For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆಗೆ ಅನುಮತಿ ನೀಡಿದ ಮೊದಲ ಪಾಶ್ಚಾತ್ಯ ರಾಷ್ಟ್ರ-ಸ್ಪೇನ್‌

|

ಸ್ಪೇನ್ ರಾಷ್ಟ್ರ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.

ಜಾಂಬಿಯಾ, ಕೆಲವೊಂದು ಏಷ್ಯಾನ್‌ ರಾಷ್ಟ್ರಗಳಲ್ಲಿ ಅಂದರೆ ಜಪಾನ್‌, ದಕ್ಷಿಣ ಕೊರೊಯಾ, ಇಂಡೋನೇಷ್ಯಾ ಇಲ್ಲೆಲ್ಲಾ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕೆಲಸದಿಂದ ರಜೆ ತೆಗೆದುಕೊಳ್ಳಬಹುದು. ಯುನೈಟೆಡ್‌ ಸ್ಟೇಟ್‌ನಲ್ಲಿ ರಜೆ ಇದೆ ಆದರೆ ಅದು ಪೇಯ್ಡ್ ರಜೆ ಅಲ್ಲ.

ಮುಟ್ಟಿನ ಆ ದಿನಗಳಲ್ಲಿ ಅನುಭವಿಸುವ ಕಿರಿಕಿರಿ, ಮಾನಸಿಕ ವೇತನೆ, ನೋವು ಅದನ್ನು ಅನುಭವಿಸುವರಿಗೆ ಮಾತ್ರ ಗೊತ್ತಿರುತ್ತದೆ. ಹೆಣ್ಣು ಹದಿಹರೆಯದ ಪ್ರಾಯಕ್ಕೆ ಬಂದ ಮೇಲೆ ಮೆನೋಪಾಸ್‌ ಹಂತದವರೆಗೆ ಪ್ರತಿ ತಿಂಗಳು ಮುಟ್ಟಾಗುತ್ತಾಳೆ. ಪ್ರತಿ ತಿಂಗಳು ಮುಟ್ಟಾಗುವುದು ಅವಳ ಆರೋಗ್ಯದ ಸಂಕೇತವೂ ಹೌದು. ಯಾವಾಗ ತಿಂಗಳ ಮುಟ್ಟಿನಲ್ಲಿ ವ್ಯತ್ಯಾಸ ಆಗುತ್ತೋ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದರ್ಥ.

Spain Offer Menstrual Leave,

ತಿಂಗಳಿನಲ್ಲಿ ಸಾಮಾನ್ಯವಾಗಿ 7 ದಿನಗಳವರೆಗೆ ಮುಟ್ಟಿನ ಚಕ್ರವಿರುತ್ತದೆ. ಅದರಲ್ಲೂ ಪ್ರಾರಂಭದ ಎರಡು ಅಥವಾ ಮೂರು ಕೆಲವರಿಗೆ ತುಂಬಾನೇ ಹಿಂಸೆ ಅನಿಸುವುದು. ಈ ಮುಟ್ಟು ಏಕಾಗಿ ಆಗುತ್ತೋ ಅನಿವಷ್ಟು ಹಿಂಸೆ ಅನಿಸುವುದು. ಕಿಬ್ಬೊಟ್ಟೆ ನೋವು, ವಾಂತಿ, ಸುಸ್ತು, ತಲೆ ನೋವು, ಬೇಧಿ ಹೀಗೆ ಒಬ್ಬೊಬ್ಬರಿಗೆ ಆ ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ, ಕೆಲ ಮಹಿಳೆಯರು ಆ ದಿನಗಳಲ್ಲಿ ಏನೂ ತೊಂದರೆಯಿಲ್ಲದೆ ಆರಾಮವಾಗಿ ಇರುವುದೂ ಉಂಟು.

ಆದರೆ ಯಾರಿಗೆ ತೊಂದರೆ ಇರುತ್ತೋ ಅವರಿಗೆ ಆ ದಿನಗಳಲ್ಲಿ ಕೆಲಸ ಕಾರ್ಯಗಳಲ್ಲಿ ಗಮನ ನೀಡಲು ಸಾಧ್ಯವಾಗುವುದಿಲ್ಲ, ಆದರೆ ಈ ಕಾರಣಕ್ಕೆ ಆಫೀಸ್‌ನಲ್ಲಿ ರಜೆ ಕೇಳಲು ಸಾಧ್ಯವಿಲ್ಲ, ಕೇಳಿದರೂ ಕೆಲವು ಕಡೆ ಸಿಗಲ್ಲ ಹಾಗಾಗಿ ಈ ಸಮಯದಲ್ಲಿ ಮಹಿಳೆಯರು ತುಂಬಾನೇ ಕಷ್ಟ ಅನುಭವಿಸುತ್ತಾರೆ. ಮಹಿಳೆಯರಿಗೆ ಆ ದಿನಗಳಲ್ಲಿ ರಜೆ ನೀಡಬೇಕೆಂದು ಪರ-ವಿರೋಧ ಚರ್ಚೆಗಳು ತುಂಬಾ ದಿನದಿಂದ ನಡೆಯುತ್ತಿದೆ.

ಮುಟ್ಟಿನ ಸಮಯದಲ್ಲಿ ಈ ರೀತಿ ರಜೆ ನೀಡಿದರೆ ಅದು ಮಹಿಳೆಯರ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಈ ಕಾರಣಕ್ಕೆ ಕಂಪನಿ ಮಹಿಳಾ ಉದ್ಯೋಗಿಗಳ ನೇಮಕಾತಿ ಕಡಿಮೆ ಮಾಡಬಹುದು ಎಂಬ ವಾದವಿದೆ. ಆದರೆ ಆ ಸಮಯದಲ್ಲಿ ಕೆಲಸ ಮಾಡಲು ಕೆಲವೊಂದು ಮಹಿಳೆಯರಿಗೆ ತುಂಬಾನೇ ಕಷ್ಟವಾಗುವುದು, ಅಂಥವರಿಗೆ ಆ ದಿನಗಳಲ್ಲಿ ರಜೆ ನೀಡಿ, ಆ ದಿನದ ಕೆಲಸ ಬೇರೆ ಆಫೀಸ್ ರಜೆ ದಿನಗಳಲ್ಲಿ ಮಾಡುವ ಅವಕಾಶ ಕಲ್ಪಿಸಿದರೆ ಮಹಿಳೆಯರಿಗೂ ಸಹಾಯವಾದೀತು, ಕಂಪನಿಗೂ ನಷ್ಟವಾಗಲ್ಲ ಎಂಬ ವಾದವೂ ಇದೆ. ಕೆಲವು ಕಂಪನಿಗಳು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡಲು ಚಿಂತನೆ ನಡೆಸುತ್ತಿದೆ. ಭಾರತದಲ್ಲಿ ಇನ್ನೂ ಕೆಲಸದಲ್ಲಿ ಈ ನಿಯಮಗಳು ಬಂದಿಲ್ಲ.

English summary

Spain Set to Become First Western Country to Offer Menstrual Leave

Spain Set to Become First Western Country to Offer Menstrual Leave, read on...
Story first published: Thursday, May 12, 2022, 19:28 [IST]
X
Desktop Bottom Promotion