For Quick Alerts
ALLOW NOTIFICATIONS  
For Daily Alerts

ಕೆಲಸದ ಸ್ಥಳದಲ್ಲಿ ಒತ್ತಡವನ್ನು ನಿಭಾಯಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

|

ಉದ್ಯೋಗಂ ಪುರುಷ ಲಕ್ಷಣಂ ಎಂಬ ದಿನಗಳು ಈಗ ಇತಿಹಾಸ. ಇಂದು ಮಹಿಳೆಯರೂ ಪುರುಷರಿಗೆ ಸರಿಸಮಾನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ದೇಶದ ಪ್ರಗತಿಯಲ್ಲಿ ತಮ್ಮ ನೆರವು ನೀಡುತ್ತಿದ್ದಾರೆ. ಇಂದಿನ ದಿನಗಳು ನಾಗಾಲೋಟದಲ್ಲಿ ಮುಂದುವರೆಯುತ್ತಿವೆ. ಈ ಓಟದಲ್ಲಿ ಭಾಗಿಯಾಗದಿದ್ದರೆ ಹಿಂದುಳಿದು ನಾವೂ ಗತಕಾಲದಲ್ಲಿರಬೇಕಾಗುತ್ತದೆ. ಭರದಲ್ಲಿ ಮುನ್ನಡೆಯುತ್ತಿರುವ ನಾಗರಿಕತೆಯೊಂದಿಗೆ ಮುನ್ನಡೆಯುವುದು ಅನಿವಾರ್ಯ. ಹಾಗಾಗಿ ನಾವು ನಿರ್ವಹಿಸುತ್ತಿರುವ ಕಾರ್ಯದಲ್ಲಿಯೂ ಹೆಚ್ಚಿನ ಗಮನ ಮತ್ತು ಸಮಯ ನೀಡಬೇಕಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಪ್ರತಿಯೊಬ್ಬ ವೃತ್ತಿಪರ ಉದ್ಯಮಿಗಳ ಬಳಿಯೂ ಮೂವತ್ತರಿಂದ ನೂರು ಯೋಜನೆಗಳಿವೆ. ಅಲ್ಲದೇ ಪ್ರತಿ ಉದ್ಯೋಗಿಯೂ ಪ್ರತಿ ಘಂಟೆಗೆ ಸುಮಾರು ಏಳು ಬಾರಿ ವಿಮುಖಗೊಳಿಸಲ್ಪಡುತ್ತಾರೆ ಹಾಗೂ ಹೀಗೆ ನಷ್ಟವಾದ ಸಮಯ ಸರಾಸರಿ ಪ್ರತಿದಿನ 2.1 ಘಂಟೆಗಳಷ್ಟಿದೆ. ಅಲ್ಲದೇ ಇಂದು ದೊಡ್ಡ ಸಂಸ್ಥೆಗಳೆಲ್ಲಾ ಬದಲಾವಣೆಯತ್ತ ಚಿಂತನೆ ನಡೆಸುತ್ತಿವೆ ಹಾಗೂ ಇದರ ಪರಿಣಾಮವಾಗಿ ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಕಡಿತವಾಗುವ ಭೀತಿಯಿದೆ. ಹಾಗಾಗಿ, ಪ್ರತಿ ಉದ್ಯೋಗಿಯೂ ತಮ್ಮ ಕಾರ್ಯವನ್ನು ಎಷ್ಟೇ ಕಷ್ಟವಾದರೂ ಸರಿ, ಪೂರೈಸಿಯೇ ಮನೆಗೆ ಹೋಗುವ ಕಾರಣ ಎದುರಾಗುವ ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಕೆಲವರಲ್ಲಿ ಈ ಒತ್ತಡ ಎಷ್ಟು ಹೆಚ್ಚಿರುತ್ತದೆಂದರೆ ಇವರಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಇಂತಹವರ ಸಂಖ್ಯೆ 40% ರಷ್ಟಿದೆ.

ಖ್ಯಾತ ಮನಃಶಾಸ್ತ್ರಜ್ಞ ಹಾಗೂ ಇತ್ತೀಚೆಗೆ ಬಿಡುಗಡೆಯಾದ "Everyone feels overwhelmed and overly busy" ಎಂಬ ಕೃತಿಯ ಲೇಖಕರಾದ ಷಾರೋನ್ ಮೆಲ್ನಿಕ್, ಪಿ ಎಚ್‍ಡಿ. ಯವರು ಈ ಬಗ್ಗೆ ಮಾತನಾಡುತ್ತಾ "ಜನರು ಈ ಪ್ರಶ್ನೆಗೆ ನನ್ನನ್ನು ಉತ್ತರ ಹೇಳಲು ಕೇಳಿಕೊಳ್ಳುತ್ತಿದ್ದಾರೆ. ಅಂದರೆ, ದಿನವಿಡೀ ನಾವು ಕೆಲಸದಲ್ಲಿ ಏಕಕ್ರಮದಲ್ಲಿ ಗಮನವಿರಿಸಲು ಸಾಧ್ಯವೇ? ಆಗಬೇಕಾದ ಕೆಲಸವನ್ನು ಪರಿಪೂರ್ಣವಾಗಿ ಸಮಯದ ಮಿತಿಯೊಳಗೇ ನಿರ್ವಹಿಸಲು ಸಾಧ್ಯವೇ? ಕೆಲಸದ ಸಮಯ ಉಳಿದ ಬಳಿಕ ನಮ್ಮಲ್ಲಿ ತ್ರಾಣ ಉಳಿದಿರುತ್ತದೆಯೇ? ಗ್ರಾಹಕರ ಅಸಾಧ್ಯ ಬೇಡಿಕೆಯನ್ನು ಈಡೇರಿಸಿದ ಬಳಿಕ ನಮ್ಮ ತಾಳ್ಮೆಯನ್ನು ಉಳಿಸಿಕೊಳ್ಳಲು ಸಾಧ್ಯವೇ? ಎಂದೆಲ್ಲಾ ಕೇಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಕಳೆದ ಹತ್ತು ವರ್ಷಗಳಿಂದ ಸುಮಾರು ಆರು ಸಾವಿರ ಉದ್ಯೋಗಿಗಳು ಹಾಗೂ ತರಬೇತಿ ಪಡೆಯುತ್ತಿರುವವರ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಕೆಲಸದ ಒತ್ತಡವನ್ನು ಹೇಗೆ ನಿರ್ವಹಿಸಬಹುದು ಎಂಬ ಅಮೂಲ್ಯ ಮಾಹಿತಿಯನ್ನು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಆ ಪ್ರಕಾರ, ಕೆಲಸದಿಂದ ಹಿಂದಿರುಗಿದ ಬಳಿಕ ಮನೆಯಲ್ಲಿ ಆಯಾಸ ನಿವಾರಣೆಗೆ ಮದ್ಯಕ್ಕೆ ಶರಣಾಗುವ ಬದಲು ಈ ಕೆಳಗಿನ ಹನ್ನೆರಡು ಕ್ರಮಗಳನ್ನು ಅನುಸರಿಸುವ ಮೂಲಕ ಈ ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ತಿಳಿಸುತ್ತಿದ್ದಾರೆ:

 ಪ್ರತಿಕ್ರಿಯೆ ತೋರುವ ಬದಲು ನಟನೆಯೇ ಉತ್ತಮ

ಪ್ರತಿಕ್ರಿಯೆ ತೋರುವ ಬದಲು ನಟನೆಯೇ ಉತ್ತಮ

" ಯಾವಾಗ ಪರಿಸ್ಥಿತಿ ನಮ್ಮ ಕೈಯಿಂದ ಮೀರಿ ಹೋಗುತ್ತಿದೆ ಎಂದು ಅರಿವಾಗುತ್ತದೆಯೋ ಆಗ ಒತ್ತಡ ಎದುರಾಗುತ್ತದೆ. ಆಗ ದೇಹದಲ್ಲಿ ಒತ್ತಡದ ರಸದೂತ ಬಿಡುಗಡೆಯಾಗುತ್ತದೆ. ವಿಪರೀತ ಸಂದರ್ಭಗಳಲ್ಲಿ, ಇದು ವ್ಯಕ್ತಿಯ ಆತ್ಮವಿಶ್ವಾಸ, ಗಮನ ಮತ್ತು ಆ ಹೊತ್ತಿನ ಸ್ವಾಸ್ಥ್ಯವನ್ನೇ ಕೆಡಿಸಬಲ್ಲುದು. ಈ ಸಂದರ್ಭದಲ್ಲಿ ದೇಹ ಸಹಜವಾಗಿ ಏನು ಪ್ರತಿಕ್ರಿಯೆ ತೋರುತ್ತದೆಯೋ ಅದನ್ನು ನಿರ್ವಹಿಸದೇ, ಈ ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ, ಇದು ಸಾಧ್ಯವಾಗದಿದ್ದರೂ, ಸಾಧ್ಯವಾದಂತೆ ನಟಿಸಬೇಕು. ಅಂದರೆ ಒತ್ತಡವಿದ್ದಾಗ ನಿಮ್ಮತನ ಅರ್ಧ ಮತ್ತು ನಟನೆ ಅರ್ಧ ಇದ್ದರೆ ಒತ್ತಡ ಸಂದರ್ಭದಲ್ಲಿ ಪೂರ್ಣವಾಗಿ ಸೋತು ಹೋಗುವುದನ್ನು ತಡೆಗಟ್ಟಬಹುದು"

ಅಡೆತಡೆಗಳನ್ನು ನಿವಾರಿಸಿ

ಅಡೆತಡೆಗಳನ್ನು ನಿವಾರಿಸಿ

"ನಮ್ಮಲ್ಲಿ ಹೆಚ್ಚಿನವರು ಹಗಲಿನಲ್ಲಿ ಬಾಂಬ್ ದಾಳಿ ನಡೆಸುತ್ತಾರೆ" ಎಂದು ಮೆಲ್ನಿಕ್ ಹೇಳುತ್ತಾರೆ. ಇಮೇಲ್‌ಗಳು, ಫೋನ್ ಕರೆಗಳು, ಪಾಪ್ ಇನ್‌ಗಳು, ತ್ವರಿತ ಸಂದೇಶಗಳು ಮತ್ತು ಹಠಾತ್, ತುರ್ತು ಗಡುವನ್ನು ಇಂದಿನ ಕಾರ್ಮಿಕರನ್ನು ಎಂದಿಗಿಂತಲೂ ಹೆಚ್ಚು ವಿಚಲಿತರನ್ನಾಗಿ ಮಾಡಲು ಸಂಚು ರೂಪಿಸುತ್ತದೆ. ಅಡ್ಡಿಪಡಿಸುವವರ ಮೇಲೆ ನಿಮಗೆ ನಿಯಂತ್ರಣವಿಲ್ಲದಿದ್ದರೂ, ನಿಮ್ಮ ಪ್ರತಿಕ್ರಿಯೆಯನ್ನು ನೀವು ನಿಯಂತ್ರಿಸಬಹುದು. ಮೆಲ್ನಿಕ್ ಮೂರು ವಿಧಾನಗಳಲ್ಲಿ ಒಂದನ್ನು ಪ್ರತಿಕ್ರಿಯಿಸಲು ಸಲಹೆ ನೀಡುತ್ತಾರೆ: ಅಡಚಣೆಯನ್ನು ಸ್ವೀಕರಿಸಿ, ಅದನ್ನು ಕತ್ತರಿಸಿ, ಅಥವಾ ಅದರ ಪ್ರಾಮುಖ್ಯತೆಯನ್ನು ನಿರ್ಣಯಿಸಿ ಮತ್ತು ಯೋಜನೆಯನ್ನು ಮಾಡಿ. ಅನೇಕ ಅಡೆತಡೆಗಳು ಮರುಕಳಿಸುತ್ತಿವೆ ಮತ್ತು ನಿರೀಕ್ಷಿಸಬಹುದು. "ನೀವು ಯಾವ ಪ್ರತಿಕ್ರಿಯೆ ನೀಡಲು ಬಯಸುತ್ತೀರಿ ಎಂದು ನೀವು ಮೊದಲೇ ಮಾನದಂಡಗಳನ್ನು ಹೊಂದಲು ಬಯಸುತ್ತೀರಿ" ಎಂದು ಅವರು ಹೇಳುತ್ತಾರೆ. ಕೆಲವು ಕಿಟಕಿಗಳ ಸಮಯದಲ್ಲಿ ಇಮೇಲ್ ಮೂಲಕ ಉತ್ತರಿಸುವುದರ ಮೂಲಕ, ವೈಯಕ್ತಿಕವಾಗಿ ಮಾತನಾಡಲು ಕಚೇರಿ ಸಮಯವನ್ನು ಹೊಂದಿಸಿ ಅಥವಾ ನೀವು ಗಮನಹರಿಸಬೇಕಾದಾಗ ಬಾಗಿಲು ಮುಚ್ಚುವ ಮೂಲಕ ನಿಮ್ಮ ಸುತ್ತಲಿರುವವರಿಗೆ ತರಬೇತಿ ನೀಡಬಹುದು.

 ದೀರ್ಘ ಉಸಿರೆಳೆದುಕೊಳ್ಳಿ.

ದೀರ್ಘ ಉಸಿರೆಳೆದುಕೊಳ್ಳಿ.

ಪರಿಸ್ಥಿತಿ ನಿಮ್ಮ ಕೈಮೀರಿ ಹೋಗುತ್ತಿದೆ ಎಂದಾಗ ಕೊಂಚ ಕ್ಷಣಗಳ ಕಾಲವಾದರೂ ಎಲ್ಲವನ್ನೂ ಅಲ್ಲಿಯೇ ನಿಲ್ಲಿಸಿ ದೀರ್ಘ ಉಸಿರೆಳೆದುಕೊಳ್ಳಿ. ಮುಂದಿನ ಒಂದೆರಡು ನಿಮಿಷಗಳವರೆಗೆ ದೀರ್ಘ ಉಸಿರಾಟದತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಇದರಿಂದ ಮೆದುಳಿಗೆ ಹೆಚ್ಚಿನ ಆಮ್ಲಜನಕ ಸಿಗುವ ಜೊತೆಗೇ ನಿಮ್ಮ ಮಾನಸಿಕ ಸಮತೋಲನವನ್ನೂ ಕಾಯ್ದುಕೊಳ್ಳಬಹುದು. ಅತಿ ಸರಳವೆಂದರೆ ಐದು ಸೆಕೆಂಡುಗಳ ಕಾಲ ಉಸಿರನ್ನು ಒಳಗೆಳೆದುಕೊಂಡು ಐದು ಸೆಕೆಂಡ್ ಹಾಗೇ ಉಸಿರು ಹಿಡಿದು ಮುಂದಿನ ಐದು ಸೆಕೆಂಡುಗಳಲ್ಲಿ ಪೂರ್ತಿ ಉಸಿರನ್ನು ಮೂಗಿನಿಂದಲೇ ಹೊರಹಾಕಿ. ಇದು ಎಷ್ಟು ಪ್ರಬಲವಾದ ಕ್ರಮವೆಂದರೆ ಸುಮಾರು ತೊಂಭತ್ತು ನಿಮಿಷಗಳ ಯೋಗಾಭ್ಯಾಸದ ಬಳಿಕ ದೊರಕುವಷ್ಟೇ ಶಾಂತಿಯನ್ನು ಈ ಕ್ರಮವನ್ನು ಕೇವಲ ಮೂರು ನಿಮಿಷ ನಿರ್ವಹಿಸುವ ಮೂಲಕ ಸಾಧಿಸಬಹುದು.

ಅಡ್ಡಿಗಳನ್ನು ನಿವಾರಿಸಿ:

ಅಡ್ಡಿಗಳನ್ನು ನಿವಾರಿಸಿ:

ಕಛೇರಿಯಲ್ಲಿ ಕಾಲಿಟ್ಟ ಕ್ಷಣದಿಂದ ನಮ್ಮ ಮೇಲೆ ಹಲವಾರು ಮಾಹಿತಿ ಮತ್ತು ಕೋರಿಕೆಗಳ ಧಾಳಿಯೇ ಎರಗುತ್ತದೆ. ಫೋನ್ ಕರೆ, ಈಮೇಲ್, ವಾಟ್ಸಪ್, ಇನ್ಸ್ಟಂಟ್ ಮೆಸೇಜ್, ತಕ್ಷಣವೇ ನಿರ್ವಹಿಸಿ ಸಮಯದ ಮಿತಿಯಲ್ಲಿ ಪೂರ್ಣಗೊಳಿಸಬೇಕಾದ ಕೆಲಸಗಳು ಇತ್ಯಾದಿಗಳೆಲ್ಲಾ ಉದ್ಯೋಗಿಯ ಸಮಯವನ್ನು ಬಳಸಿಕೊಳ್ಳುತ್ತಾ ದ್ವಂದ್ವ ಹರಡುತ್ತಾ ಹೋಗುತ್ತವೆ. ಇವೆಲ್ಲಾ ಒಂದು ಕ್ರಮದಲ್ಲಿ ಒಂದಾದ ಮೇಲೊಂದು ಬಂದರೆ ಚೆನ್ನಾಗಿತ್ತು, ಆದರೆ ಹಾಗಾಗುವುದಿಲ್ಲ, ಎಲ್ಲವೂ ಹೆಚ್ಚೂ ಕಡಿಮೆ ಎರಡೆರಡು ಅಥವಾ ಒಂದು ಮುಗಿಯುವ ಮುನ್ನ ಇನ್ನೊಂದು ಹೀಗೆ ಧಾಳಿ ಎರಗುತ್ತವೆ. ಈ ಪರಿಯ ಧಾಳಿ ಪ್ರತಿಯೊಬ್ಬರಿಗೂ ಎದುರಾಗುವುದೇ ಆಗಿದ್ದು ಇದನ್ನು ನಿರ್ವಹಿಸಲು ಮೆಲ್ನಿಕ್ ಹೀಗೆ ವಿವರಿಸುತ್ತಾರೆ: ಮೊದಲನೆಯದಾಗಿ ಹೀಗೆ ಅನಿರೀಕ್ಷಿತವಾಗಿ ಎರಗುವುದನ್ನು ಮೊದಲೇ ನಿರೀಕ್ಷಿಸಿ. ವಾಸ್ತವದಲ್ಲಿ ಹೀಗೆ ಎರಗುವ ಎಷ್ಟೋ ಕೆಲಸಗಳು ಬರಬಹುದೆಂಬ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ, ಇವು ಬರದೇ ಇದ್ದರೂ, ಬರುತ್ತದೆ ಎಂದೇ ನಿರೀಕ್ಷಿಸಿ. ಬಂದವುಗಳನ್ನು ಸ್ವೀಕರಿಸಿ ಕ್ಷಿಪ್ರವಾಗಿ ಏನು ಮಾಡಬೇಕೆಂಬುದನ್ನು ಗುರುತು ಹಾಕಿಕೊಳ್ಳಿ, ಬಳಿಕ ಇವುಗಳಲ್ಲಿ ಅತಿ ಪ್ರಮುಖವಾದವನ್ನು ಈಗ, ಉಳಿದವುಗಳನ್ನು ನಂತರ ಎಂದಾಗಿ ವಿಂಗಡಿಸಿ. ಅಥವಾ ನೀವು ಮೊದಲೇ ನಿಮ್ಮ ಅನುಭವದಿಂದ ಯಾವ ಕೆಲಸವನ್ನು ಮೊದಲು ನಿರ್ವಹಿಸಬೇಕಾಗುತ್ತದೆ ಎಂದು ಕಂಡುಕೊಂಡಿರುತ್ತೀರೋ ಹಾಗೇ ನಿರ್ವಹಿಸಿ. ಅಲ್ಲದೇ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮಗಿರುವ ಒತ್ತಡದ ಬಗ್ಗೆ ಕ್ಷಿಪ್ರವಾಗಿ ತಿಳಿಸಿ ಅತಿ ಮುಖ್ಯವಲ್ಲದ ಕೆಲಸಗಳನ್ನು ನಿರ್ವಹಿಸಲು, ಉದಾಹರಣೆಗೆ ಫೋನ್ ಕರೆಗಳನ್ನು ಸ್ವೀಕರಿಸಲು ಇತ್ಯಾದಿಗಳನ್ನು ದಾಟಿಸುವ ಮೂಲಕ ನಿಮಗೆ ಮುಖ್ಯವಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ನಿರ್ವಹಿಸಲು ತೊಡಗಿ. ಅಗತ್ಯವೆನಿಸಿದರೆ, ಕಛೇರಿಯ ಸಮಯದಲ್ಲಿ ಮಾತನಾಡಲು ಸಮಯ ನಿಗದಿಗೊಳಿಸಿ ಅಥವಾ ನಿಮ್ಮ ಕೋಣೆಯ ಬಾಗಿಲನ್ನು ಭದ್ರಪಡಿಸಿ.

ನಿಮ್ಮ ದಿನದ ಕೆಲಸಗಳನ್ನು ಕ್ರಮಬದ್ದಗೊಳಿಸಿ ಮತ್ತು ಗಮನಹರಿಸಿ

ನಿಮ್ಮ ದಿನದ ಕೆಲಸಗಳನ್ನು ಕ್ರಮಬದ್ದಗೊಳಿಸಿ ಮತ್ತು ಗಮನಹರಿಸಿ

ಇಂದು ಜನರಿಗೆ ತಾಳ್ಮೆಯೇ ಇಲ್ಲವಾಗಿದೆ, ಪ್ರತಿಯೊಬ್ಬರೂ ಕುದುರೆಯ ಮೇಲೆ ಬಂದಂತೆ ಹಾಗೂ ಈ ಕ್ಷಣದಲ್ಲಿ ಈ ಕೆಲಸವಾಗದಿದ್ದರೆ ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂಬಂತೆಯೇ ವರ್ತಿಸುತ್ತಾರೆ. ಹಾಗಾತಿ ಈ ಒತ್ತಡದಲ್ಲಿ ಕತ್ತೆಯಂತೆ ಹತ್ತು ಘಂಟೆ ಕೆಲಸ ಮಾಡಿದರೂ ಬಳಿಕ ಕೆಲಸ ಪೂರ್ಣಗೊಂಡಿರದೇ ಇರುವುದೂ ಮಾಡಿದ್ದ ಕೆಲಸದಲ್ಲಿ ಲೋಪಗಳಿರುವುದೂ ಕಂಡುಬರುತ್ತವೆ. ಇದು ಈಗಿರುವ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕೆಲಸದ ಬಳಿಕ ಕುಟುಂಬಕ್ಕಾಗಿ ಸಮಯ ಅಥವಾ ತ್ರಾಣ ಉಳಿದಿರುವುದಿಲ್ಲ. ಹಾಗಾಗಿ, ಪ್ರತಿದಿನದ ಕಾರ್ಯ ಪ್ರಾರಂಭಿಸುವ ಮೊದಲು ದೀರ್ಘ ಉಸಿರಾಟದ ವ್ಯಾಯಾಮ ಮಾಡಿ. ನಿಮ್ಮ ಕೆಲಸಗಳನ್ನು ಘಟಕಗಳಾಗಿ ವಿಂಗಡಿಸಿ ಪ್ರತಿ ಘಟಕದ ನಡುವೆ ಕೊಂಚ ದೂರ ನಡೆದಾಡಿ, ದೀರ್ಘ ಉಸಿರಾಡಿ ಹಾಗೂ ಕೊಂಚ ಸೆಳೆತದ ವ್ಯಾಯಾಮ ಮಾಡಿ. ಪ್ರತಿ ತೊಂಭತ್ತು ನಿಮಿಷಗಳ ಬಳಿಕವಾದರೂ ನೀವು ಕೊಂಚ ವಿಶ್ರಾಂತಿ ಪಡೆಯಲೇಬೇಕು. ಈ ಮೂಲಕ ದಿನದ ಮುಂದಿನ ಅವಧಿಯಲ್ಲಿ ನವ ಚೈತನ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಉತ್ತಮ ಆಹಾರ ಸೇವಿಸಿ ಮತ್ತು ನಿದ್ದೆಯೂ ಪೂರ್ಣವಾಗಿರಲಿ

ಉತ್ತಮ ಆಹಾರ ಸೇವಿಸಿ ಮತ್ತು ನಿದ್ದೆಯೂ ಪೂರ್ಣವಾಗಿರಲಿ

ಮಾನಸಿಕ ಒತ್ತಡದ ಮೇಲೆ ನಾವು ಸೇವಿಸುವ ಆಹಾರವೂ ಪ್ರಭಾವ ಬೀರುತ್ತವೆ. ಅಂದರೆ ಹೆಚ್ಚಿನ ಸಕ್ಕರೆ, ಪ್ರೊಟೀನ್ ಇರುವ ಆಹಾರಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅಲ್ಲದೇ ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರಿಸದೇ ಇದ್ದರೆ ಇದು ಮುಂದಿನ ದಿನದ ಕೆಲಸದ ಮೇಲೂ ಪ್ರಭಾವ ಬೀರುತ್ತದೆ ಹಾಗೂ ಕೆಲಸದ ಚೈತನ್ಯವನ್ನು ಉಡುಗಿಸುತ್ತದೆ. ಒಂದು ಅಂದಾಜಿನ ಪ್ರಕಾರ ಇಂದು ಸುಮಾರು ಆರು ಕೋಟಿ ಅಮೇರಿಕನ್ನರು ಸರಿಯಾದ ನಿದ್ದೆಯಿಲ್ಲದೇ ಮರುದಿನ ಕೆಲಸದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಈ ತೊಂದರೆ ಎದುರಾದರೆ ಅನುಲೋಮ ವಿಲೋಮ ಉಸಿರಾಟವನ್ನು ಅನುಸರಿಸಿ, ಅಂದರೆ ಒಂದು ಹೊಳ್ಳೆಯಿಂದ ಉಸಿರೆಳೆದುಕೊಂಡು ಇನ್ನೊಂದು ಹೊಳ್ಳೆಯಿಂದ ಹೊರಬಿಡಿ. ಈ ಕ್ರಮದಿಂದ ಆ ದಿನದ ನಿದ್ದೆ ಬರುವುದನ್ನು ತಪ್ಪಿಸಬಹುದೇ ಹೊರತು ಇದು ಅಭ್ಯಾಸವಾಗಬಾರದು. ನಿತ್ಯವೂ ಸೂಕ್ತ ಮತ್ತು ಪೌಷ್ಟಿಕ ಅಹಾರ ಸೇವಿಸಿ ಹಾಗೂ ಸಾಕಷ್ಟು ನಿದ್ದೆ ಪಡೆಯಲು ಹೆಚ್ಚಿನ ಮಹತ್ವ ನೀಡಿ.

ನಿಮ್ಮ ಕಥೆಯನ್ನು ಬದಲಿಸಿ:

ನಿಮ್ಮ ಕಥೆಯನ್ನು ಬದಲಿಸಿ:

ಸಾಮಾನ್ಯವಾಗಿ ಮಾನಸಿಕ ಒತ್ತಡ ಎದುರಾಗುವ ಸಂದರ್ಭಗಳು ಇತರ ವ್ಯಕ್ತಿಗಳ ಸಾಂದರ್ಭಿಕ ಪಾಲ್ಗೊಳ್ಳುವಿಕೆಯ ಬಳಿಕವೇ ಎದುರಾಗುತ್ತದೆ. ಕೊನೆಯಲ್ಲಿ ನೀವು ನಿರೀಕ್ಷಿಸದ ಫಲಿತಾಂಶ ಬರದೇ ಇದ್ದಾಗ ಮಾನಸಿಕ ಒತ್ತಡ ಸಹಜವಾಗಿಯೇ ಎದುರಾಗುತ್ತದೆ. ಈ ಸಂದರ್ಭದಲ್ಲಿ ಕೋಪಗೊಳ್ಳದೇ ಮನಸ್ಸನ್ನು ವಸ್ತುನಿಷ್ಠ ದೃಷ್ಟಿಯತ್ತ ಕೇಂದ್ರೀಕರಿಸಿ ಪರ್ಯಾಯವನ್ನು ಯೋಚಿಸಿ. ಈ ಮೂಲಕ ಆಗದೇ ಹೋದ ಕೆಲಸಕ್ಕೆ ನೀವು ಮಾತ್ರವೇ ಹೊಣೆಗಾರರಾಗುವುದು ತಪ್ಪುತ್ತದೆ. ಒಂದು ಉದಾಹರಣೆಯ ಪ್ರಕಾರ ಓರ್ವ ಮಹಿಳಾ ಉದ್ಯೋಗಿ ಒಂದು ಮುಖ್ಯ ಕೆಲಸಕ್ಕೆ ಹೆಚ್ಚಿನ ಜನರ ಸಹಕಾರದ ಬೇಡಿಕೆಯಿಟ್ಟಿದ್ದು ಅದಕ್ಕೆ ಅನುಮೋದನೆ ದೊರಕಿರಲಿಲ್ಲ. ಆದರೂ ಆಕೆ ಧೃತಿಗೆಡದೇ ಮಾನವ ಸಂಪನ್ಮೂಲದ ಮುಖ್ಯಸ್ಥರಿಗೆ ಕರೆ ಮಾಡಿ ನೀವು ಎಲ್ಲಿಂದ ಬರುತ್ತೀರಿ ಎಂದು ಹೇಳಿ, ನಾನು ಎಲ್ಲಿಂದ ಬರುತ್ತಿದ್ದೇನೆ ಎಂದು ಹೇಳುತ್ತೇನೆ. ಈ ಹೋಲಿಕೆಯಿಂದ ಈ ಸಮಸ್ಯೆಗೆ ಪರಿಹಾರ ದೊರಕುತ್ತದೆಯೋ ನೋಡೋಣ ಎಂದು ಕೇಳಿದಳಂತೆ. ಅಚ್ಚರಿ ಎಂಬಂತೆ, ಮುಖ್ಯಸ್ಥರಿಗೆ ಈಕೆಯ ಬೇಡಿಕೆ ಅರ್ಥವಾಗಿ ಮನ್ನಣೆ ನೀಡಿದರಂತೆ.

ಕ್ಷೋಭೆಗೊಂಡ ಮನಸ್ಸನ್ನು ತಕ್ಷಣವೇ ತಣಿಸಿ:

ಕ್ಷೋಭೆಗೊಂಡ ಮನಸ್ಸನ್ನು ತಕ್ಷಣವೇ ತಣಿಸಿ:

ಯಾವಾಗ ಕೋಪ ಮತ್ತು ಹತಾಶೆ ಎದುರಾಗುತ್ತದೆಯೋ, ಆಗ ಮನಸ್ಸಿನ ಸಹಿತ ಮೈ ಸಹಾ ಬಿಸಿಯಾಗುತ್ತದೆ ಹಾಗೂ ಹೆಚ್ಚಿನವರು ತಕ್ಷಣವೇ ಯಾವುದಾದರೊಂದು ಪ್ರತಿಕ್ರಿಯೆ ತೋರುತ್ತಾರೆ. ಸಾಮಾನ್ಯವಾಗಿ ಈ ಪ್ರತಿಕ್ರಿಯೆ ವಿಪರೀತವಾಗಿಯೇ ಇರುತ್ತದೆ. ಆದರೆ ಈ ಸಂದರ್ಭ ಎದುರಾದಾಗ, ಯಾವುದೇ ಪ್ರತಿಕ್ರಿಯೆಯನ್ನು ತಕ್ಷಣವೇ ನೀಡದೇ "ಮನ ತಣಿಸುವ ಉಸಿರಾಟ"ವನ್ನು ನಿರ್ವಹಿಸಿ. ಅಂದರೆ, ಬಾಯಿಯಿಂದ ದೀರ್ಘವಾದ ಉಸಿರೆಳೆದುಕೊಂಡು ಮೂಗಿನಿಂದ ಸಹಜವಾಗಿ ಪೂರ್ತಿಯಾಗಿ ಹೊರಬಿಡಿ. ಒಂದೆರಡು ಬಾರಿ ಮಾಡಿದ ತಕ್ಷಣ ಆರಿದ್ದ ನಿಮ್ಮ ನಾಲಿಗೆ ಮತ್ತೆ ಕೊಂಚ ತಣ್ಣಗಾದಂತೆ ಅನ್ನಿಸುತ್ತದೆ. ಒಂದರ್ಥದಲ್ಲಿ ಸಂದರ್ಭವನ್ನು ಆ ಕ್ಷಣದಲ್ಲಿ ನಿಲ್ಲಿಸಿಟ್ಟಂತೆ. ಇದು ನಿಮಗೆ ಯೋಚಿಸಲು ಹಾಗೂ ಸೂಕ್ತ ಸ್ಪಂದನೆಯನ್ನು ನೀಡಲು ಅಮೂಲ್ಯ ಸಮಯ ಮತ್ತು ಮನೋಬಲವನ್ನು ನೀಡುತ್ತದೆ. ಈ ಕ್ರಮ ಎಷ್ಟು ಪ್ರಬಲವೆಂದರೆ, ಕೇವಲ ನೀವು ಮಾತ್ರವಲ್ಲ, ನಿಮ್ಮ ಎದುರಿನ ವ್ಯಕ್ತಿಯೂ ಆ ಕ್ಷಣದ ಕೋಪದಿಂದ ಶಾಂತನಾಗಲು ಸಾಧ್ಯ.

ನೀವಾಗಿ ರೂಪಿಸಿಕೊಂಡ ಒತ್ತಡಗಳನ್ನು ಗುರುತಿಸಿ

ನೀವಾಗಿ ರೂಪಿಸಿಕೊಂಡ ಒತ್ತಡಗಳನ್ನು ಗುರುತಿಸಿ

ಎಷ್ಟೋ ಬಾರಿ, ನಮ್ಮದೇ ತಪ್ಪಿನಿಂದ ಎದುರಾದ ತೊಂದರೆಗಳೇ ನಮ್ಮ ಮಾನಸಿಕ ಶಾಂತಿಯನ್ನು ಕಸಿದಿರುತ್ತವೆ. ಇದನ್ನು ತಡೆಯಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಹಾಗೂ ಇತರರ ಅನುಮೋದನೆಯನ್ನು ಪಡೆದು ಮುಂದುವರೆಯುವ ಬದಲು ನಿಮ್ಮದೇ ಆದ ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಇತರರು ನಿಮ್ಮ ಬಗ್ಗೆ ಇರಿಸುವ ಅಭಿಪ್ರಾಯಗಳನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಕೆಲವು ನಿಮ್ಮದೇ ಅಭ್ಯಾಸಗಳು, ಉದಾಹರಣೆಗೆ ಕೆಲಸವನ್ನು ಮುಂದು ಹಾಕುವಿಕೆ ಇತ್ಯಾದಿ ಮೊದಲಾದವೇ ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತವೆ. ಇಂತಹ, ನೀವಾಗಿ ರೂಪಿಸಿಕೊಂಡಂತಹ ಒತ್ತಡಕ್ಕೆ ಕಾರಣವಾಗುವ ಸಂದರ್ಭಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ. ಈ ಮೂಲಕ ಲಭಿಸುವ ಪರಿಣಾಮ ಖಂಡಿತವಾಗಿಯೂ ಇತರರ ಮೆಚ್ಚುಗೆ ಪಡೆಯುತ್ತದೆ.

 ಆದ್ಯತೆಗಳಿಗೆ ಮೊದಲು ಆದ್ಯತೆ ನೀಡಿ

ಆದ್ಯತೆಗಳಿಗೆ ಮೊದಲು ಆದ್ಯತೆ ನೀಡಿ

ನೀವು ಆದ್ಯತೆ ನೀಡಿರುವ ಕೆಲಸಗಳು ವಾಸ್ತವದಲ್ಲಿ ಅಷ್ಟೊಂದು ಆದ್ಯತೆ ಇಲ್ಲದೇ ಇರಬಹುದು. ಅಲ್ಲದೇ ಪರಿಸ್ಥಿತಿಗೆ ತಕ್ಕಂತೆ ಆದ್ಯತೆಗಳೂ ಹಿಂದುಮುಂದಾಗುತ್ತಲೇ ಇರುತ್ತವೆ. ಹಾಗಾಗಿ, ಆದ್ಯತೆಗಳಲ್ಲಿಯೇ ಯಾವುದು ಮುಖ್ಯ ಹಾಗೂ ಯಾವ ಕ್ರಮದಲ್ಲಿ ಬರಬೇಕೆಂಬುದನ್ನು ನೀವು ಅರಿತುಕೊಳ್ಳಬೇಕು. ಈ ಬಗ್ಗೆ ನೀವು ಅಂದುಕೊಂಡಿದ್ದಕ್ಕೂ ಸಂಸ್ಥೆಯ ದೃಷ್ಟಿಯಿಂದ ನೋಡಿದಾಗ ಇರುವ ಆದ್ಯತೆಗೂ ವ್ಯತ್ಯಾಸ ಇರಬಹುದು. ಹಾಗಾಗಿ, ನಿಮ್ಮ ಕೆಲಸನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಈ ಮೂಲಕ ನೀವು ವೈಯಕ್ತಿಕವಾಗಿ ಸಾಧಿಸಬಹುದಾದ ಏಳ್ಗೆಯನ್ನು ಗಮನದಲ್ಲಿರಿಸಿ ಅತಿ ಹೆಚ್ಚು ಆದ್ಯತೆ ನೀಡಬೇಕಾದ ಕೆಲಸಗಳನ್ನು ಮೊದಲಾಗಿ ನಿರ್ವಹಿಸಿ.

ಭಯ ಹುಟ್ಟಿಸುವ ಆ ಬಟನ್ ಅನ್ನು ಮೊದಲು ನಿಶ್ಶಬ್ದಗೊಳಿಸಿ

ಭಯ ಹುಟ್ಟಿಸುವ ಆ ಬಟನ್ ಅನ್ನು ಮೊದಲು ನಿಶ್ಶಬ್ದಗೊಳಿಸಿ

ಕೆಲವರಿಗೆ ಮುಂದೆ ನಡೆಯಲಿರುವ ಯಾವುದೋ ಕೆಲಸವನ್ನು ಊಹಿಸಿಕೊಂಡೇ ಭಯ ಎದುರಾಗುತ್ತದೆ. ಮೀಟಿಂಗ್ ನಲ್ಲಿ ಯಾವ ವಿಷಯ ಬರುತ್ತದೆಯೋ, ಮೇಲಾಧಿಕಾರಿಗಳು ಬರುವವರಿದ್ದಾರೆ, ಅವರಿಗೇನು ಕಾಣುತ್ತದೆಯೋ ಮೊದಲಾದ ಆತಂಕಗಳು ವಿನಾಕಾರಣ ಎದುರಾಗುತ್ತವೆ. ಆದರೆ ಈ ಆತಂಕವೇ ನಿಮ್ಮ ಮಾನಸಿಕ ಒತ್ತಡದ ಮುಖ್ಯ ಕಾರಣವಾಗಿವೆ. ಹಾಗಾಗಿ ಭಯ ಹುಟ್ಟಿಸುವ ಈ ಯೋಚನೆಗಳನ್ನೇ ಮೊಟಕುಗೊಳಿಸಿ. ಇದಕ್ಕಾಗಿ ಹೆಬ್ಬೆರಳಿನಿಂದ ಮಧ್ಯದ ಬೆರಳಿನ ನಡುಭಾಗದ ಬದಿಯಲ್ಲಿ ಕೊಂಚವೇ ಒತ್ತಡರಿಂದ ಒತ್ತಿಕೊಳ್ಳಿ. ಇದು ತಕ್ಷಣವೇ ನಿಮ್ಮ ಹೃದಯದ ಬಡಿತವನ್ನು ತಹಬಂದಿಗೆ ತರುವ ಮೂಲಕ ಈ ಬಗೆಯ ಅನಾವಶ್ಯಕ ಯೋಚನೆಯುಂಟಾಗದಂತೆ ತಡೆಯುತ್ತದೆ.

 ಇತರರ ಮೇಲೆ ಪ್ರಭಾವ ಬೀರಿ:

ಇತರರ ಮೇಲೆ ಪ್ರಭಾವ ಬೀರಿ:

ನಿಮ್ಮ ನಡುವಳಿಕೆ ಮತ್ತು ದೃಷ್ಟಿಕೋನಕ್ಕೆ ನೀವು ಜವಾಬ್ದಾರರಾಗಿದ್ದರೂ ಸಹ, ಇತರ ಜನರ ಒತ್ತಡದ ನಡವಳಿಕೆಯೊಂದಿಗೆ ನೀವು ಇನ್ನೂ ವ್ಯವಹರಿಸುತ್ತಿರುವಿರಿ ಎಂದು ಮೆಲ್ನಿಕ್ ಹೇಳುತ್ತಾರೆ. ಕೆಟ್ಟ ನಡವಳಿಕೆಯನ್ನು ಗೌರವಾನ್ವಿತ ಸ್ವರದಲ್ಲಿ ಹೇಳುವ ಮೂಲಕ, ತಂಡ ಮತ್ತು ವ್ಯಕ್ತಿಯ ಮೇಲೆ ಉಂಟಾಗುವ ಪರಿಣಾಮವನ್ನು ವಿವರಿಸುವ ಮೂಲಕ ಮತ್ತು ಬದಲಾವಣೆಯನ್ನು ಕೋರುವ ಮೂಲಕ ಸಮಸ್ಯೆಯ ಸಹೋದ್ಯೋಗಿ ಅಥವಾ ಉದ್ಯೋಗಿಯನ್ನು ಎದುರಿಸುವಂತೆ ಆಕೆ ವಿವರಿಸುತ್ತಾರೆ ಉದಾಹರಣೆಗೆ, ನಿರಂತರ ನಕಾರಾತ್ಮಕತೆಯನ್ನು ಈ ರೀತಿ ತಿಳಿಸಬಹುದು: "ನೀವು ವಿಮರ್ಶಾತ್ಮಕ ಸ್ವರದಲ್ಲಿ ಮಾತನಾಡುವಾಗ, ಅದು ಇತರರಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಮತ್ತು ನಿಮ್ಮನ್ನು ನಾಯಕನಾಗಿ ನೋಡುವ ಸಾಧ್ಯತೆ ಕಡಿಮೆ ಮಾಡುತ್ತದೆ. ನಿಮ್ಮ ಹತಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಆದರೆ ನೀವು ನೇರವಾಗಿ ನನ್ನ ಗಮನವನ್ನು ತರುವಂತೆ ವಿನಂತಿಸುತ್ತೇನೆ, ಆದ್ದರಿಂದ ನಾವು ಅವರ ಮೂಲಕ ಮಾತನಾಡಬಹುದು" ಸಮಸ್ಯೆಯ ಮಾಲೀಕತ್ವವನ್ನು ವರ್ಗಾಯಿಸುವ ಮೂಲಕ, ನೀವು ಅದನ್ನು ಪರಿಹರಿಸುವ ಸಾಧ್ಯತೆ ಹೆಚ್ಚು.

ನೀವೇ ನಿಮ್ಮ ಸ್ವಂತ ವಿಮರ್ಶಕರಾಗಿರಿ

ನೀವೇ ನಿಮ್ಮ ಸ್ವಂತ ವಿಮರ್ಶಕರಾಗಿರಿ

ಪ್ರತಿದಿನ ಸುಮಾರು 60,000 ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಹರಿಯುತ್ತವೆ ಎಂದು ಮೆಲ್ನಿಕ್ ಹೇಳುತ್ತಾರೆ. ಮತ್ತು ಆಂತರಿಕ ನಕಾರಾತ್ಮಕತೆಯು ಬಾಹ್ಯ ಘಟನೆಯಂತೆ ನಿಮ್ಮನ್ನು ಒತ್ತಿಹೇಳುವ ಸಾಧ್ಯತೆಯಿದೆ. ಇದಕ್ಕೆ ಉತ್ತರ? ನಿಮ್ಮ ಬಗ್ಗೆ ನೀವೇ ಕಠಿಣವಾಗಿ ಟೀಕಿಸುವ ಬದಲು, ನಿಮ್ಮನ್ನು ನೀವೇ ಪ್ರೇರೇಪಿಸಲು ಪ್ರಯತ್ನಿಸಿ. ಆಲೋಚನೆಗಳನ್ನು ಪ್ರೋತ್ಸಾಹಿಸುವುದು ನಿಮ್ಮನ್ನು ಹೆಚ್ಚಿನ ಸಾಧನೆಗೆ ಪ್ರೇರೇಪಿಸುತ್ತದೆ.

English summary

Tips to Handle Stress at Work Place

Are you looking for the way to maintain steady focus throughout the day? Here we have explained Melnick strategies, if you adopt that, your stress will go away and you can happily manage your work life.
Story first published: Monday, October 28, 2019, 17:46 [IST]
X