For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಮೊದಲ ಬಾರಿಗೆ ಝೀಕಾ ವೈರಸ್ ಸೋಂಕು ಪತ್ತೆ: ಈ ಅಪಾಯಕಾರಿ ಕಾಯಿಲೆಯ ಲಕ್ಷಣಗಳೇನು? ತಡೆಗಟ್ಟಬಹುದೇ?

|

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಝೀಕಾವೈರಸ್‌ ಸೋಂಕು ಪತ್ತೆಯಾಗಿದ್ದು ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಯಲ್ಲಿ ಈ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಖಚಿತ ಪಡಿಸಿದೆ.

Zika virus

ಝೀಕಾ ವೈರಸ್‌ ಅಪಾಯಕಾರಿಯಾದ ಸೋಂಕು ಆಗಿದ್ದು , ಈ ಝೀಕಾ ವೈರಸ್‌ ಹೇಗೆ ಹರಡುವುದು, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಝೀಕಾ ವೈರಸ್‌ ಇದೇ ಮೊದಲ ಬಾರಿ ಪತ್ತೆಯಾಗಿರುವುದೇ?

ಝೀಕಾ ವೈರಸ್‌ ಇದೇ ಮೊದಲ ಬಾರಿ ಪತ್ತೆಯಾಗಿರುವುದೇ?

ಕರ್ನಾಟಕದಲ್ಲಿ ಝೀಕಾ ವೈರಸ್‌ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಆದರೆ ಭಾರತದಲ್ಲಿ 2018ರಲ್ಲಿ ಕೂಡ ಝೀಕಾ ವೈರಸ್‌ ಪ್ರಕರಣ ಪತ್ತೆಯಾಗಿತ್ತು.

ರಾಜಾಸ್ಥಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಈ ವೈರಸ್‌ ಪತ್ತೆಯಾಗಿತ್ತು. ಸುಮಾರು 280 ಜನರಲ್ಲಿ ಈ ಸೋಂಕು ಕಂಡು ಬಂದಿತ್ತು, ಮೂವರು ಸಾವನ್ನಪ್ಪಿದ್ದರು.

ಝೀಕಾ ವೈರಸ್ ಹೇಗೆ ಹರಡುವುದು?

* ಝೀಕಾ ವೈರಸ್‌ ಸೋಂಕು ಸೊಳ್ಳೆಗಳು ಕಚ್ಚಿದಾಗ ಹರಡುವುದು. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆ ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುವುದು. ಝೀಕಾ ವೈರಸ್‌ ತಗುಲಿರುವ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗ ಸೋಂಕು ಹರಡುವುದು. ಝೀಕಾ ವೈರಸ್‌ ಹಗಲು ಹೊತ್ತಿನಲ್ಲಿ ಕಂಡು ಬರುವ ಸೊಳ್ಳೆಯ ಮುಖಾಂತರ ಹರಡುವುದು.

* ಝೀಕಾ ವೈರಸ್‌ ಸೋಂಕಿತರ ರಕ್ತ ಪಡೆದರೂ ಈ ಸೋಂಕು ಹರಡುವುದು.

* ಝೀಕಾ ವೈರಸ್‌ ಸೋಂಕಿ ಸೋಂಕಿತರ ಜೊತೆ ಲೈಂಗಿಕಕ್ರಿಯೆ ನಡೆಸಿದರೂ ಸೋಂಕು ಹರಡುವುದು.

* ಈ ವೈರಸ್‌ ತಗುಲಿರುವವರ ದೇಹದ ದ್ರವ ತಗುಲಿದರೂ ಹರಡಿದರೂ ಸೋಂಕು ಹರಡುತ್ತದೆ.

* ಝೀಕಾ ವೈರಸ್‌ ತಗುಲಿರುವ ಗರ್ಭಿಣಿಗೆ ಜನಿಸಿದ ಮಗುವಿಗೂ ಈ ವೈರಸ್‌ ಹರಡುವುದು.

ಝೀಕಾವೈರಸ್‌ ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ ಏಕೆ?

ಝೀಕಾವೈರಸ್‌ ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ ಏಕೆ?

ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ವೈರಸ್‌ ತಗುಲಿದರೆ ತುಂಬಾನೇ ಅಪಾಯಕಾರಿ. ಗರ್ಭಿಣಿಯರಿಗೆ ಝೀಕಾ ವೈರಸ್ ತಗುಲಿದರೆ ಈ ಅಪಾಯಗಳಿವೆ.

* ಅವಧಿಪೂರ್ವ ಹೆರಿಗೆಯಾಗುವುದು

* ಹೊಟ್ಟೆಯಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಗೆ ಪೆಟ್ಟಾಗುವುದು.

* ಮೈಕ್ರೋಸೆಫಾಲಿ ಎಂಬ ಸಮಸ್ಯೆ ಕಂಡು ಬರುವುದು.

* ಝೀಕಾವೈರಸ್‌ ತಗುಲಿದ ಗರ್ಭಿಣಿಗೆ ಜನಿಸಿದ ಮಗುವಿನಲ್ಲೂ ಈ ವೈರಸ್ ಕಂಡು ಬರುವುದು,

 ಝೀಕಾ ವೈರಸ್ ಲಕ್ಷಣಗಳೇನು?

ಝೀಕಾ ವೈರಸ್ ಲಕ್ಷಣಗಳೇನು?

* ಚಳಿ ಜ್ವರ

* ಚರ್ಮದಲ್ಲಿ ಕೆಂಪು ಗುಳ್ಳೆಗಳು

* ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದು

* ಸ್ನಾಯುಗಳಲ್ಲಿ ಸೆಳೆತ ಹಾಗೂ ತುಂಬಾ ಕೀಲುನೋವು

* ವಿಪರೀತ ತಲೆನೋವು

* ವಿರೀತ ಸುಸ್ತು

* ಹೊಟ್ಟೆ ನೋವು, ವಾಂತಿ, ಬೇಧಿ

 ಝೀಕಾ ವೈರಸ್‌ ತಡೆಗಟ್ಟಲು ಲಸಿಕೆ ಲಭ್ಯವಿದೆಯೇ?

ಝೀಕಾ ವೈರಸ್‌ ತಡೆಗಟ್ಟಲು ಲಸಿಕೆ ಲಭ್ಯವಿದೆಯೇ?

ಝೀಕಾ ವೈರಸ್‌ಗೆ ನಿರ್ಧಿಷ್ಟವಾದ ಯಾವುದೇ ಲಸಿಕೆಯಿಲ್ಲ. ಝೀಕಾ ವೈರಸ್‌ ತಗುಲಿದರೆ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಈ ರೋಗ ತಗುಲಿದವರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಆದ್ದರಿಂದ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು, ಬಿಸಿ-ಬಿಸಿಯಾದ ನೀರು ಕುಡಿಯಿರಿ, ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ.

ಝೀಕಾ ವೈರಸ್‌ ಬಾರದಂತೆ ತಡೆಯಲು ಏನು ಮಾಡಬೇಕು?

* ಝೀಕಾ ವೈರಸ್‌ ತಡೆಗಟ್ಟಲು ಪ್ರಥಮ ಮುನ್ನೆಚ್ಚರಿಕೆಯೆಂದರೆ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸುವುದು. ಅದರಲ್ಲೂ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ತುಂಬಾನೇ ಎಚ್ಚರವಹಿಸಬೇಕು.

* ಮನೆಯ ಸುತ್ತ-ಮುತ್ತ ಸೊಳ್ಳೆಗಳು ಮೊಟ್ಟೆ ಹಾಕದಂತೆ ಎಚ್ಚರವಹಿಸಿ, ನೀರು ನಿಲ್ಲಲು ಬಿಡಬೇಡಿ.

* ಮಲಗುವಾಗ ಸೊಳ್ಳೆ ಪರದೆ ಒಳಗಡೆ ಮಲಗಿ.

* ಸೊಳ್ಳೆ ನಾಶಪಡಿಸಲು ಔಷಧಿಗಳನ್ನು ಸಿಂಪಡಿಸಿ.

* ಗರ್ಭಿಣಿಯರು ಸೊಳ್ಳೆ ಕಚ್ಚದಂತೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಿ.

* ಮಕ್ಕಳಿಗೂ ತುಂಬು ತೋಳಿನ ಬಟ್ಟೆ ಧರಿಸಿಕೊಡಿ

* ಸೊಳ್ಳೆ ಕಚ್ಚದಂತೆ ಕ್ರೀಮ್‌ಗಳನ್ನು ಬಳಸಿ.

* ಝೀಕಾವೈರಸ್‌ ಪತ್ತೆಯಾದ ಕಡೆ ಪ್ರಯಾಣ ಮಾಡದಿರಿ, ಅಲ್ಲೇ ಇರುವವರು ಸೊಳ್ಳೆ ಕಚ್ಚದಂತೆ ತುಂಬಾನೇ ಮುನ್ನೆಚ್ಚರಿಕೆವಹಿಸಿ.

English summary

Zika virus 1st Case reported in Karnataka: Know Its Signs, Symptoms, Diagnosis and Precautions in kannada

Zika virus 1st Case reported in Karnataka: Is't Zika virus Is dangerous, what are the symptoms, what are the precautions should take,
Story first published: Tuesday, December 13, 2022, 20:00 [IST]
X
Desktop Bottom Promotion