For Quick Alerts
ALLOW NOTIFICATIONS  
For Daily Alerts

ಮತ್ತೆ ಶುರುವಾಯ್ತು ಕೊರೊನಾ ಭಯ, XE ರೂಪಾಂತರ 10 ಪಟ್ಟು ಅಪಾಯಕಾರಿ

|

ಭಾರತದ ಹಲವು ಕಡೆ ಕೊರೊನಾ ಕೇಸ್‌ ಶೂನ್ಯಕ್ಕೆ ಇಳಿದಿದೆ. ಆದರೆ ಈ ಕೊರೊನಾ ಕೇಸ್‌ ಜಗತ್ತಿನಿಂದ ಸಂಪೂರ್ಣ ಕಣ್ಮರೆಯಾಗಿಲ್ಲ, ಇನ್ನು ಜಗತ್ತಿನ ಯಾವುದೋ ರಾಷ್ಟ್ರದಲ್ಲಿ ಕೊರೊನಾ ಕೇಸ್ ಕಂಡು ಬಂದರೂ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆ ಎಂಬುವುದು ಈಗಾಗಲೇ ನಮಗೆಲ್ಲಾ ಅನುಭವಕ್ಕೆ ಬಂದಿದೆ.

ಇದೀಗ ಹೊಸ ರೂಪಂತರ ವೈರಸ್‌ ಪತ್ತೆಯಾಗಿದೆ, ಅದು ಒಮಿಕ್ರಾನ್‌ BA.2 ಉಪ ರೂಪಾಂತರಕ್ಕಿಂತ 10 ಪಟ್ಟು ವೇಗವಾಗಿ ಹರಡುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹೊಸ ವೈರಸ್ ಅನ್ನು XE ಎಂದು ಕರೆಯಲಾಗಿದೆ.

ಇದುವರೆಗೆ BA.2 ಉಪ ರೂಪಾಂತರ ಅತ್ಯಂತ ಹೆಚ್ಚು ಅಪಾಯಕಾರಿಯಾಗಿತ್ತು

ಇದುವರೆಗೆ BA.2 ಉಪ ರೂಪಾಂತರ ಅತ್ಯಂತ ಹೆಚ್ಚು ಅಪಾಯಕಾರಿಯಾಗಿತ್ತು

XE ಹೊಸ ರೂಪಂತರ ಪತ್ತೆಯಾಗುವ ಮುನ್ನ BA.2 ಉಪ ರೂಪಾಂತರವನ್ನು ಅತ್ಯಂತ ಅಪಾಯಕಾರಿಯಾಗಿತ್ತು. ಈಗ ಅದಕ್ಕಿಂತ 10 ಪಟ್ಟು ಅಪಾಯಕಾರಿಯಾಗಿರುವ XE ಕೊರೊನಾ ರೂಪಾಂತರ ಪತ್ತೆಯಾಗಿದೆ. ಈ ರೂಪಾಂತರ ಅತೀ ಹೆಚ್ಚು ಜನರಿಗೆ ಹರಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

XE ಎಂದರೇನು? ಎಲ್ಲಿ ಪ್ತತೆಯಾಯಿತು?

XE ಎಂದರೇನು? ಎಲ್ಲಿ ಪ್ತತೆಯಾಯಿತು?

ಈ ಹೊಸ ರೂಪಾಂತರ ಹೈಬ್ರಿಡ್ ತಳಿಯಾಗಿದೆ. BA.1 ಮತ್ತು BA.2. ಸೇರಿ ಹೊಸ ಕೊರೊನಾ ರೂಪಾಂತರ XE ಹುಟ್ಟಿಕೊಂಡಿದೆ.

ಈ ಹೊಸ ರೂಪಾಂತರ ಜನವರಿ19ರಲ್ಲಿ ಯುಕೆಯಲ್ಲಿ ಕಂಡು ಬಂತು ಆಗ ಈ ರೂಪಾಂತರ ಸುಮಾರು 600 ಜನರಲ್ಲಿ ಈ ತಳಿ ಕಂಡು ಬಂದಿದೆ ಈ ವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.

ಹರಡುವಿಕೆ

ಹರಡುವಿಕೆ

ಇತರ ಕೊರೊನಾ ವೈರಸ್‌ಗೆ ಹೋಲಿಸಿದರೆ ಈ ಹೊಸ ವೈರಸ್‌ನ ಹರಡುವ ಶೇ. 10 ಷರಟ್ಉ ಅಧಿಕವಿರುವುದರಿಂದ ಬೇಗನೆ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ. ಇದೀಗ XE ರೂಪಾಂತರ ಜನವರಿ 15ರಿಂದ ಎಲ್ಲೂ ಪತ್ತೆಯಾಗಿಲ್ಲ. ಒಂದು ವೇಳೆ ಕಂಡು ಬಂದರೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸ ಬೇಕಾಗಿದೆ.

English summary

New COVID mutant XE Omicron Variant Could Be Most Transmissible Yet As Per WHO

New COVID mutant XE Omicron Variant to be about ten per cent more transmissible than the BA.2 sub-variant of Omicron, as per the WHO. Know more...
Story first published: Saturday, April 2, 2022, 16:42 [IST]
X
Desktop Bottom Promotion