For Quick Alerts
ALLOW NOTIFICATIONS  
For Daily Alerts

ಕಾಫಿ ಕುಡಿದರೆ ಲಿವರ್‌ ಕ್ಯಾನ್ಸರ್‌ ಅಪಾಯ ತುಂಬಾ ಕಡಿಮೆ ಎಂದಿದೆ ಅಧ್ಯಯನ ವರದಿ

|

ನೀವು ಕಾಫಿ ಪ್ರಿಯರಾಗಿದ್ದರೆ ಅದರ ಆರೋಗ್ಯಕರ ಗುಣಗಳು ತಿಳಿದ ಮೇಲೆ ಕಾಫಿ ಮತ್ತಷ್ಟು ರುಚಿಕರ ಅನಿಸುವುದು. ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ಬಿಸಿ ಕಾಫಿ ಹೀರಿದರೆ ಸಾಕು ನಮ್ಮಲ್ಲಿದ್ದಆಲಸ್ಯ ದೂರವಾಗಿ ಬಿಡುತ್ತದೆ. ಕಾಫಿ ನಮ್ಮ ದೇಹದಲ್ಲಿ ಲವಲವಿಕೆ ತುಂಬುವುದು ಮಾತ್ರವಲ್ಲ , ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ ಎಂದು ಈ ಕುರಿತು ನಡೆಸಿದ ಅಧ್ಯಯನಗಳಿಂದ ಕೂಡ ಸಾಬೀತಾಗಿದೆ.

Coffee

ಇತ್ತೀಚೆಗೆ ಉತ್ತರ ಐರ್ಲ್ಯಾಂಡ್‌ನ ಬೆಲ್‌ಫಾಸ್ಟ್‌ನ ನಗರದಲ್ಲಿರುವ ಕ್ವೀನ್‌ ಯೂನಿವರ್ಸಿಟಿಯಲ್ಲಿ ನಡೆಸಿದ ಅಧ್ಯಯನದಲ್ಲಿ ಸಾಮಾನ್ಯವಾಗಿ ಕಂಡು ಬರುವ ಹೆಚ್‌ಸಿಸಿ(hepatocellular carcinoma)ಲಿವರ್‌ ಕ್ಯಾನ್ಸರ್‌ ತಡೆತಗಟ್ಟುವ ಸಾಮರ್ಥ್ಯ ಕಾಫಿಗಿದೆ ಎಂದು ತಿಳಿದು ಬಂದಿದೆ.
 ದಿನದಲ್ಲಿ ಒಂದು ಲೋಟ ಕಾಫಿ ಕುಡಿಯಿರಿ, ಲಿವರ್ ಕ್ಯಾನ್ಸರ್ ದೂರವಿಡಿ

ದಿನದಲ್ಲಿ ಒಂದು ಲೋಟ ಕಾಫಿ ಕುಡಿಯಿರಿ, ಲಿವರ್ ಕ್ಯಾನ್ಸರ್ ದೂರವಿಡಿ

ವಿಶ್ವದಲ್ಲಿಯೇ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಕಾಫಿ. ಇದೀಗ ಬಾಯಿಗೆ ರುಚಿ, ಮನಸ್ಸಿಗೆ ಹಿತ, ದೇಹಕ್ಕೆ ಉಲ್ಲಾಸ ತುಂಬುವ ಕಾಫಿಗೆ ಕ್ಯಾನ್ಸರ್‌ನಂಥ ಮಾರಕ ಕಾಯಿಲೆ ತಡೆಗಟ್ಟುವ ಸಾಮರ್ಥ್ಯ ಇದೆ ಎಂದು ತಿಳಿದು ಬಂದಿದೆ. ಕಾಫಿ ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಲ್ಜಮೈರ್ಸ್, ಟೈಪ್‌ 2 ಡಯಾಬಿಟಿಸ್‌, ಪಾರ್ಕಿನ್ಸನ್‌, ಹೃದಯ ಸಂಬಂಧಿ ಕಾಯಿಲೆ ಹೀಗೆ ಅನೇಕ ಸಮಸ್ಯೆಗಳನ್ನು ತಡೆಗಟ್ಟುವ ಗುಣ ಕಾಫಿಯಲ್ಲಿದೆ. ಕಾಫಿಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದೆಂದು ಹಲವಾರ ಸಂಸೋಧನೆಗಳು ನಡೆಯುತ್ತಿವೆ, ಅವುಗಳಲ್ಲಿ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್‌ ಅಪಾಯವನ್ನು ತಡೆಗಟ್ಟಬಹುದು ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಅಧ್ಯಯನವನ್ನು ಸುಮಾರು 7.5ವರ್ಷಗಳವರೆಗೆ ನಡೆಸಲಾಯಿತು. ಕಾಫಿ ಕುಡಿಯುವ ಅಭ್ಯಾಸ ಇರುವ 471,779 ಜನರು ಇದರಲ್ಲಿ ಭಾಗವಹಿಸಿದ್ದರು. ಒಂದು ಅಧ್ಯಯನದಲ್ಲಿ ಇಷ್ಟೊಂದು ಜನರು ಭಾಗವಹಿಸಿರುವುದು ಇದೇ ಮೊದಲು, ಭಾಗವಹಿಸಿದವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರಾಗಿದ್ದರು.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಕಾಫಿ ಕುಡಿಯದವರಿಗಿಂತ, ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಕರುಳಿನ ಕ್ಯಾನ್ಸರ್‌ ಅಪಾಯ ತುಂಬಾ ಕಡಿಮೆ ಇತ್ತು.

ಈ ಅಧ್ಯಯನದಲ್ಲಿ ಯಾವೆಲ್ಲಾ ಅಂಶ ಗಮನಿಸಲಾಯಿತು?

ಈ ಅಧ್ಯಯನದಲ್ಲಿ ಯಾವೆಲ್ಲಾ ಅಂಶ ಗಮನಿಸಲಾಯಿತು?

ಭಾಗವಹಿಸಿದ 471,779 ಮೂರು ಭಾಗಗಳಾಗಿ ವಿಂಗಡಿಸಲಾಯಿತು, ಅವರಲ್ಲಿ ಕೆಲವೊಂದು ಅಂಶಗಳನ್ನು ಗಮನಿಸಲಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದವರು ಧೂಮಪಾನ ಮಾಡುತ್ತಾರೆಯೇ? ಮದ್ಯಪಾನ ಮಾಡುತ್ತಾರೆಯೇ,ಕೊಲೆಸ್ಟ್ರಾಲ್ ಪ್ರಮಾಣ ಎಷ್ಟಿದೆ ಎಂಬ ಅಂಶಗಳನ್ನು ಗಮನಿಸಲಾಯಿತು.

 ಮೇಲುಗೈ ಸಾಧಿಸಿದ ಇನ್‌ಸ್ಟಾಂಟ್‌ ಕಾಫಿ

ಮೇಲುಗೈ ಸಾಧಿಸಿದ ಇನ್‌ಸ್ಟಾಂಟ್‌ ಕಾಫಿ

ಕಾಫಿಯನ್ನು ತುಂಬಾ ರುಚಿಯಲ್ಲಿ ಸವಿಯಬಹುದು. ಕೆಲವರು ಡಿಕಾಕ್ಷನ್‌ ಕಾಫಿ ಇಷ್ಟಪಟ್ಟರೆ ಮತ್ತೆ ಕೆಲವರಿಗೆ ಬ್ಲ್ಯಾಕ್‌ ಕಾಫಿ ಇಷ್ಟವಾಗುವುದು, ಇನ್ನು ಕೆಲವರು ಮಂದವಾದ ಹಾಲಿಗೆ ಕಾಫಿಪುಡಿ ಹಾಕಿ ಕುಡಿಯಲು ಬಯಸುತ್ತಾರೆ, ಇನ್ನು ತಕ್ಷಣವೇ ಮಾಡಬಹುದಾದ ಇನ್‌ಸ್ಟಾಂಟ್‌ ಕಾಫಿಯಂತೂ ಹೆಚ್ಚು ಬಳಕೆಯಲ್ಲಿದೆ. ಲಿವರ್‌ ಕ್ಯಾನ್ಸರ್‌ ತಡೆಗಟ್ಟುವ ಸಾಮರ್ಥ್ಯ ಇನ್‌ಸ್ಟಾಂಟ್‌ ಕಾಫಿಯಲ್ಲಿ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.

ಈ ಕುರಿತು ಮಾತನಾಡಿದ ಅಧ್ಯಯನ ವರದಿಯ ಸಹ ಲೇಖಕ ಮ್ಯಾಕ್‌ಮೆನಮಿನ್‌ ಹೇಳುವ ಪ್ರಕಾರ 'ಕರುಳಿನ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಕಾಫಿ ಒಳ್ಳೆಯದೇ? ಅದರಲ್ಲೂ ಯಾವ ಬಗೆಯ ಕಾಫಿ ತುಂಬಾ ಒಳ್ಳೆಯದು ಎಂಬುವುದರ ಕುರಿತು ನಡೆಸಿದ ಮೊದಲ ಅಧ್ಯಯನ ಇದಾಗಿದೆ. ಯಾರು ಇನ್‌ಸ್ಟಾಂಟ್‌ ಕಾಪಿ ಕುಡಿಯುತ್ತಾರೋ ಅವರಿಗೆ ಕರುಳಿನ ಕ್ಯಾನ್ಸರ್ ಬರುವ ಅಪಾಯ ತುಮಬಾ ಕಡಿಮೆ ಇರುತ್ತದೆ' ಎಂದು ಹೇಳಿದ್ದಾರೆ.

ಇನ್ನು ಕಾಫಿ ಕುಡಿಯದವರಿಗಿಂತ ಕಾಫಿ ಕುಡಿಯುವವರಲ್ಲಿ ಮಧುಮೇಹ, ಸಿರೋಸಿಸ್, ಗಾಲ್‌ಸ್ಟೋನ್, ಪೆಪ್ಟಿಕ್ ಅಲ್ಸರ್‌ ಮುಂತಾದ ಅಪಾಯ ಬರುವ ಸಾಧ್ಯತೆ ಕಡಿಮೆ ಇದೆ.

ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಲಿವರ್‌ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ

ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಲಿವರ್‌ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ

ಕಾಫಿ ಕುಡಿಯದವರಿಗೆ ಹೋಲಿಸಿದರೆ ಕಾಫಿ ಕುಡಿಯುವವರಲ್ಲಿ ಲಿವರ್‌ ಕ್ಯಾನ್ಸರ್‌ ಬರುವ ಸಾಧ್ಯತೆ ಶೇ. 50ರಷ್ಟು ಕಡಿಮೆ ಇದೆ ಎಂದು ಕಾಫಿಯ ಆರೋಗ್ಯಕರ ಗುಣಗಳ ಬಗ್ಗೆ ಇತ್ತೀಚೆಗೆ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದಿದೆ. ಏಕೆಂದರೆ ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ, ಕ್ಯಾನ್ಸರ್, ಮಧುಮೇಹದಂಥ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.

ಕಾಫಿ ಕುಡಿದು ಇತರ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದೇ?

ಕಾಫಿ ಕುಡಿದು ಇತರ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದೇ?

ಲಿವರ್‌ ಕ್ಯಾನ್ಸರ್ ಅಲ್ಲದೆ ಕರುಳಿನ ಹಾಗೂ ಹೊಟ್ಟೆಯ ಕ್ಯಾನ್ಸರ್ ತಡೆಗಟ್ಟಲು ಕಾಫಿ ಕುಡಿಯುವುದರಿಂದ ಸಹಾಯವಾಗುವುದೇ ಎಂದು ಹೇಳಲು ಕಾಫಿ ಹಾಗೂ ಆ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ನಿಖರ ಅಧ್ಯಯನ ವರದಿ ಇದುವರೆಗೆ ಬಂದಿಲ್ಲ. ಈ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತವೆ.

ಆದರೆ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದಾಗಿದ್ದು, ಈ ಸಮಸ್ಯೆ ಸಂಪೂರ್ಣ ತಡೆಗಟ್ಟಲು ಧೂಮಪಾನ, ಮದ್ಯಪಾನ ಇವುಗಳಿಂದ ದೂರುವಿರಿ.

English summary

Study says Coffee Drinkers Have 50% Less Risk Of Liver Cancer

According to a recent study conducted by the Queen's University Belfast, daily coffee drinking habit will lower risk of the most common type of liver cancer, hepatocellular carcinoma
Story first published: Tuesday, November 12, 2019, 17:28 [IST]
X
Desktop Bottom Promotion