For Quick Alerts
ALLOW NOTIFICATIONS  
For Daily Alerts

ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ

|

ಮೊಸರು ಅಮೃತ ಸಮಾನ ಎನ್ನಲಾಗುತ್ತದೆ, ಮೊಸರಿಲ್ಲದ ಊಟ ಊಟವೇ ಅಲ್ಲ ಎನ್ನುವವರೂ ಉಂಟೂ. ಮೊಸರಿನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೇರಳವಾಗಿ ಪೂರೈಸುವ ಗುಣ ಮೊಸರಿಗಿದೆ.

Never Have These Foods With Curd to Prevent Health Problems in Kannada

ಆದರೂ, ಮೊಸರನ್ನು ನಾವು ಸೇವಿಸುವ ರೀತಿಯ ಮೇಲೆ ಇದು ನಮಗೆ ಆರೋಗ್ಯಕರವೇ ಅಥವಾ ನಮ್ಮ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತದೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಹೌದು, ಮೊಸರನ್ನು ನಾವು ಕೆಲವು ಆಹಾರ ಪದಾರ್ಥಗಳ ಜೊತೆ ಸೇವಿಸಲೇಬಾರದಂತೆ, ಇದು ನಮಗೆ ಆರೋಗ್ಯಕ್ಕಿಂತ ಅನಾರೋಗ್ಯ ತಂದೊಡ್ಡುವ ಅಪಾಯವೇ ಹೆಚ್ಚು ಎನ್ನಲಾಗುತ್ತದೆ.

ಮೊಸರಿನ ಜೊತೆ ಎಂದಿಗೂ ಸೇವಿಸಲೇಬಾರದ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ:

ಚೀಸ್ ಮತ್ತು ಮೊಸರು

ಚೀಸ್ ಮತ್ತು ಮೊಸರು

ಮೊಸರಿನೊಂದಿಗೆ ಚೀಸ್ ಅನ್ನು ಎಂದಿಗೂ ಸೇವಿಸಬೇಡಿ. ಈ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ನಿಜವಾಗಿಯೂ ಹಾನಿಕಾರಕವಾಗಿದೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

ಮೀನು ಮತ್ತು ಮೊಸರು

ಮೀನು ಮತ್ತು ಮೊಸರು

ಮೊಸರಿನೊಂದಿಗೆ ಮೀನು ಸೇವಿಸುವುದು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?. ಮೀನು ಬಿಸಿಯಾಗಿರುವಾಗ, ಮೊಸರು ತಣ್ಣಗಿರುತ್ತದೆ ಮತ್ತು ಈ ಸಂಯೋಜನೆಯು ಆಮ್ಲೀಯತೆಗೆ ಕಾರಣವಾಗಬಹುದು. ಅಲ್ಲದೇ, ಮೊಸರು ಸಸ್ಯಹಾರ ಪ್ರೋಟಿನ್ ಆಗಿದ್ದು ಮತ್ತು ಮೀನು ಮಾಂಸಾಹಾರ ಪ್ರೋಟೀನ್ ಜೊತೆಗೂಡಿದರೆ ಇದು ಅಜೀರ್ಣತೆ ಮತ್ತು ಹೊಟ್ಟೆಗೆ ಸಂಬಂಧಪಟ್ಟಂತೆ ಇನ್ನಿತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಹುರಿದ ಆಹಾರ ಮತ್ತು ಮೊಸರು

ಹುರಿದ ಆಹಾರ ಮತ್ತು ಮೊಸರು

ಮೊಸರಿನೊಂದಿಗೆ ಹುರಿದ ಆಹಾರವನ್ನು ಸೇವಿಸಬೇಡಿ. ಏಕೆಂದರೆ ಮೊಸರಿನಲ್ಲಿರುವ ಕೊಬ್ಬುಗಳು ಅಜೀರ್ಣಕ್ಕೆ ಕಾರಣವಾಗಬಹುದು. ನೀವು ಹುರಿದ ಆಹಾರಗಳೊಂದಿಗೆ ಮೊಸರು ಹೊಂದಿದ್ದರೆ ನೀವು ಕೆಲವು ಗಂಭೀರವಾದ ಹೊಟ್ಟೆಯ ತೊಂದರೆಯನ್ನು ಸಹ ಅನುಭವಿಸಬಹುದು.

ಈರುಳ್ಳಿ ಮತ್ತು ಮೊಸರು

ಈರುಳ್ಳಿ ಮತ್ತು ಮೊಸರು

ಈರುಳ್ಳಿ ಮೊಸರು ಸೇವಿಸದೇ ಇರುವವರು ಇಲ್ಲವೇ ಇಲ್ಲ ಎನ್ನಬಹುದು. ಆದರೆ ಇದು ಉತ್ತಮ ಮಿಶ್ರಣ ಅಲ್ಲ ಎನ್ನಲಾಗಿದೆ. ಕಾರಣ ಈರುಳ್ಳಿ ಮೊಸರಿನ ಜೊತೆಗೆ ನಮ್ಮ ದೇಹ ಸೇರಿದರೆ, ಮುಖದ ಮೇಲೆ ದದ್ದುಗಳು, ಸೋರಿಯಾಸಿಸ್, ಇಸುಬು ಮತ್ತು ಇನ್ನಿತರ ಚರ್ಮದ ಅಲರ್ಜಿಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಸರು ಮತ್ತು ಈರುಳ್ಳಿ ಕಾಂಬಿನೇಶನ್ ಸರಿ ಬರುವುದಿಲ್ಲ.

ಚಿಕನ್, ಖರ್ಜೂರ ಮತ್ತು ಮೊಸರು

ಚಿಕನ್, ಖರ್ಜೂರ ಮತ್ತು ಮೊಸರು

ಚಿಕನ್ ಅಥವಾ ಖರ್ಜೂರವನ್ನು ಸೇವಿಸಿದ ನಂತರ ನೀವು ಎಂದಿಗೂ ಮೊಸರನ್ನು ಸೇವಿಸಬಾರದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೆ ಸಿಲುಕಿಸಬಹುದು.

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣು ಹಾಲಿನೊಂದಿಗೆ ಸಂಯೋಜಿಸಲು ಉತ್ತಮವಾದ ಹಣ್ಣು ಆದರೆ ಮೊಸರಿನೊಂದಿಗೆ ಅಲ್ಲ. ಬಾಳೆಹಣ್ಣು ಮತ್ತು ಮೊಸರಿನ ಮಿಶ್ರಣ ದೇಹದಲ್ಲಿ ಚೆನ್ನಾಗಿ ಕೆಲಸ ಮಾಡುವುದಿಲ್ಲ. ನಿಮ್ಮ ಬಾಳೆಹಣ್ಣು ಸೇವಿಸಿದ ನಂತರ ಕನಿಷ್ಠ 2 ಗಂಟೆಗಳ ನಂತರ ಮೊಸರನ್ನು ಸೇವಿಸಬಹುದು.

ಮಾವಿನಹಣ್ಣು ಮತ್ತು ಮೊಸರು

ಮಾವಿನಹಣ್ಣು ಮತ್ತು ಮೊಸರು

ಮಾವಿನಹಣ್ಣು ಮತ್ತು ಮೊಸರು ಸಂಪೂರ್ಣವಾಗಿ ವಿಭಿನ್ನವಾಗಿವೆ ಮತ್ತು ಅವುಗಳನ್ನು ಒಟ್ಟಿಗೆ ಸೇವಿಸಬಾರದು. ಕಾರಣ, ಮೊಸರು ನಮ್ಮ ದೇಹದ ಮೇಲೆ ತಂಪಿನ ಪ್ರಭಾವ ಉಂಟು ಮಾಡಿದರೆ ಮಾವಿನಹಣ್ಣು ಉಷ್ಣದ ಪ್ರಭಾವವನ್ನು ಉಂಟು ಮಾಡುತ್ತದೆ. ಈ ವಿರುದ್ಧ ಪರಿಣಾಮಗಳು ಅನೇಕ ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಇಡೀ ದೇಹದಲ್ಲಿ ವಿಷಕಾರಿ ಅಂಶಗಳು ಉಳಿಯುವಂತೆ ಮಾಡುತ್ತದೆ.

ಹುಳಿ ಹಣ್ಣುಗಳು

ಹುಳಿ ಹಣ್ಣುಗಳು

ಮೊಸರು ಮೂಲತಃ ಹುಳಿಯಾಗಿರುತ್ತದೆ ಮತ್ತು ನೀವು ಅದರೊಂದಿಗೆ ಹುಳಿ ಹಣ್ಣುಗಳನ್ನು ಎಂದಿಗೂ ಸೇವಿಸುವ ಪ್ರಯತ್ನ ಮಾಡಲೇಬೇಡಿ. ನೀವು ಅವುಗಳನ್ನು ಒಟ್ಟಿಗೆ ಸೇವಿಸಿದ್ದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಮತ್ತು ಇದು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ.

ಉದ್ದಿನ ಬೇಳೆ ಮತ್ತು ಮೊಸರು

ಉದ್ದಿನ ಬೇಳೆ ಮತ್ತು ಮೊಸರು

ಉದ್ದಿನ ಬೇಳೆಯೊಂದಿಗೆ ಮೊಸರು ಇರುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ. ಕೆಲವರಿಗೆ ಅಜೀರ್ಣತೆ, ಹೊಟ್ಟೆ ಉಬ್ಬರ, ಎದೆಯುರಿ, ವಾಂತಿ ಭೇದಿ ಸಹ ಉಂಟಾಗುತ್ತದೆ. ಆದ್ದರಿಂದ ಈ ಸಂಯೋಜನೆಯನ್ನು ಸೇವಿಸುವುದನ್ನು ತಪ್ಪಿಸಿ.

English summary

Never Have These Foods With Curd to Prevent Health Problems in Kannada

Here we are discussing about Never Have These Foods With Curd to Prevent Health Problems in Kannada. Read more.
Story first published: Wednesday, August 4, 2021, 10:53 [IST]
X
Desktop Bottom Promotion