Just In
Don't Miss
- News
ಸಾವರ್ಕರ್ ಹೇಳಿಕೆ, ರಾಹುಲ್ ಗಾಂಧಿಗೆ ಪ್ರಹ್ಲಾದ ಜೋಶಿ ತಿರುಗೇಟು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ತಲೆನೋವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ? ಇದಕ್ಕೆ ಮನೆಮದ್ದುಗಳೇನು?
ತಲೆನೋವು ಕಾಣಿಸಿಕೊಂಡರೆ ಸಾಕು ಯಾವುದೇ ಕೆಲಸವನ್ನು ಮಾಡಲು ಆಗದು, ಯಾವುದೇ ಕೆಲಸದ ಮೇಲೂ ಗಮನವಿರದು. ತಲೆನೋವು ನೀಡುವಂತಹ ಸಂಕಟ, ಅದರ ನೋವು ಹೇಳತೀರದು. ಇದು ಕೆಲವೊಮ್ಮೆ ಅತಿಯಾಗಿ ವಾಂತಿ ಮಾಡಿಕೊಳ್ಳುವುದು ಇದೆ. ತಲೆನೋವು ಎನ್ನುವುದು ನರ ವ್ಯವಸ್ಥೆಯ ಒಂದು ಸಮಸ್ಯೆಯಾಗಿದೆ ಮತ್ತು ಇದು ವರ್ಷಕ್ಕೆ ಒಂದು ಸಲವಾದರೂ ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಎಂದು ವಿಶ್ವಸಂಸ್ಥೆ ಕೂಡ ಹೇಳಿದೆ. ತಲೆನೋವಿನ ಅನುಭವ ಖಂಡಿತವಾಗಿಯೂ ಅದು ನರಕ ಯಾತನೆ ಎನ್ನಬಹುದು. ತಲೆಯ ಭಾಗದಲ್ಲಿ ಸಣ್ಣ ನೋವಿದ್ದರೂ ಅದು ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ತುಂಬಾ ಹಿಂಸೆ ನೀಡುವುದು.

ತಲೆನೋವಿನ ವಿಧಗಳು ಹಾಗೂ ಕಾರಣ
ತಲೆನೋವಿನಲ್ಲಿ ಸಾಮಾನ್ಯವಾಗಿ ಮೈಗ್ರೇನ್ ತಲೆನೋವು, ಒತ್ತಡದ ತಲೆನೋವು ಮತ್ತು ಸೈನಸ್ ತಲೆನೋವು ಎಂದು ಮೂರು ವಿಧಗಳು ಇವೆ. ಸಾಮಾನ್ಯವಾಗಿ ತಲೆನೋವು ಸಣ್ಣ ಮಟ್ಟದ ನೋವಿನಿಂದ ಕಾಣಿಸಿಕೊಂಡು ತೀವ್ರ ಸ್ವರೂಪವಾಗಿ ಪರಿವರ್ತನೆ ಆಗುವುದು. ತಲೆನೋವಿನ ವಿಧಕ್ಕೆ ಅನುಗುಣವಾಗಿ ಅದರ ನೋವು ಕೂಡ ತಲೆಯ ವಿವಿಧ ಭಾಗಗಳನ್ನು ಆವರಿಸುವುದು. ಈ ಎಲ್ಲಾ ತಲೆನೋವಿನ ಒಂದು ಸಾಮಾನ್ಯ ಅಂಶವೆಂದರೆ ಈ ನೋವು ಸಮಯ ಕಳೆದಂತೆ ಹಾಗೆ ಮಾಯವಾಗುವುದು.
ತಲೆನೋವು ಎನ್ನುವುದು ವಿವಿಧ ಕಾರಣಗಳಿಂದಾಗಿ ಬರಬಹುದು. ಇದರಲ್ಲಿ ಮುಖ್ಯವಾಗಿ ಆಹಾರ, ನೀರಿನಾಂಶ ಸೇವನೆ, ಮನೆ ಹಾಗೂ ಕಚೇರಿಯ ವಾತಾವರಣ ಮತ್ತು ಸಂಪೂರ್ಣ ಆರೋಗ್ಯ ಕಾರಣವಾಗಿದೆ. ತಲೆನೋವು ಕೆಲವೊಂದು ಆರೋಗ್ಯ ಸಮಸ್ಯೆಯ ಸೂಚನೆಗಳು ಆಗಿರಬಹುದು.

ಗಂಭೀರತೆ ಸೂಚಿಸುವ ತಲೆನೋವು
ಹೆಚ್ಚಿನ ಸಂದರ್ಭಗಳಲ್ಲಿ ತಲೆನೋವು ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ತಲೆನೋವು ತುಂಬಾ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಇದರಲ್ಲಿ ಮುಖ್ಯವಾಗಿ ರಕ್ತನಾಳ, ಹೃದಯಾಘಾತ, ಮೆದುಳಿನ ಗಡ್ಡೆ ಅಥವಾ ಮೆದುಳಿನಲ್ಲಿ ರಕ್ತಸ್ರಾವದ ಸೂಚನೆ ಆಗಿರಬಹುದು. ತಲೆನೋವು ಪದೇ ಪದೇ ಬರುತ್ತಲಿದ್ದರೆ ಮತ್ತು ಅದು ದೀರ್ಘ ಕಾಲ ತನಕ ಇದ್ದರೆ ಆಗ ನೀವು ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಹಠಾತ್ ಆಗಿ ಬಂದು ತೀವ್ರ ರೀತಿಯ ನೋವು ನೀಡುವಂತದ್ದಾಗಿದೆ. ಇದನ್ನು ಥಂಡರ್ ಕ್ಲ್ಯಾಪ್ ತಲೆನೋವು ಎಂದು ಕರೆಯುವರು.
ಆರೋಗ್ಯದ ಬಗ್ಗೆ ತಲೆನೋವು ಏನು ಹೇಳುತ್ತದೆ ಮುಂದೆ ತಿಳಿಯೋಣ.

1. ಒತ್ತಡದ ತಲೆನೋವು: ಒತ್ತಡ ಮತ್ತು ಆತಂಕ
ಇದು ತಲೆನೋವಿನ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಹೆಚ್ಚಿನ ಜನರನ್ನು ಕಾಡುವಂತಹ ತಲೆನೋವಾಗಿದೆ. ಒತ್ತಡದ ತಲೆನೋವು ನಿರಂತರವಾಗಿ, ಹಣೆ ಮತ್ತು ತಲೆಯ ಹಿಂಭಾಗ ಹಾಗೂ ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಳ್ಳುವುದು. ಕಣ್ಣಿನ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕುತ್ತಿಗೆ ಮತ್ತು ತಲೆಬುರುಡೆಯ ಸ್ನಾಯುಗಳು ಸಂಕೋಚನಗೊಂಡ ಪರಿಣಾಮವಾಗಿ ಈ ರೀತಿಯ ತಲೆನೋವು ಕಾಣಿಸಿಕೊಳ್ಳುವುದು. ಇದು ಒತ್ತಡ ಹಾಗೂ ಆತಂಕಕ್ಕೆ ಸ್ನಾಯುಗಳು ನೀಡುವಂತಹ ಸಾಮಾನ್ಯ ಪ್ರತಿಕ್ರಿಯೆ ಆಗಿದೆ. ತೀವ್ರ ಒತ್ತಡದ ತಲೆನೋವನ್ನು ಮೈಗ್ರೇನ್ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಇದೆ. ಅದಾಗ್ಯೂ, ಮೈಗ್ರೇನ್ ತಲೆನೋವು ಒತ್ತಡದ ತಲೆನೋವಿಗಿಂತಲೂ ಹೆಚ್ಚು ಅಡ್ಡ ಪರಿಣಾಮ ಬೀರುವುದು. ಇದರಲ್ಲಿ ವಾಕರಿಕೆ, ವಾಂತಿ ಮತ್ತು ತಲೆ ತಿರುಗುವಿಕೆ ಉಂಟಾಗುವುದು.
ಶುಂಠಿ ಚಾ ಕುಡಿದರೆ ಅದರಿಂದ ಉರಿಯೂತ ಕಡಿಮೆ ಆಗುವುದು. ಇದರಿಂದ ನೋವು ನಿವಾರಿಸಲು ಅಥವಾ ಕಡಿಮೆ ಮಾಡಲು ನೆರವಾಗುವುದು. ತಲೆಗೆ ಪುದೀನಾ ಎಣ್ಣೆ ಹಚ್ಚುವುದರಿಂದ ತಲೆ ಹಾಗೂ ಕುತ್ತಿಗೆ ಭಾಗದ ಸ್ನಾಯುಗಳು ಆರಾಮ ಪಡೆಯಬಹುದು. ಈ ಎರಡು ತಲೆನೋವು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಎಂದು ಸಾಬೀತು ಆಗಿದೆ.

2. ಮೈಗ್ರೇನ್: ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ
ಅಮೆರಿಕಾದಲ್ಲಿ ಮೈಗ್ರೇನ್ ತಲೆನೋವು ಸುಮಾರು 40 ಮಿಲಿಯನ್ ಜನರನ್ನು ಕಾಡುತ್ತದೆ ಮತ್ತು ಇದು ದುರ್ಬಲಗೊಳಿಸುವ ಪ್ರವೃತ್ತಿ ಹೊಂದಿದೆ. ಮೈಗ್ರೇನ್ ವೇಳೆ ತಲೆನೋವು ತೀವ್ರವಾಗಿ ಇರುವುದು ಮತ್ತು ಅದು ಪದೇ ಪದೇ ಮರಳಿ ಬರುವುದು. ಮೈಗ್ರೇನ್ ನಲ್ಲಿ ತಲೆನೋವು ಒಂದು ಭಾಗದಲ್ಲಿ ಇರುವುದು. ಶೇ.30ರಷ್ಟುಮೈಗ್ರೇನ್ ನಲ್ಲಿ ತಲೆನೋವು ತಲೆಯ ಎರಡೂ ಭಾಗದಲ್ಲಿ ಕಾಣಿಸಿಕೊಳ್ಳುವುದು. ಸಾಮಾನ್ಯ ಮೈಗ್ರೇನ್ ತಲೆನೋವು ತಲೆಯ ಮೇಲಿನ ಭಾಗದಿಂದ ಕೆಳಮುಖವಾಗಿ ಕಾಡುವುದು.
ಎಲ್ಲಾ ತಲೆನೋವಿಗಿಂತಲೂ ಮೈಗ್ರೇನ್ ನರಗಳಿಗೆ ಕೆಲವೊಂದು ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದು. ಇದರ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇವೆ. ತಲೆ ತಿರುಗುವಿಕೆ, ಶಬ್ದ ಮತ್ತು ಬೆಳಕಿಗೆ ಸೂಕ್ಷ್ಮತೆ, ದೃಷ್ಟಿ ಸಮಸ್ಯೆ, ಮುಖದ ಭಾಗದಲ್ಲಿ ಜುಮ್ಮೆನ್ನಿಸುವಿಕೆ ಮತ್ತು ಮರಗಟ್ಟುವಿಕೆ. ಇದರೊಂದಿಗೆ ವಾಕರಿಕೆ ಮತ್ತು ವಾಂತಿ ಕಾಣಿಸಬಹುದು.
ಅನುವಂಶೀಯ ಮತ್ತು ವಾತಾವರಣದ ಕೆಲವೊಂದು ಅಂಶಗಳು ಮೈಗ್ರೇನ್ ತಲೆನೋವಿಗೆ ಕಾರಣವಾಗಬಹುದು. ಪೋಷಕಾಂಶಗಳು ಇಲ್ಲದೆ ಇರುವಂತಹ ಅಂದರೆ ಅತಿಯಾಗಿ ಸಂಸ್ಕರಿತ ಮತ್ತು ಉಪ್ಪಿನಾಂಶವಿರುವಂತಹ ಆಹಾರ ಸೇವನೆ ಮಾಡುವುದು. ಅನಾರೋಗ್ಯಕರ ನಿದ್ರೆ ವಿಧಾನ ಮತ್ತು ಅತಿಯಾಗಿ ಔಷಧಿ ಸೇವನೆಯಿಂದಲೂ ಮೈಗ್ರೇನ್ ಕಾಣಿಸಿಕೊಳ್ಳಬಹುದು.
ಬಿ12 ವಿಟಮಿನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲವು ಮೈಗ್ರೇನ್ ತಲೆನೋವಿನ ನೋವು ಕಡಿಮೆ ಮಾಡುವುದು. ಎರೋಬಿಕ್ ವ್ಯಾಯಾಮ ಮಾಡಿದರೆ ಆಗ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಬಹುದು. ಕೆಲವು ಜನರು ಮೈಗ್ರೇನ್ ತಲೆನೋವಿಗೆ ಏರೋಬಿಕ್ ವ್ಯಾಯಮದಿಂದ ಪರಿಹಾರ ಕಂಡುಕೊಂಡು ಈಗ ಔಷಧಿ ಸೇವನೆ ನಿಲ್ಲಿಸಿ ಬಿಟ್ಟಿದ್ದಾರೆ.

3. ಸೈನಸ್ ತಲೆನೋವು: ನಿರ್ಜಲೀಕರಣ ಮತ್ತು ಅತಿಯಾಗಿ ಔಷಧಿ ಸೇವನೆ
ಕೆಲವೊಂದು ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಸೈನಸ್ ತಲೆನೋವು ಕಾಣಿಸಿಕೊಳ್ಳುವುದು. ಸೈನಸ್ ತಲೆನೋವು ಹೆಸರೇ ಹೇಳುವಂತೆ ಸೈನಸ್ ನ ಸಮಸ್ಯೆಯಿಂದಾಗಿ ಕಾಣಿಸುವುದು. ಸೈನಸ್ ಭಾಗವು ಮೂಗಿನ ಸೇತುವೆ ಹಿಂದೆ ಮತ್ತು ಹಣೆ ಹಾಗೂ ಕೆನ್ನೆಯ ಮೂಳೆಗಳ ಒಳಭಾಗದಲ್ಲಿ ಇರುವುದು. ಆಮ್ಲಜನಕದಿಂದ ತುಂಬಿರುವಂತಹ ಈ ಭಾಗವು ಸೋಂಕು ಅಥವಾ ಅಲರ್ಜಿಯಿಂದಾಗಿ ಉರಿಯೂತಕ್ಕೆ ಒಳಗಾದ ವೇಳೆ ಲೋಳೆಯು ಹರಿಯುವ ಭಾಗವು ಮುಚ್ಚಲ್ಪಡುವುದು. ಹೀಗೆ ಮುಚ್ಚಲ್ಪಡುವ ಕಾರಣದಿಂದಾಗಿ ಸೈನಸ್ ನೋವು ಕಾಣಿಸುವುದು. ಇದು ತಲೆನೋವಿನಂತೆಯೇ ಇರುವುದು.
ನಿರಂತರ ಹಾಗೂ ತೀವ್ರವಾದ ಸೈನಸ್ ತಲೆನೋವು ಕೆನ್ನೆಯ ಮೂಳೆಗಳು, ಹಣೆ ಅಥವಾ ಮೂಗಿನ ಸೇತುವೆ ಭಾಗದಲ್ಲಿ ಕಾಣಿಸುವುದು. ಸೈನಸ್ ತಲೆನೋವಿನಿಂದ ಬಳಲುತ್ತಾ ಇರುವವರ ತಲೆನೋವು ಬೇರೆ ಭಾಗಕ್ಕೆ ಕೂಡ ಹರಡಬಹುದು. ಸೈನಸ್ ತಲೆನೋವಿನ ಕೆಲವೊಂದು ಲಕ್ಷಣಗಳಲ್ಲಿ ಮುಖ್ಯವಾಗಿ ನೋವಿನೊಂದಿಗೆ ಮೂಗಿನಿಂದ ನೀರು ಬರುವುದು, ಜ್ವರ ಅಥವಾ ಮುಖ ಊದಿಕೊಳ್ಳಬಹುದು.
ಹೆಚ್ಚಿನ ಸೈನಸ್ ತಲೆನೋವು ವಿಭಿನ್ನ ರೀತಿಯ ಸೋಂಕು ಮತ್ತು ಅಲರ್ಜಿಯಿಂದ ಕಾಣಿಸಿಕೊಳ್ಳುವುದು. ಅದಾಗ್ಯೂ, ಸೈನಸ್ ತಲೆನೋವು ಹೆಚ್ಚಾಗಿ ಕೆಲವೊಂದು ಔಷಧಿಗಳ ಅತಿಯಾದ ಬಳಿಕೆ, ಅಂದರೆ ನೋವು ನಿವಾರಕಗಳ ಅತಿ ಬಳಕೆಯಿಂದ ಬರುವುದು. ನಿರ್ಜಲೀಕರಣದಿಂದಾಗಿ ಈ ನೋವು ಮತ್ತಷ್ಟು ಹೆಚ್ಚಾಗುವುದು.
ಸೈನಸ್ ತಲೆನೋವು ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಸೈನಸ್ ಉರಿಯೂತವನ್ನು ಬಿಸಿ ನೀರು ಕುಡಿಯುವುದರಿಂದ ಅಥವಾ ಬಿಸಿ ಚಾ ಕುಡಿಯುವ ಮೂಲಕ ಕಡಿಮೆ ಮಾಡಬಹುದು. ವಿಟಮಿನ್ ಸಿ ಅಂಶವು ಸೋಂಕನ್ನು ನಿವಾರಣೆ ಮಾಡುವುದು. ತಾಜಾ ಶುಂಠಿಯಲ್ಲಿ ಉರಿಯೂತ ಶಮನಕಾರಿ ಮತ್ತು ನೋವು ನಿವಾರಕ ಗುಣಗಳು ಇವೆ. ಇದನ್ನು ಬಳಸಿದರೆ ಯಾವುದೇ ಔಷಧಿ ಇಲ್ಲದೆ ಸೈನಸ್ ತಲೆನೋವು ನಿವಾರಣೆ ಮಾಡಬಹುದು.