For Quick Alerts
ALLOW NOTIFICATIONS  
For Daily Alerts

ಸೋರಿಯಾಸಿಸ್ ಬಗ್ಗೆ ನಿಮಗೆಷ್ಟು ಗೊತ್ತು? ಚರ್ಮದ ಮೇಲೆ ಈ ರೀತಿ ಸಮಸ್ಯೆ ಕಂಡುಬಂದರೆ ಎಚ್ಚರ!

|

ಮನುಷ್ಯನಿಗೆ ಮೊಡವೆ, ದದ್ದುಗಳು ಸಾಮಾನ್ಯ ಆದರೆ ನಿಮ್ಮ ದೇಹದ ಚರ್ಮದ ಮೇಲೆ ಬಿಳಿ ಮತ್ತು ಕೆಂಪು ಬಣ್ಣದ ದಪ್ಪದ ಪ್ಯಾಚಸ್ ಇದ್ದರೆ, ಅದರಲ್ಲಿ ಕೆಲವೊಮ್ಮೆ ಬಿರುಕು ಮತ್ತು ರಕ್ತಸ್ರಾವ ಉಂಟಾಗಿದೆ ಎಂದಾದರೆ ಅಂತಹ ಸ್ಥಿತಿಯನ್ನ ಸೋರಿಯಾಸಿಸ್ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಹೇಳುವುದಾದರೆ ಇದು ಚರ್ಮದ ಕಾಯಿಲೆ ಎಂದು ಕರೆಯಲಾಗುತ್ತದೆ.

ಹೌದು, ಇತ್ತೀಚಿನ ದಿನಗಳಲ್ಲಿ ಸೋರಿಯಾಸಿಸ್ ಸಾಮಾನ್ಯವಾಗಿ ಬಿಟ್ಟಿದೆ. ಇವು ಚರ್ಮದ ಮೇಲೆ ಅಲ್ಲಲ್ಲಿ ನಿರ್ದಿಷ್ಟ ಅಂಚು ಹೊಂದಿದ, ಕೆಂಪು ಕಲೆಗಳ ಮೇಲೆ ಬೆಳ್ಳಿಯಂತಹ ದಪ್ಪ ಚಕ್ಕೆಗಳು ಶೇಖರಣೆಯಾಗಿ ಉಬ್ಬಿದಂತೆ ಕಾಣುತ್ತವೆ. ಅಪರೂಪವಾಗಿ ತುರಿಕೆ ಕಂಡು ಬರಬಹುದು. ಈ ಮಚ್ಚೆಗಳು ಹಲವು ಮಿ.ಮೀ. ಗಳಿಂದ ಕೆಲವು ಸೆಂ.ಮೀ ಗಳವರೆಗೂ ಹರಡಬಹುದಾಗಿದ್ದು, ಕೆಲವರಲ್ಲಿ ಒಂದೆರಡು ಮಾತ್ರವಿದ್ದು ಮತ್ತೆ ಕೆಲವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಯಾವ ಕಾರಣಕ್ಕೆ ಸೋರಿಯಾಸಿಸ್ ಬರುತ್ತದೆ?

ಯಾವ ಕಾರಣಕ್ಕೆ ಸೋರಿಯಾಸಿಸ್ ಬರುತ್ತದೆ?

ಸೋರಿಯಾಸಿಸ್‌ ಕಾಯಿಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಿಮ್ಮ ದೇಹದ ಚರ್ಮ ಹೋಗಿ ಹೊಸ ಚರ್ಮ ಸೃಷ್ಟಿಯಾಗುತ್ತದೆ. ಇದು ಲಾಂಗ್ ಪ್ರೊಸೆಸ್ ಆಗಿರುವುದರಿಂದ ನಿಮಗೆ ಇದು ಅಸಹ್ಯ ಅನಿಸಬಹುದು. ಆದರೆ ಅನುವಂಶಿಕ, ಮಾನಸಿಕ ಒತ್ತಡಗಳು, ಅಲರ್ಜಿಗಳು, ಸೋಂಕುಗಳು, ಹವಾಮಾನದ ವೈಪರೀತ್ಯಗಳು ಮತ್ತು ಕೆಲವು ಔಷಧಿಗಳು ಈ ಕಾಯಿಲೆಗೆ ಕಾರಣ ಎಂದು ಹೇಳಲಾಗಿದೆ. ಪ್ರಪಂಚದಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 29ರಂದು ವಿಶ್ವ ಸೋರಿಯಾಸಿಸ್ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ನೂರು ಮಿಲಿಯನ್ ಜನರು ಸೋರಿಯಾಸಿಸ್ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸೋರಿಯಾಸಿಸ್ ನಿಂದ ಬಳಲುತ್ತಿರುವ 3 ಜನರಲ್ಲಿ 1 ಜನರಿಗೆ ಸೋರಿಯಾಟಿಕ್ ಸಂಧಿವಾತ ಬರುವ ಸಾಧ್ಯತೆ ಇದೆ. ಇದು ಕೀಲುಗಳಲ್ಲಿ ನೋವಿಗೆ ಕಾರಣವಾಗುತ್ತದೆ.

ದೇಹದ ಯಾವ ಭಾಗದಲ್ಲಿ ಉಂಟಾಗುತ್ತೆ ಸೋರಿಯಾಸಿಸ್?

ದೇಹದ ಯಾವ ಭಾಗದಲ್ಲಿ ಉಂಟಾಗುತ್ತೆ ಸೋರಿಯಾಸಿಸ್?

ಸೋರಿಯಾಸಿಸ್ ದೇಹದ ಯಾವುದೇ ಭಾಗದಲ್ಲಿ ಬರಬಹುದಾದರೂ, ತಲೆ, ಮಂಡಿ, ಮೊಳಕೈ ಮತ್ತು ಬೆನ್ನಿನ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಕೆಲವು ರೋಗ ಪೀಡಿತರಲ್ಲಿ, ಉಗುರುಗಳೂ ಈ ರೋಗಕ್ಕೆ ತುತ್ತಾಗಿ ಉಗುರುಗಳು ದಪ್ಪವಾಗಿ, ಬಣ್ಣ ಮಾಸಬಹುದು ಅಥವಾ ಕಂದು/ಕಪ್ಪು ಬಣ್ಣಕ್ಕೆ ತಿರುಗಬಹುದು. ಉಗುರಿನ ಮೇಲ್ಮೈ ನಲ್ಲಿ ಸಣ್ಣ ಸಣ್ಣ ತಗ್ಗುಗಳು ಕಾಣಿಸಿಕೊಳ್ಳಬಹುದು.

ಇದಕ್ಕೆ ಚಿಕಿತ್ಸೆ ಇದ್ಯಾ?

ಇದಕ್ಕೆ ಚಿಕಿತ್ಸೆ ಇದ್ಯಾ?

ಸೋರಿಯಾಸಿಸ್ ಕಾಯಿಲೆಗೆ ಸ್ಪಷ್ಟ ಹಾಗೂ ಖಚಿತ ಔಷಧ ಇದುವರೆಗೆ ಲಭ್ಯವಾಗಿಲ್ಲ. ಆದರೆ ಕೆಲವೊಂದು ಔಷಧಗಳಿಂದ ಕಾಯಿಲೆಯನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಿದೆ. ಚರ್ಮದ ಮೇಲಿನ ಹುರುಪಿಗೆ ಸಾಮಾನ್ಯವಾಗಿ ದೊರೆಯುವ ಕೊಬ್ಬರಿ ಎಣ್ಣೆ ಅಥವಾ ಇತರೆ ಸೂಕ್ತ ಎಣ್ಣೆಗಳನ್ನು ಸವರಿದರೆ ತಾತ್ಕಾಲಿಕ ಉಪಶಮನ ಸಿಗುತ್ತದೆ. ಸೋರಿಯಾಸಿಸ್‌ ಕಾಯಿಲೆಯ ಕೆಲವೇ ಮಚ್ಚೆಗಳಿದ್ದರೆ ಅಥವಾ ಸೀಮಿತ ಪ್ರದೇಶವನ್ನಷ್ಟೇ ಆಕ್ರಮಿಸಿದಾಗ ಸ್ಮೀರಾಯ್ಡ್‌ ಮುಲಾಮನ್ನು ದಿನಕ್ಕೆರಡು ಬಾರಿಯಂತೆ ಹಚ್ಚಬೇಕು. ಟಾರೆಣ್ಣೆ, ಡೈತ್ರನಾಲ್‌ ಮುಲಾಮು, ಸ್ಯಾಲಿಸಿಲಿಕ್‌ ಆಮ್ಲದ ಮುಲಾಮುಗಳನ್ನು ಕೂಡ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಕಾಯಿಲೆ ತೀವ್ರವಾಗಿದ್ದಾಗ, ಅಥವಾ ಚರ್ಮದ ವಿಸ್ತ್ರತ ಪ್ರದೇಶವನ್ನು ಆವರಿಸಿದಾಗ ಪೂರ್ವ ಚಿಕಿತ್ಸೆ, ಮಾತ್ರೆಗಳನ್ನು ನೀಡಬಹುದು. ತೀವ್ರತರವಾದ ಕಾಯಿಲೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾತ್ರೆ ಸೇವಿಸಬೇಕು. ಪ್ರಮುಖವಾಗಿ ಮೂಲಮೂ ಹಚ್ಚಿದರೆ ಸಾಮಾನ್ಯವಾಗಿ ಇದು ಕಡಿಮೆ ಆಗುತ್ತದೆ.

ಈ ಕಾರಣಗಳಿಂದ ಸೋರಿಯಾಸಿಸ್ ಉಲ್ಬಣಗೊಳ್ಳುತ್ತದೆ!

ಈ ಕಾರಣಗಳಿಂದ ಸೋರಿಯಾಸಿಸ್ ಉಲ್ಬಣಗೊಳ್ಳುತ್ತದೆ!

ಶುಷ್ಕ ಹವಾಮಾನದ ಪರಿಸ್ಥಿತಿಗಳಲ್ಲಿ ಮತ್ತು ಆಲ್ಕೋಹಾಲ್ ಸೇವನೆ, ಧೂಮಪಾನ, ಒತ್ತಡ, ಬೊಜ್ಜು ಮತ್ತು ಕೆಲವು ಔಷಧಿಗಳ ಕಾರಣದಿಂದಾಗಿ ಸೋರಿಯಾಸಿಸ್ ಉಲ್ಬಣಗೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. ಅಲ್ಲದೇ ಸಂಧಿವಾತ, ಸ್ಥೂಲಕಾಯತೆ, ಮಧುಮೇಹ, ಮಾನಸಿಕ ಒತ್ತಡ, ಖಿನ್ನತೆಯಿಂದ ಕೂಡ ಸೋರಿಯಾಸಿಸ್ ಜಾಸ್ತಿಯಾಗುತ್ತದೆ. ಈ ರೀತಿ ನಿಮ್ಮ ದೇಹದಲ್ಲಿ ಕಂಡುಬಂದರೆ ಅದಕ್ಕೆ ಮುಲಾಮೂ ಹಚ್ಚಿ ಅದು ಬಿಟ್ಟು ಅದನ್ನು ಕೆರೆಯಲು ಹೋಗಬೇಡಿ. ಯಾಕೆಂದರೆ ಅದು ಜಾಸ್ತಿಯಾಗುತ್ತದೆ.

ಸೋರಿಯಾಸಿಸ್ ಇದ್ದರೆ ಈ ಉಪಕ್ರಮ ಬಳಸಿ

ಸೋರಿಯಾಸಿಸ್ ಇದ್ದರೆ ಈ ಉಪಕ್ರಮ ಬಳಸಿ

ಸೋರಿಯಾಸಿಸ್ ಎಂಬುವುದು ಸಾಂಕ್ರಾಮಿಕವಲ್ಲ ಮತ್ತು ಬಹುಪಾಲು ಕೆಲವೇ ತೊಡಕುಗಳೊಂದಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ. ಹೀಗಾಗಿ ಕೆಲವೊಂದು ಉಪಕ್ರಮ ಇಲ್ಲಿದೆ.

ತೆಂಗಿನ ಎಣ್ಣೆ ಮಸಾಜ್ : ತೆಂಗಿನ ಎಣ್ಣೆಯಲ್ಲಿ ಅನೇಕ ನೈಸರ್ಗಿಕ ಕೊಬ್ಬಿನಾಮ್ಲಗಳನ್ನು ಇರುವುದರಿಂದ ಚರ್ಮಕ್ಕೆ ಉತ್ತಮವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಇದರಲ್ಲಿ ಆಂಟಿ ಇನ್ಫಾಮೇಟರಿ ಮತ್ತು ಚರ್ಮವನ್ನು ದುರಸ್ತಿ ಮಾಡುವ ಗುಣ ಹೊಂದಿದೆ. ಹೀಗಾಗಿ ಸೋರಿಯಾಸಿಸ್ ಬಂದರೆ ತೆಂಗಿನ ಎಣ್ಣೆ ಬಳಸಿ. ಅದಕ್ಕೆ ಹಚ್ಚಿ

ಕಡಿಮೆ ಕ್ಯಾಲೋರಿ ಆಹಾರ: ಸಾಕಷ್ಟು ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವದರಿಂದ ದೇಹದಲ್ಲಿರುವ ಆಕ್ಸಿಡೇಟಿವ್ ಒತ್ತಡ ಕಡಿಮೆ ಆಗುತ್ತದೆ ಇದು ಸೋರಿಯಾಸಿಸ್ ಜಿಂದ ರಕ್ಷಣೆ ನೀಡುತ್ತದೆ.

ಒತ್ತಡವನ್ನು ಕಡಿಮೆ ಮಾಡಲು ಯೋಗ, ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಉತ್ತಮ

English summary

Psoriasis Awareness Month: Know what causes psoriasis in the belly button and how it is treated in kannada

Psoriasis Awareness Month: what is psoriasis? What are the symptoms and treatment, read on..
X
Desktop Bottom Promotion