For Quick Alerts
ALLOW NOTIFICATIONS  
For Daily Alerts

ಎಕ್ಸ್‌ರೇ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

|

ನಮಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಕೆಲವೊಂದು ಕಾಯಿಲೆಗಳನ್ನು ನೋಡಿದಾಗ ಅಥವಾ ರೋಗದ ಲಕ್ಷಣಗಳನ್ನು ನೋಡಿ ವೈದ್ಯರು ಕಾಯಿಲೆ ಯಾವುದೆಂದು ಪತ್ತೆ ಹಚ್ಚುತ್ತಾರೆ. ಇನ್ನು ಕೈ ಮುರಿದಾಗ, ಹೊಟ್ಟೆ ನೋವಿನ ಸಮಸ್ಯೆ ಉಂಟಾದಾಗ , ದೇಹದೊಳಗೆ ಬೇರೆ ಏನಾದರೂ ಸಮಸ್ಯೆ ಉಂಟಾದಾಗ ಕಾಯಿಲೆ ಯಾವುದೆಂದು ಪತ್ತೆ ಹಚ್ಚಲು ವೈದ್ಯರಿಗೆ ನೆರವಾಗುವುದೇ ಎಕ್ಸ್‌ರೇ ಅಥವಾ ಕ್ಷ ಕಿರಣಗಳು.

ಕ್ಷ ಕಿರಣಗಳು ಅತ್ಯಂತ ಉಪಯುಕ್ತವಾದ ವಿದ್ಯುದಾಯಸ್ಕಾಂತೀಯ ವಿಕಿರಣ ಶಕ್ತಿಯ ಒಂದು ರೂಪವಾಗಿದೆ. ಇವುಗಳನ್ನು 1895ರಲ್ಲಿವಿಲ್ಹೆಮ್ ರಾಂಟ್‌ಜನ್ ರವರು ಕಂಡುಹಿಡಿದರು. ಇದನ್ನು ಕಂಡುಹಿಡಿದಾಗ ಈ ಕಿರಣಗಳನ್ನು ಬಳಸಿ ಏನು ಮಾಡುವುದೆಂದೇ ತಿಳಿದಿರಲಿಲ್ಲ, ಈ ಕಿರಣಗಳ ಬಗ್ಗೆ ಹೆಚ್ಚೇನು ಗೊತ್ತಿಲ್ಲದ ಕಾರಣ 'X 'ಕಿರಣಗಳು ಎಂದು ಹೆಸರಿಸಿದರು. ನಂತರ ಈ ಕಿರಣಗಳನ್ನು ಬಳಸಿ, ದೇಹದೊಳಗಿನ ಅಂಗಗಳ ಬಗ್ಗೆ ತಿಳಿಯಲು ಬಳಿಸಲಾಯಿತು.

Xray

ಪ್ರತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಒಂದೆಲ್ಲಾ ಒಂದು ಕಾರಣಕ್ಕೆ ಎಕ್ಸ್‌ರೇ ತೆಗೆದುಕೊಂಡಿರುತ್ತೇವೆ. ಎಕ್ಸ್‌ರೇಯಲ್ಲಿ ಮೂಳೆಗಳು ಬಿಳಿಯಾಗಿ ಕಂಡರೆ, ದೇಹದಲ್ಲಿರುವ ಗ್ಯಾಸ್‌ ಕಪ್ಪಾಗಿ ಗೋಚರಿಸುವುದು. ಮೂಳೆ ಮುರಿತ ಉಂಟಾದಾಗ, ಕೆಮ್ಮು, ಹೊಟ್ಟೆ ನೋವು ಮುಂತಾದ ಸಮಸ್ಯೆವಿದ್ದಾಗ ವೈದ್ಯರು ಎಕ್ಸ್‌ರೇ ತೆಗೆಸುವಂತೆ ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ 3 ಬಗೆಯ ಎಕ್ಸ್‌ರೇ ಮಾಡಲಾಗುವುದು

1. ರೇಡಿಯೋಗ್ರಫಿ: ಈ ಬಗೆಯ ಎಕ್ಸ್‌ರೇಯನ್ನು ಹೆಚ್ಚಾಗಿ ಮಾಡಲಾಗುವುದು. ಮೂಳೆ ಮುರಿತ ಉಂಟಾದಾಗ, ಹಲ್ಲಿನ ಸಮಸ್ಯೆ, ಎದೆಯಲ್ಲಿ ಕಫ ಇದೆಯೇ ಎಂದು ಪರೀಕ್ಷಿಸಲು ಈ ಬಗೆಯ ಎಕ್ಸ್‌ರೇ ಮಾಡಲಾಗುವುದು. ಈ ಬಗೆಯ ಎಕ್ಸ್‌ರೇಯಲ್ಲಿ ಸ್ವಲ್ಪ ಎಕ್ಸ್‌ರೇ ಕಿರಣಗಳನ್ನು ಬಳಸಿ ಎಕ್ಸ್‌ರೇ ತೆಗೆಯಲಾಗುವುದು.

2. ಫ್ಲೋರೋಸ್ಕೋಪಿ: ಇದರಲ್ಲಿ ರೇಡಿಯೋಲಾಜಿಸ್ಟ್ ಅಥವಾ ರೇಡಿಯೋಗ್ರಾಫರ್ ರೋಗಿ ಎಕ್ಸ್‌ರೇ ಮೆಷಿನ್‌ನೊಳಗೆ ಹೋಗುವಾಗ ಆ ರೋಗಿಯ ದೇಹದ ಚುವಟಿಕೆಯ ಸ್ನ್ಯಾಪ್‌ಶಾಟ್‌ಗಳನ್ನು ತೆಗೆಯುತ್ತಾರೆ. ಉದಾಹರಣೆಗೆ ಊಟವಾದ ಬಳಿಕ ಕರುಳಿನ ಕಾರ್ಯ ನೋಡಲು ಈ ಎಕ್ಸ್‌ರೇ ವಿಧಾನ ಬಳಿಸಬಹುದು, ಈ ಬಗೆಯ ಎಕ್ಸ್‌ರೇಯಿಂದ ಕರುಳಿನ ಚಟುವಟಿಕೆ ಅರಿಯಲು ಸಹಾಯವವಾಗುತ್ತದೆ.

3. ಕಂಪ್ಯೂಟಡ್‌ ಟೊಮೊಗ್ರಫಿ(ಸಿಟಿ):ಇದೊಂದು ವಿಶೇಷ ರೀತಿಯ ಎಕ್ಸ್‌ರೇ ಆಗಿದೆ. ಸಿಟಿ ಸ್ಕ್ಯಾನರ್ ಕೇಂದ್ರದಲ್ಲಿ ಸಣ್ಣ ಸುರಂಗವನ್ನು ಹೊಂದಿರುವ ದೊಡ್ಡ, ಬಾಕ್ಸ್-ರೀತಿಯ ಯಂತ್ರದಂತೆ ಕಾಣುತ್ತದೆ. ಇದರ ಜೊತೆಯಲ್ಲಿ, ಸಿಟಿ ಸ್ಕ್ಯಾನರ್‌ಗಳು ಸಾಮಾನ್ಯವಾಗಿ ಪರೀಕ್ಷೆಯ ಟೇಬಲ್ ಅನ್ನು ಹೊಂದಿದ್ದು, ಅವುಗಳು ಸುರಂಗದೊಳಗೆ ಮತ್ತು ಹೊರಗೆ ಹಾರುತ್ತವೆ, ಆದರೆ X- ಕಿರಣ ಟ್ಯೂಬ್‌ಗಳು ಮತ್ತು ವಿದ್ಯುನ್ಮಾನ ಕ್ಷ-ಕಿರಣ ಪತ್ತೆಕಾರರು ನಿಮ್ಮ ಸುತ್ತ ತಿರುಗುತ್ತಾರೆ. ಸಿಟಿ ಸ್ಕ್ಯಾನ್‌ಗಾಗಿ ನೀವು ಗಣಕದ ಕೇಂದ್ರದ ಮೂಲಕ ನಿಧಾನವಾಗಿ ಚಲಿಸುವಾಗ ಪರೀಕ್ಷೆಯ ಮೇಜಿನ ಮೇಲೆ ಮಲಗುತ್ತೀರಿ.

ಸಿಟಿ ಸ್ಕ್ಯಾನ್‌ನಲ್ಲಿಯಾವುದೇ ನೋವು ಉಂಟಾಗುವುದಿಲ್ಲ. ಇನ್ನು ಎಕ್ಸ್‌ರೇ ಮಸುಕಾಗದಿರಲು ಅವರು ಎಕ್ಸ್‌ರೇ ತೆಗೆಯುವಾಗ ಉಸಿರು ಬಿಗಿಯುವಂತೆ ಹೇಳುತ್ತಾರೆ, ನಂತರ ಬಿಡಲು ಹೇಳುತ್ತಾರೆ. ಈ ಸ್ಕ್ಯಾನ್ ಮಾಡಲು 30 ನಿಮಿಷ ಬೇಕಾಗುವುದು. ಸಿ.ಟಿ. ಸ್ಕ್ಯಾನ್‌ನಲ್ಲಿ ದೇಹದಲ್ಲಿನ ಅಂಗಾಂಶಗಳು ಮತ್ತು ಅಂಗಗಳ ನೋಟಕ್ಕಾಗಿ ಅನುಮತಿಸುವ ಅತ್ಯಂತ ವಿಸ್ತೃತ ಅಡ್ಡ-ವಿಭಾಗದ ಚಿತ್ರಗಳನ್ನು ಹೊಂದಿರುತ್ತವೆ.

ಎಕ್ಸ್‌ರೇ ಪ್ರಯೋಜನಗಳು

* ದೇಹದೊಳಗೆ ಗಡ್ಡೆಗಳು ಎದ್ದಿದ್ದರೆ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ.
* ಮೂಳೆ ಮುರಿತ, ಸೋಂಕು, ದೇಹದೊಳಗೆ ಗಾಯ, ಮೂಳೆಗಳಲ್ಲಿ ಸಮಸ್ಯೆಗಳಿದ್ದರೆ ಇದನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.
* ಮೂಳೆಯ ಸುತ್ತ ಹಾಗೂ ಮೂಳೆಯ ಒಳಗಡೆ ಏನದರೂ ಸಮಸ್ಯೆ ಉಂಟಾಗಿದ್ದರೆ ಅದನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. * ತಲೆಗೆ ಪೆಟ್ಟಾಗಿದ್ದರೆ ಅದನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ.
* ರಕ್ತ ಹೆಪ್ಪುಗಟ್ಟಿದ್ದರೆ ಅದನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ.
* ಕ್ಯಾನ್ಸರ್‌ ಚಿಕಿತ್ಸೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯಲು ಸಹಕಾರಿಯಾಗಿದೆ.
* ಇನ್ನು ಸಾಂಕ್ರಾಮಿಕ ರೋಗಗಳು, ಹೊಟ್ಟೆಯಲ್ಲಿ ಹುಣ್ಣು ಇವುಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ.

ಎಕ್ಸ್‌ರೇ ಅಡ್ಡಪರಿಣಾಮಗಳು

* ಎಕ್ಸ್‌ರೇ ಮಾಡಿಸಿದ ತಕ್ಷಣ ಯಾವುದೇ ಅಡ್ಡಪರಿಣಾಮಗಳು ಉಂಟಾಗದಿದ್ದರೂ ತುಂಬಾ ಬಾರಿ ಮಾಡಿಸಿದರೆ ಅದರ ಕಿರಣಗಳು ಆರೋಗ್ಯದ ಮೆಲೆ ಕೆಟ್ಟ ಪರಿಣಾಮ ಬೀರುವುದು.
* ಆಗಾಗ ಎಕ್ಸ್‌ರೇ ಮಾಡಿಸಿದರೆ ಕ್ಯಾನ್ಸರ್‌ ಬರುವ ಅಪಾಯವಿದೆ.
* ಅಧಿಕ ಕ್ಷ ಕಿರಣಗಳು ಮೈ ಮೇಲೆ ಬಿದ್ದಾಗ ವಾಂತಿ, ರಕ್ತಸ್ರಾವ, ತಲೆಸುತ್ತು, ಕೂದಲು ಉದುರುವುದು, ತ್ವಚೆ ಸಮಸ್ಯೆ ಕಂಡು ಬರುವುದು.

English summary

X-ray Advantages and Disadvantages

Xray is the equipment use to find out disease inside our body. But When Xray radiation passes through our body it may cause side affect as well. Here We have discussed benefits and side affect of Xray, Take a look.
X
Desktop Bottom Promotion