For Quick Alerts
ALLOW NOTIFICATIONS  
For Daily Alerts

ವೀರ್ಯಾದ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತೆ?

By Manju
|

ವೀರ್ಯದ ಬಣ್ಣದ ಪುರುಷನ ಆರೋಗ್ಯವನ್ನು ಸೂಚಿಸುತ್ತದೆ. ವೀರ್ಯ ಸಾಮಾನ್ಯವಾಗಿ ಬೂದು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಇದರ ಬಣ್ಣ ಕೆಲವೊಂದು ಆಹಾರ ಸೇವಿಸಿದಾಗ ಅಥವಾ ಅನಾರೋಗ್ಯ ಉಂಟಾದಾಗ ಸ್ವಲ್ಪ ಬದಲಾವಣೆಯಾಗುವುದು. ವೀರ್ಯದ ಬಣ್ಣದಲ್ಲಿ ತಾತ್ಕಲಿಕವಾಗಿ ಬದಲಾವಣೆ ಕಂಡರೆ ಏನೂ ಭಯಪಡಬೇಕಾಗಿಲ್ಲ.

ಇಲ್ಲಿ ನಾವು ನಿಮ್ಮ ವೀರ್ಯದ ಬಣ್ಣ ಹಳದಿ,ಹಸಿರು, ಕಂದು ಅಥವಾ ಇತರ ಬಣ್ಣದಲ್ಲಿದ್ದರೆ ಅದು ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ, ಯಾವಾಗ ವೈದ್ಯರನ್ನು ಕಾಣಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಬಿಳಿ ಅಥವಾ ಸ್ವಲ್ಪ ಬೂದು ಮಿಶ್ರಿತ ಬಿಳಿ ಬಣ್ಣದ ವೀರ್ಯ ಏನನ್ನು ಸೂಚಿಸುತ್ತದೆ?

ಬಿಳಿ ಅಥವಾ ಸ್ವಲ್ಪ ಬೂದು ಮಿಶ್ರಿತ ಬಿಳಿ ಬಣ್ಣದ ವೀರ್ಯ ಏನನ್ನು ಸೂಚಿಸುತ್ತದೆ?

ಬಿಳಿ ಅಥವಾ ಅಥವಾ ಸ್ವಲ್ಪ ಬೂದು ಮಿಶ್ರಿತ ಬಣ್ಣ ಸಹಜವಾದ ವೀರ್ಯದ ಬಣ್ಣವಾಗಿದೆ. ವೀರ್ಯದಲ್ಲಿರುವ ಖನಿಜಾಂಶಗಳು, ಪ್ರೊಟೀನ್, ಹಾರ್ಮೋನ್‌ಗಳು, ಎಂಜೈಮ್ಸ್ ಇವೆಲ್ಲಾ ಸೇರಿ ವೀರ್ಯದ ಬಣ್ಣ ಬಿಳಿ ಅಥವಾ ಬೂದು ಮಿಶ್ರಿತ ಬಿಳಿ ಬಣ್ಣದಲ್ಲಿ ಕಾಣುವುದು.

ನಿಮ್ಮ ಪ್ರೊಸ್ಟೇಟ್ ಗ್ರಂಥಿ ವೀರ್ಯವನ್ನು ಉತ್ಪಾದಿಸುವಾಗ ವೀರ್ಯದ ಬಣ್ಣಕ್ಕೆ ಈ ಅಂಶಗಳು ಪ್ರಮುಖವಾಗಿವೆ

ನಿಮ್ಮ ಪ್ರೊಸ್ಟೇಟ್ ಗ್ರಂಥಿ ವೀರ್ಯವನ್ನು ಉತ್ಪಾದಿಸುವಾಗ ವೀರ್ಯದ ಬಣ್ಣಕ್ಕೆ ಈ ಅಂಶಗಳು ಪ್ರಮುಖವಾಗಿವೆ

  • ಸಿಟ್ರಿಕ್ ಆಮ್ಲ
  • ಆಮ್ಲ ಫಾಸ್ಫೇಟ್
  • ಕ್ಯಾಲ್ಸಿಯಂ
  • ಸೋಡಿಯಂ
  • ಸತು
  • ಪೊಟಾಷ್ಯಿಯಂ
  • ಪ್ರೊಟೀನ್ - ಒಡೆದ ಎಂಜೈಮ್ಸ್
  • ಫೈಬ್ರಿನೊಲಿಸಿನ್
  • ಇತರ ಅಂಶಗಳನ್ನು ವೀರ್ಯಕೋಶಕಗಳಿಂದ ಪಡೆದುಕೊಂಡು ವೀರ್ಯ ಉತ್ಪತ್ತಿಯಾಗುತ್ತದೆ.

     ಹಳದಿ ಬಣ್ಣದ ವೀರ್ಯ

    ಹಳದಿ ಬಣ್ಣದ ವೀರ್ಯ

    ಮೂತ್ರ ಮಾಡಿದಾಗ ಮೂತ್ರನಾಳದಲ್ಲಿ ಮೂತ್ರ ಖಾಲಿಯಾಗುತ್ತದೆ, ಆದರೆ ಅದರಲ್ಲಿ ಸ್ವಲ್ಪ ಮೂತ್ರ ಉಳಿದಿದ್ದರೆ ಆ ಮೂಲಕ ವೀರ್ಯ ಬರುವಾಗ ಮೂತ್ರದೊಂದಿಗೆ ಮಿಶ್ರವಾಗಿ ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು. ಸ್ವಲ್ಪ ಹಳದಿ ಬಣ್ಣದಲ್ಲಿ ಇದ್ದರೆ ಅದು ಮೂತ್ರ ಮಿಶ್ರವಾಗಿರಬಹುದು. ಆದರೆ ವೀರ್ಯ ತುಂಬಾ ಹಳದಿ ಬಣ್ಣದಲ್ಲಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ

    • ಮೂತ್ರದಲ್ಲಿ ಸೋಂಕು ಉಂಟಾದಾಗ
    • ಪ್ರೊಸ್ಟೇಟ್ ಗಾತ್ರ ದೊಡ್ಡದಾದಾಗ ( prostatic hyperplasia)
    • ಪ್ರೊಸ್ಟೇಟ್‌ನಲ್ಲಿ ಸೋಂಕು ಇದ್ದಾಗ ಹಳದಿ ಬಣ್ಣಕ್ಕೆ ತಿರುಗುವುದು.
    •  ಕಾಮಲೆ

      ಕಾಮಲೆ

      ದೇಹದಲ್ಲಿ ಬಿಲಿರುಬಿನ್ ಅಧಿಕವಾದಾಗ ಕಾಮಲೆ ಉಂಟಾಗುವುದು. ಬಿಲಿರುಬಿನ್ ಎನ್ನುವುದು ಹಳದಿ ದ್ರಾವಣವಾಗಿದ್ದು ಲಿವರ್‌ ಕೆಂಪು ರಕ್ತ ಕಣಗಳನ್ನು ವಿಭಿಜಿಸಿದಾಗ ಉಂಟಾಗುವುದು.

      ಕಾಮಲೆ ಉಂಟಾದಾಗ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು, ಉಗುರುಗಳ ತುದಿಯಲ್ಲಿ ಹಳದಿ ಬಣ್ಣ ಕಾಣಬಹುದು ಅಲ್ಲದೆ ವೀರ್ಯ ಕೂಡ ಹಳದಿ ಬಣ್ಣದಲ್ಲಿ ಇರುತ್ತದೆ.

      ಇದರ ಜೊತೆಗೆ ಈ ಲಕ್ಷಣಗಳೂ ಕಂಡು ಬರುವುದು

      • ಚಳಿಯಾಗುವುದು
      • ಜ್ವರ
      • ಕಿಬ್ಬೊಟ್ಟೆ ನೋವು
      • ಲ್ಯುಕೋಸೈಟೋಸ್ಪೆರ್ಮಿ

        ಲ್ಯುಕೋಸೈಟೋಸ್ಪೆರ್ಮಿ

        ವೀರ್ಯದಲ್ಲಿ ತುಂಬಾ ಬಿಳಿ ರಕ್ತ ಕಣಗಳು ಇದ್ದಾಗ ಲ್ಯುಕೋಸೈಟೋಸ್ಪೆರ್ಮಿ ಉಂಟಾಗುವುದು. ಇದರಿಂದ ಕೂಡ ವೀರ್ಯ ಹಳದಿಯಾಗುವುದು.

        ಈ ಸಮಸ್ಯೆಗೆ ಕಾರಣಗಳು

        • ಲೈಂಗಿಕ ಸೋಂಕು ಹರಡಿರುವುದು
        • ಪ್ರೊಸ್ಟೇಟ್ ಸೋಂಕು
        • ಅಟೋಇಮ್ಯೂನೆ ಕಾಯಿಲೆ (ರೋಗ ನಿರೋಧಕ ವ್ಯವಸ್ಥೆಯ ಅಸಾಮಾನ್ಯ ಪ್ರಕ್ರಿಯೆ)
        • ಈ ಸಮಸ್ಯೆಗಳಿದ್ದರೆ ಬಂಜೆತನ ಕೂಡ ಉಂಟಾಗುವುದು.

          ಪ್ರೊಸ್ಟೇಟ್ ಸೋಂಕು

          ಪ್ರೊಸ್ಟೇಟ್ ಸೋಂಕು

          ಹಳದಿ ಅಥವಾ ಹಳದಿ-ಹಸಿರು ಮಿಶ್ರಿತ ವೀರ್ಯವಿದ್ದರೆ ಅದಕ್ಕೆ ಪ್ರಮುಖ ಕಾರಣ ಪ್ರೊಸ್ಟೇಟ್ ಸೋಂಕು ಆಗಿರುತ್ತದೆ. ಮೂತ್ರನಾಳದಲ್ಲಿ ಬ್ಯಾಕ್ಟಿರಿಯಾ ಇದ್ದರೆ ಪ್ರೊಸ್ಟೇಟ್ ಗ್ರಂಥಿಯಲ್ಲಿ ಸೋಂಕು ಉಂಟಾಗುವುದು.

          ಈ ರೀತಿ ಉಂಟಾದಾಗ ಕಂಡು ಬರುವ ಇತರ ಲಕ್ಷಣಗಳು

          • ಮೂತ್ರವಿಸರ್ಜನೆಗೆ ಕಷ್ಟವಾಗುವುದು
          • ಮೂತ್ರ ಮಾಡುವಾಗ ನೋವು
          • ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು
          • ಸ್ಖಲನವಾದಾಗ ನೋವು
          • ಸುಸ್ತು
          • ಜ್ವರ
          • ಚಳಿಯಾಗುವುದು
          • ಈ ರೀತಿ ಉಂಟಾದರೆ ವೈದ್ಯರನ್ನು ಭೇಟಿಯಾಗಿ.

            ಅತಿಯಾದ ಲೈಂಗಿಕ ಕ್ರಿಯೆ ಅಥವಾ ಹಸ್ತ ಮೈಥುನ

            ಅತಿಯಾದ ಲೈಂಗಿಕ ಕ್ರಿಯೆ ಅಥವಾ ಹಸ್ತ ಮೈಥುನ

            ಇನ್ನು ಕೆಲವೊಂದು ಪ್ರಕರಣಗಳಲ್ಲಿ ಅತಿಯಾದ ಲೈಂಗಿಕ ಕ್ರಿಯೆ ಅಥವಾ ಹಸ್ತ ಮೈಥುನದಿಂದಾಗಿ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುವುದು.

            ಅಲ್ಲದೆ ತುಂಬಾ ಸಮಯದಿಂದ ಲೈಂಗಿಕ ಕ್ರಿಯೆಯ ಪರಾಕಾಷ್ಠೆ ತಲುಪದಿದ್ದರೆ ಅಥವಾ ಸ್ಖಲನ ತಡೆಹಿಡಿದಿದ್ದರೆ ಕೂಡ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಈ ಸಂದರ್ಭದಲ್ಲಿ ಆತಂಕ ಪಡಬೇಕಾಗಿಲ್ಲ ಕೆಲವೊಂದು ದಿನಗಳಲ್ಲಿ ಸರಿ ಹೋಗುವುದು.

            ಪ್ರೊಸ್ಟೇಟ್, ಟೆಸ್ಟಿಕ್ಯೂಲರ್ ಅಥವಾ ಮೂತ್ರನಾಳದ ಕ್ಯಾನ್ಸರ್

            ಪ್ರೊಸ್ಟೇಟ್, ಟೆಸ್ಟಿಕ್ಯೂಲರ್ ಅಥವಾ ಮೂತ್ರನಾಳದ ಕ್ಯಾನ್ಸರ್

            ಪ್ರೊಸ್ಟೇಟ್, ಟೆಸ್ಟಿಕ್ಯೂಲರ್ ಅಥವಾ ಮೂತ್ರನಾಳದ ಕ್ಯಾನ್ಸರ್ ಇದ್ದರೆ ಕೂಡ ವೀರ್ಯದಲ್ಲಿ ರಕ್ತ ಕಂಡು ಬರುವುದು. ಇವುಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು.

             ಈ ರೀತಿಯ ಸಮಸ್ಯೆ ಇದ್ದಾಗ ಕಂಡು ಬರುವ ಇತರ ಲಕ್ಷಣಗಳು

            ಈ ರೀತಿಯ ಸಮಸ್ಯೆ ಇದ್ದಾಗ ಕಂಡು ಬರುವ ಇತರ ಲಕ್ಷಣಗಳು

            • ವೃಷಣಗಳಲ್ಲಿ ನೋವು
            • ಸ್ಕ್ರೋಟಮ್
            • ಕಿಬ್ಬೊಟ್ಟೆ ನೋವು
            • ಸೊಂಟ ನೋವು
            • ಗುಪ್ತಾಂಗಗಳಲ್ಲಿ ನೋವು
            • ಕಪ್ಪು ವೀರ್ಯ ಏನನ್ನು ಸೂಚಿಸುತ್ತದೆ?

              ಕಪ್ಪು ವೀರ್ಯ ಏನನ್ನು ಸೂಚಿಸುತ್ತದೆ?

              ವೀರ್ಯದಲ್ಲಿ ಕಪ್ಪು ಬಣ್ಣ ಹೆಮೆಟೊಸ್ಪೆರ್ಮಿಯಾದಿಂದಾಗಿ ಉಂಟಾಗುವುದು. ಹಳೆಯ ರಕ್ತ ದೇಹದಲ್ಲಿ ತುಂಬಾ ಸಮಯದಿಂದ ಇದ್ದರೆ ವೀರ್ಯದಲ್ಲಿ ಕಪ್ಪು ಬಣ್ಣ ಉಂಟಾಗುವುದು.

              ಇನ್ನು ಬೆನ್ನು ಮೂಳೆಗೆ ಹಾನಿಯಾಗಿದ್ದರೆ ಕಂದು ಅಥವಾ ಕಪ್ಪು ಬಣ್ಣದಲ್ಲಿ ಕಂಡು ಬರುವುದು. ಅಲ್ಲದೆ ಅಧಿಕ ಖನಿಜಾಂಶ ಇದ್ದರು ಕೂಡ ವೀರ್ಯದಲ್ಲಿ ಕಪ್ಪು ಬಣ್ಣ ಕಂಡು ಬರುವುದು ಎಂದು 2013ರಲ್ಲಿ ನಡೆಸಿದ ಅಧ್ಯಯನ ಹೇಳಿದೆ. ಪಾದರಸ, ಮ್ಯಾಂಗನೀಸ್, ನಿಕ್ಕಲ್ ಅಂಶ ಕೂಡ ವೀರ್ಯದಲ್ಲಿ ಕಪ್ಪು ಬಣ್ಣಕ್ಕೆ ಕಾರಣವಾಗಿದೆ.

              ಆಹಾರದಿಂದ ಕೂಡ ವೀರ್ಯದ ಬಣ್ಣದಲ್ಲಿ ಬದಲಾವಣೆ

              ಆಹಾರದಿಂದ ಕೂಡ ವೀರ್ಯದ ಬಣ್ಣದಲ್ಲಿ ಬದಲಾವಣೆ

              • ಆಹಾರಕ್ರಮ
              • ಮದ್ಯಸೇವನೆ
              • ದೈಹಿಕ ವ್ಯಾಯಾಮ
              • ಡ್ರಗ್ಸ್ ಬಳಕೆ
              • ಇವುಗಳಿಂದ ಕೂಡ ವೀರ್ಯದಲ್ಲಿ ತಾತ್ಕಲಿಕ ಬದಲಾವಣೆ ಉಂಟಾಗುವುದು.

                 ಯಾವಾಗ ವೈದ್ಯರನ್ನು ಕಾಣಬೇಕು?

                ಯಾವಾಗ ವೈದ್ಯರನ್ನು ಕಾಣಬೇಕು?

                • ನೀವು ಆರೋಗ್ಯಕರವಾಗಿದ್ದರೂ ನಿಮ್ಮ ವೀರ್ಯದಲ್ಲಿ ತುಂಬಾ ಸಮಯದಿಂದ ಬದಲಾವಣೆ ಗೋಚರಿಸಿದ್ದರೆ
                • ಗುಪ್ತಾಂಗಳಲ್ಲಿ ನೋವು , ಊತ
                • ಮೂತ್ರ ವಿಸರ್ಜನೆ ಮಾಡುವಾಗ ನೋವು
                • ವೀರ್ಯ ತುಂಬಾ ಮಂದವಾಗಿದ್ದರೆ ( ಹಾರ್ಮೋನ್ ಬದಲಾವಣೆ, ಸೋಂಕು ಅಥವಾ ನೀರಿನಂಶ ಕಡಿಮೆಯಾದಾಗ ಉಂಟಾಗುವುದು )
                • ಜ್ವರ
                • ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

English summary

What Your Semen Color Reveals About Your Health

Men Color Reveals About Your Health. Read to know what yellow, green, brown, and other colors may mean, when to seek treatment, and more.
X
Desktop Bottom Promotion