For Quick Alerts
ALLOW NOTIFICATIONS  
For Daily Alerts

ಬಟ್ಟೆಯ ಮಾಸ್ಕ್ ಬದಲಿಗೆ ಫೇಸ್‌ ಶೀಲ್ಡ್ ಧರಿಸುವುದು ಸುರಕ್ಷಿತವಲ್ಲ, ಏಕೆ?

|

ಕೇವಲ ಒಂದು ವರ್ಷದ ಹಿಂದಿನ ಮಾತು. ನಾವು ಆರಾಮವಾಗಿ ನಮ್ಮ ಮುಖವನ್ನು ಬೇರೆಯವರಿಗೆ ತೋರಿಸಿಕೊಂಡು ಎಲ್ಲಿ ಬೇಕೆಂದರಲ್ಲಿ ಎಷ್ಟು ಹೊತ್ತಿನಲ್ಲಿ ಬೇಕಾದರೂ ರಾಜಾರೋಷವಾಗಿ ಓಡಾಡಬಹುದಿತ್ತು. ಆದರೆ ಈಗ ಸಂದರ್ಭ ಹೇಗಿದೆ ಎಂದರೆ ಯಾವುದೋ ಒಂದು ಕಣ್ಣಿಗೆ ಕಾಣದ ಕೊರೊನ ಎಂಬ ದುಷ್ಟ ಶಕ್ತಿಗೆ ಹೆದರಿಕೊಂಡು ಕೇವಲ ಹಗಲು ಹೊತ್ತಿನಲ್ಲೇ ನಾವು ಮಾಸ್ಕ್ ಇಲ್ಲದೆ ಮನೆಯಿಂದ ಹೊರ ಬರುವಂತಿಲ್ಲ.

ಇದನ್ನೆಲ್ಲಾ ನೋಡಿದ ಮನೆಯಲ್ಲಿರುವ ವಯಸ್ಸಾದವರು "ನಮ್ ಕಾಲ್ದಲ್ಲಿ ಹಿಂಗೆಲ್ಲಾ ಇರ್ಲಿಲ್ಲಪ್ಪಾ" ಎಂದು ಹೇಳುವುದೂ ಉಂಟು. ಆದರೆ ಈಗ ನಮಗೆ ಮಾಸ್ಕ್ ಬಿಟ್ಟರೆ ಕೊರೋನ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ಮಾಡಿಕೊಳ್ಳಲು ಬೇರೆ ಯಾವುದೇ ಮಾರ್ಗವಿಲ್ಲ. ಲಸಿಕೆ ಈಗ ಬರುತ್ತದೆ ಆಗ ಬರುತ್ತದೆ ಎಂದು ಕಾಯುತ್ತಾ ಕುಳಿತರೆ ಇನ್ನಷ್ಟು ಹೆಣಗಳು ಬೀಳುವುದು ಗ್ಯಾರಂಟಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ದೇಶ ಕಂಡು ಹಿಡಿಯುತ್ತಿರುವ ಲಸಿಕೆ ಸದ್ಯದ ಕೊರೊನಾ ವೈರಸ್ ಹಾವಳಿಯ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಸಹ ಸಾಧ್ಯವಿಲ್ಲ.

ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಕಲೇಬೇಕು ಮಾಸ್ಕ್

ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಕಲೇಬೇಕು ಮಾಸ್ಕ್

ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವುದು ಏನೆಂದರೆ, ಒಂದು ವೇಳೆ ಈಗ ಕೋವಿಡ್ - 19 ರ ವಿರುದ್ಧ ಲಸಿಕೆ ಬಂದರೂ ಕೂಡ ಅದನ್ನು ಸೋಂಕಿತ ವ್ಯಕ್ತಿಗೆ ಒಮ್ಮೆ ನೀಡಿದ ಬಳಿಕ ಅದರ ಪ್ರಭಾವ ಕೇವಲ ಕೆಲವು ದಿನಗಳು ಮಾತ್ರ ಇದ್ದು, ಮೊದಲು ಸೋಂಕಿತನಾಗಿದ್ದ ವ್ಯಕ್ತಿಯಲ್ಲಿ ರೋಗ - ಲಕ್ಷಣಗಳು ಮತ್ತೊಮ್ಮೆ ಉಲ್ಬಣ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಲಸಿಕೆಯನ್ನು ವರ್ಷದಲ್ಲಿ ಮೂರು- ನಾಲ್ಕು ಬಾರಿ ನೀಡಬೇಕಾಗಿ ಬರುತ್ತದೆ. ಹಾಗಾಗಿ ಲಸಿಕೆಯ ಮೇಲೆ ಜನರಿಗೆ ನಂಬಿಕೆ ಸದ್ಯಕ್ಕೆ ಅಷ್ಟಕಷ್ಟೇ ಇದೆ.

ನಮ್ಮನ್ನು ನಾವು ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಯ ಶಿಫಾರಸಿನಂತೆ ಫೇಸ್ ಮಾಸ್ಕ್ ಸದ್ಯ ಎಲ್ಲಾ ಕಡೆ ಚಾಲ್ತಿಯಲ್ಲಿದೆ. ಫೇಸ್ ಮಾಸ್ಕ್ ಜೊತೆಗೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಕೂಡ ಜನರು ಬಳಕೆ ಮಾಡುತ್ತಿರುವುದು ನಾವು ಪ್ರತಿ ದಿನ ಮನೆಯ ಹೊರಗಡೆ ಅಲ್ಲಿ - ಇಲ್ಲಿ ನೋಡುತ್ತಿದ್ದೇವೆ. ಮೊದಲಿಗೆ ಆಸ್ಪತ್ರೆಯ ವೈದ್ಯರು, ದಾದಿಯರಿಂದ ಪ್ರಾರಂಭವಾದ ಫೇಸ್ ಶೀಲ್ಡ್ ಸದ್ಯ ಸಾಮಾನ್ಯ ಜನರಿಗೂ ಸುಲಭವಾಗಿ ಉಪಲಬ್ಧವಿದೆ. ಆದರೆ ಕೊರೋನ ವೈರಸ್ ಸೋಂಕಿನ ವಿರುದ್ಧ ಇದು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬುದು ಆರೋಗ್ಯ ತಜ್ಞರ ವಾದ. ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸಿದ ಸಂದರ್ಭದಲ್ಲಿ ನಿಮ್ಮ ಮೂಗು ಹಾಗೂ ಬಾಯಿ ಮುಚ್ಚುವಂತೆ ಫೇಸ್ ಮಾಸ್ಕ್ ಧರಿಸಿರುವುದು ಉತ್ತಮ.

ಕೊರೋನ ವೈರಸ್ ಗೆ ಸಂಬಂಧ ಪಟ್ಟ ರೋಗ - ಲಕ್ಷಣಗಳು ಸದ್ಯ ಅದರ ಉಪಟಳ ಎಲ್ಲದರ ಬಗ್ಗೆ ಅಂತರ್ಜಾಲದಲ್ಲಿ ಕ್ಷಣ ಕ್ಷಣಕ್ಕೆ ಮಾಹಿತಿ ಲಭ್ಯವಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಗಳು ನೀಡುವ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಸಾಧ್ಯವಾದಷ್ಟು ನಾವು ಇತ್ತೀಚಿನ ಮಾಹಿತಿಗಳ ಕಡೆಗೆ ಗಮನ ಹರಿಸಬೇಕು.

ಫೇಸ್‌ ಮಾಸ್ಕ್ ಬದಲಿಗೆ ಫೇಸ್‌ ಶೀಲ್ಡ್ ಪರಿಣಾಮಕಾರಿಯೇ?

ಫೇಸ್‌ ಮಾಸ್ಕ್ ಬದಲಿಗೆ ಫೇಸ್‌ ಶೀಲ್ಡ್ ಪರಿಣಾಮಕಾರಿಯೇ?

ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾದ ಕೊರೋನ ವೈರಸ್ ಉಪಟಳದ ಸಂದರ್ಭದಿಂದ ಇಂದಿನವರೆಗೂ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ SARS - CoV - 2 ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದು ತಪ್ಪಿಸಲು ಫೇಸ್ ಮಾಸ್ಕ್ ಬಳಕೆ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಜನರು ಇದರಲ್ಲೂ ಕೂಡ ಬದಲಾವಣೆ ತಂದುಕೊಂಡು ಫೇಸ್ ಮಾಸ್ಕ್ ಬದಲು ಪ್ಲಾಸ್ಟಿಕ್ ಫೇಸ್ ಶೀಲ್ಡ್ ಬಳಕೆ ಮಾಡಲು ಮುಂದಾಗಿದ್ದಾರೆ. ಫೇಸ್ ಮಾಸ್ಕ್ ಗೆ ಹೋಲಿಸಿದರೆ ಇದು ಧರಿಸಲು ತುಂಬಾ ಆರಾಮದಾಯಕ ಎನ್ನುವುದು ಪ್ರತಿಯೊಬ್ಬರ ಭಾವನೆ. ಆದರೆ ಕೊರೊನಾ ವೈರಸ್ ಸೋಂಕು ತಡೆಗಟ್ಟುವಿಕೆಯಲ್ಲಿ ಇದರ ಪಾತ್ರ ಅಷ್ಟೇನಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಸತ್ಯ.

ಹಾಗಾಗಿ ತಜ್ಞರ ಪ್ರಕಾರ ಒಂದು ವೇಳೆ ನೀವು ಪ್ಲಾಸ್ಟಿಕ್ ಫೇಸ್ ಶೀಲ್ಡ್ ಅನ್ನು ಬಳಸುತ್ತೀರಿ ಎಂದಾದರೆ ಅದನ್ನು ಕೇವಲ ನೀವು ಧರಿಸುವ ಹತ್ತಿ ಬಟ್ಟೆಯ ಫೇಸ್ ಮಾಸ್ಕ್ ಜೊತೆಗೆ ಪೂರಕವಾಗಿ ಬಳಸಬೇಕು. ಫೇಸ್ ಮಾಸ್ಕ್ ಬಳಸದೆ ಯಾವುದೇ ಕಾರಣಕ್ಕೂ ನೇರವಾಗಿ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಒಂದನ್ನೇ ಬಳಸುವ ಹಾಗಿಲ್ಲ.

ಕೊರೋನಾ ಹರಡುವಿಕೆ

ಕೊರೋನಾ ಹರಡುವಿಕೆ

ಕೊರೋನ ವೈರಸ್ ಇಂದು ಕೇವಲ ನೀರಿನ ಸಣ್ಣ ಸಣ್ಣ ಕಣಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎನ್ನುವುದರಿಂದ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಸ್ವಲ್ಪ ಪ್ರಮಾಣದವರೆಗೆ ಹರಡುವಿಕೆಯನ್ನು ತಡೆಯಬಲ್ಲದು ಎಂಬ ಮಾತಿದೆ.

ಏಕೆಂದರೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸುವುದರಿಂದ ಕಣ್ಣು, ಮೂಗು, ಬಾಯಿ ಅಥವಾ ಮುಖದ ಮೇಲೆ ಬೇರೆಯವರು ಕೆಮ್ಮಿದಾಗ ಅಥವಾ ಸೀನಿದಾಗ ಸಣ್ಣ ಮತ್ತು ಅತಿ ಸಣ್ಣ ನೀರಿನ ಕಣಗಳು ಬಂದು ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.

ಆದರೆ ಕೊರೊನ ವೈರಸ್ ಸೋಂಕು ಗಾಳಿಯಲ್ಲಿ ಹರಡುತ್ತಿದೆ ಎಂಬ ಮಾತಿನಂತೆ ಮುಖದ ಮೇಲೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸಿದರೂ ಕೂಡ ಒಂದು ವೇಳೆ ಒಳಗೆ ಬಟ್ಟೆಯ ಫೇಸ್ ಮಾಸ್ಕ್ ಹಾಕಿಕೊಳ್ಳದಿದ್ದರೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಅಕ್ಕಪಕ್ಕದ ಜಾಗಗಳಿಂದ ಉಸಿರಾಡುವ ಸಂದರ್ಭದಲ್ಲಿ ಸುಲಭವಾಗಿ ವ್ಯಕ್ತಿಯ ದೇಹ ಪ್ರವೇಶ ಮಾಡುವ ಸಾಧ್ಯತೆ ಇದೆ.

ಹಾಗಾಗಿ ಪ್ಲಾಸ್ಟಿಕ್ ಫೇಸ್ ಶೀಲ್ಡ್ ತನ್ನ ಪರಿಣಾಮಕಾರಿತ್ವವನ್ನು ಸಾಧಿಸಬೇಕಾದರೆ ಅದನ್ನು ಫೇಸ್ ಮಾಸ್ಕ್ ಜೊತೆಗೆ ಉಪಯೋಗಿಸಬೇಕು.

ಕೋವಿಡ್ - 19 ನಿಯಂತ್ರಣದಲ್ಲಿ ಪ್ಲಾಸ್ಟಿಕ್ ಫೇಸ್ - ಶೀಲ್ಡ್ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ?

ಕೋವಿಡ್ - 19 ನಿಯಂತ್ರಣದಲ್ಲಿ ಪ್ಲಾಸ್ಟಿಕ್ ಫೇಸ್ - ಶೀಲ್ಡ್ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ?

"ಫಿಸಿಕ್ಸ್ ಅಫ್ ಫ್ಲೂಯಿಡ್ಸ್" ಎಂಬ ಒಂದು ಅಧ್ಯಯನದಲ್ಲಿ ಪ್ರಕಟವಾದ ವರದಿಯಲ್ಲಿ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಯಾವ ರೀತಿ ಪರಿಣಾಮಕಾರಿಯಾಗಿ ಕೋವಿಡ್ - 19 ರ ನಿಯಂತ್ರಣದಲ್ಲಿ ಕೆಲಸ ಮಾಡಬಲ್ಲದು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.

ಈ ವರದಿಯ ಪ್ರಕಾರ ಕೇವಲ ಆರಂಭಿಕ ಕ್ಷಣದಲ್ಲಿ ಒಬ್ಬ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಆತನ ಬಾಯಿಯಿಂದ ಅಥವಾ ಮೂಗಿನಿಂದ ಸಿಡಿಯುವ ನೀರಿನ ಸಣ್ಣ ಮತ್ತು ಅತಿ ಸಣ್ಣ ಕಣಗಳು ಸುತ್ತಮುತ್ತಲಿನ ಪರಿಸರದಲ್ಲಿ ತುಂಬಾ ದೊಡ್ಡ ವ್ಯಾಪ್ತಿಯಲ್ಲಿ ಹರಡಿಕೊಳ್ಳುತ್ತವೆ. ಈ ವರದಿಯನ್ನು ಸಿದ್ಧ ಪಡಿಸುವ ಮುಂಚೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಕೊರೋನ ವೈರಸ್ ಉಪಟಳ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಅದೇನೆಂದರೆ ಅಲ್ಲಿನ ಬಹುತೇಕ ಜನರು ಫೇಸ್ ಮಾಸ್ಕ್ ಧರಿಸಿರಲಿಲ್ಲ. ಕೇವಲ ಫೇಸ್ ಶೀಲ್ಡ್ ಗಳನ್ನು ಧರಿಸಿ ಓಡಾಡುತ್ತಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಬಹುತೇಕ ಜನರಿಗೆ ಕೊರೋನಾ ಪಾಸಿಟಿವ್ ಇದ್ದಿದ್ದು ತಿಳಿದು ಬಂದಿತ್ತು. ಹೀಗಾಗಿಯೇ ಫೇಸ್ ಶೀಲ್ಡ್ ವೈರಸ್ ನಿಂದ ನಮ್ಮನ್ನು ರಕ್ಷಣೆ ಮಾಡಲು ಒಂದು ಪೂರಕ ಪದ್ಧತಿ ಎಂದಷ್ಟೇ ನಂಬಬಹುದು ಎಂದು ಹೇಳುತ್ತಾರೆ. ನಾವು ಹೆಚ್ಚು ಸುರಕ್ಷತೆಯನ್ನು ಕಾಪಾಡಿಕೊಂಡರೆ ನಮ್ಮನ್ನು ನಾವು ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆ, ಸಂಶೋಧಕರು, ವೈದ್ಯರುಗಳು, ಸರ್ಕಾರಗಳು ಪ್ರತಿಯೊಬ್ಬರೂ ಇಂದಿನ ಕೊರೋನ ವೈರಸ್ ಸೋಂಕಿನಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕೆಂದರೆ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ಸೋಪು ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳುವುದು ಮತ್ತು ಮನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ಬೇರೆಯವರಿಂದ ಕನಿಷ್ಠ ಆರು ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ಬಿಟ್ಟರೆ ಬೇರೆ ನಮಗೆ ಮಾರ್ಗವಿಲ್ಲ ಎಂಬುದನ್ನು ಆರಂಭದಿಂದ ಇಂದಿನವರೆಗೂ ತಿಳಿಸುತ್ತಲೇ ಬಂದಿದ್ದಾರೆ.

ಆದರೂ ಒಂದು ವೇಳೆ ನೀವು ಫೇಸ್ ಶೀಲ್ಡ್ ಧರಿಸಲು ಇಚ್ಛೆ ವ್ಯಕ್ತಪಡಿಸಿದರೂ ಈ ಕೆಳಗಿನ ವಿಚಾರಗಳನ್ನು ತಪ್ಪದೇ ಪಾಲಿಸಲು ಕೋರಲಾಗಿದೆ : -

1 ಮಾಸ್ಕ್ ಧರಿಸದೆ ಫೇಸ್ ಶೀಲ್ಡ್ ಧರಿಸಬೇಡಿ : -

1 ಮಾಸ್ಕ್ ಧರಿಸದೆ ಫೇಸ್ ಶೀಲ್ಡ್ ಧರಿಸಬೇಡಿ : -

ಎಂದಿಗೇ ಆದರೂ ನೀವು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಅಥವಾ ಹೆಚ್ಚು ಜನಸಂದಣಿ ಇರುವ ಜಾಗದಲ್ಲಿ ಇರುತ್ತೀರಿ ಎಂದಾದರೆ ಯಾವುದೇ ಕಾರಣಕ್ಕೂ ನೀವು ಕೇವಲ ಮೇಲೆ ಅವಲಂಬಿತವಾಗಿ ಸಂಪೂರ್ಣವಾಗಿ ಅದರ ಮೇಲೆ ನಂಬಿಕೆ ಇರಿಸಿ ನಿಮ್ಮನ್ನು ನೀವು ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪಿತಪ್ಪಿಯೂ ಇಂತಹ ನಿರ್ಲಕ್ಷ ಮಾಡಬೇಡಿ. ಕೇವಲ ನೀವು ಮಾತ್ರವಲ್ಲದೆ ನಿಮ್ಮ ಮನೆಯ ಹಿರಿಯರು, ಮಕ್ಕಳು ಯಾರಿಗೇ ಆದರೂ ಈ ವಿಚಾರದ ಬಗ್ಗೆ ಸಾಕಷ್ಟು ತಿಳಿ ಹೇಳಿ ಫೇಸ್ ಮಾಸ್ಕ್ ಧರಿಸುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಕೊರೋನ ವೈರಸ್ ಸೋಂಕು ಹಬ್ಬುವುದನ್ನು ತಡೆಗಟ್ಟಬಹುದು ಎಂಬುದು ನಿಮಗೆ ನೆನಪಿರಲಿ.

2 ನೀವು ಧರಿಸುವ ಫೇಸ್ ಶೀಲ್ಡ್ ನಿಮಗೆ ಸರಿಯಾಗಿ ಹೊಂದಿಕೊಳ್ಳುವಂತೆ ಇರಬೇಕು : -

2 ನೀವು ಧರಿಸುವ ಫೇಸ್ ಶೀಲ್ಡ್ ನಿಮಗೆ ಸರಿಯಾಗಿ ಹೊಂದಿಕೊಳ್ಳುವಂತೆ ಇರಬೇಕು : -

ಪ್ರತಿಯೊಬ್ಬರೂ ನಾವು ಬಾಯಿ ಹಾಗೂ ಮೂಗು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಫೇಸ್ ಮಾಸ್ಕ್ ಧರಿಸಬೇಕು ಎಂದು ಯಾವ ರೀತಿ ತಿಳಿಸಿ ಹೇಳುತ್ತಿದ್ದರು. ಅದೇ ರೀತಿ ಫೇಸ್ ಶೀಲ್ಡ್ ಧರಿಸುವ ಸಂದರ್ಭದಲ್ಲೂ ಕೂಡ ನಾವು ಧರಿಸುವ ಫೇಸ್ ಶೀಲ್ಡ್ ಮೇಲ್ಭಾಗದಲ್ಲಿ ನಮ್ಮ ಹಣೆಯಿಂದ ಹಿಡಿದು ಕೆಳಭಾಗದ ನಮ್ಮ ಗಲ್ಲದವರೆಗೂ ಅಥವಾ ಇನ್ನು ಸ್ವಲ್ಪ ಕೆಳಗೆ ಬರುವ ರೀತಿ ಇರಬೇಕು. ಅಕ್ಕ ಪಕ್ಕ ನಮ್ಮ ಕಿವಿಯವರೆಗೂ ಮುಚ್ಚಿಕೊಳ್ಳುವಂತೆ ಇದ್ದರೆ ಮತ್ತೂ ಒಳ್ಳೆಯದು. ನಮ್ಮ ಹಣೆಯ ಭಾಗ ಮತ್ತು ಫೇಸ್ ಶೀಲ್ಡ್ ಮಧ್ಯೆ ಯಾವುದೇ ಅಂತರ ಇರಬಾರದು. ಹೀಗಿದ್ದಾಗ ಮಾತ್ರ ನಮ್ಮ ಎದುರಿಗೆ ಇದ್ದ ಯಾವುದೇ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಆತನ ಬಾಯಿಯಿಂದ ಅಥವಾ ಮೂಗಿನಿಂದ ಸಿಡಿಯುವ ಸಣ್ಣ ಸಣ್ಣ ನೀರಿನ ಕಣಗಳು ನಮ್ಮ ಮುಖದ ಭಾಗಕ್ಕೆ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ.

3 ಫೇಸ್ ಶೀಲ್ಡ್ ಸ್ವಚ್ಛತೆಯೂ ಅಷ್ಟೇ ಮುಖ್ಯ : -

3 ಫೇಸ್ ಶೀಲ್ಡ್ ಸ್ವಚ್ಛತೆಯೂ ಅಷ್ಟೇ ಮುಖ್ಯ : -

ನಾವು ಫೇಸ್ ಶೀಲ್ಡ್ ಅನ್ನು ಕೇವಲ ಶೋಕಿಗಾಗಿ ಧರಿಸುತ್ತಿಲ್ಲ ಬದಲಿಗೆ ನಮ್ಮ ಆರೋಗ್ಯ ರಕ್ಷಣೆಗೆ ಮತ್ತು ನಮ್ಮ ಸುತ್ತಮುತ್ತಲಿನವರಿಗೆ ನಮ್ಮಿಂದ ರೋಗ ಹರಡದಂತೆ ಎಚ್ಚರ ವಹಿಸಲು ಧರಿಸುತ್ತಿದ್ದೇವೆ ಎಂಬುದು ಪ್ರತಿಯೊಬ್ಬರಿಗೂ ನೆನಪಿರಬೇಕು. ಹಾಗಾಗಿ ನಾವು ಒಮ್ಮೆ ಬಳಕೆ ಮಾಡಿದ ಫೇಸ್ ಶೀಲ್ಡ್ ಅನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿಸಾಡುವ ಹಾಗಿಲ್ಲ. ಬದಲಾಗಿ ಫೇಸ್ ಶೀಲ್ಡ್ ಅನ್ನು ಡಿಟರ್ಜೆಂಟ್ ಮತ್ತು ಉಗುರು ಬೆಚ್ಚಗಿನ ನೀರಿನೊಂದಿಗೆ ಚೆನ್ನಾಗಿ ತೊಳೆದ ನಂತರ ಮತ್ತೊಮ್ಮೆ ನೀರಿನಲ್ಲಿ ತೊಳೆದು ಇನ್ನೊಮ್ಮೆ ಬಳಕೆ ಮಾಡುವ ಮುಂಚೆ ಕ್ಲೋರಿನ್ ಆಧಾರಿತ ದ್ರವದೊಂದಿಗೆ ಸ್ವಚ್ಛ ಮಾಡುವುದು ಒಳ್ಳೆಯದು. ಸದ್ಯ ಈಗ ನಾವೆಲ್ಲಾ ಬಳಕೆ ಮಾಡುತ್ತಿರುವ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಅನ್ನು ಫೇಸ್ ಶೀಲ್ಡ್ ಸ್ವಚ್ಛ ಮಾಡಲು ಬಳಕೆ ಮಾಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಆಲ್ಕೋಹಾಲ್ ಅಂಶ ಪ್ಲಾಸ್ಟಿಕ್ ಅನ್ನು ದಿನ ಕಳೆದಂತೆ ಕ್ರಮೇಣವಾಗಿ ಹಾನಿ ಮಾಡುತ್ತದೆ ಎಂದು ತಿಳಿದುಬಂದಿದೆ.

ಸ್ವಚ್ಛತೆಯ ಕೊನೆಯ ಭಾಗದಲ್ಲಿ ಮತ್ತೊಮ್ಮೆ ಶುದ್ಧವಾದ ನೀರಿನಿಂದ ಫೇಸ್ ಶೀಲ್ಡ್ ಅನ್ನು ಚೆನ್ನಾಗಿ ಸ್ವಚ್ಛ ಮಾಡಿ ನಂತರ ಧರಿಸಬೇಕು. ಗಾಳಿಯ ಮೂಲಕ ಒಣಗಿಸುವುದು ಮತ್ತು ಪೇಪರ್ ಟವಲ್ ಮೂಲಕ ಸ್ವಚ್ಛ ಮಾಡುವ ಕಾರಣದಿಂದ ಫೇಸ್ ಶೀಲ್ಡ್ ಮೇಲೆ ಇರುವ ಅಧಿಕ ತೇವಾಂಶವನ್ನು ಇಲ್ಲವಾಗಿಸಬಹುದು.

 ಫೇಸ್ ಮಾಸ್ಕ್ ಧರಿಸುವ ಬದಲು ಫೇಸ್ ಶೀಲ್ಡ್ ಧರಿಸುವುದು ಒಳ್ಳೆಯದಲ್ಲ

ಫೇಸ್ ಮಾಸ್ಕ್ ಧರಿಸುವ ಬದಲು ಫೇಸ್ ಶೀಲ್ಡ್ ಧರಿಸುವುದು ಒಳ್ಳೆಯದಲ್ಲ

ಕೆಲವೊಂದು ಆಯಾಮಗಳಲ್ಲಿ ನೋಡುವುದಾದರೆ ಇದು ಒಂದು ಕಡೆ ಸತ್ಯ ಎಂದು ತೋರುತ್ತದೆ. ಏಕೆಂದರೆ ನಾವು ಬದುಕುತ್ತಿರುವ ನಮ್ಮ ಸಮಾಜದಲ್ಲಿ ಹಲವು ವರ್ಗದ ರೀತಿಯಲ್ಲಿ ಜೀವನ ನಡೆಸುವವರು ಇದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರೂ ಇದ್ದಾರೆ. ಹೀಗಿರಬೇಕಾದರೆ ಕೆಲವರಿಗೆ ತಮ್ಮ ಸಂವಹನದ ಮೂಲಕ ಪ್ರತಿ ದಿನದ ಕೆಲಸ ಮಾಡಲು ಕಷ್ಟವಾಗಬಹುದು ಅಥವಾ ಸ್ವಲ್ಪ ಹೊತ್ತಿನ ನಂತರ ಉಸಿರಾಡಲು ತೊಂದರೆ ಎದುರಾಗಬಹುದು. ಇದರಿಂದ ಕೆಲವರು ಫೇಸ್ ಮಾಸ್ಕ್ ಧರಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಹಾಗೆಂದು ಸಂಪೂರ್ಣವಾಗಿ ಫೇಸ್ ಶೀಲ್ಡ್ ನಮ್ಮನ್ನು ರಕ್ಷಣೆ ಮಾಡುತ್ತದೆ ಮತ್ತು ಫೇಸ್ ಮಾಸ್ಕ್ ರೀತಿ ನಮಗೆ ರಕ್ಷಣೆ ಕೊಡುತ್ತದೆ ಎಂದು ಯಾವುದೇ ಆಯಾಮದಲ್ಲೂ ಹೇಳಲು ಸಾಧ್ಯವಿಲ್ಲ.

ಫೇಸ್ ಶೀಲ್ಡ್ ಖರೀದಿ ಹೇಗೆ ?

ಈಗಂತೂ ರಸ್ತೆ ಬದಿಗಳಲ್ಲಿ ಸಾಕಷ್ಟು ಕಡೆಗಳಲ್ಲಿ ಫೇಸ್ ಶೀಲ್ಡ್ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ಇದು ನಿಮ್ಮ ಜೀವ ಹಾಗೂ ಜೀವನದ ರಕ್ಷಣೆ ಎಂಬುದು ನೆನಪಿರಲಿ ಕಡಿಮೆ ಗುಣಮಟ್ಟದ ಮತ್ತು ನಿಮ್ಮ ಮುಖದ ಭಾಗಕ್ಕೆ ಸರಿಯಾಗಿ ಹೋಲಿಕೆಯಾಗದಂತಹ ಫೇಸ್ ಶೀಲ್ಡ್ ಖರೀದಿಸಲು ಮುಂದಾಗಬೇಡಿ. ಆನ್ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಕೂಡ ಫೇಸ್ ಶೀಲ್ಡ್ ನಿಮಗೆ ಸುಲಭವಾಗಿ ಸಿಗುತ್ತಿದೆ. ಹಾಗಾಗಿ ಅತ್ಯುತ್ತಮ ಗುಣಮಟ್ಟದ ಫೇಸ್ ಶೀಲ್ಡ್ ನೀವು ಖರೀದಿ ಮಾಡಬಹುದು ಮತ್ತು ಫೇಸ್ ಮಾಸ್ಕ್ ಜೊತೆಗೆ ಇದನ್ನು ಬಳಸಿ ನಿಮ್ಮ ಜೀವರಕ್ಷಣೆ ಮಾಡಿಕೊಳ್ಳಬಹುದು.

English summary

Why Plastic Face Shields Aren’t a Safe Alternative to Cloth Masks

Why Plastic Face Shields Aren’t a Safe Alternative to Cloth Masks, read on...
X