For Quick Alerts
ALLOW NOTIFICATIONS  
For Daily Alerts

ನಕ್ಷತ್ರ ಸೋಂಪಿನ 7 ಪ್ರಮುಖ ಆರೋಗ್ಯಕರ ಗುಣಗಳು

|

ನಾವು ಪ್ರತಿನಿತ್ಯವೂ ಅಡುಗೆಯಲ್ಲಿ ಬಳಕೆ ಮಾಡುವಂತಹ ಸಾಂಬಾರ ಪದಾರ್ಥಗಳು ದೇಹಕ್ಕೆ ತುಂಬಾ ಲಾಭಕಾರಿ. ಸಾಂಬಾರ ಪದಾರ್ಥವಾಗಿ ಬಳಕೆ ಮಾಡಲಾಗುವಂತಹ ಸ್ಟಾರ್ ಸೋಂಪು ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನು ಹೆಚ್ಚಾಗಿ ವಿಯೆಟ್ನಾಂ ಹಾಗೂ ದಕ್ಷಿಣ ಚೀನಾದಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಇದಕ್ಕೆ ಚೀನೀ ಸೋಂಪು ಎಂದು ಕೂಡ ಕರೆಯುವರು.

star anise benefits

ನಕ್ಷತ್ರದಂತೆ ಇರುವ ಈ ಹಣ್ಣು ಹಣ್ಣಾದ ಬಳಿಕ ಅದನ್ನು ಒಣಗಿಸಿ, ಸಾಂಬಾರ ಪದಾರ್ಥವಾಗಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಕೆಲವು ಔಷಧೀಯ ಗುಣಗಳೂ ಕೂಡ ಇರುವ ಕಾರಣದಿಂದಾಗಿ ಮನೆಮದ್ದುಗಳಲ್ಲಿ ಕೂಡ ಬಳಕೆ ಮಾಡುವರು. ಈ ಹಣ್ಣಿನಲ್ಲಿ ಇರುವಂತಹ ಆರೋಗ್ಯ ಗುಣಗಳು ಹಲವು.

ಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಈ ನಕ್ಷತ್ರ ಸೋಂಪನ್ನು ಹಲವಾರು ರೀತಿಯಿಂದ ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದು ಇಂದು ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿದೆ. ಆಹಾರ ಹಾಗೂ ಔಷಧಿಯಾಗಿ ಎರಡರಲ್ಲೂ ಬಳಕೆ ಮಾಡುವುದರಿಂದ ಇದು ಪರಿಣಾಮಕಾರಿ ಕೂಡ ಆಗಿರುವುದು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯುವ.

ಈ ನಕ್ಷತ್ರ ಸೋಂಪಿಯಲ್ಲಿ ಕೂಡ ಹಲವು ವಿಧಗಳು ಇವೆ. ಇದರಲ್ಲಿ ಕೆಲವು ತುಂಬಾ ವಿಷಕಾರಿ ಆಗಿರುವುದು. ಹೀಗಾಗಿ ಇದನ್ನು ಬೆಳೆಸುವಾಗ ಅಥವಾ ಖರೀದಿ ಮಾಡುವ ಸಂದರ್ಭದಲ್ಲಿ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದ ವೇಳೆ ನಮ್ಮ ಆರೋಗ್ಯಕ್ಕೆ ಲಾಭಗಳು ಇವೆ.

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಅಜೀರ್ಣ, ಮಲಬದ್ಧತೆ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆ ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಇದಕ್ಕಾಗಿ ನೀವು ಸ್ಟಾರ್ ಸೋಂಪನ್ನು ಬಳಕೆ ಮಾಡಿದರೆ ಅದು ಚಯಾಪಚಯ ಕಿಣ್ವವನ್ನು ಉತ್ತೇಜಿಸುವುದು.

ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡುವುದು

ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡುವುದು

ಸ್ಟಾರ್ ಸೋಂಪು ತುಂಬಾ ಪರಿಣಾಮಕಾರಿಯಾಗಿ ಶಿಲೀಂಧ್ರ ಸೋಂಕನ್ನು ನಿವಾರಣೆ ಮಾಡುವುದು. ಬಾಯಿ, ಜನನೇಂದ್ರೀಯ ಭಾಗ, ಗಂಟಲು ಮತ್ತು ಕರುಳಿನಲ್ಲಿ ಕ್ಯಾಂಡಿಡಾ ಅಲ್ಬಿಕನ್ ನಿಂದ ಎನ್ನುವ ಶಿಲೀಂಧ್ರವು ಉಂಟು ಮಾಡುವ ಸೋಂಕನ್ನು ಇದು ದೂರ ಮಾಡುವುದು.

ಉತ್ತೇಜಕಕಾರಿ

ಉತ್ತೇಜಕಕಾರಿ

ಸ್ಟಾರ್ ಸೋಂಕು ರಕ್ತಸಂಚಾರವನ್ನು ಉತ್ತೇಜಿಸುವ ಮೂಲಕವಾಗಿ ಸಂಪೂರ್ಣ ಚಯಾಪಚಯ ಉತ್ತಮಪಡಿಸುವುದು. ಇದರಿಂದಾಗಿ ಸಂಧಿವಾತದಂತಹ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದು ನರ ವ್ಯವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತೇಜಿಸುವುದು. ನಿಮ್ಮನ್ನು ತುಂಬಾ ಜಾಗೃತವಾಗಿರಿಸುವುದು.

ಹುಳುಗಳನ್ನು ಕೊಲ್ಲುವುದು

ಹುಳುಗಳನ್ನು ಕೊಲ್ಲುವುದು

ಕರುಳಿನಲ್ಲಿರುವಂತಹ ಕೆಲವೊಂದು ಹಾನಿಕಾರಕ ಹುಳುಗಳನ್ನು ನಕ್ಷತ್ರ ಸೋಂಪು ಕೊಂದು ಹಾಕುವಂತಹ ಗುಣ ಹೊಂದಿದೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕರುಳಿನ ಹುಳು ನಿವಾರಣೆಗೆ ಪರಿಣಾಮಕಾರಿ.

ನಿದ್ರಾಜನಕ ಗುಣ

ನಿದ್ರಾಜನಕ ಗುಣ

ನಕ್ಷತ್ರ ಸೋಂಕಿನಲ್ಲಿ ನಿದ್ರಾಜನಕ ಗುಣಗಳು ಇವೆ. ನೀವು ಒಂದು ಕಪ್ ನಕ್ಷತ್ರ ಸೋಂಪಿನ ಚಾ ಕುಡಿದು ಮಲಗಿದರೆ ಆಗ ಖಂಡಿತವಾಗಿಯೂ ಒಳ್ಳೆಯ ನಿದ್ರೆ ಬರುವುದು ಮತ್ತು ನರಗಳು ಕೂಡ ಆರಾಮವಾಗಿರುವುದು.

ಆಂಟಿಆಕ್ಸಿಡೆಂಟ್

ಆಂಟಿಆಕ್ಸಿಡೆಂಟ್

ಸ್ಟಾರ್ ಸೋಂಪಿನಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಕೆಲವೊಂದು ಪ್ರಮುಖ ವಿಟಮಿನ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಎ ಇದೆ. ಇದು ಅಸ್ತಮಾ ಮತ್ತು ಬ್ರಾಂಕೈಟಿಸ್ ಕೆಮ್ಮಿಗೆ ತುಂಬಾ ಪರಿಣಾಮಕಾರಿ.

ಶೀತದಿಂದ ಪರಿಹಾರ

ಶೀತದಿಂದ ಪರಿಹಾರ

ಗಂಟಲಿನ ಊತ ಹಾಗೂ ಮೂಗು ಸೋರುವಿಕೆ ಸಮಸ್ಯೆಯಿದ್ದರೆ ಆಗ ನೀವು ನಕ್ಷತ್ರ ಸೋಂಪನ್ನು ಬಲಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಹಾಗೂ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ಜ್ವರ ಮತ್ತು ಇತರ ವೈರಲ್ ಸೋಂಕನ್ನು ಕಡಿಮೆ ಮಾಡುವುದು.

ಸಂಧಿವಾತ ಶಮನ

ಸಂಧಿವಾತ ಶಮನ

ನಕ್ಷತ್ರ ಸೋಂಪಿನಲ್ಲಿ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ಇದರಲ್ಲಿ ಇರುವಂತಹ ಎಣ್ಣೆ ಅಂಶವು ಶಮನ ನೀಡುವ ಗುಣ ಹೊಂದಿದೆ. ಇದು ಬೆನ್ನಿನ ಕೆಳಭಾಗದ ನೋವಿನಿಂದ ಪರಿಹಾರ ನೀಡುವುದು.

English summary

Some Amazing Health Benefits Of Star Anise in Kannada

Here are some wonderful health benefits of star anise, Read,
X
Desktop Bottom Promotion