For Quick Alerts
ALLOW NOTIFICATIONS  
For Daily Alerts

ಗೋಡೆ ಮೇಲೆ ಚಿತ್ತಾರ ಬಿಡಿಸಿವೆ ಭಾವಚಿತ್ರಗಳು

|
Living Room Wall Decorations With Photos
ನೀವು ನೋಡಿರಬಹುದು. ಹಳೆಯ ಮನೆಗಳ ಗೋಡೆಗಳಲ್ಲಿ ಸಾಲು ಸಾಲು ಭಾವಚಿತ್ರಗಳಿರುತ್ತವೆ. ಅಗಲಿದ ಅಜ್ಜ ಅಜ್ಜಿ. ಇತ್ತೀಚೆಗೆ ಮದುವೆಯಾದ ನವಜೋಡಿ. ಮಿಲಿಟರಿಯಲ್ಲಿರುವ ಚಿಕ್ಕಪ್ಪ, ಹಲವು ದಶಕದ ಹಿಂದೆ ತೆಗೆದ ಕಪ್ಪು ಬಿಳುಪಿನ ಶಾಲಾ ಫೋಟೊ. ಹೀಗೆ ಗೋಡೆಗಳಲ್ಲಿ ಸಾಲು ಸಾಲು ಭಾವಚಿತ್ರಗಳು ಕಣ್ಣಿಗೆ ಬೀಳುತ್ತವೆ.

ಆದರೆ ಈಗ ಕಾಲ ಬದಲಾಗಿದೆ. ಗೋಡೆಗೊಂದು ಮೊಳೆ ಬಡಿಯಲು ಮನಸ್ಸಾಗದು. ಗೋಡೆಯಲ್ಲಿ ಫೋಟೊ ನೇತು ಹಾಕುವುದು ಕಡಿಮೆಯಾಗಿದೆ. ಆದರೆ ಕೆಲವರು ಇಂತಹ ಫೋಟೊಗಳನ್ನು ನೇತು ಹಾಕುವ ಮೂಲಕ ಮನೆಯ ಗೋಡೆಯ ಸೌಂದರ್ಯವನ್ನು ಹೆಚ್ಚಿಸುತ್ತಾರೆ.

ಮನೆಯ ಗೋಡೆಯ ಅಂದಕ್ಕೆ ಸೂಕ್ತವಾಗುವ ಭಾವಚಿತ್ರಗಳನ್ನು ನೇತಾಡಿಸುವ ಮೂಲಕ ಮನೆಯ ಅಂದ ಹೆಚ್ಚಿಸಬಹುದು. ಭಾವಚಿತ್ರಗಳು ಮತ್ತು ಪೇಯಿಟಿಂಗ್ ಮೂಲಕ ಮನೆಯ ಗೋಡೆಯ ಸೌಂದರ್ಯ ಹೆಚ್ಚಿಸಲು ಇಲ್ಲೊಂದಿಷ್ಟು ಸಲಹೆಗಳಿವೆ.

ಕುಟುಂಬದ ಭಾವಚಿತ್ರಗಳು:
ಭಾವಚಿತ್ರವೆಂದರೆ ಬರೀಯ ಕಾಗದವಲ್ಲ. ಅಲ್ಲಿ ನೆನಪುಗಳಿವೆ. ಮಧುರ ಕ್ಷಣಗಳಿವೆ.ಮನೆ ಸದಸ್ಯರ ಫೋಟೊಗಳು ಗೋಡೆಯನ್ನು ಅಲಂಕರಿಸಿದ್ದರೆ ಅವುಗಳನ್ನು ನೋಡುವಾಗ ಕೆಲವೊಂದು ಮಧುರ ಕ್ಷಣಗಳು ನೆನಪಿಗೆ ಬರುತ್ತದೆ. ಆದರೆ ಇಂತಹ ಭಾವಚಿತ್ರಗಳನ್ನು ಸಮರ್ಪಕ ಸ್ಥಳದಲ್ಲಿ ನೇತಾಡಿಸಬೇಕು. ಸೋಫಾದ ಹಿಂದುಗಡೆ, ಲೀವಿಂಗ್ ರೂಂ ಗೆ ಪ್ರವೇಶಿಸುವಾಗ ಕಾಣುವ ಸ್ಥಳದಲ್ಲಿ ಫೋಟೊಗಳನ್ನು ನೇತು ಹಾಕಬೇಕು. ಫೋಟೊಗಳ ಸಂಖ್ಯೆ ಕಡಿಮೆ ಇದ್ದಷ್ಟು ಗೋಡೆ ಚೆನ್ನಾಗಿ ಕಾಣುತ್ತದೆ.

ಫೋಟೊ ಶೂಟ್: ವಿಶೇಷ ನೆರಳು ಬೆಳಕು ಬಳಸಿ ತೆಗೆದ ಛಾಯಾಚಿತ್ರಗಳನ್ನು ಗೋಡೆಯ ಅಂದವನ್ನು ಹೆಚ್ಚಿಸುತ್ತವೆ. ಅಂತಹ ಫೋಟೊಗಳಿಗೆ ಗೋಡೆಯಲ್ಲಿ ಆದ್ಯತೆ ಇರಲಿ. ನಿಸರ್ಗದ ಸೊಬಗು, ಜಲಪಾತ, ಪ್ರಾಣಿ ಪಕ್ಷಿಗಳ ಭಾವಚಿತ್ರಗಳು ನಿಮ್ಮ ಗೋಡೆಗೆ ವಿಶೇಷ ಮೆರುಗು ನೀಡುತ್ತವೆ.

ಮಗ ಹೊಸ ಮನೆಕಟ್ಟಿದಾಗ ಅಮ್ಮನ ಹಳೆಯ ಫೋಟೊ ಅಟ್ಟ ಸೇರದಿರಲಿ.

English summary

Living Room Wall Decorations With Photos | Home Decoration | ಫೋಟೊದಿಂದ ಲೀವಿಂಗ್ ರೂಮ್ ಗೋಡೆಯನ್ನು ಅಲಂಕರಿಸುವ ವಿಧಾನ | ಮನೆ ಅಲಂಕಾರ

There are many ideas to decorate your living room.When it comes to wall decorations, you start thinking if paintings with spot lights will look good or family photos will be better.
Story first published: Saturday, January 14, 2012, 13:47 [IST]
X
Desktop Bottom Promotion