For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದಲ್ಲಿ ಈ ನಿರ್ಧಾರಗಳು ಮಾಡಿದ್ದೇ ಆದರೆ ತುಂಬಾ ಒಳ್ಳೆಯದು

|

ಹೊಸ ವರ್ಷದಲ್ಲಿ ಏನಾದರೂ ಹೊಸತನ್ನು ಆರಂಭಿಸಬೇಕೆಂಬ ಬಯಕೆಯು ಪ್ರತಿಯೊಬ್ಬರ ಮನದಲ್ಲಿಯೂ ಇದ್ದೇ ಇರುವುದು. ಹೀಗಾಗಿ ಹೊಸ ವರ್ಷದಲ್ಲಿ ಯಾವ ಕೆಲಸಗಳನ್ನು ಮಾಡಬಹುದು ಮತ್ತು ಯಾವ ಕೆಟ್ಟ ಅಭ್ಯಾಸಗಳನ್ನು ಬಿಡಬಹುದು ಎಂದು ಈಗಲೇ ನಿರ್ಧರಿಸಬೇಕು ಮತ್ತು ಅದನ್ನು ತುಂಬಾ ನಿಷ್ಠೆಯಲ್ಲಿ ಪಾಲಿಸಿಕೊಂಡು ಹೋಗಬೇಕು.

ಅದರಲ್ಲೂ ಇಂದಿನ ದಿನಗಳಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿಯೇ ವಹಿಸದೆ ಇರುವ ಕಾರಣದಿಂದಾಗಿ ಹೊಸ ವರ್ಷದಲ್ಲಾದರೂ ಇದರ ಕಡೆ ಗಮನಹರಿಸಬೇಕು. ಹೊಸ ವರ್ಷದಲ್ಲಿ ನಿಮ್ಮ ಆರೋಗ್ಯವನ್ನು ವೃದ್ಧಿಸುವ ವಿಧಾನಗಳು ಯಾವುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮ ಸಮಯವೂ ವ್ಯರ್ಥವಾಗದು ಮತ್ತು ಕಿಸೆಗೂ ಭಾರ ಬೀಳದು.

1. ಆರೋಗ್ಯದ ಡೈರಿ ಬರೆಯಿರಿ

1. ಆರೋಗ್ಯದ ಡೈರಿ ಬರೆಯಿರಿ

ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ಮತ್ತು ದೇಹವನ್ನು ಫಿಟ್ ಆಗಿಡಲು ತುಂಬಾ ಬದ್ಧತೆ, ಪ್ರೇರಣೆ ಬೇಕಾಗಿರುವುದು. ಇದಕ್ಕಾಗಿ ನಿಮಗೆ ಇಲ್ಲಿ ಸಲಹೆ ಮಾಡುವುದೆಂದರೆ ಒಂದು ಸಣ್ಣ ಡೈರಿ ತೆಗೆದುಕೊಂಡು ಅದನ್ನು ನಿಮ್ಮ ಬ್ಯಾಗ್ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಲ್ಲಿ ನಿಮ್ಮ ದೈನಂದಿನ ಆರೋಗ್ಯದ ಹವ್ಯಾಸಗಳನ್ನು(ಒಳ್ಳೆಯದು ಅಥವಾ ಕೆಟ್ಟದು) ಬರೆಯಿರಿ.ಮೊದಲ ಪುಟದಲ್ಲಿ ನಿಮ್ಮ ಗುರಿಗಳನ್ನು(ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ) ಬರೆಯಿರಿ.ಇದನ್ನು ಎಷ್ಟು ಸಮಯದಲ್ಲಿ ನೀವು ಸಾಧಿಸುವಿರಿ ಮತ್ತು ಅದಕ್ಕಾಗಿ ಯಾವ ರೀತಿಯ ಯೋಜನೆಗಲನ್ನು ಹಾಕಿಕೊಂಡಿರುವಿರಿ ಎಂದು ಬರೆಯಿರಿ. ಕೊನೆಯ ಎರಡು ವಿಚಾರಗಳು ನಿಮಗೆ ತಿಳಿಯದೆ ಇದ್ದರೆ ಆಗ ನೀವು ಕೆಲವು ವಾರಗಳ ಬಳಿಕ ಮರಳಿ ಮೊದಲ ಪುಟಕ್ಕೆ ಬನ್ನಿ. ಇದರ ಬಳಿಕ ದಿನಾಲೂ ನೀವು ಆಹಾರ, ಪಾನೀಯ ಮತ್ತು ಸಪ್ಲಿಮೆಂಟ್(ಸಮಯ), ನಿದ್ರೆಯ ಅಭ್ಯಾಸ(ಸಮಯ ಮತ್ತು ಗುಣಮಟ್ಟ), ತೂಕ ಮತ್ತು ಅಳತೆ(ವಾರಕೊಮ್ಮೆ), ವ್ಯಾಯಾಮ ಮತ್ತು ಆರಾಮದ ಹವ್ಯಾಸ. ಇದರ ಬಗ್ಗೆ ನೀವು ಸಾರ್ವಜನಿಕವಾಗಿ ಹೇಳಿಕೊಳ್ಳುವುದಿದ್ದರೆ ಆಗ ನೀವು ಬ್ಲಾಗ್ ಅಥವಾ ಫೇಸ್ ಬುಕ್ ಪೇಜ್ ಮಾಡಬಹುದು.

2. ವಾರಕ್ಕೊಮ್ಮೆ ಯೋಗ

2. ವಾರಕ್ಕೊಮ್ಮೆ ಯೋಗ

ನೀವು ಇದುವರೆಗೆ ಯೋಗ ಮಾಡದೇ ಇದ್ದರೆ, 2020ರಲ್ಲಿ ನೀವು ಯೋಗ ಮಾಡಲು ಮುಂದೆ ಬರಬೇಕು. ಯಾಕೆಂದರೆ ಇದರಿಂದ ಹಲವಾರು ರೀತಿಯ ಲಾಭಗಳು ಇವೆ. ಸೈಕೋಸೊಮ್ಯಾಟಿಕ್ ಮೆಡಿಸಿನ್ ನಲ್ಲಿ ಒಹಿಯೊ ಸ್ಟೇಟ್ ಯೂನಿವರ್ಸಿಟಿಯು ಪ್ರಕಟಿಸಿರುವಂತಹ ಅಧ್ಯಯನ ವರದಿಯ ಪ್ರಕಾರ ಯೋಗವು ಉರಿಯೂತ ಕಡಿಮೆ ಮಾಡುವುದು. ಇದರಲ್ಲಿ ಹಲವಾರು ರೀತಿಯ ಯೋಗಾಸನಗಳು ಇವೆ. ಪ್ರಮುಖವಾಗಿ ಅಷ್ಟಾಂಗ, ಅನುಸಾರ ಮತ್ತು ಹಥಾ. ಇದರಲ್ಲಿ ನಿಮಗೆ ಹೊಂದಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಿ. ಅಷ್ಟಾಂಗ ಎನ್ನುವುದು ಶಕ್ತಿಯ ಯೋಗ ಮತ್ತು ಹಥಾ ತೀವ್ರತೆಯು ಕಡಿಮೆ ಇರುವ ವ್ಯಾಯಾಮ. ಅದೇ ಅನುಸಾರವು ತುಂಬಾ ಒಳ್ಳೆಯದು. ನೀವು ಯೋಗ ಶಿಬಿರಗಳಿಗೆ ಹೋಗಿ ಅಲ್ಲಿ ಇವುಗಳನ್ನು ಕಲಿತುಕೊಂಡು ಬಳಿಕ ಮನೆಯಲ್ಲೇ ಮಾಡಬಹುದು ಅಥವಾ ಇಂಟರ್ನೆಟ್ ನಲ್ಲಿ ವಿಡಿಯೋ ನೋಡಿಯೂ ಮಾಡಬಹುದಾಗಿದೆ.

3. ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಬಗ್ಗೆ ತಿಳಿಯಿರಿ

3. ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಬಗ್ಗೆ ತಿಳಿಯಿರಿ

ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಸ್ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಅತೀ ಅಗತ್ಯವಾಗಿದೆ. ಮೊದಲನೇಯದಾಗಿ ಪೋಷಕಾಂಶಗಳ ಪಟ್ಟಿಯನ್ನು ಸರಿಯಾಗಿ ನೋಡಿಕೊಳ್ಳಿ. ಕೆಲವೊಂದು ಆಹಾರದಲ್ಲಿ ಈ ಮೂರು ಇರುವುದು. ಯಾವುದರ ಕೊರತೆ ಇದೆ ಎಂದು ತಿಳಿದು ಬಳಿಕ ಅದು ಇರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

4. ಉಪ್ಪಿಗೆ ಪರ್ಯಾಯ ಸೆಲ್ಟಿಕ್ ಉಪ್ಪು

4. ಉಪ್ಪಿಗೆ ಪರ್ಯಾಯ ಸೆಲ್ಟಿಕ್ ಉಪ್ಪು

ಸಂಪೂರ್ಣವಾಗಿ ಆಹಾರ ಕ್ರಮದಿಂದ ಉಪ್ಪನ್ನು ದೂರವಿಡುವ ಬಗ್ಗೆ ನೀವು ಎರಡು ಸಲ ಆಲೋಚನೆ ಮಾಡುವುದು ಅಗತ್ಯ. ಸೋಡಿಯಂ ಸೇವನೆ ಕಡಿಮೆ ಮಾಡಿದರೆ ಆಗ ಅದರಿಂದ ಇನ್ಸುಲಿನ್ ಪ್ರತಿರೋಧವು ಹೆಚ್ಚಾಗುವುದು ಮತ್ತು ಉರಿಯೂತ ಕಡಿಮೆ ಮಾಡುವುದು ಎನ್ನುವ ಮಾತುಗಳನ್ನು ಕೇಳಿರಬಹುದು. ಇದು ಅಚ್ಚರಿ ಮೂಡಿಸುವುದು. ಆಹಾರ ಕ್ರಮದಲ್ಲಿ ನೀವು ಉಪ್ಪನ್ನು ಬಳಕೆ ಮಾಡುವಾಗ ಟೇಬಲ್ ಸಾಲ್ಟ್ ಒಳ್ಳೆಯ ವಿಧಾನವಲ್ಲ. ಇದರ ಬದಲಿಗೆ ಸೆಲ್ಟಿಕ್ ಉಪ್ಪನ್ನು ಬಳಸಬೇಕು. ಹುಡಿ ಉಪ್ಪಿನಲ್ಲಿ ಸಂಸ್ಕರಣದ ವೇಳೆ ಸೋಡಿಯಂ ಮತ್ತು ಕ್ಲೋರೈಡ್ ನ್ನು ಹೊರತುಪಡಿಸಿ ಮತ್ತೆಲ್ಲಾ ಅಂಶಗಳು ನಾಶವಾಗಿರುವುದು. ಆದರೆ ಕಲ್ಲುಪ್ಪಿನಲ್ಲಿ ಶೇ.80-90ರಷ್ಟು ಸಮುದ್ರದಲ್ಲಿ ಸಿಗುವಂತಹ ಅಂಶಗಳು ಇರುವುದು. ಇದರಲ್ಲಿ ಯಾವುದೇ ರಾಸಾಯನಿಕ ಅಥವಾ ಸಂರಕ್ಷಕಗಳನ್ನು ಹಾಕಿರುವುದಿಲ್ಲ. ನೀವು ಕಲ್ಲುಪ್ಪನ್ನು ಯಾವುದೇ ಅಂಗಡಿಯಿಂದಲೂ ಖರೀದಿ ಮಾಡಬಹುದು.

5. ಸೋಡಾ ಕಡಿಮೆ ಮಾಡಿ

5. ಸೋಡಾ ಕಡಿಮೆ ಮಾಡಿ

ಕೆಲವು ಸಣ್ಣ ಬದಲಾವಣೆ ಮಾಡಿಕೊಂಡರೂ ಆರೋಗ್ಯವು ಉತ್ತಮವಾಗುವುದು. ಸೋಡಾ ಮತ್ತು ಇತರ ಸಿಹಿಕಾರಕ ಪಾನೀಯ ಸೇವನೆ ಕಡಿಮೆ ಮಾಡಿದರೆ ಅದರಿಂದ ಮಹತ್ತರ ಬದಲಾವಣೆ ಆಗುವುದು. ಇದರಿಂದ ಕ್ಯಾಲರಿ ಕಡಿಮೆ ಮಾಡಬಹುದು ಮತ್ತು ಸಕ್ಕರೆ ಸೇವನೆಯು ತಗ್ಗುವುದು. ಸಕ್ಕರೆಯುಕ್ತ ಪಾನೀಯಗಳನ್ನು ಸೇವಿಸಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಾಗಿರುವಂತಹ ಮಧುಮೇಹ, ಕಿಡ್ನಿ ಸಮ್ಯೆ, ಗರ್ಭ ಧರಿಸದೆ ಇರುವದು, ಒಳಾಂಗ ಕೊಬ್ಬು ಹೆಚ್ಚಾಗುವುದು(ಈ ರೀತಿಯ ಕೊಬ್ಬು ಕೆಲವೊಂದು ಒಳಗಿನ ಅಂಗಾಂಗಗಳಾದ ಯಕೃತ್, ಮೇದೋಗ್ರಂಥಿ ಮತ್ತು ಕರುಳಿಗೆ ಹಾನಿ ಉಂಟು ಮಾಡುವುದು.) ಮತ್ತು ಪ್ರಾಣಹಾನಿ ಸಂಭವಿಸಬಹುದು.

6. ಹೆಚ್ಚು ನಡೆಯಿರಿ

6. ಹೆಚ್ಚು ನಡೆಯಿರಿ

ಜಿಮ್ ಗೆ ಹೋಗುವುದು ಮತ್ತು ಯಾವುದೇ ಮ್ಯಾರಥಾನ್ ಗೆ ತರಬೇತಿ ಪಡೆಯುವುದು ಬಹುದೊಡ್ಡ ಗುರಿಗಳು ಎಂದು ನಿಮಗನಿಸುತ್ತಲಿದ್ದರೆ, ಆಗ ನೀವು ತುಂಬಾ ಸರಳವಾದ ನಡಿಗೆಯಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ವಾರದಲ್ಲಿ ನಾಲ್ಕು ಗಂಟೆ ಕಾಳ ನಡೆಯುವುದು ಅಥವಾ ದಿನಕ್ಕೆ 35 ನಿಮಿಷ ನಡೆಯುವ ಕಾರಣದಿಂದ ಪಾರ್ಶ್ವವಾಯುವಿನ ತೀವ್ರತೆಯು ಕಡಿಮೆ ಆಗುವುದು ಮತ್ತು ನಡೆಯುವುದರಿಂದ ಹೃದಯದ ಕಾಯಿಲೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ನಿಧಾನವಾಗಿ ನಡೆಯುವುದರಿಂದ ಸ್ವಲ್ಪ ವೇಗದ ನಡಿಗೆಯಿಂದ ಶೇ.20ರಷ್ಟು ಪ್ರಾಣಾಪಾಯ ಕಡಿಮೆ ಮಾಡಿಕೊಳ್ಳಬಹುದು. ಅದೇ ಅತಿ ವೇಗವಾಗಿ ನಡೆದರೆ ಆಗ ಶೇ.24ರಷ್ಟು ಅಪಾಯ ತಗ್ಗಿಸಬಹುದು.

7. ಹಗಲಿನ ಬೆಳಕು ಪಡೆಯಿರಿ

7. ಹಗಲಿನ ಬೆಳಕು ಪಡೆಯಿರಿ

ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಮೂಲಕವಾಗಿ ಖಿನ್ನತೆಯ ಅಪಾಯ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದು ಮಹಿಳೆಯರಲ್ಲಿ ಪ್ರಸವಪೂರ್ವ ಖಿನ್ನತೆ ತಗ್ಗಿಸುವುದು ಮತ್ತು ಕಣ್ಣಿನ ಆರೋಗ್ಯವನ್ನು ವೃದ್ಧಿಸುವುದು. ಬೆಳಗ್ಗಿನ ಅವಧಿಯಲ್ಲಿ ಬಿಸಿಲಿಗೆ ಹೋಗುವುದು ತುಂಬಾ ಲಾಭಕಾರಿ. ಹೊರಗಡೆ ಹೋಗಲು ಮನಸ್ಸು ಇಲ್ಲದೆ ಇದ್ದರೆ ಮನೆಗೆ ಬಿಸಿಲು ಬರುವಂತಹ ಜಾಗದಲ್ಲಿ ಕಿಟಕಿ ಬಾಗಿಲು ತೆಗೆದು ಕುಳಿತುಕೊಳ್ಳಿ. ಕೃತಕ ಬೆಳಕನ್ನು ಬಳಕೆ ಮಾಡುವ ಬದಲು ಆದಷ್ಟು ಮಟ್ಟಿಗೆ ಬಿಸಿಲನ್ನು ಬಳಸಲು ಪ್ರಯತ್ನಿಸಿ.

8. ಮಸಾಜ್ ನ್ನು ಆನಂದಿಸಿ

8. ಮಸಾಜ್ ನ್ನು ಆನಂದಿಸಿ

ದಿನವಿಡಿ ದಣಿದು ಬಂದ ಬಳಿಕ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಆಗ ಸಿಗುವ ಆನಂದವೇ ಬೇರೆ. ಇದು ಒತ್ತಡ ನಿವಾರಣೆ ಮಾಡುವ ಜತೆಗೆ ಆರೋಗ್ಯಕ್ಕೂ ಲಾಭಕಾರಿ. ಆದರೆ ಇತ್ತೀಚೆಗೆ ನಡೆಸಿರುವಂತಹ ಕೆಲವು ಅಧ್ಯಯನಗಳ ಪ್ರಕಾರ ಮಸಾಜ್ ನಿಂದಾಗಿ ಆರಾಮವಾಗಿರಲು ನೆರವಾಗುವುದು. ನಿಯಮಿತವಾಗಿ ಮಸಾಜ್ ಮಾಡಿಕೊಂಡರೆ ಆಗ ಅದರಿಂದ ಸಂಧಿವಾತದ ಲಕ್ಷಣಗಳನ್ನು ಸುಧಾರಣೆ ಮಾಡಬಹುದು. ಮಸಾಜ್ ನಿಂದಾಗಿ ಒಳ್ಳೆಯ ನಿದ್ರೆಯು ಬರುವುದು ಎಂದು 2014ರಲ್ಲಿ ನಡೆಸಿರುವ ಅಧ್ಯಯನಗಳು ಹೇಳಿವೆ. ಈ ವರ್ಷ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದರೆ ಆಗ ನೀವು ಮಸಾಜ್ ಸೆಂಟರ್ ಗೆ ಭೇಟಿ ನೀಡಿ.

9. ನೀಲಿ ಹಾಗೂ ಹಸಿರು ಜಾಗಕ್ಕೆ ಭೇಟಿ ನೀಡಿ

9. ನೀಲಿ ಹಾಗೂ ಹಸಿರು ಜಾಗಕ್ಕೆ ಭೇಟಿ ನೀಡಿ

ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿವು ಜನರು ದಿನನಿತ್ಯವೂ ಇಂತಹ ಜಾಗಗಳಿಗೆ ಭೇಟಿ ನೀಡುವರು. ಆದರೆ ನಗರಗಳಲ್ಲಿ ಇರುವಂತಹ ಜನರು ಕೆರೆ, ನದಿ ಹಾಗೂ ಅರಣ್ಯ ಪ್ರದೇಶಗಳನ್ನು ನೋಡುವುದು ಕಡಿಮೆ. ಹೀಗಾಗಿ ಯಾವಾಗಲೂ ಪಾರ್ಕ್ ಮತ್ತು ಕಾಡುಗಳಿಗೆ ಭೇಟಿ ನೀಡಿ. ಪ್ರಕೃತಿಗೆ ಹತ್ತಿರವಾಗಿದ್ದರೆ ಮತ್ತು ಅಂತಹ ಸ್ಥಳಗಳಲ್ಲಿ ಇದ್ದರೆ ಅದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭಗಳು ಸಿಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಪ್ರಕೃತಿಗೆ ಹತ್ತಿರವಾಗಿದ್ದರೆ ಆಗ ಶ್ವಾಸಕೋಶದ ಸಮಸ್ಯೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಕಡಿಮೆ ಆಗುವುದು, ಮಾನಸಿಕ ಆರೋಗ್ಯ ಸುಧಾರಣೆ ಆಗುವುದು ಮತ್ತು ಖಿನ್ನತೆಯು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೇಹದ ಸಂಪೂರ್ಣ ಆರೋಗ್ಯವು ಸುಧಾರಣೆ ಆಗುವುದು.

English summary

Top Healthy Habits To Start This January

Here are best new year resolution to follow this year, which will help you to get good health.this will give your health a boost without draining your time or your wallet.
Story first published: Wednesday, January 1, 2020, 15:58 [IST]
X
Desktop Bottom Promotion