For Quick Alerts
ALLOW NOTIFICATIONS  
For Daily Alerts

ವಿಶ್ವ ಅಲ್ಜೈಮರ್ ದಿನ: ಈ ಜೀವನಶೈಲಿಯಿಂದ ಅಲ್ಜೈಮರ್ ತಡೆಗಟ್ಟಬಹುದು

|

ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಜೈಮರ್ ದಿನವನ್ನಾಗಿ ಆಚರಿಸಲಾಗುವುದು. ಇತ್ತೀಚೆಗೆ ನಡೆಸಿದ ಒಂದು ಅಧ್ಯಯನ ಪ್ರಕಾರ ಆರೋಗ್ಯಕರ ಅಭ್ಯಾಸ ಹೊಂದಿರುವವರಿಗೆ ಅಲ್ಜೈಮರ್‌ ಕಾಯಿಲೆ ಬರುವ ಸಾಧ್ಯತೆ ಶೇ. 60ರಷ್ಟು ಕಡಿಮೆ ಎಂಬುವುದು ತಿಳಿದು ಬಂದಿದೆ.

World Alzheimers Day

ಅಲ್ಜೈಮರ್ ಅಥವಾ ಮರೆವಿನ ಕಾಯಿಲೆ ಬಂದರೆ ಅದರಿಂದ ಸಂಪೂರ್ಣ ಗುಣಮುಖರಾಗುವುದು ಕಷ್ಟ. ಅದ್ದರಿಂದ ಈ ಕಾಯಿಲೆ ಬರದಂತೆ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಅಲ್ಜೈಮರ್‌ ಕಾಯಿಲೆ ಬರುವುದನ್ನು ಜೀವನಶೈಲಿ ಮೂಲಕ ತಡೆಗಟ್ಟಬಹುದು.

ಅಲ್ಜೈಮರ್‌ ಕಾಯಿಲೆ ತಡೆಗಟ್ಟುವಲ್ಲಿ ಈ ಲೈಫ್‌ಸ್ಟೈಲ್‌ ತುಂಬಾನೇ ಸಹಕಾರಿಯಾಗಿದೆ.

 1. ಧೂಮಪಾನ ಮಾಡದಿರುವುದು

1. ಧೂಮಪಾನ ಮಾಡದಿರುವುದು

ಅಲ್ಜೈಮರ್‌ ತಡೆಗಟ್ಟುವಲ್ಲಿ ಧೂಮಪಾನ ಮಾಡದಿರುವುದು ತುಂಬಾನೇ ಸಹಕಾರಿ. ಧೂಮಪಾನ ಮಾಡದೇ ಇರುವವರಿಗಿಂತ ಧೂಮಪಾನಿಗಳಲ್ಲಿ ಈ ಅಲ್ಜೈಮರ್‌ ಕಾಯಿಲೆ ಹೆಚ್ಚಾಗಿ ಕಂಡು ಬರುವುದು.

2. ದಿನಾ ವ್ಯಾಯಾಮ ಮಾಡಿ

2. ದಿನಾ ವ್ಯಾಯಾಮ ಮಾಡಿ

ವಾರದಲ್ಲಿ 150 ನಿಮಿಷ ವ್ಯಾಯಾಮ ಮಾಡಿ. ನೀವು ದಿನದ 24 ಗಂಟೆಯಲ್ಲಿ 30 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಟ್ಟರೆ ಅದರಿಂದ ನಿಮಗೆ ದೊರೆಉವ ಪ್ರಯೋಜನ ಅನೇಕ. ವ್ಯಾಯಾಮದಿಂದ ಅಲ್ಜೈಮರ್ ಮಾತ್ರವಲ್ಲ ಅನೆಕ ಕಾಯಿಲೆಗಳನ್ನು ತಡೆಗಟ್ಟಬಹುದು.

3. ಮದ್ಯಪಾನ ಮಿತಿಯಲ್ಲಿ ಮಾಡಿ

3. ಮದ್ಯಪಾನ ಮಿತಿಯಲ್ಲಿ ಮಾಡಿ

ಮದ್ಯಪಾನ ಮಾಡದಿರುವುದು ಒಳ್ಳೆಯದು. ಮಾಡಿದರೂ ಮಿತಿಯಲ್ಲಿ ಮಾಡಿ. ಹೀಗೆ ಮಾಡಿದರೆ ವಯಸ್ಸಾಗುತ್ತಿದ್ದಂತೆ ಕಾಡುವ ಅಲ್ಜೈಮರ್‌ ಕಾಯಿಲೆ ತಡೆಗಟ್ಟಬಹುದು.

 4. ಮೆದುಳಿನ ಆರೋಗ್ಯ ವೃದ್ಧಿಸುವ ಆಹಾರ ಸೇವಿಸಿ

4. ಮೆದುಳಿನ ಆರೋಗ್ಯ ವೃದ್ಧಿಸುವ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವನೆ ಮಾಡಿದರೆ ಮೆದುಳಿನ ಆರೋಗ್ಯ ಚಟುವಟಿಕೆಯಿಂದ ಇರುತ್ತದೆ. ತರಕಾರಿಗಳು, ನಟ್ಸ್, ಬೀನ್ಸ್, ಧಾನ್ಯಗಳು, ಸಮುದ್ರಾಹಾರ, ಚಿಕನ್ ಆಲೀವ್‌ ಎಣ್ಣೆ, ರೆಡ್‌ ವೈನ್ ಇವೆಲ್ಲಾ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಕೆಂಪು ಮಾಂಸ, ವನಸ್ಪತಿ, ಚೀಸ್‌, ಫೆಸಟ್ರಿ, ಸ್ವೀಟ್‌, ಕರಿದ ಆಹಾರ ಈ ಬಗೆಯ ಆಹಾರ ಸೇವನೆ ಕಡಿಮೆ ಮಾಡಿ.

 5. ಮೆದುಳನ್ನು ಶಾರ್ಪ್ ಆಗಿಡುವ ಚಟುವಟಿಕೆ ಮಾಡಿ

5. ಮೆದುಳನ್ನು ಶಾರ್ಪ್ ಆಗಿಡುವ ಚಟುವಟಿಕೆ ಮಾಡಿ

ಓದುವುದು, ಬರೆಯುವುದು, ಚೆಸ್ ಆಡುವುದು, ಸಣ್ಣ-ಪುಟ್ಟ ಲೆಕ್ಕ ಹಾಕಲು ಕ್ಯಾಲ್ಕ್ಯುಲೇಟರ್ ಬಳಸದೆ ನೀವೇ ಮನಸ್ಸಿನಲ್ಲಿ ಅಥವಾ ಪುಸ್ತಕದಲ್ಲಿ ಬರೆದು ಲೆಕ್ಕ ಹಾಕುವುದು ಇವೆಲ್ಲಾ ಮೆದುಳನ್ನು ಚಟುವಟಿಕೆಯಿಂದ ಇಡಲು ಸಹಕಾರಿ.

 ಅಲ್ಜೈಮರ್ಸ್ ತಡೆಗಟ್ಟಲು ಈ ಯೋಗಾಸನ ಸಹಕಾರಿ

ಅಲ್ಜೈಮರ್ಸ್ ತಡೆಗಟ್ಟಲು ಈ ಯೋಗಾಸನ ಸಹಕಾರಿ

1. ವಜ್ರಾಸನ

2. ಸಿದ್ದಾಸನ

3. ಪಶ್ಚಿಮೋತ್ಥಾಸನ

4. ವೃಕ್ಷಾಸನ

5. ಶಿರ್ಸಾಸನ

ಈ ಯೋಗ ಭಂಗಿಗಳನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ಮೆದುಳು ಶಾಂತವಾಗಿರುತ್ತೆ ಅಲ್ಜೈಮರ್‌ನಂಥ ಕಾಯಿಲೆ ತಡೆಗಟ್ಟಬಹುದು.

ಅಲ್ಜೈಮರ್‌ ಪ್ರಾರಂಭದ ಲಕ್ಷಣಗಳು

ಅಲ್ಜೈಮರ್‌ ಪ್ರಾರಂಭದ ಲಕ್ಷಣಗಳು

ಅಲ್ಜೈಮರ್‌ನ ಪ್ರಾರಂಭದ ಹಂತದಲ್ಲಿ ಕಂಡು ಹಿಡಿದು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದರಿಂದ ಅಲ್ಜೈಮರ್‌ ಕಾಯಿಲೆ ತಡೆಗಟ್ಟಬಹುದು.

1. ದಿನನಿತ್ಯದ ಜೀವನದಲ್ಲಿ ಮರೆವು

ಮರೆವು ಸಹಜ, ಆದರೆ ಪದೇ-ಪದೇ ಮರೆವಿನ ಸಮಸ್ಯೆ ಅಂದರೆ ಇಟ್ಟ ವಸ್ತು ನೆನಪಾಗದಿರುವುದು, ದಿನನಿತ್ಯ ಮಾಡುವ ಕೆಲಸಗಳನ್ನು ಮಾಡುವಾಗ ಮರೆವು ಉಂಟಾಗುವುದು, ಕೇಳಿದ ಪ್ರಶ್ನೆಯನ್ನೇ ಪದೇ-ಪದೇ ಕೇಳುವುದು ಈ ರೀತಿಯಾದರೆ ನಿರ್ಲಕ್ಷ್ಯ ಮಾಡಬೇಡಿ.

2. ಗೊತ್ತಿರುವ ಕೆಲಸವನ್ನು ಪೂರ್ಣಗೊಳಿಸಲು ಕಷ್ಟವಾಗುವುದು

ನಿಮಗೆ ಗೊತ್ತಿರುವ ಸ್ಥಳದ ಹೆಸರು ಮರೆತು ಹೋಗುವುದು ಅಥವಾ ಡ್ರೈವಿಂಗ್‌ ಮಾಡುವಾಗ ಅಥವಾ ಎಲ್ಲಿಗಾದರು ಹೋಗುವಾಗ ಎಲ್ಲಿಗೆ ಹೋಗಬೇಕೆಂಬುವುದು ಮರೆತು ಹೋಗುವುದು.

3. ಸಮಯ ಹಾಗೂ ಸ್ಥಳದ ಬಗ್ಗೆ ಗೊಂದಲ

ಅಲ್ಜೈಮರ್‌ ಕಾಯಿಲೆ ಇರುವವರಿಗೆ ಸಮಯ ಅತವಾ ಸ್ಥಳದ ಹೆಸರು ನೆನಪಾಗುವುದಿಲ್ಲ. ಯಾವುದಾದರೂ ಸ್ಥಳಕ್ಕೆ ಹೋದಾಗ ಇಲ್ಲಿಗೆ ಏಕೆ ಬಂದೆ ಎಂಬುವುದು ಎಷ್ಟು ಯೋಚಿಸಿದರೂ ತಿಳಿಯದೇ ಹೋಗುವುದು.

4. ವಸ್ತುಗಳನ್ನು ಬೇರೆ ಕಡೆ ಇಡುವುದು ಹಾಗೂ ಎಲ್ಲಿ ಇಟ್ಟಿದ್ದೇನೆ ಎಂಬುವುದು ಮರೆತು ಹೋಗುವುದು, ನಿಮ್ಮ ಬಗ್ಗೆ ಅಂದರೆ ನಮ್ಮ ಡ್ರೆಸ್ಸಿಂಗ್‌ ಬಗ್ಗೆ ಗಮನ ಇಲ್ಲದಿರುವುದು ಇವೆಲ್ಲಾ ಅಲ್ಜೈಮರ್‌ ಲಕ್ಷಣಗಳಾಗಿವೆ.

ಅಲ್ಜೈಮರ್‌ಗೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಒಳ್ಳೆಯದು

ಅಲ್ಜೈಮರ್‌ಗೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಒಳ್ಳೆಯದು

ನಿಮ್ಮಲ್ಲಿ ಏನೋ ಬದಲಾವಣೆಯಾಗುತ್ತಿದೆ, ತುಂಬಾ ಮರೆವಿನ ಸಮಸ್ಯೆ ಉಂಟಾಗುತ್ತಿದೆ, ಏನಾದರೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಏನೋ ಗೊಂದಲ ಈ ರೀತಿಯೆಲ್ಲಾ ಕಂಡು ಬಂದರೆ ತಡಮಾಡಬೇಡಿ, ಸೂಕ್ತ ವೈದ್ಯರನ್ನು ಕಾಣಿ.

ಅಲ್ಜೈಮರ್‌ ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆಗೆ ಸಹಕಾರಿ, ಇಲ್ಲದಿದ್ದರೆ ಕಷ್ಟ.

English summary

World Alzheimer's Day: Lifestyle To Prevent Alzheimer's

World Alzheimer's Day: If you follow healthy lifestyle can prevent Alzheimer's, read on...
X
Desktop Bottom Promotion