For Quick Alerts
ALLOW NOTIFICATIONS  
For Daily Alerts

ಚರ್ಮ ನೀಡುವ ಈ ಸೂಚನೆ ಮಧುಮೇಹದ ಲಕ್ಷಣಗಳಿರಬಹುದು ಎಚ್ಚರ!

|

ನಮ್ಮ ದೈಹಿಕ ಆರೋಗ್ಯದ ಮೇಲೆ ಆಗುತ್ತಿರುವ ಏರುಪೇರು ಆಂತರಿಕ ಬದಲಾವಣೆಗಳನ್ನು ಒಂದಿಲ್ಲೊಂದು ರೀತಿಯಲ್ಲಿ ನಮಗೆ ಸಂದೇಶದ ಮೂಲಕ ಕಳುಹಿಸುತ್ತದೆ. ಪ್ರತಿಯೊಂದು ಕಾಯಿಲೆಗೂ ತನ್ನದೇ ಆದ ಲಕ್ಷಣಗಳಿದ್ದು, ಇವುಗಳು ಆರಂಭಿಕ ಹಂತದಲ್ಲೇ ತನ್ನದೇ ಆದ ಲಕ್ಷಣಗಳ ಮೂಲಕ ನಮಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡುತ್ತದೆ. ಈ ಮೂಲಕ ನೀವು ಆರಂಭಿಕ ಹಂತದಲ್ಲೇ ಎಚ್ಚೆತ್ತು ಚಿಕಿತ್ಸೆ ಆರಂಭಿಸಿದರೆ ಶೀಘ್ರವಾಗಿ ಗುಣಮುಖರಾಗಬಹುದು.

Skin Changes are warning signs of Diabetes in Kannada

ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸುಮಾರು 50 ಮಿಲಿಯನ್ ರೋಗಿಗಳು ಮಧುಮೇಹ ಹೊಂದಿದ್ದಾರೆ. ದೇಶದ ಬಹುಪಾಲು ಜನರು ಎದುರಿಸುತ್ತಿರುವ ಮಧುಮೇಹ ಒಮ್ಮೆ ಮನುಷ್ಯನಿಗೆ ಬಂದರೆ ಮತ್ತೆ ಸಾಯುವವರೆಗೆ ಹೋಗಲಾರದ ಕಾಯಿಲೆಯಾಗಿದೆ. ನಿಧಾನವಾಗಿ ಆವರಿಸುವ ಮಧುಮೇಹವು ಇತರ ಅಂಗಗಳ ಮೇಲೆ ಅಪಾರ ಹಾನಿ ಉಂಟುಮಾಡುತ್ತದೆ. ಮಧುಮೇಹ ಬರುವ ಆರಂಭಿಕ ದಿನಗಳಲ್ಲಿಇದು ತ್ವಚೆಯ ಮೇಲಿನ ಕೆಲವು ಬದಲಾವಣೆಗಳ ಮೂಲಕ ನಮಗೆ ಮಧುಮೇಹ ಬರುವ ಬಗ್ಗೆ ಮುನ್ಸೂಚನೆ ನೀಡುತ್ತದೆ. ಏನಿದು ಸೂಚನೆಗಳು?, ಯಾವೆಲ್ಲಾ ಬದಲಾವಣೆಗಳು ಆಗಬಹುದು ಮುಂದೆ ನೋಡೋಣ:

ಹಳದಿ, ಕೆಂಪು ಅಥವಾ ಕಂದು ಬಣ್ಣದ ಕಲೆಗಳು

ಹಳದಿ, ಕೆಂಪು ಅಥವಾ ಕಂದು ಬಣ್ಣದ ಕಲೆಗಳು

ನೆಕ್ರೋಬಯೋಸಿಸ್ ಲಿಪೊಯಿಡಿಕಾ ಎಂದು ಕರೆಯಲ್ಪಡುವ ಚರ್ಮದ ಈ ಸ್ಥಿತಿಯು ನೋಡಲು ಮೊಡವೆಯಂತೆ ಕಾಣುತ್ತದೆ, ಆದರೆ ಆರಂಭಿಕ ಹಂತದಲ್ಲಿ ಚರ್ಮದ ಮೇಲೆ ದಪ್ಪದಾದ ಉಬ್ಬಿನ ರೀತಿ ಮೂಡುತ್ತದೆ. ನಂತರದಲ್ಲಿ, ಈ ಉಬ್ಬುಗಳು ಗಟ್ಟಿಯಾಗಿ ಚರ್ಮದ ಮೇಲೆ ಕಲೆಗಳಾಗಿ ಬದಲಾಗುತ್ತವೆ. ಈ ಕಲೆಗಳಾದ ಪ್ರದೇಶದಲ್ಲಿ ಅತಿಯಾದ ತುರಿಕೆ ಮತ್ತು ಸ್ಪರ್ಶಿಸಿದಾಗ ನೋವಾಗುತ್ತದೆ. ಇದು ಮಧುಮೇಹದ ಆರಂಭಿಕ ಹಂತದಲ್ಲಿ ಎದುರಾಗುವ ಸಮಸ್ಯೆಯಾಗಿದ್ದು ನಂತರ ದೀರ್ಘಕಾಲ ಕಾಡುತ್ತದೆ.

ಗಾಢವಾದ ಕಲೆಗಳು ಮತ್ತು ತ್ವಚೆ ಮೃದು ಎನಿಸುವ ಭಾವನೆ

ಗಾಢವಾದ ಕಲೆಗಳು ಮತ್ತು ತ್ವಚೆ ಮೃದು ಎನಿಸುವ ಭಾವನೆ

ನಿಮ್ಮ ಕುತ್ತಿಗ, ಕಂಕುಳು, ತೊಡೆಸಂದು ಅಥವಾ ಇತರೆ ಭಾಗಗಳ ಚರ್ಮದಲ್ಲಿ ಗಾಢವಾದ ಕಪ್ಪು ಕಲೆ ಅಥವಾ ಆ ಭಾಗದಲ್ಲಿ ಚರ್ಮ ವೆಲ್ವೆಟ್‌ ಬಟ್ಟೆಯ ರೀತಿ ಮೃದು ಎನಿಸಬಹುದು. ಇದು ನಿಮ್ಮ ರಕ್ತದಲ್ಲಿ ಹೆಚ್ಚುವರಿ ಇನ್ಸುಲಿನ್ ಇರುವ ಸಾಧ್ಯತೆಯ ಮುನ್ಸೂಚನೆಯಾಗಿದೆ. ಈ ಸ್ಥಿತಿಯನ್ನು ಅಕಾಂಥೋಸಿಸ್ ನಿಗ್ರಿಕನ್ಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಹೆಚ್ಚಾಗಿ ಮಧುಮೇಹದ ಆರಂಭಿಕ ಹಂತದ ಎಚ್ಚರಿಕೆಯಾಗಿದೆ.

ಬಬ್ಬೆ ರೀತಿಯ ಗುಳ್ಳೆಗಳು

ಬಬ್ಬೆ ರೀತಿಯ ಗುಳ್ಳೆಗಳು

ಕೈಕಾಲುಗಳ ಮೇಲೆ ದೊಡ್ಡದಾದ ಗುಳ್ಳೆ ಅಥವಾ ಗುಳ್ಳೆಗಳ ಸಮೂಹವೇ ಇರಬಹುದು. ಇದು ನೋಡಲು ಸುಟ್ಟಾಗ ಚರ್ಮದ ಮೇಲೆ ಉಂಟಾಗುವ ನೀರು ತುಂಬಿರುವ ಗುಳ್ಳೆ ಅಥವಾ ಬಬ್ಬೆಯ ರೀತಿ ಕಾಣುತ್ತದೆ. ಇದನ್ನು ಬುಲೋಸಿಸ್ ಡಯಾಬಿಟಿಕೊರಮ್ ಅಥವಾ ಡಯಾಬಿಟಿಕ್ ಬುಲ್ಲಿ ಎಂದು ಕರೆಯಲಾಗುತ್ತದೆ.

ಮಧುಮೇಹದಿಂದ ಉಂಟಾಗುವ ಈ ಗುಳ್ಳೆಗಳು ನೋವಾಗದಿರಬಹುದು. ನೋವು ಇಲ್ಲ ಎಂದು ಇದನ್ನು ನಿರ್ಲಕ್ಷಿಸುವುದು ತಪ್ಪು, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಪರೀಕ್ಷೆ ಮಾಡಿಸಿಕೊಳ್ಳಿ. ಹಲವಾರು ವರ್ಷಗಳಿಂದ ತಮ್ಮ ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದವರಲ್ಲಿ ಮಧುಮೇಹ ಗುಳ್ಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಬಹುತೇಕರಲ್ಲಿ ಮಧುಮೇಹ ಆರಂಭವಾಗುವ ಮೊದಲ ಹಂತದಲ್ಲಿ ಈ ರೀತಿಯ ಗುಳ್ಳೆಗಳು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಗಾಯಗಳು

ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಗಾಯಗಳು

ನಿಮ್ಮ ದೇಹದ ಮೇಲೆ ಆದ ಗಾಯವು ದೀರ್ಘ ಕಾಲ ಗುಣವಾಗದೇ ಇದ್ದರೆ ತಡಮಾಡದೆ ಇದು ಮಧುಮೇಹದ ಅಲ್ಸರ್‌ ಆಗುವ ಮೊದಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ಮಧುಮೇಹ ಇರುವ ಹಲವಾರು ಮಂದಿಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸಕ್ರಿಯಗೊಳಿಸುವಿಕೆಯು ತಡವಾಗುವಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಆಗಾಗ್ಗೆ ನಿಮ್ಮ ಚರ್ಮದ ಮೇಲಾಗುವ ಗಾಯಗಳ ಬಗ್ಗೆ ಅದರಲ್ಲೂ ನಿಮ್ಮ ಕಾಲಿನ ಮೇಲೆ ಆಗುವ ಯಾವುದೇ ಗಾಯಗಳನ್ನು ನಿರ್ಲಕ್ಷಿಸಲೇಬೇಡಿ.

ಕಣ್ಣುರೆಪ್ಪೆಗಳ ಸುತ್ತ ಹಳದಿ ಬಣ್ಣದ ಕಲೆಗಳು

ಕಣ್ಣುರೆಪ್ಪೆಗಳ ಸುತ್ತ ಹಳದಿ ಬಣ್ಣದ ಕಲೆಗಳು

ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿನ ಹೆಚ್ಚಿನ ಕೊಬ್ಬು ಕಣ್ಣುಗಳ ಸುತ್ತಲೂ ಹಳದಿ ಬಣ್ಣದ ಕಲೆಗಳಿಗೆ ಕಾರಣವಾಗಬಹುದು. ಅನಿಯಂತ್ರಿತ ಮಧುಮೇಹವು ಕ್ಸಾಂಥೆಲಾಸ್ಮಾ ಎಂಬ ಸ್ಥಿತಿಗೆ ಕಾರಣವಾಗಬಹುದು, ಇದು ಅಂತಹ ತೇಪೆಗಳಿಗೆ ಕಾರಣವಾಗುತ್ತದೆ. ನಿಮ್ಮ ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಕೂಡಲೇ ಲಿಪಿಡ್ ಪ್ರೊಫೈಲ್ ಮತ್ತು ಎಚ್‌ಬಿ1 ಎಸಿ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ.

Read more about: skin
English summary

​Skin changes that can be warning signs of diabetes

Here we are discussing about Skin Changes are warning signs of Diabetes in Kannada. English summary: People who have diabetes tend to get skin infections. If you have a skin infection or any skin condition that irks you, you must speak to your doctor and also get your blood sugar levels checked. Read more.
Story first published: Wednesday, June 2, 2021, 13:45 [IST]
X
Desktop Bottom Promotion