಒಣಹೂವುಗಳು ಮನೆಯಲ್ಲಿರುವುದು ತರವಲ್ಲ

ಒಣಹೂವುಗಳು ಮನೆಯಲ್ಲಿರುವುದು ತರವಲ್ಲ

ತಾಜಾ ಹೂವುಗಳು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ತಮ್ಮೊಂದಿಗೆ ತರುತ್ತವೆ. ಇದೇ ಕಾರಣಕ್ಕೆ ಮನೆಯ ದೇವರ ಪೂಜೆಗೂ ತಾಜಾಹೂವುಗಳನ್ನೇ ಬಳಸಲಾಗುತ್ತದೆ. ಆದರೆ ಈ ಹೂವುಗಳ ಆಯಸ್ಸು ಅಲ್ಪವಾಗಿದ್ದು ಒಂದೇ ದಿನದ ಬಳಿಕ ಬಾಡಲು ತೊಡಗುತ್ತವೆ. ಅಂದರೆ ಅದರಲ್ಲಿರುವ ಶಕ್ತಿ ಪೂರ್ಣವಾಗಿ ಹೊರಸೂಸಿದಂತಾಯಿತು. ಬಾಡಿದ ಮತ್ತು ಬಾಡಿದ ಬಳಿಕ ಒಣಗಿದ ಹೂಗಳನ್ನು ನಿವಾರಿಸಿ ಮನೆಯಿಂದ ಹೊರಹಾಕಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy- Dailybhaskar

ಒಣಹೂವುಗಳು ಮನೆಯಲ್ಲಿರುವುದು ತರವಲ್ಲ

ಒಣಹೂವುಗಳು ಮನೆಯಲ್ಲಿರುವುದು ತರವಲ್ಲ

ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೇ ತಾಜಾ ಹೂವುಗಳನ್ನು ಅಲಂಕರಿಸಬೇಕಾದರೆ ಮಲಗುವ ಕೋಣೆಗಿಂತಲೂ ನಡುಮನೆಯೇ ಉತ್ತಮ ಎಂದೂ ಹೇಳುತ್ತದೆ.

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ಒಂದು ವೇಳೆ ನೀವು ಅಲಂಕಾರಿಕಾ ಗಿಡಗಳ ಪ್ರಿಯರಾಗಿದ್ದು ಮನೆಯಲ್ಲಿ ನೂರಾರು ಅಲಂಕಾರಿಕಾ ಗಿಡಗಳಿದ್ದರೆ ನಿಮ್ಮ ಮನೆಯ ದಿಕ್ಕುಗಳನ್ನು ಪರಾಮರ್ಶಿಸಿ ನೈಋತ್ಯ ದಿಕ್ಕಿನಲ್ಲಿರುವ ಅಷ್ಟೂ ಕುಂಡಗಳನ್ನು ಬೇರೆಡೆ ಸ್ಥಳಾಂತರಿಸಿ. ಏಕೆಂದರೆ ಈ ದಿಕ್ಕು ನಿಮ್ಮ ಮನೆಗೆ ಧನಾತ್ಮಕ ಶಕ್ತಿ ಆಗಮಿಸುವ ದಾರಿಯಾಗಿದ್ದು ಇಲ್ಲಿ ಅಡ್ಡ ಇರುವ ಗಿಡಗಳು ಶಕ್ತಿಯನ್ನು ಮನೆ ಪ್ರವೇಶಿಸದಂತೆ ತಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ಇದರ ಪರಿಣಾಮವಾಗಿ ಮನೆಯವರಲ್ಲಿ ಋಣಾತ್ಮಕ ಶಕ್ತಿ ಸಂಗ್ರಹವಾಗಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ಮನೆಯ ವಿವಾಹ ಸಂಭ್ರಮಗಳಲ್ಲಿ ತಡವಾಗುವುದು, ಪತಿ ಪತ್ನಿಯರಲ್ಲಿ ಹೆಚ್ಚುವ ವಿರಸ, ವಿಚ್ಚೇದನದವರೆಗೂ ಹೋಗುವ ತಾಪ ಮೊದಲಾದವು ಇದರ ಪರಿಣಾಮಗಳಾಗಿವೆ. ನೆನಪಿಡಿ, ಋಣಾತ್ಮಕ ಶಕ್ತಿಗಳು ಎಲ್ಲಾ ದಿಕ್ಕಿನಿಂದ ಆಗಮಿಸುತ್ತವೆ.

ದಕ್ಷಿಣ ದಿಕ್ಕಿನಲ್ಲಿ

ದಕ್ಷಿಣ ದಿಕ್ಕಿನಲ್ಲಿ

ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ದಟ್ಟ ನೀಲಿ, ಆಕಾಶ ನೀಲಿ ಬಣ್ಣವಿರುವ ಮತ್ತು ಹರಿಯುವ ನೀರು ಅಥವಾ ಜಲಪಾತದ ವರ್ಣಚಿತ್ರಗಳನ್ನು ಇರಿಸಬೇಡಿ. ಏಕೆಂದರೆ ನಿಮ್ಮ ಮನೆಯ ಹಣಕಾಸಿನ ಸಮಸ್ಯೆಗೆ ಇವು ಪ್ರಮುಖ ಕಾರಣವಾಗಬಲ್ಲವು. ಒಂದು ವೇಳೆ ಮನೆಯಲ್ಲಿ ಮಕ್ಕಳಿದ್ದರೆ ಅವರು ಕಲಿಯುವ ವಿದ್ಯೆಯ ಮೇಲೂ ಇದು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

Image courtesy - dailybhaskar

ಮರದ ಡ್ರಾಗನ್ ಅಥವಾ ಡ್ರ್ಯಾಗನ್ ನ ವರ್ಣಚಿತ್ರವಿದ್ದರೆ ಕೇವಲ ಪೂರ್ವದಿಕ್ಕಿನಲ್ಲಿರಲಿ

ಮರದ ಡ್ರಾಗನ್ ಅಥವಾ ಡ್ರ್ಯಾಗನ್ ನ ವರ್ಣಚಿತ್ರವಿದ್ದರೆ ಕೇವಲ ಪೂರ್ವದಿಕ್ಕಿನಲ್ಲಿರಲಿ

ಮನೆಯೊಳಗೆ ಮರದ ಡ್ರಾಗನ್ ಇದ್ದರೆ ಶುಭವಾಗುತ್ತದೆ ಎಂದು ಚೀನೀಯರು ನಂಬುತ್ತಾರೆ. ಭಾರತದ ವಾಸ್ತುಶಾಸ್ತ್ರವೂ ಇದನ್ನು ಅನುಮೋದಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮರದ ಡ್ರಾಗನ್ ಕೇವಲ ಪೂರ್ವದಿಕ್ಕಿನಲ್ಲಿರಲಿ

ಮರದ ಡ್ರಾಗನ್ ಕೇವಲ ಪೂರ್ವದಿಕ್ಕಿನಲ್ಲಿರಲಿ

ಆದರೆ ಮರದ ಡ್ರ್ಯಾಗನ್ ಅಥವಾ ಡ್ರ್ಯಾಗನ್ ನ ವರ್ಣಚಿತ್ರವಿದ್ದರೆ ಅದು ಮನೆಯ ಕೇವಲ ಪೂರ್ವಭಾಗದಲ್ಲಿದ್ದರೆ ಮಾತ್ರ ಶುಭವಾಗುವುದೇ ಹೊರತು ಬೇರೆ ಯಾವುದೇ ದಿಕ್ಕಿನಲ್ಲಿದ್ದರೆ ಸಂಕಷ್ಟಗಳನ್ನು ಆಹ್ವಾನಿಸುತ್ತದೆ. ಈ ಸಂಕಷ್ಟಗಳಲ್ಲಿ ಪ್ರಮುಖವಾಗಿ ಮನೆಯ ಸದಸ್ಯರ ಆರೋಗ್ಯ ಬಾಧೆಗೊಳಗಾಗುವುದು ಆಗಿದೆ.

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಲಿಂಬೆ, ಕಿತ್ತಳೆ ಮೊದಲಾದ ಜಾತಿಯ ಮರಗಳು ನಿಮ್ಮ ಮನೆಯ ಆವರಣದಲ್ಲಿದ್ದರೆ ವಾಸ್ತುಶಾಸ್ತ್ರದ ಪ್ರಕಾರ ಇವು ಮನೆಗೆ ಶುಭ ತರುತ್ತವೆ. ಅದರಲ್ಲೂ ಕಿತ್ತಳೆ ಮರ ಮನೆಗೆ ಸ್ವರ್ಣ ತರುವ ಸಂಕೇತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy- Dailybhaskar

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಅಥವಾ ಈಗಿರುವುದಕ್ಕಿಂತಲೂ ಹೆಚ್ಚಿನ ವರಮಾನವನ್ನು ಬಯಸುವುದಾದರೆ ನಿಮ್ಮ ಮನೆಯ ಆವರಣದಲ್ಲಿ ಆಗ್ನೇಯ ದಿಕ್ಕಿನಲ್ಲೊಂದು ಕಿತ್ತಳೆ ಗಿಡ ನೆಟ್ಟು ಚೆನ್ನಾಗಿ ಪೋಷಿಸಿ.

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಲಿಂಬೆಯ ಅಥವಾ ಕಿತ್ತಳೆ ಮರ ಆಗ್ನೇಯ ದಿಕ್ಕಿನಲ್ಲಿರಲಿ

ಗಿಡ ಬೆಳೆಯುತ್ತಿದ್ದಂತೆಯೇ ನಿಮ್ಮ ಮನೆಗೆ ಆಗಮಿಸುವ ಋಣಾತ್ಮಕ ಶಕ್ತಿಗಳನ್ನು ಕಿತ್ತಳೆ ಗಿಡ ಅಟ್ಟಿ ಧನಾತ್ಮಕ ಶಕ್ತಿಗಳು ಸಂಗ್ರಹವಾಗುವಂತೆ ನೋಡಿಕೊಳ್ಳುತ್ತದೆ. ಇದು ಮನೆಯಲ್ಲಿ ಸುಖ, ಶಾಂತಿ ಮತ್ತು ಹೆಚ್ಚಿನ ಆದಾಯಕ್ಕೆ ಮೂಲವಾಗುತ್ತದೆ.

English summary

Believe it or not: A big reason for Vastu Dosha

Do you know that there are five things in your house that become a major cause for vastu dosha? If you pay a little attention around your home, you can avoid creating vastu dosha and happiness will flow.
Story first published: Monday, October 12, 2015, 20:01 [IST]
X
Desktop Bottom Promotion