For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಮತ್ತೆ ಹೊಸ ವೈರಸ್( SFTSV)ಭೀತಿ, ಎಂಜಲು ಮುಖಾಂತರ ಹರಡುವ ರೋಗವಿದು

|

ಇಡೀ ವಿಶ್ವ ಈಗಲೂ ಕೋವಿಡ್ 19 ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಚೀನಾದ ವುಹಾನ್ ನಗರದಲ್ಲಿ ಹುಟ್ಟಿತು ಎಂದು ಹೇಳಲಾಗಿರುವ ಈ ವೈರಸ್‌ ಇದೀಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ, ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲಾಗಿಸಿದೆ.

New Tick Bites Virus(SFTSV) Alert From China

ಹೀಗಿರುವಾಗ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ, ಒಂದು ಹೊಸ ವೈರಸ್‌ ಕಾಯಿಲೆ ಕಂಡು ಬಂದಿದ್ದು ಇದರಿಂದ ಈಗಾಗಲೇ 7 ಜನ ಮೃತ ಪಟ್ಟಿದ್ದಾರೆ. ಇದು ಕ್ಲಿಕ್ ಬೈಟ್ ಸ್ವರೂಪದ ಕಾಯಿಲೆ (ಎಂಜಲು ಹಾಗೂ ರಕ್ತದ ಮೂಲಕ ಹರಡುವ ಕಾಯಿಲೆ) ಎಂದು ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ವೈರಸ್ ಅನ್ನು SFTSV (Severe Fever with Thrombocytopenia Syndrome Bunyavirus) ಎಂದು ಗುರುತಿಸಲಾಗಿದೆ. ಚೀನಾದಲ್ಲಿ ಅರ್ಧ ವರ್ಷದಲ್ಲಿ 37 ಜನರಲ್ಲಿ ಈ ರೀತಿಯ ರೋಗ ಲಕ್ಷಣಗಳು ಕಂಡು ಬಂದಿರುವುದಾಗಿ ಚೀನಾ ಪತ್ರಿಕೆ ವರದಿ ಮಾಡಿದೆ.

 ಕೇಸ್‌ ಸ್ಟಡಿ

ಕೇಸ್‌ ಸ್ಟಡಿ

ವ್ಯಾಂಗ್‌ನ ಕೇಸ್‌ ಸ್ಟಡಿ ಬಗ್ಗೆ ವಿವರಿಸಿರುವ 'ಗ್ಲೋಬಲ್ ಟೈಮ್ಸ್' ನಾನ್ಜಿಂಗ್ ಮಹಿಳೆಯರಲ್ಲಿ ತೀವ್ರ ಪ್ರಮಾಣದ ಜ್ವರ, ಕೆಮ್ಮು ಕಾಣಿಸಿಕೊಂಡಿತು. ಆಕೆಯ ದೇಹದಲ್ಲಿ ಲ್ಯುಕೋಸೈಟ್ ಹಾಗೂ ಪ್ಲೇಟ್‌ಲೆಟ್‌ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದನ್ನು ವೈದ್ಯರು ಗಮನಿಸಿದರು. ತಿಂಗಳುಗಳ ಚಿಕಿತ್ಸೆ ನಂತರ ವ್ಯಾಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಆದರೆ ಚೀನಾದ ನಾನ್ಜಿಂಗ್ ಪ್ರಾಂತ್ಯದಲ್ಲಿ 7 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ.

ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ

ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ

ವೈರಾಲಾಜಿಸ್ಟ್ SFTSV ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ ಎಂದು ಹೇಳಿದ್ದಾರೆ. ಎಂಜಲು ಮುಖಾಂತರ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು.

ಕಳೆದ 10 ವರ್ಷಗಳಿಂದ ಈ ವೈರಸ್ ಕುರಿತು ಅಧ್ಯನಗಳು ನಡೆಯುತ್ತಿವೆ. ಪೂರ್ವ ಏಷ್ಯಾದಲ್ಲಿ ಈ ವೈರಸ್‌ ಪ್ರಮಾಣ ಹೆಚ್ಚಾಗುತ್ತಿದೆ.

 ಪಕ್ಷಗಳಿಂದಲೂ ಹರಡುವ ಸಾಧ್ಯತೆ ಇದೆ

ಪಕ್ಷಗಳಿಂದಲೂ ಹರಡುವ ಸಾಧ್ಯತೆ ಇದೆ

ವಲಸೆ ಪಕ್ಷಿಗಳು ಈ ಕಾಯಿಲೆ ಹರಡುವ ಸಾಧ್ಯತೆ ಇದೆ. ಏಕೆಂದರೆ ಪಕ್ಷಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತವೆ, ಈ ಮೂಲಕ ಕೂಡ ಹರಡುವುದು.

ಅತ್ಯಧಿಕ ಸಾವಿನ ಸಂಖ್ಯೆ

ಅತ್ಯಧಿಕ ಸಾವಿನ ಸಂಖ್ಯೆ

ಈ ವೈರಸ್‌ ಚೀನಾದಲ್ಲಿ 2009ರಲ್ಲಿ ಕಂಡು ಬಂದಿತ್ತು ಆಗ ಸಾವಿನ ಸಂಖ್ಯೆ ಶೇ, 6ರಷ್ಟಿತು. ಅದೇ ಜಪಾನ್ ಹಾಗೂ ದಕ್ಷಿಣ ಕೊರಿಯಾದಲ್ಲಿ 2015ರಲ್ಲಿ ಸಾವಿನ ಸಂಖ್ಯೆ ಶೇ. 30ರಷ್ಟಿತ್ತು ಎಮದು NCBI ವರದಿ ಹೇಳಿದೆ.

English summary

SFTS Virus alert: New contagion passed via tick-bites emerges in China

As per the Chinese daily 'Global Times', a new type of virus, which is likely to be passed through tick-bites, is emerging in China.
X
Desktop Bottom Promotion