For Quick Alerts
ALLOW NOTIFICATIONS  
For Daily Alerts

ಕಣ್ಣು ಹಾಗೂ ನಾಲಗೆ ಒಣಗುತ್ತಿದೆಯೇ? ಸ್ಜೋಗ್ರೆನ್ಸ್ ಕಾಯಿಲೆ ಲಕ್ಷಣಗಳಾಗಿರಬಹುದು

|

ಸ್ಜೋಗ್ರೆನ್ಸ್ ಎನ್ನುವ ಕಾಯಿಲೆ ಬಗ್ಗೆ ಗೊತ್ತಿದೆಯೇ? ಇದೊಂದು ಅಪರೂಪದ ಕಾಯಿಲೆಯಾಗಿದ್ದರೂ ಮಾರಾಣಾಂತಿಕ ಕಾಯಿಲೆ ಅಲ್ಲ. ವಿಶ್ವದಲ್ಲಿ ಶೇ.4ರಷ್ಟು ಜನರಲ್ಲಿ ಈ ಕಾಯಿಲೆ ಕಂಡು ಬರುತ್ತದೆ. ಈ ಕಾಯಿಲೆ ಕಂಡು ಬಂದಾಗ ರೋಗ ಲಕ್ಷಣಗಳ ಅರಿವು ಇದ್ದರೆ ಇದಕ್ಕೆ ಚಿಕಿತ್ಸೆ ಪಡೆಯುವುದು ಸುಲಭವಾಗುವುದು. ಆದ್ದರಿಂದ ಈ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ನೋಡಿ ಇಲ್ಲಿದೆ.

ಸ್ಜೋಗ್ರೆನ್ಸ್ ಎನ್ನುವುದು ಸ್ವಯಂ ನಿರೋಧಕ ಕಾಯಿಲೆಯಾಗಿದೆ, ಇದು ರೋಗ ನಿರೋಧಕಶಕ್ತಿಯನ್ನು ಕುಗ್ಗಿಸುವ ಕಾಯಿಲೆಯಾಗಿದೆ. ಈ ಕಾಯಿಲೆಯಲ್ಲಿ ರೋಗ ನಿರೋಧಕ ಕಣಗಳನ್ನು ಸ್ನಾಯುಗಳೇ ನಾಶ ಮಾಡುತ್ತವೆ. ಈ ಕಾಯಿಲೆಗೆ ನಿಖರ ಕಾರಣ ಏನೆಂದು ತಿಳಿಯದಿದ್ದರೂ ಬ್ಯಾಕ್ಟಿರಿಯಾ ಅಥವಾ ವೈರಸ್‌ ಸೋಂಕಿನಿಂದ ಈ ರೀತಿ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತದೆ ಹಾಗೂ ಪರಿಸರದಿಂದಲೂ ಉಂಟಾಗುತ್ತದೆ.

sjogrens Syndrome

ಈ ಕಾಯಿಲೆಯಲ್ಲಿ ಮೊದಲು ಉಂಟಾಗುವುದೇ ನಾಲಗೆ ಹಾಗೂ ಕಣ್ಣುಗಳು ಒಣಗುವುದು. ಎಂಜಲು ಹಾಗೂ ಕಣ್ಣೀರಿಗೆ ಕಾರಣವಾಗುವ ಗ್ರಂಥಿಗಳಿಗೆ ಹಾನಿಯಾಗುವುದರಿಂದ ನಾಲಗೆ ಒಣಗುತ್ತದೆ, ಕಣ್ಣಿನಲ್ಲಿ ನೀರು ಬರುವುದಿಲ್ಲ, ನಿಧಾನಕ್ಕೆ ದೇಹದ ಇತರ ಭಾಗಗಳಾದ ಕಿಡ್ನಿ, ಲಿವರ್, ಮೂಳೆ, ಶ್ವಾಸಕೋಶ, ತ್ವಚೆ, ನರಗಳು ಹಾಗೂ ಥೈರಾಯ್ಡ್ ಗ್ರಂಥಿಗೆ ತೊಂದರೆ ಉಂಟಾಗುವುದು. ಅದರಲ್ಲೂ ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ವೈದ್ಯರು ಸ್ಜೋಗ್ರೆನ್ಸ್ ಎರಡು ರೀತಿಯಲ್ಲಿ ವರ್ಗೀಕರಣ ಮಾಡಿದ್ದಾರೆ

1. ಮೂಳೆಗೆ ಸಂಬಂಧಿಸಿದ ಕಾಯಿಲೆ ಇರುವವರಲ್ಲಿ ಕಂಡು ಬರುವ ಸ್ಜೋಗ್ರೆನ್ಸ್
2. ಮೂಳೆ ಸಮಸ್ಯೆ ಇಲ್ಲದೇ ಇರುವವರಲ್ಲಿ ಕಂಡು ಬರುವ ಸ್ಜೋಗ್ರೆನ್ಸ್

ಸ್ಜೋಗ್ರೆನ್ಸ್ ರೋಗದ ಲಕ್ಷಣಗಳು

* ಕಣ್ಣುಗಳು ಒಣಗುವುದು ಹಾಗೂ ಕಣ್ಣಿನಲ್ಲಿ ಕಣ್ಣೀರು ಬರುವುದಿಲ್ಲ. ಕಣ್ಣಿನಲ್ಲಿ ಏನೋ ಮರಳು ಸಿಕ್ಕಿಹಾಕಿಕೊಂಡ ಅನುಭವ ಉಂಟಾಗುವುದು.
* ಈ ಕಾಯಿಲೆ ಕಾಣಿಸಿಕೊಂಡಾಗ ಪ್ರಕಾಶಮಾನವಾದ ಬೆಳಕನ್ನು ನೋಡಲು ಸಾಧ್ಯವಾಗುವುದಿಲ್ಲ.
* ಕಣ್ಣಿನಲ್ಲಿ ಹುಣ್ಣುಗಳು ಕಂಡು ಬರುವುದು
ಕಣ್ಣು ಒಣಗಿದ ತಕ್ಷಣ ಸ್ಜೋಗ್ರೆನ್ಸ್ ಕಾಯಿಲೆ ಇರಬಹುದು ಎಂದು ಆತಂಕ ಪಡಬೇಡಿ, ಆದರೆ ಕಣ್ಣು ಒಣಗುವುದರ ಜತೆಗೆ ಈ ಲಕ್ಷಣಗಳು ಕಂಡು ಬಂದರೆ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.
* ಬಾಯಿ ಒಣಗುವ ಅನುಭವ ಉಂಟಾಗುತ್ತದೆ, ಎಂಜಲು ಉತ್ಪತ್ತಿಯಾಗುವುದಿಲ್ಲ, ತುಟಿಗಳಲ್ಲೂ ಬಿರಕು ಕಂಡು ಬರುವುದು.
* ಸಂಧಿಗಳಲ್ಲಿ ನೋವು
* ಮಹಿಳೆಯರಲ್ಲಿ ಯೋನಿಯಲ್ಲಿ ತೇವಾಂಶ ಕಡಿಮೆಯಾಗಿ ಒಣಗಿದ ಅನುಭವ ಉಂಟಾಗುವುದು.
* ಆಗಾಗ ಒಣಕೆಮ್ಮು ಬರುವುದು
* ತಲೆಸುತ್ತು
* ಮಾತನಾಡಲು ತೊಂದರೆ ಉಂಟಾಗುವುದು
* ಕಣ್ಣುಗಳು ಮಂಜಾಗುವುದು
* ತ್ವಚೆಯಲ್ಲಿ ಗುಳ್ಳೆಗಳು ಏಳುವುದು
* ಎಂಜಲು ನುಂಗಲು ಕಷ್ಟವಾಗುವುದು

ಯಾರಲ್ಲಿ ಸ್ಜೋಗ್ರೆನ್ಸ್ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ

* ಪುರುಷರಿಗಿಂತ ಮಹಿಳೆಯರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು
* 40 ವರ್ಷ ಮೇಲ್ಪಟ್ಟವರಲ್ಲಿ ಈ ಕಾಯಿಲೆ ಕಂಡು ಬರುವುದು
* ಸಂಧಿವಾತದ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಕಮಡು ಬರುವುದು.

ಸ್ಜೋಗ್ರೆನ್ಸ್ ಕಾಯಿಲೆ ಪತ್ತೆ ಹೇಗೆ?

ರಕ್ತ ಪರೀಕ್ಷೆ: ದೇಹದಲ್ಲಿ ಬಿಳಿ ರಕ್ತಕಣಗಳು ಹಾಗೂ ಕೆಂಪು ರಕ್ತಕಣಗಳು ಎಷ್ಟಿದೆ ಎಂದು ತಿಳಿಯಲು ಈ ಪರೀಕ್ಷೆ ಮಾಡಲಾಗುವುದು.
ಕಣ್ಣಿನ ಪರೀಕ್ಷೆ: ಈ ಕಾಯಿಲೆ ಪ್ರಮುಖ ಲಕ್ಷಣ ಕಣ್ಣು ಒಣಗುವುದರಿಂದ ಕಣ್ಣಿನ ಪರೀಕ್ಷೆ ಮಾಡಸಬೇಕಾಗುತ್ತದೆ.
ಎಂಜಲು ಪರೀಕ್ಷೆ: ಬಾಯಲ್ಲಿ ಎಂಜಲು ಉತ್ಪತ್ತಿ ಮಾಡುವ ಗ್ರಂಥಿಗಳ ಬಗ್ಗೆ ತಿಳಿಯಲು ಈ ಪರೀಕ್ಷೆ ಮಾಡಲಾಗುವುದು.
* ಬಯೋಸ್ಪೈ: ಲಿಪ್‌ ಬಯೋಸ್ಪೈ ಬಳಸಿ ತುಟಿಯಲ್ಲಿರುವ ಚಿಕ್ಕ ಸ್ನಾಯುವನ್ನು ತೆಗೆದು ಪರೀಕ್ಷೆ ಮಾಡಲಾಗುವುದು.

ಸ್ಜೋಗ್ರೆನ್ಸ್ ಕಾಯಿಲೆ ಚಿಕಿತ್ಸೆ:

ಪರೀಕ್ಷೆಯಲ್ಲಿ ಸ್ಜೋಗ್ರೆನ್ಸ್ ಕಾಯಿಲೆ ಪತ್ತೆಯಾದರೆ Disease-modifying antirheumatic ಡ್ರಗ್ಸ್ ಹಾಗೂ ಆ್ಯ ಫಂಗಲ್ ಚಿಕಿತ್ಸೆ ನೀಡಲಾಗುವುದು. ಕೆಲವೊಮದು ಕೇಸ್‌ಗಳಲ್ಲಿ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕಣ್ಣು ಒಣಗುವುದನ್ನು ತಡೆಗಟ್ಟುವುದು.

English summary

sjogren's Syndrome: Causes, Symptoms,Treatment

Sjogren's syndrome is an auto-immune disorder where your immune system mistakenly attacks the body's cells and tissues. Here are Causes, Symptoms,Treatment. Take a look.
X
Desktop Bottom Promotion