For Quick Alerts
ALLOW NOTIFICATIONS  
For Daily Alerts

ವೆಜೈನಾ( ಜನನೇಂದ್ರೀಯ) ತುಂಬಾ ಡ್ರೈಯಾಗುತ್ತಿದೆಯೇ? ಇದನ್ನು ತಡೆಗಟ್ಟುವುದು ಹೇಗೆ?

|

ತುಂಬಾ ಮಹಿಳೆಯರು ವೆಜೈನಾ( ಜನನೇಂದ್ರೀಯ) ತುಂಬಾ ಡ್ರೈಯಾಗುತ್ತಿರುತ್ತದೆ ಎಂದು ಹೇಳುತ್ತಿರುತ್ತಾರೆ. ವೆಜೈನಾ ಎಂಬುವುದು ದೇಹದಲ್ಲಿ ತುಂಬಾ ಸೂಕ್ಷ್ಮವಾದ ಜಾಗವಾಗಿದೆ, ಚಿಕ್ಕ ತಪ್ಪಾದರೂ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಎಷ್ಟೋ ಜನರು ಅದರ ಸ್ವಚ್ಛತೆ ಗಮನ ನೀಡುವುದಿಲ್ಲ ಇದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು. ಇನ್ನು ಕೆಲವರು ಆ ಭಾಗದಲ್ಲಿ ಏನಾದರೂ ಸಮಸ್ಯೆಯಿದ್ದರೆ ಸಂಕೋಚದಿಂದ ವೈದ್ಯರಿಗೆ ತೋರಿಸದೆ ಸಮಸ್ಯೆ ಹೆಚ್ಚಾದಾಗ ವೈದ್ಯರ ಬಳಿ ಹೋಗುತ್ತಾರೆ.

Vaginal Dryness

ಜನನೇಂದ್ರೀಯ ತುಂಬಾ ಒಣಗಿದ್ದರೆ ಸಂಭೋಗ ಕ್ರಿಯೆ ನಡೆಸುವಾಗ ತುಂಬಾ ನೋವು ಉಂಟಾಗುವುದು. ಜನನೇಂದ್ರೀಯ ಒಣಗುವುದರಿಂದ ಒಳ್ಳೆಯ ಯೀಸ್ಟ್ ಹಾಗೂ ಬ್ಯಾಕ್ಟಿರಿಯಾ ಗಳ ಸಮತೋಲನ ತಪ್ಪುವುದು.

 ಜನನೇಂದ್ರೀಯ ಒಣಗುವುದರಿಂದ ಈ ಲಕ್ಷಣಗಳು ಕಂಡು ಬರುವುದು:

ಜನನೇಂದ್ರೀಯ ಒಣಗುವುದರಿಂದ ಈ ಲಕ್ಷಣಗಳು ಕಂಡು ಬರುವುದು:

* ಮೂತ್ರ ಮಾಡುವಾಗ ಉರಿಯಾಗುವುದು

* ಆ ಭಾಗ ಕೆಂಪಾಗುವುದು, ಸ್ವಲ್ಪ ಊತ ಬಂದಂತೆ ಅನಿಸುವುದು

* ಲೈಂಗಿಕ ಕ್ರಿಯೆ ನಡೆಸುವಾಗ ನೋವಾಗುವುದು

* ಆ ಭಾಗದಲ್ಲಿ ತುಂಬಾ ತುರಿಕೆ ಕಂಡು ಬರುವುದು

* ಅಸಹಜ ಬಿಳುಪು ಹೆಚ್ಚುವುದು

* ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು

* ಆಗಾಗ UTIs ಅಂದ್ರೆ ಮೂತ್ರ ಸೋಂಕು ಉಂಟಾಗುತ್ತಿರುತ್ತದೆ.

 ಜನನೇಂದ್ರೀಯ ಒಣಗಲು ಕಾರಣವೇನು?

ಜನನೇಂದ್ರೀಯ ಒಣಗಲು ಕಾರಣವೇನು?

1. ಸೋಪು ಹಚ್ಚಿ ಆ ಭಾಗ ತೊಳೆಯುವುದರಿಂದ ಒಳ್ಳೆಯ ಬ್ಯಾಕ್ಟಿರಿಯಾ ಹಾಳಾಗುವುದು, ಇದರಿಂದ ಜನನೇಂದ್ರೀಯ ಒಣಗುವುದು

2. ಹಾರ್ಮೋನ್‌ಗಳ ಅಸಮತೋಲನ

2. ಹಾರ್ಮೋನ್‌ಗಳ ಅಸಮತೋಲನ

ಹೆರಿಗೆಯ ಬಳಿಕ , ಸ್ತನಪಾನ ಮಾಡುವಾಗ ಅಥವಾ ಬೇರೆ ಏನಾದರೂ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು, ಆಗ ಜನನೇಂದ್ರೀಯ ಒಣಗುವುದು.

3. ಗರ್ಭನಿರೋಧಕ

3. ಗರ್ಭನಿರೋಧಕ

ಗರ್ಭನಿರೋಧಕಗಳ ಅಡ್ಡಪರಿಣಾಮ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಜನನೇಂದ್ರೀಯ ಒಣಗುವುದು.

4. ಧೂಮಪಾನ

4. ಧೂಮಪಾನ

ಧೂಮಪಾನ ಮಾಡುವ ಅಭ್ಯಾಸ ಇರುವವರಿಗೂ ಈ ಸಮಸ್ಯೆ ಕಂಡು ಬರುವುದು.

6. ಹಿಸ್ಟ್ರೆಕ್ಟೆಮಿ

6. ಹಿಸ್ಟ್ರೆಕ್ಟೆಮಿ

ಅಂಡಾಶಯ ತೆಗೆದವರಲ್ಲಿ ಕೂಡ ಜನನೇಂದ್ರೀಯ ಡ್ರೈಯಾಗುವ ಸಮಸ್ಯೆ ಕಂಡು ಬರುವುದು.

 7. ರಾಸಾಯನಿಕರುವ ಸೌಂದರ್ಯವರ್ಧಕಗಳು

7. ರಾಸಾಯನಿಕರುವ ಸೌಂದರ್ಯವರ್ಧಕಗಳು

ತುಂಬಾ ಸುವಾಸನೆ ಇರುವ ಪರ್ಫ್ಯೂಮ್‌ ಅಥವಾ ಹೈಜೈನೆ ಪ್ರಾಡೆಕ್ಟ್ ಬಳಸುವುದರಿಂದ ಜನನೇಂದ್ರೀಯ ಡ್ರೈಯಾಗುವುದು.

 8. ಈಸ್ಟ್ರೋಜಿನ್ ಉತ್ಪತ್ತಿ ಕಡಿಮೆಯಾಗುವುದು

8. ಈಸ್ಟ್ರೋಜಿನ್ ಉತ್ಪತ್ತಿ ಕಡಿಮೆಯಾಗುವುದು

ದೇಹದಲ್ಲಿ ಈಸ್ಟ್ರೋಜಿನ್‌ ಅಲ್ಪ ಪ್ರಮಾಣದಲ್ಲಿ ಇರುವುದಾದರೂ ಅದು ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬಿರುವುದು. ಇದು ಆ ಭಾಗದಲ್ಲಿ ತೇವಾಂಶವಾಗಿ ಇರಲು, ಅದರ ಗಾತ್ರ ಇವುಗಳನ್ನು ಸರಿಯಾಗಿಡಲು ಸಹಕಾರಿ. ಈಸ್ಟ್ರೋಜಿನ್ ತುಂಬಾ ಕಡಿಮೆಯಾದಾಗ ಜನನೇಂದ್ರೀಯ ಡ್ರೈಯಾಗುವುದು.

 ಜನನೇಂದ್ರೀಯ ಡ್ರೈಯಾಗುತ್ತಿದ್ದರೆ ಏನು ಮಾಡಬೇಕು?

ಜನನೇಂದ್ರೀಯ ಡ್ರೈಯಾಗುತ್ತಿದ್ದರೆ ಏನು ಮಾಡಬೇಕು?

* ಹಾರ್ಮೋನ್ ಸಮತೋಲನದಲ್ಲಿರಲು ಚಿಕಿತ್ಸೆ ಪಡೆಯಿರಿ

* ಲ್ಯೂಬ್ರಿಕಾಂಟ್ ಬಳಸಿ

* ತಜ್ಞರ ಸಲಹೆ ಮೇರೆಗೆ ಮಾಯಿಶ್ಚರೈಸರ್ ಬಳಸಿ

* ಆ ಭಾಗದಲ್ಲಿ ಶುಚಿತ್ವ ಕಾಪಾಡಿ.

ಇಷ್ಟೆಲ್ಲಾ ಮಾಡಿಯೂ ಆ ಸಮಸ್ಯೆ ಬಗೆಹರಿಯದಿದ್ದರೆ ಸೂಕ್ತ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

English summary

What Is Vaginal Dryness? Symptoms, Causes, Diagnosis, Treatment, and Prevention in Kannada

What Is Vaginal Dryness? Symptoms, Causes, Diagnosis, Treatment, and Prevention in Kannada,
Story first published: Friday, March 4, 2022, 22:13 [IST]
X
Desktop Bottom Promotion