For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ಅತೀ ಕಡಿಮೆ ರಕ್ತಸ್ರಾವ, ಏನಾದರೂ ಸಮಸ್ಯೆ ಇದೆಯೇ?

|

ಹೆಣ್ಮಕ್ಕಳು ಹದಿಹರೆಯದ ಪ್ರಾಯಕ್ಕೆ ಬಂದಾಗ ಮುಟ್ಟಿನ ಚಕ್ರ ಪ್ರಾರಂಭವಾಗುತ್ತದೆ. ಆಗ ಶುರುವಾದ ಈ ಮುಟ್ಟಿನ ಚಕ್ರ ಅವಳು ಮೆನೋಪಾಸ್‌ ಹಂತ ತಲುಪುವವರೆಗೆ ನಡೆಯುತ್ತಲೇ ಇರುತ್ತದೆ. ಮುಟ್ಟಿನ ಚಕ್ರ ಸರಿಯಾಗಿದ್ದರೆ ಅದು ಅವಳ ಆರೋಗ್ಯವನ್ನು ಸೂಚಿಸುತ್ತದೆ. ಮುಟ್ಟಿನ ಚಕ್ರ ಸರಿಯಾಗಿದ್ದರೆ ಅವಳ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಯಾವುದೇ ತೊಂದರೆಯಾಗಲ್ಲ.

ಆದರೆ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸವಾದರೆ ಏನೋ ಸಮಸ್ಯೆವಿದೆ ಎಂಬುವುದನ್ನು ಸೂಚಿಸುತ್ತದೆ. ಅನಿನಿಯಮಿತ ಮುಟ್ಟು, ಮುಟ್ಟಾದಾಗ ಅತೀಯಾದ ರಕ್ತಸ್ರಾವ ಅಥವಾ ಅತೀ ಕಡಿಮೆ ರಕ್ತಸ್ರಾವ ಅಥವಾ ಮುಟ್ಟಾಗಿ 10-15 ದಿನ ಕಳೆಯುವಷ್ಟರಲ್ಲಿ ಮತ್ತೆ ಮುಟ್ಟಾಗುವುದು ಇವೆಲ್ಲಾ ಆರೋಗ್ಯದಲ್ಲಿ ಏನೋ ಸಮಸ್ಯೆವಿದೆ ಎಂಬುವುದನ್ನು ಸೂಚಿಸುತ್ತೆ.

ಮುಟ್ಟಾದಾಗ 7 ದಿನಗಳವರೆಗೆ ರಕ್ತಸ್ರಾವವಾಗುವುದು, ಕೆಲವರಲ್ಲಿ 2-4 ದಿನವಿರುತ್ತದೆ. ಆದರೆ ಕೆಲವು ಸಮಯ ಕಳೆಯುತ್ತಿದ್ದಂತೆ ಮುಟ್ಟಿನಲ್ಲಿ ವ್ಯತ್ಯಾಸ ಕಂಡು ಬರಬಹುದು. ಕೆಲವೊಂದು ಕಾರಣಗಳಿಂದಾಗಿ ಈ ರೀತಿ ಉಂಟಾಗುತ್ತದೆ. ಉದಾಹರಣೆಗೆ ಗರ್ಭಿಣಿಯಾದಾಗ ಮುಟ್ಟಿನ ಚಕ್ರ ನಿಲ್ಲುವುದು. ಹೆರಿಗೆಯಾದ ಕೆಲವು ದಿನಗಳವರೆಗೆ ರಕ್ತಸ್ರಾವವಾಗುವುದು. ಅದಾದ ಬಳಿಕ ಕೆಲವು ತಿಂಗಳುಗಳು ಮತ್ತೆ ಮುಟ್ಟಿ ಚಕ್ರ ನಿಲ್ಲುವುದು. ಇವೆಲ್ಲಾ ಸಹಜ, ಆದರೆ ಇದನ್ನು ಹೊರತು ಪಡಿಸಿ ನಿಮ್ಮ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಉಂಟಾದರೆ ಅದು ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಅದು ಏನೋ ತೊಂದರೆಯಿದೆ ಎಂದು ಹೇಳುವ ಮುನ್ಸೂಚನೆಯಾಗಿದೆ.

ಈ ಲಕ್ಷಣಗಳು ಕಂಡು ಬಂದರೆ ಆತಂಕ ಉಂಟಾಗುವುದು

ಈ ಲಕ್ಷಣಗಳು ಕಂಡು ಬಂದರೆ ಆತಂಕ ಉಂಟಾಗುವುದು

* ಎರಡು ದಿನಕ್ಕಿಂತ ಕಡಿಮೆ ರಕ್ತಸ್ರಾವವಾಗುತ್ತಿದ್ದರೆ

* ಒಂದು ಕಲೆಯಷ್ಟೆ ಕಂಡು ರಕ್ತಸ್ರಾವವಾಗದೇ ಇದ್ದಾಗ

* ತಿಂಗಳಿಗೆ ಸರಿಯಾಗಿ ಮುಟ್ಟಾಗದೇ ಇದ್ದಾಗ

*ಅವಧಿಗೆ ಮುನ್ನವೇ ಮುಟ್ಟಾಗುವುದು ಹಾಗೂ ರಕ್ತಸ್ರಾವ ತುಂಬಾ ಕಡಿಮೆ ಇರುವುದು

ಈ ರೀತಿ ಆಗುತ್ತಿದ್ದು ಕಾರಣವೇನೆಮದು ತಿಳಿಯದಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಬೇಕು.

ರಕ್ತಸ್ರಾವ ಕಡಿಮೆಯಾಗಲು ಈ ಕೆಳಗಿನ ಕಾರಣಗಳಿರಬಹುದು:

ರಕ್ತಸ್ರಾವ ಕಡಿಮೆಯಾಗಲು ಈ ಕೆಳಗಿನ ಕಾರಣಗಳಿರಬಹುದು:

* ವಯಸ್ಸು: ಮೆನೋಪಾಸ್‌ ಸಮೀಸುತ್ತಿದ್ದಂತೆ ರಕ್ತಸ್ರಾವ ಕಡಿಮೆಯಾಗುವುದು.

* ತೂಕ ಹಾಗೂ ಆಹಾರಕ್ರಮ: ಮೈ ತೂಕ ಹೆಚ್ಚಾದರೆ ಮುಟ್ಟು ಅನಿಯಮಿತವಾಗಬಹುದು.

* ಎದೆ ಹಾಲುಣಿಸುತ್ತಿದ್ದರೆ: ಮಗುವಿಗೆ ಎದೆಹಾಲುಣಿಸುತ್ತಿದ್ದರೆ ವ್ಯತ್ಯಾಸ ಕಂಡು ಬರುವುದು. ಆಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಎದೆಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಸರಿಯಾಗುವುದು.

*ಗರ್ಭನಿರೋಧಕ ವಿಧಾನ ಅನುಸರಿಸುತ್ತಿದ್ದರೆ

* ಮಾತ್ರೆ ತೆಗೆದುಕೊಳ್ಳುವುದು

* ಇತರ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ

* ಮಾನಸಿಕ ಒತ್ತಡ: ಅತೀಯಾದ ಮಾನಸಿಕ ಒತ್ತಡವಿದ್ದಾಗ ರಕ್ತಸ್ರಾವ ಕಡಿಮೆಯಾಗುವುದು.

* ಅತ್ಯಧಿಕ ವ್ಯಾಯಾಮ ಮಾಡಿದಾಗ: ತುಂಬಾ ಅಧಿಕ ವ್ಯಾಯಾಮ ಮಾಡುವವರ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಉಂಟಾಗುವುದು.

ತಿನ್ನುವ ಕಾಯಿಲೆ: ಅನೊರೆಕ್ಸಿಯಾ ನರ್ವೋಸಾ, ಬುಲೇಮಿಯಾ ಮುಂತಾದ ತಿನ್ನುವ ಕಾಯಿಲೆ ಇದ್ದರೆ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು.

ಥೈರಾಯ್ಡ್, ಪಿಸಿಒಎಸ್‌ ಸಮಸ್ಯೆಯಿದ್ದಾಗ

ಥೈರಾಯ್ಡ್, ಪಿಸಿಒಎಸ್‌ ಸಮಸ್ಯೆಯಿದ್ದಾಗ

ಥೈರಾಯ್ಡ್‌, ಪಿಸಿಒಎಸ್ ಸಮಸ್ಯೆಯಿದ್ದಾಗ ಈ ರೀತಿ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಈ ರೀತಿ ಉಂಟಾಗುತ್ತದೆ. ದೇಹದಲ್ಲಿ ಅಂಡಾಣುಗಳು ಉತ್ಪತ್ತಿಯನ್ನು ತಡೆಗಟ್ಟುತ್ತದೆ, ಮುಟ್ಟಿನ ಚಕ್ರದ ಮೇಲೆ ಪರಿಣಾಮ ಬೀರುವುದು. ಇದರಿಂದ ಸಂತಾನೋತ್ಪತ್ತಿಗೆ ತೊಂದರೆಯಾಗುವುದು.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವಾಗ ವೈದ್ಯರನ್ನು ಕಾಣಬೇಕು?

* 3 ತಿಂಗಳಿನಿಂದ ನೀವು ಮುಟ್ಟೇ ಆಗಿಲ್ಲ, ಆದರೆ ನೀವು ಗರ್ಭಿಣಿಯಲ್ಲ ಎಂದಾದರೆ ವೈದ್ಯರನ್ನು ಭೇಟಿಯಾಗಿ.

* ಅನಿಯಮಿತ ಮುಟ್ಟಿನ ಸಮಸ್ಯೆ

* ಮುಟ್ಟಿನ ಚಕ್ರದ ಮಧ್ಯದಲ್ಲಿ ರಕ್ತಸ್ರಾವ ಕಂಡು ಬರುವುದು (ಆದರೆ ಮುಟ್ಟು ನಿಂತ ಮೇಲೆ ಕೆಲ ದಿನ ಬಿಟ್ಟು ರಕ್ತಸ್ರಾವ ಂಡು ಬರುವುದು)

*ಮುಟ್ಟಿನ ಸಮಯದಲ್ಲಿ ತುಂಬಾ ನೋವು

ಕೊನೆಯದಾಗಿ: ಮುಟ್ಟಿನ ಸಮಸ್ಯೆ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ. ಕೆಲವೊಂದು ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಬೇಗನೆ ಗುಣಪಡಿಸಬಹುದು.

English summary

Why Is My Period So Light? Reasons, Riska And When To Worry In Kannada

Why is my period so light? Reasons, Riska and when to worry in Kannada, read on.....
Story first published: Saturday, November 6, 2021, 11:51 [IST]
X
Desktop Bottom Promotion