For Quick Alerts
ALLOW NOTIFICATIONS  
For Daily Alerts

ಸಚಿನ್ ತೆಂಡೂಲ್ಕರ್ ಮಗನಿಗೆ ನಾಯಿ ಕಡಿತ: ನಾಯಿ ಕಚ್ಚಿದಾಗ ಈ ಪ್ರಥಮ ಚಿಕಿತ್ಸೆ ಮಾಡಿದರೆ ಅಪಾಯದ ಸಾಧ್ಯತೆ ಕಡಿಮೆ

|

ಲಕ್ನೋ ಸೂಪರ್ ಜೈಂಟ್ಸ್ ಟೀಂನ ಐಪಿಎಲ್‌ ಕ್ರಿಕೆಟಿಗ ಅರ್ಜುನ್‌ ಕಪೂರ್‌ಗೆ ನಾಯಿ ಕಚ್ಚಿದೆ. ನಾಯಿ ಕಚ್ಚಿದರೆ ಸೂಕ್ತ ಚಿಕಿತ್ಸೆ ಪಡೆಯಬೇಕು, ನಾಯಿ ಕಚ್ಚಿದರೆ ಮಾತ್ರವಲ್ಲ ಅದರ ಉಗುರು ತಾಗಿದರೂ ಚಿಕಿತ್ಸೆ ಪಡೆಯಬೇಕು. ಬೀದಿ ನಾಯಿಗಳು ಮಾತ್ರವಲ್ಲ ಕೆಲವೊಮ್ಮೆ ಮನೆಯಲ್ಲಿ ಮುದ್ದಿನಿಂದ ಸಾಕಿದ ನಮ್ಮ ನಾಯಿಯೇ ಕಚ್ಚುವುದುಂಟು. ನಾಯಿ ಕಚ್ಚಿದರೆ ಮಾತ್ರವಲ್ಲ ಅದು ಪರಚಿದರೂ ಕೂಡಲೇ ಚಿಕಿತ್ಸೆ ಪಡೆಯಬೇಕು.

ಅಲ್ಲದೆ ನಾಯಿ ಕಚ್ಚಿದಾಗ ಅಥವಾ ಪರಚಿದಾಗ ಆ ದಿನವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು, ಆದರೆ ಚಿಕಿತ್ಸೆ ಪಡೆಯುವ ಮುನ್ನ ನೀವು ಕೆಲವೊಂದು ಕಾರ್ಯಗಳನ್ನು ಮಾಡಬೇಕು, ಇದರಿಂದ ನಾಯಿ ಕಚ್ಚಿದಾಗ ಉಂಟಾಗುವ ಅಪಾಯವನ್ನು ತಗ್ಗಿಸಬಹುದು.

ನಾಯಿ ಕಚ್ಚಿದಾಗ ಅಥವಾ ಪರಚಿದಾಗ ನೀವು ಮೊದಲು ಮಾಡಬೇಕಾಗಿರುವುದು:

ನಾಯಿ ಕಚ್ಚಿದಾಗ ಅಥವಾ ಪರಚಿದಾಗ ನೀವು ಮೊದಲು ಮಾಡಬೇಕಾಗಿರುವುದು:

* ಮೊದಲು ಗಾಯವನ್ನು ತೊಳೆಯಿರಿ: ಮೈಲ್ಡ್‌ ಸೋಪ್‌ ಹಚ್ಚಿ , ಹದ ಬಿಸಿ ನೀರಿನಿಂದ ತೊಳೆಯಿರಿ, ಹರಿಯುವ ನೀರಿನಲ್ಲಿ ಗಾಯವಾದ ಭಾಗವನ್ನು ಒಂದು ನಿಮಿಷ ಹಾಗೇ ಹಿಡಿಯಿರಿ.

* ಆಗ ರಕ್ತ ಹರಿಯುವುದು ಕಡಿಮೆಯಾದಾಗ ಸ್ವಚ್ಛವಾದ ಬಟ್ಟೆಯಿಂದ ಸ್ವಚ್ಛ ಮಾಡಿ.

* ಆ್ಯಂಟಿ ಬಯೋಟಿಕ್‌ ಕ್ರೀಮ್‌ ಇದ್ದರೆ ಹಚ್ಚಿದರೆ ಒಳ್ಳೆಯದು.

* ಗಾಯಕ್ಕೆ ಬ್ಯಾಂಡೇಜ್‌ ಹಾಕಿ ಸುತ್ತಿ.

ಆಸ್ಪತ್ರೆಗೆ ಹೋಗಿ

ಆಸ್ಪತ್ರೆಗೆ ಹೋಗಿ

* ನಾಯಿ ಕಚ್ಚಿದ ದಿನವೇ ಆಸ್ಪತ್ರೆಗೆ ಹೋಗಿ ಚುಚ್ಚು ಮದ್ದು ಪಡೆಯಬೇಕು. ನಾಯಿ ಕಚ್ಚಿದರೆ ಅದೇ ದಿನ, 3, 7, 14, 28ನೇ ದಿನ ಚುಚ್ಚುಮದ್ದು ಪಡೆಯಬೇಕು. ಒಂದು ವೇಳೆ ನಿಮಗೆ ಕಚ್ಚಿದ ನಾಯಿಯ ಆರೋಗ್ಯ ಸ್ಥಿತಿ ನಿಮಗೆ ತಿಳಿಯದೇ ಹೋಗಿದ್ದರೆ ಅಂದರೆ ಆ ನಾಯಿ ಪತ್ತೆಯಾಗದಿದ್ದೆ 60 ಹಾಗೂ 90ನೇ ದಿನ ಕೂಡ ಚುಚ್ಚುಮದ್ದು ಪಡೆಯಬೇಕು.

* ವೈದ್ಯರು ಪರೀಕ್ಷೆ ಮಾಡಿದ ಬಳಿಕ ಕೂಡ ಗಾಯಕ್ಕೆ ಸುತ್ತಿದ ಬ್ಯಾಂಡೇಜ್‌ ಅನ್ನು ಆಗಾಗ ಬದಲಾಯಿಸಿ.

ಈ ಲಕ್ಷಣಗಳಿವೆಯೇ ಎಂದು ಗಮನಿಸಿ

ನಾಯಿ ಕಚ್ಚಿದ ಬಳಿಕ ಆ ಭಾಗದಲ್ಲಿ ಕೆಂಪಾಗುವುದು, ಊತ, ನೋವು, ಜ್ವರ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು.

ನಾಯಿ ಕಚ್ಚಿದಾಗ ಈ ರೀತಿ ಮಾಡಬೇಡಿ

ನಾಯಿ ಕಚ್ಚಿದಾಗ ಈ ರೀತಿ ಮಾಡಬೇಡಿ

ಕೆಲವರು ನಾಯಿ ಹಚ್ಚಿದಾಗ ಮನೆಮದ್ದು ಮಾಡಲು ಮುಂದಾಗುತ್ತಾರೆ. ಗಾಯಕ್ಕೆ ಹಸುವಿನ ಸೆಗಣಿ ಮೆತ್ತುವುದು, ಅರಿಶಿಣ ಪುಡಿ, ಮೆಣಸಿನ ಪುಡಿ, ಉಪ್ಪು, ತುಪ್ಪ ಹಚ್ಚುವುದು ಮಾಡುತ್ತಾರೆ, ಆದರೆ ಈ ರೀತಿಯೆಲ್ಲಾ ಮಾಡಲು ಹೋಗಬೇಡಿ, ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ.

ನಾಯಿ ಕಚ್ಚುವುದು ತಡೆಗಟ್ಟುವುದು ಹೇಗೆ?

ನಾಯಿ ಕಚ್ಚುವುದು ತಡೆಗಟ್ಟುವುದು ಹೇಗೆ?

* ನಾಯಿಯನ್ನು ಸಾಕಲು ಆಯ್ಕೆ ಮಾಡುವಾಗ ಸ್ವಲ್ಪ ಸೌಮ್ಯ ಸ್ವಭಾವದ ನಾಯಿಯನ್ನು ಸಾಕಿ, ಇನ್ನು ಮನೆ ಕಾವಲಿಗೆ ಸ್ವಲ್ಪ ಜೋರಾದ ನಾಯಿ ಬೇಕೆಂದು ಬಯಸುವುದಾದರೆ ನೀವು ಅಂಥ ನಾಯಿಯಿಂದ ಮಕ್ಕಳನ್ನು ದೂರವಿಡಿ, ನೀವು ಅಷ್ಟೇ ನಾಯಿಯ ಬಳಿ ಜಾಗ್ರತೆಯಿಂದಿರಬೇಕು.

* ನಿಮಗೆ ಪರಿಚಯವಿಲ್ಲದ ನಾಯಿಯ ಹತ್ತಿರ ಹೋಗಬೇಡಿ.

* ನಿಮ್ಮ ನಾಯಿಗೆ ತುಂಬಾ ನಿಯತ್ತು ಇದ್ದರೂ ಮಕ್ಕಳನ್ನು ನಾಯಿ ಬಳಿ ಆಡಲು ಬಿಟ್ಟು ನೀವು ನಿಮ್ಮ ಪಾಡಿಗೆ ಇರಬೇಡಿ.

* ನಾಯಿ ಬೊಗಳುತ್ತಾ ಬಂದಾಗ ಹೆದರುವುದು, ಓಡುವುದು ಮಾಡಬೇಡಿ, ನಿಧಾನಕ್ಕೆ ಚಲಿಸಿ, ಅದನ್ನು ದಿಟ್ಟಿಸುವುದು ಮಾಡಬೇಡಿ.

English summary

Dog Bite first aid : Things To Do Immediately After Dog Bite in kannada

Things you have to do immediately after dog bite to avoid further complication read on...
X
Desktop Bottom Promotion