For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲೇ ಅತೀ ಹೆಚ್ಚು ಪೋಷಕಾಂಶ ಇರುವ ಬೆಸ್ಟ್ ಆಹಾರ ವಾಲ್ನಟ್‌!

|

ಇತ್ತೀಚೆಗೆ ಮನುಷ್ಯನಿಗೆ ಎದುರಾಗುತ್ತಿರುವ ಕಾಯಿಲೆಗಳ ಪ್ರಮಾಣವನ್ನು ನೋಡಿದರೆ ತುಂಬಾ ಭಯವಾಗುತ್ತದೆ. ಕೆಲವೊಮ್ಮೆ ನಾವು ಬೇರೆಯವರಿಗೆ ಹೋಲಿಸಿಕೊಂಡರೆ ಇಷ್ಟೊಂದು ದುರ್ಬಲ ಆಗಿದ್ದೀವಾ ಎನಿಸುತ್ತದೆ. ಇಂದಿನ ಸಂದರ್ಭ ನೋಡಿದರೆ ನಮ್ಮ ದೇಹದ ರೋಗ - ನಿರೋಧಕ ಶಕ್ತಿ ನಮಗೆ ಯಾವ ಕ್ಷಣದಲ್ಲಿ ಬೇಕಾದರೂ ಕೈ ಕೊಡಬಹುದು. ನಮ್ಮ ಕಣ್ಣಿಗೆ ಕಾಣದ ರೋಗ - ನಿರೋಧಕ ಶಕ್ತಿ ಒಮ್ಮೆ ದುರ್ಬಲಗೊಂಡರೆ ಕ್ಷಣ ಮಾತ್ರದಲ್ಲಿ ನಮಗೆ ಹೋಲ್ ಸೇಲ್ ರೂಪದಲ್ಲಿ ಕಾಯಿಲೆಗಳು ಅವರಸಿಕೊಳ್ಳುತ್ತವೆ. ಇದಕ್ಕೆ ಪುಷ್ಟಿ ಕೊಡುವಂತೆ ಇಂದು ನಮ್ಮ ಜೀವನ ಶೈಲಿ ಕೂಡ ಅದೇ ರೀತಿ ಇದೆ. ಕೇವಲ ದುಡಿಮೆ ದುಡಿಮೆ ಎಂದು ನಮ್ಮ ಆರೋಗ್ಯವನ್ನು ನಾವೇ ಕಡೆಗಣಿಸುತ್ತಿದ್ದೇವೆ. ಬೇರೆಯವರ ಬಗ್ಗೆ ಇರುವಷ್ಟು ಕಾಳಜಿ ನಮಗೆ ನಮ್ಮ ಬಗ್ಗೆ ಇಲ್ಲದಾಗಿದೆ.

Reasons Why Walnuts Are The Worlds Healthiest Food in Kannada

ಹೀಗಿರುವಾಗ ನಾವು ಸೇವನೆ ಮಾಡುತ್ತಿರುವ ಆಹಾರ ನಮ್ಮ ದೇಹಕ್ಕೆ ಯಾವ ಪ್ರಮಾಣದಲ್ಲಿ ಶಕ್ತಿ ಮತ್ತು ಸದೃಢತೆಯನ್ನು ಒದಗಿಸುತ್ತದೆ, ನಮ್ಮ ಆಹಾರ ಪದ್ಧತಿಯಲ್ಲಿ ನಾವು ಸೇರಿಸಿಕೊಂಡಿರುವ ಆಹಾರಗಳು ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನಿಜವಾಗಲೂ ಕೊಡುತ್ತಿವೆಯೇ, ದಿನ ಕಳೆದಂತೆ ನಮ್ಮ ದೇಹದಲ್ಲಿ ಕಡಿಮೆಯಾಗುವ ಶಕ್ತಿಯನ್ನು ಮತ್ತೊಮ್ಮೆ ವಾಪಸ್ ಪಡೆಯಲು ನಾವು ಯಾವ ಹೊಸ ಆಹಾರಗಳನ್ನು ಸೇರಿಸಿಕೊಳ್ಳಬೇಕು, ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿರುವ ಯಾವ ಆಹಾರಗಳಿಂದ ನಾವು ದೂರ ಉಳಿಯಬೇಕು ಎಂಬುದನ್ನು ಆಲೋಚಿಸುವಷ್ಟು ಇಂದು ನಮಗೆ ಸಮಯ ಇಲ್ಲದಾಗಿದೆ ಜೊತೆಗೆ ಅಷ್ಟೊಂದು ತಾಳ್ಮೆಯೂ ಇಲ್ಲ ಎಂದು ಹೇಳಬಹುದು. ಇದ್ದಷ್ಟು ದಿನ ಇದ್ದು ಒಂದು ದಿನ ಹೋಗೋಣ ಎಂಬಂತೆ ಎಲ್ಲರೂ ಬದುಕುತ್ತಿದ್ದೇವೆ ಎನಿಸುತ್ತದೆ. ನಮ್ಮ ಕುಟುಂಬದವರ ಬಗ್ಗೆ ಅಲ್ಪ ಸ್ವಲ್ಪ ಕಾಳಜಿ ನಮಗಿದ್ದರೆ ನಮ್ಮ ಆರೋಗ್ಯದ ರಕ್ಷಣೆ ತಾನಾಗಿಯೇ ಆಗುತ್ತದೆ.

ನಮ್ಮ ಇಂದಿನ ಆಹಾರ ಪದ್ಧತಿ ಆರೋಗ್ಯಕರವಾಗಿ ಇರಬೇಕೆಂದರೆ ನಾವು ಕೆಲವೊಂದು ಸಾಂಪ್ರದಾಯಿಕ ಆಹಾರಗಳನ್ನು ಸೇವನೆ ಮಾಡಲು ಮುಂದಾಗಬೇಕು. ಡ್ರೈ ಫ್ರೂಟ್ಸ್ ಗಳು ಎಲ್ಲರ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬ ಮಾತಿದೆ. ಇವುಗಳಲ್ಲಿ ಹೆಚ್ಚು ಉಪಯೋಗಿಸಲ್ಪಡುವ ದ್ರಾಕ್ಷಿ, ಗೋಡಂಬಿ, ಬಾದಾಮಿ ಸಾಧಾರಣವಾಗಿ ನಮ್ಮ ದಿನ ಬಳಕೆಯಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಇದ್ದೇ ಇರುತ್ತವೆ. ಆದರೆ ವಾಲ್ನಟ್ ಗಳು ನಮಗೆ ಪರಿಚಯವಿದ್ದರೂ ಕೇವಲ ಒಂದು ಸಮಯದಲ್ಲಿ ಮಾತ್ರ ಸೇವಿಸುವಂತೆ ನಮ್ಮನ್ನು ನಾವು ಮಿತಿಯಲ್ಲಿ ಇಟ್ಟುಕೊಂಡಿರುತ್ತೇವೆ. ಆದರೆ ನಮಗೆ ತಿಳಿಯದ ಒಂದು ವಿಚಾರವೆಂದರೆ ವಾಲ್ನಟ್ ಗಳು ಬೇರೆ ಬಗೆಯ ಡ್ರೈಫ್ರೂಟ್ಸ್ ಗಳಿಗೆ ಹೋಲಿಸಿದರೆ ತುಂಬಾ ಹೆಚ್ಚಿನ ಪ್ರಮಾಣದ ಅದರಲ್ಲೂ ನಮ್ಮ ದೇಹಕ್ಕೆ ಪ್ರತಿ ದಿನವೂ ಬೇಕಾಗಿರುವಂತಹ ಅಗತ್ಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿವೆ.

ಈ ಲೇಖನದಲ್ಲಿ ನಾವು ವಾಲ್ನಟ್ ಗಳಿಗೆ ಏಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟು ದಿನ ನಿತ್ಯ ಸೇವನೆ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಎಂಬುದನ್ನು ಓದಿ ತಿಳಿದುಕೊಳ್ಳಬಹುದು.

1 ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕ ಸತ್ವಗಳು

1 ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕ ಸತ್ವಗಳು

ಸಾಮಾನ್ಯವಾಗಿ ಸಸ್ಯಹಾರಿಗಳಿಗೆ ಹೋಲಿಸಿದರೆ ಮಾಂಸಹಾರಿಗಳು ಹೆಚ್ಚು ಬಲಶಾಲಿಯಾಗಿರುತ್ತಾರೆ ಮತ್ತು ಸಧೃಡವಾಗಿರುತ್ತಾರೆ. ಏಕೆಂದರೆ ಅವರು ಮಾಂಸಪ್ರಿಯರಾಗಿರುವುದರಿಂದ ಎಡೆಬಿಡದೆ ಅವರ ದೇಹಕ್ಕೆ ಪ್ರತಿ ಬಾರಿಯೂ ಪ್ರೋಟೀನ್ ಅಂಶ ಸಿಗುತ್ತಲೇ ಇರುತ್ತದೆ. ಇದನ್ನು ನೋಡಿ ಸಸ್ಯಹಾರಿಗಳು ನಾವು ಸೇವಿಸುವ ಆಹಾರಗಳಲ್ಲಿ ಅಷ್ಟೊಂದು ಪ್ರಮಾಣದ ಪ್ರೋಟಿನ್ ಅಂಶ ಎಲ್ಲಿ ಸಿಗುತ್ತದೆ ಎಂದು ಬೇಸರ ಪಟ್ಟುಕೊಳ್ಳುವುದುಂಟು ಆದರೆ ನಿಜವಾದ ವಿಚಾರವೇ ಬೇರೆ ಇದೆ. ವಾಲ್ನಟ್ ಗಳು ನಿಮಗೆಲ್ಲಾ ಚಿರಪರಿಚಿತ. ಇವುಗಳಲ್ಲಿ ಸಸ್ಯಹಾರಿಗಳಿಗೆ ಬೇಕಾದಂತಹ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳೂ ಸಿಗುತ್ತವೆ. ಅದೇ ರೀತಿ ಸಸ್ಯಾಹಾರಿಗಳ ದೇಹದ ಬಲವನ್ನು ಮತ್ತು ಮಾಂಸ - ಖಂಡಗಳ ದಟ್ಟತೆಯನ್ನು ಹೆಚ್ಚು ಮಾಡುವ ಪ್ರೊಟೀನ್ ಅಂಶ ಕೂಡ ಇವುಗಳಲ್ಲಿದೆ. ಸಂಶೋಧಕರ ಅಧ್ಯಯನ ವರದಿಯ ಪ್ರಕಾರ ವಾಲ್ನಟ್ ಗಳಲ್ಲಿ ಏನಿಲ್ಲಾ ಅಂದರೂ ಸುಮಾರು 13 % ರಿಂದ 18 % ಪ್ರೋಟೀನ್ ಅಂಶಗಳೇ ತುಂಬಿರುತ್ತವೆ. ಶೇಕಡ 60 % ಕೊಬ್ಬಿನ ಅಂಶದೊಂದಿಗೆ ಅತಿ ಹೆಚ್ಚು ಶಕ್ತಿಯ ಪ್ರಮಾಣವನ್ನು ವಾಲ್ನಟ್ ತಮ್ಮಲ್ಲಿ ಹೊಂದಿರುತ್ತವೆ. ಇನ್ನು ಕ್ಯಾಲ್ಸಿಯಂ ವಿಚಾರಕ್ಕೆ ಬರುವುದಾದರೆ ಸುಮಾರು 100 ಗ್ರಾಂ ವಾಲ್ನಟ್ ಗಳಲ್ಲಿ 98 ಮಿಲಿ ಗ್ರಾಂ ಕ್ಯಾಲ್ಸಿಯಂ ಅಂಶ ಸಿಗುತ್ತದೆ. ಇದರೊಂದಿಗೆ ಪೊಟ್ಯಾಶಿಯಂ, ಫಾಸ್ಫರಸ್, ಮೆಗ್ನೀಷಿಯಂ, ಫೋಲೇಟ್ ಮತ್ತು ನಾರಿನ ಅಂಶ ಹೇರಳವಾಗಿ ಕಂಡು ಬರುತ್ತವೆ. ಮನುಷ್ಯನ ದೇಹದ ಕಾರ್ಯ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ಒಮೆಗಾ - 3 ಫ್ಯಾಟಿ ಆಸಿಡ್ ಮತ್ತು ಆಲ್ಫಾ - ಲಿನೊಲೆನಿಕ್ ಆಸಿಡ್ ಪ್ರಮಾಣ ಕೂಡ ವಾಲ್ನಟ್ ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಒಬ್ಬ ಆರೋಗ್ಯವಂತ ಸಸ್ಯಹಾರಿ ವ್ಯಕ್ತಿಗೆ ತನ್ನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಹೋಗಲು ಇದಕ್ಕಿಂತ ಇನ್ನೇನು ಬೇಕು ?

2. ವಾಲ್ನಟ್ ಗಳಲ್ಲಿ ಆಂಟಿ - ಆಕ್ಸಿಡೆಂಟ್ ಗಳ ಮಹಾಪೂರವೇ ಇದೆ

2. ವಾಲ್ನಟ್ ಗಳಲ್ಲಿ ಆಂಟಿ - ಆಕ್ಸಿಡೆಂಟ್ ಗಳ ಮಹಾಪೂರವೇ ಇದೆ

ಮುಖ್ಯವಾಗಿ ಯಾವುದೇ ಆಂಟಿ - ಆಕ್ಸಿಡೆಂಟ್ ಗಳ ಕೆಲಸ ಎಂದರೆ ನಮ್ಮ ದೇಹದಲ್ಲಿ ಕಂಡು ಬರುವ ಫ್ರೀ - ರಾಡಿಕಲ್ ಗಳ ವಿರುದ್ಧ ಹೋರಾಡಿ ನಮ್ಮ ದೇಹವನ್ನು ಹಲವಾರು ಮಾರಕ ಕಾಯಿಲೆಗಳಿಂದ ಮತ್ತು ದೀರ್ಘ ಕಾಲ ಕಾಡುವ ಸೋಂಕುಗಳಿಂದ ರಕ್ಷಣೆ ಮಾಡುವುದು. ವೈದ್ಯರ ಪ್ರಕಾರ ಕೆಲವೊಮ್ಮೆ ಅನುವಂಶೀಯವಾಗಿ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಇರುವ ವ್ಯಕ್ತಿ ಆಂಟಿ - ಆಕ್ಸಿಡೆಂಟ್ ಗಳು ಹೆಚ್ಚಾಗಿರುವ ಆಹಾರಗಳನ್ನು ತನ್ನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುತ್ತಾ ಬರುವುದರಿಂದ ಮುಂದೊಂದು ದಿನ ತನಗೆ ಕ್ಯಾನ್ಸರ್ ಬರಬಹುದಾದ ಸಾಧ್ಯತೆಯಿಂದ ತಪ್ಪಿಸಿಕೊಳ್ಳಬಹುದು. ಅಂತಹ ಆಹಾರಗಳ ಪಟ್ಟಿಯಲ್ಲಿ ವಾಲ್ನಟ್ ಗಳು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತವೆ. ಏಕೆಂದರೆ ಇವುಗಳಲ್ಲಿ ವಿಟಮಿನ್ ' ಇ ' ಅಂಶ ಹೆಚ್ಚಾಗಿ ಕಂಡು ಬರುತ್ತದೆ. ವಿಟಮಿನ್ ' ಇ ' ಅಂಶ ಎನ್ನುವುದು ವಾಲ್ನಟ್ ಗಳಲ್ಲಿ ಕಂಡು ಬರುವ ಒಂದು ನೈಸರ್ಗಿಕ ಆಂಟಿ - ಆಕ್ಸಿಡೆಂಟ್ ಅಂಶ. ಇದರ ಜೊತೆಗೆ ವಾಲ್ನಟ್ ಗಳಲ್ಲಿ ' ಪಾಲಿಫಿನಾಲ್ ' ಮತ್ತು ' ಫೈಟೋ ಮೆಲಟೋನಿನ್ ' ಎಂಬ ' ಫೈಟೋಸ್ಟರೋಲ್ ' ಅಂಶಗಳು ಯಥೇಚ್ಛವಾಗಿದ್ದು, ಇವುಗಳು ಸಹ ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಹೊಂದಿವೆ. ಹಾಗಾಗಿ ಮನುಷ್ಯನ ಆರೋಗ್ಯ ರಕ್ಷಣೆಗೆ ವಾಲ್ನಟ್ ಗಳು ಸಹಕಾರಿಯಾಗಿ ನಿಲ್ಲಬಲ್ಲವು ಎಂದು ಊಹಿಸಬಹುದು. 3 ಆಲ್ಫಾ - ಲಿನೊಲೆನಿಕ್ ಆಸಿಡ್ ಪ್ರಭಾವ : - ಸಸ್ಯಹಾರ ಪದಾರ್ಥಗಳಿಂದ ಲಭ್ಯವಾಗುವ ಒಮೆಗಾ - 3 ಪಾಲಿ ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಅಂಶಗಳ ಗುಂಪಿಗೆ ಸೇರಿದ ಆಲ್ಫಾ - ಲಿನೋಲೇನಿಕ್ ಆಸಿಡ್ ಒಬ್ಬ ವ್ಯಕ್ತಿಯ ಹೃದಯದ ಆರೋಗ್ಯದ ವಿಚಾರದಲ್ಲಿ ಒಳ್ಳೆಯ ಪ್ರಭಾವ ಬೀರುತ್ತದೆ. ವಾಲ್ನಟ್ ಗಳಲ್ಲಿ ಕಂಡು ಬರುವ ಒಟ್ಟು ಕೊಬ್ಬಿನಂಶದ ಪ್ರಮಾಣದಲ್ಲಿ ಶೇಕಡ 8 ರಿಂದ 14 % ಆಲ್ಫಾ - ಲಿನೊಲೆನಿಕ್ ಆಮ್ಲದ ಪ್ರಮಾಣವೇ ಇರುತ್ತದೆ. ಪ್ರಮುಖವಾಗಿ ದೇಹದ ರಕ್ತ ನಾಳಗಳ ಮೇಲೆ ಇದರ ಪ್ರಭಾವ ಬೀರಿ ರಕ್ತ ನಾಳಗಳನ್ನು ಹಿಗ್ಗಿಸಿ ರಕ್ತ ಸಂಚಾರವನ್ನು ಸರಾಗಗೊಳಿಸಿ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಆಲ್ಫಾ - ಲಿನೊಲೆನಿಕ್ ಆಸಿಡ್ ಅಂಶದ ಪಾತ್ರವನ್ನು ಮರೆಯುವಂತಿಲ್ಲ. ಹಾಗಾಗಿ ವಾಲ್ನಟ್ ಗಳನ್ನು ನಿಯಮಿತವಾಗಿ ಸೇವನೆ ಮಾಡುವವರಿಗೆ ರಕ್ತದ ಒತ್ತಡ ಅಥವಾ ಹೃದಯ - ಸಂಬಂಧಿ ಸಮಸ್ಯೆಗಳು ತೀರಾ ಕಡಿಮೆ.

4 ವಾಲ್ನಟ್ ಗಳನ್ನು ಹೃದಯದ ಸ್ನೇಹಿತ ಎನ್ನುವರು

4 ವಾಲ್ನಟ್ ಗಳನ್ನು ಹೃದಯದ ಸ್ನೇಹಿತ ಎನ್ನುವರು

ಮೊದಲೇ ಹೇಳಿದಂತೆ ವಾಲ್ನಟ್ ಗಳಲ್ಲಿ ಒಮೆಗಾ - 3 ಫ್ಯಾಟಿ ಆಸಿಡ್ ಮತ್ತು ಆಲ್ಫ - ಲಿನೋಲೇನಿಕ್ ಆಮ್ಲಗಳು ಹೆಚ್ಚಾಗಿರುವುದರಿಂದ ಸೇವಿಸಿದ ಆಹಾರದಲ್ಲಿ ಇವುಗಳ ಪ್ರಮಾಣ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲ್ಪಡುತ್ತದೆ. ಇದರಿಂದ ರಕ್ತದಲ್ಲಿರುವ ಲಿಪಿಡ್ ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಿ ಉರಿಯೂತವನ್ನು ನಿವಾರಣೆ ಮಾಡುವಲ್ಲಿ ಹೆಚ್ಚು ಸಹಾಯಕ ಆಗುತ್ತದೆ. ಹೃದಯ ರಕ್ತ ನಾಳದ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ರಕ್ತದ ಒತ್ತಡದ ವಿಚಾರದಲ್ಲಿ ಆಗಾಗ ಏರು-ಪೇರು ಕಾಣುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ವಾಲ್ನಟ್ ಗಳನ್ನು ಸೇರಿಸಿಕೊಂಡರೆ ಒಳ್ಳೆಯದು ಪುಟ್ಟ ಮಕ್ಕಳಿಗೂ ಈಗಿನ ಕಾಲದಲ್ಲಿ ಹೃದಯದ ಸಮಸ್ಯೆಗಳು ಕಂಡು ಬರುವುದರಿಂದ ಮಕ್ಕಳಿಗೆ ನಿಯಮಿತವಾಗಿ ಕೊಡುವ ಡ್ರೈ ಫ್ರೂಟ್ಸ್ ಗಳಲ್ಲಿ ವಾಲ್ನಟ್ ಗಳನ್ನು ಸೇರಿಸಿ ತಿನ್ನಲು ಕೊಡುವುದು ತುಂಬಾ ಆರೋಗ್ಯಕರ. ಇದರಿಂದ ದೊಡ್ಡವರಾದ ಮೇಲೆ ಯಾವುದೇ ಬಗೆಯ ಹೃದಯ - ಸಂಬಂಧಿ ಕಾಯಿಲೆಗಳು ಮಕ್ಕಳನ್ನು ಕಾಡುವುದಿಲ್ಲ ಎಂದು ಹೇಳುತ್ತಾರೆ.

5 ದೇಹದಲ್ಲಿ ಬೊಜ್ಜಿನ ಪ್ರಮಾಣ ತಗ್ಗುತ್ತದೆ

5 ದೇಹದಲ್ಲಿ ಬೊಜ್ಜಿನ ಪ್ರಮಾಣ ತಗ್ಗುತ್ತದೆ

ಈಗಾಗಲೇ ವಿಪರೀತ ದಪ್ಪ ಇರುವವರು ತಮ್ಮ ದೇಹದಲ್ಲಿ ಬೊಜ್ಜಿನ ಅಂಶವನ್ನು ಹೆಚ್ಚಾಗಿ ತುಂಬಿಕೊಂಡು ಅತಿ ಹೆಚ್ಚು ದೇಹದ ತೂಕ ಹೊಂದಿರುವವರು ತಮ್ಮ ದೇಹದ ತೂಕ ನಿರ್ವಹಣೆಯಲ್ಲಿ ಸಹಾಯವಾಗಲು ಅನುಸರಿಸುವ ಡಯಟ್ ಪದ್ಧತಿಯಲ್ಲಿ ವಾಲ್ನಟ್ ಗಳನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು ಎಂದು ತೋರುತ್ತದೆ. ಒಂದು ಸಂಶೋಧನೆ ಹೇಳುವಂತೆ ಪ್ರತಿ ದಿನ ಸುಮಾರು 30 ಗ್ರಾಂ ವಾಲ್ನಟ್ ಗಳನ್ನು ಮೂರು ತಿಂಗಳ ಕಾಲ ನಿರಂತರವಾಗಿ ಸೇವನೆ ಮಾಡುವುದರಿಂದ ಗಣನೀಯ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ದೇಹದಲ್ಲಿರುವ ಕೆಟ್ಟ ಕೊಬ್ಬಿನ ಅಂಶ, ಕೊಲೆಸ್ಟ್ರಾಲ್ ಅಂಶ ಮತ್ತು ಬೊಜ್ಜಿನ ಪ್ರಮಾಣ ಕಡಿಮೆ ಆಗಿ ದೇಹಕ್ಕೆ ಸರಿಯಾದ ಆಕಾರ ಸಿಗುತ್ತದೆ. ವಿಶೇಷವಾಗಿ ವಯಸ್ಸಾದವರು, ವ್ಯಾಯಾಮ ಮಾಡಲು ಶಕ್ತರಲ್ಲದವರು ವಾಲ್ನಟ್ ಗಳ ಸೇವನೆ ಮಾಡುವುದರಿಂದ ತುಂಬಾ ಅನುಕೂಲವಿದೆ. ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡುವ ಎರಡೂ ಬಗೆಯ ಗುಣಗಳನ್ನು ವಾಲ್ನಟ್ ಗಳಲ್ಲಿ ನೋಡಬಹುದು.

6 ವಾಲ್ನಟ್ ಗಳಿಂದ ಫೈಟೋ - ಮೆಲಟೋನಿನ್ ಅಂಶಗಳು ಸಿಗುತ್ತವೆ

6 ವಾಲ್ನಟ್ ಗಳಿಂದ ಫೈಟೋ - ಮೆಲಟೋನಿನ್ ಅಂಶಗಳು ಸಿಗುತ್ತವೆ

ಫೈಟೋ ಮೆಲಟೋನಿನ್ ಎಂಬುದು ನಮ್ಮ ದೇಹಕ್ಕೆ ವಾಲ್ನಟ್ ಗಳಿಂದ ಸಿಗುವ ಒಂದು ಜೈವಿಕ ಮೆಲಟೋನಿನ್ ಅಂಶ. ಇದರಲ್ಲಿ ಆಂಟಿ - ಆಕ್ಸಿಡೆಂಟ್, ಆಂಟಿ - ಇನ್ಫಾಮೇಟರಿ, ಬೊಜ್ಜು ವಿರೋಧಿ, ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳ ಸಹಿತ ನಮ್ಮ ಮೆದುಳು ಮತ್ತು ನರ ಮಂಡಲವನ್ನು ರಕ್ಷಣೆ ಮಾಡಿ ನಮ್ಮ ದೇಹಕ್ಕೆ ಲಭ್ಯ ಆಗಬೇಕಾದ ನಿದ್ರೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಪ್ರಮುಖವಾಗಿ ಮೆದುಳಿನ ನರ ನಾಡಿಗಳ ಮೇಲೆ ಮೆಲಟೋನಿನ್ ಅಂಶ ಕೆಲಸ ಮಾಡುವುದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಅರಿವಿನ ಸಾಮರ್ಥ್ಯ ಹೆಚ್ಚಾಗುತ್ತದೆ. ನರ ಮಂಡಲಕ್ಕೆ ಸಂಬಂಧ ಪಟ್ಟ ನರದೌರ್ಬಲ್ಯ ಸಮಸ್ಯೆ ವಾಲ್ನಟ್ ಗಳಲ್ಲಿ ಕಂಡು ಬರುವ ಮೆಲಟೋನಿನ್ ಅಂಶದಿಂದ ಪರಿಹಾರವಾಗುತ್ತದೆ. ಇದರ ಜೊತೆಗೆ ವಾಲ್ನಟ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಪಾಲಿಫಿನಾಲ್ ಅಂಶಗಳು ಮತ್ತು ಒಮೆಗಾ - 3 ಫ್ಯಾಟಿ ಆಸಿಡ್ ಅಂಶಗಳು ನಮ್ಮ ಮೆದುಳಿನ ಜೀವ ಕೋಶಗಳ ಮೇಲೆ ಉಂಟಾಗುವ ಒಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ನರ ಮಂಡಲದ ಉರಿಯೂತವನ್ನು ಉಪಶಮನಗೊಳಿಸುತ್ತವೆ. ಪ್ರಾಣಿಗಳ ಮೇಲೆ ನಡೆದ ಸಂಶೋಧನೆಯೊಂದು ವಾಲ್ನಟ್ ಗಳ ನಿರಂತರ ಬಳಕೆಯಿಂದ ಅಲ್ಜಿಮರ್ ಕಾಯಿಲೆ ಗುಣ ಹೊಂದುವ ಸಾಧ್ಯತೆ ಇದೆ ಎಂಬ ಅಂಶವನ್ನು ತನ್ನ ವರದಿಯಲ್ಲಿ ತಿಳಿಸಿದೆ.

7 ಆಂಟಿ - ಕಾರ್ಸಿನೋಗೆನಿಕ್ ಗುಣ ಲಕ್ಷಣಗಳು

7 ಆಂಟಿ - ಕಾರ್ಸಿನೋಗೆನಿಕ್ ಗುಣ ಲಕ್ಷಣಗಳು

ವಾಲ್ನಟ್ ಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣ - ಲಕ್ಷಣಗಳು ಕಂಡು ಬರುವುದರಿಂದ ಮತ್ತು ದೇಹದ ಮಾಂಸ ಖಂಡಗಳ ಮೇಲೆ ತ್ವರಿತವಾಗಿ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ರೂಪುಗೊಳ್ಳದಂತೆ ತಡೆದು ಆರೋಗ್ಯಕರವಾದ ಪ್ರಭಾವವನ್ನು ಬೀರುತ್ತದೆ. ಪ್ರಮುಖವಾಗಿ ಮಹಿಳೆಯರಲ್ಲಿ ಎದುರಾಗುವ ಸ್ತನ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕವಾಗಿ ಹೋರಾಡಿ ಫ್ರೀ - ರಾಡಿಕಲ್ ಗಳ ಹಾವಳಿಯಿಂದ ದೇಹವನ್ನು ಪಾರು ಮಾಡಿ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ತನ್ನ ಪ್ರಭಾವ ಬೀರುತ್ತದೆ.

8 ಮಧುಮೇಹಿಗಳಿಗೆ ವಾಲ್ನಟ್ ತುಂಬಾ ಒಳ್ಳೆಯ ಆಹಾರ

8 ಮಧುಮೇಹಿಗಳಿಗೆ ವಾಲ್ನಟ್ ತುಂಬಾ ಒಳ್ಳೆಯ ಆಹಾರ

ಮಧುಮೇಹಿಗಳು ಸಾಧ್ಯವಾದಷ್ಟು ನಮ್ಮ ಆಹಾರ ಪದ್ಧತಿಯಲ್ಲಿ ಯಾವಾಗಲೂ ಸಕ್ಕರೆ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಇತ್ತೀಚಿನ ಒಂದು ಸಂಶೋಧನೆ ತನ್ನ ವರದಿಯಲ್ಲಿ ಒಂದು ಭಯಾನಕ ವಿಚಾರವನ್ನು ಹೊರ ಹಾಕಿದೆ. ಅದೇನೆಂದರೆ ನಮ್ಮ ಭಾರತದಲ್ಲಿ ಕಳೆದ ಐದು ವರ್ಷದಿಂದ ಈಚೆಗೆ ನೋಡಿದರೆ ಪುರುಷರಿಗಿಂತ ಹೆಚ್ಚು ಮಹಿಳೆಯರು ಮಧುಮೇಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು. ಇಂದು ಬದಲಾಗುತ್ತಿರುವ ಜೀವನ ಶೈಲಿ ಒಂದು ಕಡೆಯ ಕಾರಣವಾದರೆ ನಗರ ಪ್ರದೇಶಗಳಲ್ಲಿ ಹೈ - ಫೈ ಜೀವನ ನಡೆಸುತ್ತಿರುವವರು ಮನೆ ಆಹಾರದ ಬದಲಿಗೆ ಹೋಟೆಲ್ ತಿಂಡಿ ಮೇಲೆ ಹೆಚ್ಚು ಅವಲಂಬಿತವಾಗಿ ಜಂಕ್ ಫುಡ್ ಗಳ ಸೇವನೆ ಮಾಡುವುದು ಇನ್ನೊಂದು ಕಡೆಯ ಕಾರಣ. ವೈದ್ಯರು ಹೇಳುವ ಹಾಗೆ ಮಧುಮೇಹ ಸಮಸ್ಯೆಯನ್ನು ಹೊಂದಿರುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಡುವ ಸಾಧ್ಯತೆ ಇರುತ್ತದೆಯಂತೆ. ಹಾಗಾಗಿ ನಿತ್ಯ ನಿಯಮಿತವಾಗಿ ವ್ಯಾಯಾಮ, ವಾಕಿಂಗ್ ಮಾಡುವುದರ ಜೊತೆಗೆ ಪ್ರತಿ ದಿನ ಸೇವಿಸುವ ಆಹಾರದಲ್ಲಿ ವಾಲ್ನಟ್ ಗಳಂತಹ ಆರೋಗ್ಯಕ್ಕೆ ಸಹಕಾರಿಯಾಗಿರುವ ಆಹಾರಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

English summary

Reasons Why Walnuts Are The World's Healthiest Food in Kannada

Here we are discussing about Reasons Why Walnuts Are The World's Healthiest Food in Kannada. Walnuts are part of the tree nut family. This food family includes Brazil nuts, cashews, hazelnuts (filberts), macadamia nuts, pecans, pine nuts, pistachios and walnuts. Read more.
Story first published: Monday, September 21, 2020, 17:58 [IST]
X
Desktop Bottom Promotion