For Quick Alerts
ALLOW NOTIFICATIONS  
For Daily Alerts

ಸ್ಟೆಲ್ತ್ ಓಮಿಕ್ರಾನ್: ಅತ್ಯಂತ ವೇಗವಾಗಿ ಹರಡುತ್ತಿದೆ ಈ ಉಪ ಒಮಿಕ್ರಾನ್‌

|

ಜಗತ್ತಿಗೆ ಒಮಿಕ್ರಾನ್‌ ಕೊರೊನಾ ವೈರಸ್‌ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇದೀಗ ಒಮಿಕ್ರಾನ್‌ ಉಪ ರೂಪಾಂತರ ಪತ್ತೆಯಾಗಿದ್ದು, ಈ ವೈರಸ್‌ ಮತ್ತಷ್ಟು ವೇಗವಾಗಿ ಹರಡುವುದರಿಂದ ಕೋವಿಡ್ 19 ಅಲೆ ಉಂಟಾಗಲಿದೆ.

stealth omicron

ಯುಕೆಯ ಆರೋಗ್ಯ ಅಧಿಕಾರಿಗಳು ಒಮಿಕ್ರಾನ್‌ನ ಉಪ ರೂಪಾಂತರಕ್ಕೆ BA.2 ಎಂದು ಹೆಸರಿಡಲಾಗಿದ್ದು ಈ ರೂಪಾಂತರದ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ಈಗ ಎಲ್ಲೆಡೆ ಕಂಡು ಬರುತ್ತಿರುವುದು ಒಮಿಕ್ರಾನ್‌ನ ಮೂಲ ವೈರಸ್‌ BA.1 ಆಗಿದೆ.

ಒಮಿಕ್ರಾನ್‌ನ ಉಪವೈರಸ್‌ ಅನ್ನು ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯಲಾಗಿದ್ದು ಕಳೆದ ಡಿಸೆಂಬರ್‌ನಲ್ಲಿ ಈ ವೈರಸ್‌ ಪತ್ತೆಯಾಗಿತ್ತು, ಈ ಜನವರಿ 10ಕ್ಕೆ 53 ಜನರಿಗೆ ಈ ಸೋಂಕು ಹರಡಿರುವುದಾಗಿ ಯುಕೆ ಹೇಳಿದೆ.

ಒಮಿಕ್ರಾನ್‌ ಎಷ್ಟೊಂದು ಉಪ ವೈರಸ್‌ಗಳನ್ನು ಹೊಂದಿದೆ?

ಒಮಿಕ್ರಾನ್‌ ಎಷ್ಟೊಂದು ಉಪ ವೈರಸ್‌ಗಳನ್ನು ಹೊಂದಿದೆ?

ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಕಾರ ಒಮಿಕ್ರಾನ್ 3 ಉಪ ವೈರಸ್‌ ಹೊಂದಿದೆ. ಅವುಗಳನ್ನು BA.1, BA.2 ಮತ್ತು BA.3 ಎಂದು ಗುರುತಿಸಲಾಗಿದೆ. ಈಗ ಶೇ. 99ರಷ್ಟು BA.1 ಉಪ ಒಮಿಕ್ರಾನ್‌ ಕಂಡು ಬರುತ್ತಿದೆ.

BA.2 ಉಪ ರೂಪಾಂತರ ಒಮಿಕ್ರಾನ್‌ ಎಲ್ಲೆಲ್ಲಿ ಕಂಡು ಬಂದಿದೆ?

BA.2 ಉಪ ರೂಪಾಂತರ ಒಮಿಕ್ರಾನ್‌ ಎಲ್ಲೆಲ್ಲಿ ಕಂಡು ಬಂದಿದೆ?

ಯುಕೆ ಮಾತ್ರವಲ್ಲ, ನಾರ್ವೇ, ಡೆನ್ಮಾರ್ಕ್‌, ಸ್ವೀಡನ್ನಲ್ಲಿ ಕಂಡು ಬಂದಿದೆ. ಫ್ರಾನ್ಸ್ ಹಾಗೂ ಭಾರತದಲ್ಲಿಯೂ ಹರಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಡೆನ್ಮಾರ್ಕ್‌ ಪರಿಸ್ಥಿತಿ ಕೆಟ್ಟದಾಗಿದೆ. ಅಲ್ಲಿ BA.2 ವೃಸ್‌ ಶೇ. 20ರಷ್ಟು ಹೆಚ್ಚಾಗಿದೆ. ಅಲ್ಲಿ ಪ್ರತಿದಿನ 30,000 ಕೇಸ್‌ಗಳು ಪತ್ತೆಯಾಗುತ್ತಿದೆ.

ಮುಂಬರುವ ದಿನಗಳಲ್ಲಿ ಒಮಿಕ್ರಾನ್‌ನ ಉಪ ರೂಪಾಂತರ ವೈರಸ್‌ ಆತಂಕ

ಮುಂಬರುವ ದಿನಗಳಲ್ಲಿ ಒಮಿಕ್ರಾನ್‌ನ ಉಪ ರೂಪಾಂತರ ವೈರಸ್‌ ಆತಂಕ

ಉಪ ರೂಪಾಂತರ BA.2ಎಲ್ಲೆಡೆ ಹರಡುವ ಆತಂಕ ಎದುರಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಒಮಿಕ್ರಾನ್ BA.1 ಹಾಗೂ BA.2 ಸೋಂಕಿತರಲ್ಲಿ ದೊಡ್ಡ ವ್ಯತ್ಯಾಸವೇನು ಕಂಡು ಬರುತ್ತಿಲ್ಲ. ಇಬ್ಬರಲ್ಲೂ ಒಂದೇ ರೀತಿಯಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತಿವೆ.

'ಸ್ಟೆಲ್ತ್ ಓಮಿಕ್ರಾನ್ ಎಂದರೇನು?

'ಸ್ಟೆಲ್ತ್ ಓಮಿಕ್ರಾನ್ ಎಂದರೇನು?

ವಿಜ್ಞಾನಿಗಳು ಓಮಿಕ್ರಾನ್ ರೂಪಾಂತರವನ್ನು ಕಂಡುಹಿಡಿದಾಗ, ಅದರ ಮೂಲ ಸ್ಟ್ರೈನ್ - BA.1 "S" ಅಥವಾ ಸ್ಪೈಕ್ ಜೀನ್‌ನಲ್ಲಿ ಅಳಿಸುವಿಕೆಯ ರೂಪದಲ್ಲಿ ರೂಪಾಂತರವನ್ನು ಹೊಂದಿದೆ ಎಂದು - PCR ಪರೀಕ್ಷೆಗಳಿಂದ ಪತ್ತೆಯಾಯಿತು. BA.2 ಉಪ-ಸ್ಟ್ರೈನ್ ಆದರೂ ಅದೇ ರೂಪಾಂತರವನ್ನು ಹೊಂದಿಲ್ಲ, ಈ ಕಾರಣದಿಂದಾಗಿ ಇದನ್ನು 'ಸ್ಟೆಲ್ತ್ ಓಮಿಕ್ರಾನ್' ಎಂದು ಕರೆಯಲಾಯಿತು.

English summary

Stealth Omicron : What is the Omicron BA.2 Sub Variant; Know Detection, Symptoms and Other Details in Kannada

Stealth Omicron: What is The Fast Spreading Omicron BA.2 Sub-Variant That Can Escape RT-PCR Test. Know Detection, Symptoms and Other Details in Kannada,
X
Desktop Bottom Promotion