For Quick Alerts
ALLOW NOTIFICATIONS  
For Daily Alerts

ಈ ಅಂಡರ್‌ವೇರ್ ಮಿಸ್ಟೇಕ್ಸ್‌ ಮಾಡಿದರೆ ಜನನೇಂದ್ರೀಯ ಆರೋಗ್ಯ ಜೋಕೆ!

|

ಮಹಿಳೆಯರು ತಮ್ಮ ಖಾಸಗಿ ಅಂಗಗಳ ಸ್ವಚ್ಛತೆ ಕಡೆಗೆ ತುಂಬಾನೇ ಗಮನ ಹರಿಸಬೇಕು, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದು, ಅದರಲ್ಲೂ ಅಂಡರ್‌ವೇರ್‌ ವಿಷಯದಲ್ಲಿ ಸ್ವಚ್ಛತೆ ಕಡೆಗೆ ತುಂಬಾನೇ ಗಮನ ನೀಡಬೇಕು. ನೀವು ಧರಿಸಿದ ಅಂಡರ್‌ವೇರ್‌ನಲ್ಲಿ ಸ್ವಲ್ಪ ಬಿಳಿ ಹೋದಂತೆ ಅನಿಸುವುದೇ? ಈ ರೀತಿ ಕೇಳಿದಾಗ ಉತ್ತರ 'ಯೆಸ್‌' ಎಂದು ಬರಬಹುದು.

ನೀವು ಸ್ವಚ್ಛವಾದ ಅಂಡರ್‌ವೇರ್ ಧರಿಸುತ್ತೇವೆ ಎಂದು ಹೇಳುವುದಾದರೂ ಅದು ಯಾವ ಬಗೆಯದು ಎಂಬುವುದು ಕೂಡ ನಿಮ್ಮ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗುತ್ತೆ. ಇಲ್ಲದಿದ್ದರೆ ನೀವು ಬಳಸುವ ಅಂಡರ್‌ವೇರ್‌ ಜನನೇಂದ್ರೀಯದ ಮೇಲೆ ಕೆಟ್ಟ ಪರಿನಾಮ ಬೀರುವುದು.

ತಪ್ಪಾದ ಅಂಡರ್‌ವೇರ್ ಆಯ್ಕೆ, ತುಂಬಾ ಸಮಯದವರೆಗೆ ಅಂಡರ್‌ವೇರ್ ಬದಲಾಯಿಸದೇ ಇರುವುದು ಇವೆಲ್ಲಾ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುವುದು, ಜನನೇಂದ್ರೀಯದ ಆರೋಗ್ಯಕ್ಕಾಗಿ ನಾವು ಬಳಸುವ ಅಂಡರ್‌ವೇರ್‌ ಹೇಗಿರಬೇಕು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

1. ಸಿಂಥೆಟಿಕ್ ಅಂಡರ್‌ವೇರ್‌ ಬಳಸಬೇಡಿ

1. ಸಿಂಥೆಟಿಕ್ ಅಂಡರ್‌ವೇರ್‌ ಬಳಸಬೇಡಿ

ಯಾವಾಗಲೂ ಕಾಟನ್‌ನಿಂದ ಮಾಡಿದಂಥ ಅಂಡರ್‌ವೇರ್‌ ಬಳಸಬೇಕು. ಲೇಸ್‌ ಹಾಗೂ ಇತರ ಸಿಂಥೆಟಿಕ್‌ ಅಂಡರ್‌ವೇರ್‌ ನೋಡಲು ಆಕರ್ಷಕವಾಗಿ, ಸ್ಟೈಲಿಷ್ ಆಗಿ ಕಾಣಬಹುದು, ಆದರೆ ಅದರ ಮೂಲಕ ಗಾಳಿಯಾಡುವುದಿಲ್ಲ, ಇದರಿಂದಾಗಿ ಅಂಡರ್‌ವೇರ್‌ನಲ್ಲಿ ಬ್ಯಾಕ್ಟಿರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ, ಇದರಿಂದಾಗಿ ಖಾಸಗಿ ಭಾಗದಲ್ಲಿ ತುರಿತ ಮತ್ತಿತರ ಸೋಂಕು ಉಂಟಾಗುವುದು.

2. ತುಂಬಾ ಬಿಗಿಯಾದ ಅಂಡರ್‌ವೇರ್ ಬಳಸಬೇಡಿ

2. ತುಂಬಾ ಬಿಗಿಯಾದ ಅಂಡರ್‌ವೇರ್ ಬಳಸಬೇಡಿ

ತುಂಬಾ ಬಿಗಿಯಾದ ಅಂಡರ್‌ವೇರ್‌ ಧರಿಸಿದಾಗ ಕಿರಿಕಿರಿ ಉಂಟಾಗುವುದು, ಅಲ್ಲದೆ ಖಾಸಗಿ ಭಾಗಕ್ಕೆ ಸರಿಯಾದ ರಕ್ತ ಸಂಚಾರಕ್ಕೆ ತೊಂದರೆ ಉಂಟಾಗುವುದು. ಇದರಿಂದ ಸೆಕ್ಸ್‌ಲೈಫ್‌ಗೂ ತೊಂದರೆಯಾಗಬಹುದು.

3. ಶೇಪ್‌ ವೇರ್‌ ಬಳಸಬೇಡಿ

3. ಶೇಪ್‌ ವೇರ್‌ ಬಳಸಬೇಡಿ

ಶೇಪ್‌ ವೇರ್‌ ಬಳಸಲೇಬೇಡಿ, ಏಕೆಂದರೆ ಇದರಿಂದ ಅನೇಕ ತೊಂದರೆಗಳಿವೆ. ಒಮ್ಮೊಮ್ಮೆ ಶೇಪ್‌ವೇರ್ ಬಳಸುವುದು ಒಕೆ, ಆದರೆ ಪ್ರತಿದಿನ ಬಳಸುತ್ತಿದ್ದರೆ ಇದು ಹೊಟ್ಟೆಯ ಮೇಲೆ, ಬ್ಲೇಡರ್‌ ಮೇಲೆ ಹೆಚ್ಚಿನ ಒತ್ತಡ ಹಾಕುವುದು, ಇದರಿಂದಾಗಿ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಇದರಿಂದ ನರಗಳಿಗೂ ತೊಂದರೆಯಾಗಬಹುದು, ಪೆಲ್ವಿಕ್ ಭಾಗದಲ್ಲಿ ಕೆಟ್ಟ ಪರಿಣಾಮ ಬೀರುವುದು, ಬೆನ್ನು ನೋವಿನ ಸಮಸ್ಯೆ ಉಂಟಾಗುವುದು.

4. ಪ್ರತಿದಿನ ಬದಲಾಯಿಸಿ

4. ಪ್ರತಿದಿನ ಬದಲಾಯಿಸಿ

ಪ್ರತಿದಿನ ಒಳ ಉಡುಪುಗಳನ್ನು ಬದಲಾಯಿಸಬೇಕು, ಮುಟ್ಟಿನ ಸಮಯದಲ್ಲಿ ಎರಡು ಬಾರಿ ಬದಲಾಯಿಸಿ, ಇಲ್ಲದಿದ್ದರೆ ಜನನೇಂದ್ರೀಯ ಭಾಗದಲ್ಲಿ ಸೋಂಕು ಉಂಟಾಗಿ ತುರಿಕೆ ಕಂಡು ಬರುವುದು.

5. ಒಳ ಉಡುಪನ್ನು ಸರಿಯಾಗಿ ತೊಳೆಯಿರಿ

5. ಒಳ ಉಡುಪನ್ನು ಸರಿಯಾಗಿ ತೊಳೆಯಿರಿ

ಅವುಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಅವುಗಳನ್ನು ತೊಳೆಯುವಾಗ ಫ್ಯಾಬ್ರಿಕ್‌ ಸಾಫ್ಟ್‌ನರ್‌ ಅಥವಾ ಸುವಾನೆ ಇರುವ ಡಿಟರ್ಜೆಂಟ್‌ ಬಳಸಬೇಡಿ. ಅಲ್ಲದೆ ಅಂಡರ್‌ವೇರ್‌ ಬಳಸುವ ಮುನ್ನ ಅದು ಸರಿಯಾಗಿ ಒಣಗಿರಬೇಕು. ಸ್ವಲ್ಪ ಒದ್ದೆಯಿದ್ದರೆ ಅಂಥ ಅಂಡರ್‌ವೇರ್‌ ಧರಿಸುವುದರಿಂದ ತುರಿಕೆ ಉಂಟಾಗುವುದು.

6. ಅಂಡರ್‌ವೇರ್ ಬೀರುವ ದುರ್ವಾಸನೆಯನ್ನು ನಿರ್ಲಕ್ಷ್ಯ ಮಾಡಬೆಡಿ

6. ಅಂಡರ್‌ವೇರ್ ಬೀರುವ ದುರ್ವಾಸನೆಯನ್ನು ನಿರ್ಲಕ್ಷ್ಯ ಮಾಡಬೆಡಿ

ಸ್ವಲ್ಪ ಬಿಳುಪು ಹೋಗುವುದು ಸಹಜ, ಆದರ ಕಲೆಯಲ್ಲಿ ತೆಳು ಹಸಿರು ಅಥವಾ ತೆಳು ಕೆಂಪು ಬಣ್ಣ ಅಥವಾ ಮೊಸರಿನ ರೀತಿಯಲ್ಲಿ ಗಟ್ಟಿ-ಗಟ್ಟಿಯಾಗಿ ಬಿಳುಪು ಹೋಗುತ್ತಿದ್ದರೆ ಅದರಿಂದ ಕೆಟ್ಟ ವಾಸನೆ ಬರುವುದು, ಅಲ್ಲದೆ ಇಂಥ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ, ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಅಲ್ಲದೆ ಅಂಡರ್‌ವೇರ್‌ ತೊಳೆದಾಗಲೂ ಕಲೆ ಹೋಗದಿದ್ದರೆ ಅಂಥ ಅಂಡರ್‌ವೇರ್ ಬಳಸಬೇಡಿ.

7. ವರ್ಕೌಟ್‌ ಬಳಿಕ ಸ್ನಾನ ಮಾಡಿ

7. ವರ್ಕೌಟ್‌ ಬಳಿಕ ಸ್ನಾನ ಮಾಡಿ

ಮೈ ಬೆವರಿದ್ದಾಗ ಹಾಗೇ ಇರಬೇಡಿ, ಇದರಿಂದ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗಿ ಯೀಸ್ಟ್ ಸೋಂಕು ಆಗಬಹುದು. ಆದ್ದರಿಂದ ವ್ಯಾಯಾಮ ಮಾಡಿದ ಬಳಿಕ, ಹೊರಗಡೆ ಹೋಗಿ ಬರುವಾಗ ಮೈ ತುಂಬಾ ಬೆವತ್ತಿದ್ದರೆ ಸ್ನಾನ ಮಾಡಿ.

8. ಥಾಂಗ್ಸ್ ಬಳಸಬೇಡಿ

8. ಥಾಂಗ್ಸ್ ಬಳಸಬೇಡಿ

ಥಾಂಗ್‌ ಧರಿಸಿದರೆ ಪ್ಯಾಂಟಿ ಲೈನ್‌ ಕಾಣುವುದಿಲ್ಲ, ಆದರೆ ಬ್ಯಾಕ್ಟಿರಿಯಾಗಳು ಹಿಂದೆಯಿಂದ ಮುಂದೆ ಬರಲು ಈ ಥಾಂಗ್‌ ಕಾರಣವಾಗಬಹುದು. ಕೆಲವೊಂದು ಥಾಂಗ್‌ ಸಿಲ್ಕ್, ಪಾಲಿಸ್ಟರ್ ಫ್ಯಾಬ್ರಿಕ್‌ನದ್ದು ಆಗಿರುತ್ತದೆ, ಇಂಥ ಥಾಂಗ್ ಬಳಸುವುದರಿಂದ ಮತ್ತಷ್ಟು ಅನ್‌ಕಂಫರ್ಟ್ ಅನಿಸುವುದು.

ನೀವು ಬಳಸುವ ಅಂಡರ್‌ವೇರ್‌ ಹೇಗಿದ್ದರೆ ಒಳ್ಳೆಯದು?

ನೀವು ಬಳಸುವ ಅಂಡರ್‌ವೇರ್‌ ಹೇಗಿದ್ದರೆ ಒಳ್ಳೆಯದು?

* ಲೂಸ್‌ ಫಿಟ್ಟಿಂಗ್‌ನ ಕಾಟನ್‌ ಅಂಡರ್‌ವೇರ್ ಬಳಸಿ.

* ಕೆಲವರಿಗೆ ಆಗಾಗ ತುರಿಕೆ ಸಮಸ್ಯೆ ಉಂಟಾಗುವುದು, ಯೀಸ್ಟ್ ಸೋಂಕಿನಿಂದಾಗಿ ಈ ರೀತಿಯಾಗುವುದು ಅಂಥವರು ಮಲಗುವಾಗ ಅಂಡರ್‌ವೇರ್‌ ತೆಗೆದು ಮಲಗುವುದು ಒಳ್ಳೆಯದು.

*ತುಂಬಾ ಟೈಟ್ ಎಲಾಸ್ಟಿಕ್ ಬ್ಯಾಂಡ್ಸ್ ಇರುವ ಅಂಡರ್‌ವೇರ್ ಬಳಸಬೇಡಿ, ಇದರಿಂದ ಮಲಗುವಾಗ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು.

English summary

Underwear Mistakes Can Hamper Your Vaginal Health in Kannada

Underwear mistakes can hamper your vaginal health in Kannada,read on..........
Story first published: Saturday, December 11, 2021, 10:58 [IST]
X
Desktop Bottom Promotion