For Quick Alerts
ALLOW NOTIFICATIONS  
For Daily Alerts

ಕೊರೊನಾ ರೂಪಾಂತರ ಹರಡುವ ವೇಗ ಶೇ,70ರಷ್ಟು ಅಧಿಕ: ಮೈಮರತರೆ ಅಪಾಯ ಗ್ಯಾರಂಟಿ!

|

ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ಇಡೀ ಜೀವಸಂಕುಲವನ್ನ ಕಷ್ಟ ನಷ್ಟಗಳಲ್ಲಿ ಮುಳುಗುವಂತೆ ಮಾಡಿದ ಈ ಕೊರೊನಾದ ಅಟ್ಟಹಾಸ ಮಗಿಯುವಂತೆ ಕಾಣುತ್ತಿಲ್ಲ. ಜಗತ್ತು ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿರುವಾಗ ಮತ್ತೆ ತನ್ನ ಹೊಸ ವರಸೆ ಶುರು ಮಾಡಿದೆ. ಕೊರೋನಾದ ಅಬ್ಬರ ಇನ್ನೇನು ಕಡಿಮೆ ಆಗ್ತಿದೆ ಅನ್ನೋ ನೆಮ್ಮದಿ ಉಸಿರು ಬಿಡುವಾಗಲೇ ಈ ಸಾಂಕ್ರಾಮಿಕ ಮತ್ತೊಂದು ಶಾಕ್ ನೀಡಿದೆ.

ಹೌದು, ಹಲವಾರು ತಿಂಗಳುಗಳ ಕಾಲ ಮನುಕುಲವನ್ನೇ ಬೆಚ್ಚಿಬೇಳಿಸಿದ ಈ ಕೊರೋನಾ ಸೋಂಕು ಇದೀಗ ಮತ್ತೊಂದು ರೂಪದಲ್ಲಿ ಕಾಣಿಸಿಕೊಂಡಿದೆ. ಇದುವರೆಗೆ ಒಂದು ರೀತಿಯ ವೈರಸ್ ಹಾವಳಿ ಆದರೆ ಇನ್ಮುಂದೆ ಹೊಸ ತಳಿಯ ರೂಪದಲ್ಲಿ ಜನರನ್ನು ಕಾಡಲಿದ್ದು ಎಲ್ಲರಲ್ಲೂ ಆತಂಕ ಮೂಡಿದೆ. ಚೀನಾದಲ್ಲಿ ಹುಟ್ಟಿಕೊಂಡಿದ್ದ ಕೊರೊನಾ ಇಷ್ಟು ದಿನಗಳ ಕಾಲ ಕಾಡಿತ್ತು. ಇನ್ನು ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಇದರ ಅಪಡೇಟೆಡ್ ವರ್ಷನ್ ಎಷ್ಟು ಟೈಮ್ ಜಗತ್ತನ್ನು ಕಾಡಲಿದೆಯೋ ಯಾರಿಗೂ ತಿಳಿಯದು. ಅಂದಹಾಗೇ ಈ ಕೊರೊನಾ ರೂಪಾಂತರಗೊಂಡ ವಿಚಾರ ಬೆಳಕಿಗೆ ಬಂದದ್ದಾದರೂ ಹೇಗೆ? ಈಗಿರುವ ವೈರಸ್‌ಗಿಂತ ಇದೆಷ್ಟು ಪಟ್ಟು ಭೀಕರ ಎಲ್ಲದರ ಕುರಿತು ಈ ಕೆಳಗೆ ಹೇಳಿದ್ದೇವೆ.

ಏನಿದು ಹೊಸ ತಳಿಯ ಕೊರೋನಾ?:

ಏನಿದು ಹೊಸ ತಳಿಯ ಕೊರೋನಾ?:

ಒಂದು ವೈರಸ್ ದೇಹವನ್ನು ಸೇರಿದಾಗ ಅದು ಲಕ್ಷಾಂತರ ವೈರಸ್ ಉತ್ಪಾದಿಸುತ್ತದೆ. ಈ ವೈರಸ್ ಎಲ್ಲವೂ ಒಂದೇ ಬಗೆಯದು ಆಗಿರುವುದಿಲ್ಲ, ಇದು ಮತ್ತೆ-ಮತ್ತೆ ಉತ್ಪಾದನೆಯಾದಾಗ ಆ ವೈರಸ್‌ನಲ್ಲಿ ಬೇರೆಯದೇ ಗುಣಲಕ್ಷಣಗಳು ಕಂಡು ಬರುವುದು, ಇದುವೇ ವೈರಸ್ ರೂಪಾಂತರವಾಗುವುದು.

ವೈರಸ್ ರೂಪಾಂತರವಾಗುವುದು ಸಾಮಾನ್ಯ ಪ್ರಕ್ರಿಯೆ. ಈ ರೀತಿ ರೂಪಾಂತರಗೊAಡ ವ್ಯರಸ್ ಎಲ್ಲವೂ ಅಪಾಯಕಾರಿಯಾಗಿರುವುದಿಲ್ಲ. ಕೆಲವೊಂದು ಬೇಗನೆ ನಾಶವಾದರೆ ಕೆಲವೊಂದು ಮಾತ್ರ ತೀವ್ರ ಸ್ವರೂಪ ಪಡೆದು ಮತ್ತಷ್ಟು ಅಪಾಯಕಾರಿಯಾಗುತ್ತವೆ. ಬ್ರಿಟನ್‌ನಲ್ಲಿ ಕಂಡು ಬಂದಿರುವುದು ಕೊರೋನಾ ವೈರಸ್‌ನ ಅಂಥದ್ದೇ ರೂಪಾಂತರವಾಗಿದೆ.

ಈ ಹಿಂದಿಗಿಂತ ಶೇ.70ರಷ್ಟು ವೇಗವಾಗಿ ಹರಡುವುದು:

ಈ ಹಿಂದಿಗಿಂತ ಶೇ.70ರಷ್ಟು ವೇಗವಾಗಿ ಹರಡುವುದು:

ಹೌದು, ರೂಪಾಂತರಗೊಂಡ ಈ ಕೊರೊನಾ ಸೂಪರ್ ಸ್ಪೆçಡರ್ ಆಗಿ ಪರಿವರ್ತನೆಯಾಗಿದೆ. ಅಂದ್ರೆ ಈ ಹಿಂದಿಗಿಂತ ಸುಮಾರು ಶೇ.70ರಷ್ಟು ಹರಡುವಿಕೆಯ ಪ್ರಮಾಣ ಹೆಚ್ಚಿದೆ ಅಂತ ಅಧ್ಯಯನಗಳು ಹೇಳಿವೆ. ಒಬ್ಬರಿಗೆ ಕೊರೊನಾ ಅಟ್ಯಾಕ್ ಆದ್ರೆ ಬೇಗನೆ ಮತ್ತೊಬ್ಬರಿಗೆ ಸೋಂಕು ತಗುಲಬಹುದು. ವೈರಸ್‌ನಲ್ಲಿ ಸುಮಾರು 17ಬದಲಾವಣೆಗಳು ಕಂಡುಬಂದಿದ್ದು, ಒಂದು ಬದಲಾವಣೆಯು ಎನ್ 501ವೈ ಆಗಿದೆ. ಇದು ಮಾನವ ಜೀವಕೋಶಗಳಿಗೆ ಪ್ರವೇಶಿಸುವ ವೈರಸ್‌ಗೆ ಕಾರಣವಾಅಗಿದೆ. ಇದು ನಮ್ಮ ದೇಹದಲ್ಲಿ ವೈರಸ್ ಪ್ರವೇಶಿಸುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚು ಜನರಿಗೆ ಸೋಂಕು ತಗುಲುವ ಸಾಧ್ಯತೆ ಅಷ್ಟೇ ಹೆಚ್ಚಾಗಿದೆ.

ಸಾವಿನ ಪ್ರಮಾಣ ಕಡಿಮೆ:

ಸಾವಿನ ಪ್ರಮಾಣ ಕಡಿಮೆ:

ಈ ಹೊಸ ತಳಿಯ ಕೊರೊನಾದ ಹರಡುವಿಕೆಯ ಪ್ರಮಾಣ ಹೆಚ್ಚಾಗಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಯಾಕಂದ್ರೆ ಇದು ತೀವ್ರತೆಯ ಮೇಳೆ ಪರಿಣಾಮ ಬೀರುವುದಿಲ್ಲ. ಸಾವಿನ ಸಂಖ್ಯೆಯಾಗಲಿ ಅಥವಾ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಜಾಸ್ತಿಯಾಗುವುದಿಲ್ಲ. ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಇದರಿಂದ ಪಾರಾಗಬಹುದು.

ಭಾರತಕ್ಕೆ ಸ್ವಲ್ಪ ರಿಲೀಫ್:

ಭಾರತಕ್ಕೆ ಸ್ವಲ್ಪ ರಿಲೀಫ್:

ಬ್ರಿಟನ್‌ನಲ್ಲಿ ಕಂಡುಬಂದ ಈ ಹೊಸ ಕೊರೊನಾ ಭಾರತದಲ್ಲಿ ಇನ್ನೂ ಕಂಡುಬಂದಿಲ್ಲ. ಆದ್ದರಿಂದ ಜನರು ಹೆಚ್ಚು ಭಯ ಪಡುವ ಅಗತ್ಯವಿಲ್ಲ. ಆದರೆ ಬ್ರಿಟನ್‌ನಿಂದ ಈಗಾಗಲೇ ಹಲವಾರು ಜನರು ದೇಶಕ್ಕೆ ಬಂದಿಳಿದಿದ್ದಾರೆ. ಅವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ. ಹಾಗಂತ ಯಾವುದನ್ನು ನಿರ್ಲಕ್ಷಿಸಬಾರದು. ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಅವರವರ ಮೇಲೆಯೇ ಇದೆ. ಆದ್ದರಿಂದ ವ್ಯವಹಾರ ನಡೆಸುವಾಗ ಸೂಕ್ತ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.

English summary

New Mutated Covid Strain in UK is Super-Spreader With 70% Increased Transmissibility

The New Mutant Coronavirus Strain a super spreader With 70% Increased Transmissibility, you have to know about new covid in kannada, have a look.
X