For Quick Alerts
ALLOW NOTIFICATIONS  
For Daily Alerts

Foods for Eyesight Improvement : ಕಣ್ಣಿನ ದೃಷ್ಟಿ ಸುಧಾರಿಸಲು ಅತ್ಯುತ್ತಮ ಆಹಾರಗಳಿವು

|

ಕಣ್ಣು ದೇಹ ಅತೀ ಸೂಕ್ಷ್ಮ ಅಂಗಗಳಲ್ಲಿ ಒಂದು. ಅಂತೆಯೇ ಜಗತ್ತಿನ ಸೌಂದರ್ಯವನ್ನು ಸವಿಯಲು ದೇವರು ಕೊಟ್ಟಿರುವ ಅತ್ಯದ್ಭುತ ವರವೂ ಸಹ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ, ಕಲುಷಿತ ನೀರು, ಗಾಳಿ, ದೇಹಕ್ಕೆ ಅನಗತ್ಯವಾದ ಆಹಾರಗಳ ಸೇವನೆಯಿಂದಾಗಿ ಕಣ್ಣಿನ ಸತ್ವಗಳು ಕಳೆದು ದೃಷ್ಟಿ ಸಮಸ್ಯೆಗಳು ಎದುರಾಗುತ್ತಿದೆ.

Natural Foods That Improve And Protect Your Eyesight

ಹಿಂದೆ ಅರುಳುಮರುಳಾಗುವ ವಯಸ್ಸಿಗೆ ಬರುತ್ತಿದ್ದ ದೃಷ್ಟಿ ಸಮಸ್ಯೆಗಳು ಇಂದು ಹುಟ್ಟಿದ ಮಗುವಿಗೇ ಎದುರಾಗುತ್ತಿದೆ. ಇದಕ್ಕೆ ಖಚಿತ ಕಾರಣ ನಮ್ಮ ದಿವ್ಯ ನಿರ್ಲಕ್ಷ್ಯವೇ. ನೈಸರ್ಗಿಕವಾಗಿಯೇ ಹಲವು ಪೌಷ್ಟಿಕ ಆಹಾರಗಳಿದ್ದರೂ ಆ ಬಗ್ಗೆ ನಾವು ಹೆಚ್ಚು ಗಮನಹರಿಸದೇ ನಮ್ಮ ಅವಸಾನದ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಕಣ್ಣಿನ ಸ್ವಾಸ್ಥ್ಯವಾದ ಕಾರ್ಯನಿರ್ವಹಣೆಗೆ ಅಗತ್ಯ ಪೋಷಕಾಂಶಗಳು, ವಿಟಮಿನ್‌ಗಳು ಹಾಗೂ ಮಿನರಲ್ಸ ಗಳ ಅಗತ್ಯವಿದೆ. ಈ ಎಲ್ಲಾ ಅಂಶಗಳು ನಾವು ನಿತ್ಯ ಸೇವಿಸಬಹುದಾದ ಆಹಾರದಲ್ಲೇ ಹೇರಳವಾಗಿದೆ. ಯಾವೆಲ್ಲಾ ಆಹಾರಗಳು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ಅದರಲ್ಲಿರುವ ಪೋಷಕಾಂಶಗಳು ಯಾವವು, ಅವು ಹೇಗೆಲ್ಲಾ ಕಣ್ಣನ್ನು ರಕ್ಷಿಸುತ್ತದೆ ಎಂಬ ಮಾಹಿತಿಯನ್ನು ತಿಳಿಯೋಣ.

1. ಮೀನು

1. ಮೀನು

ಮೀನು ಕಣ್ಣಿಗೆ ಅತ್ಯುತ್ತಮ ಪೋಷಕಾಂಶವನ್ನು ಒದಗಿಸುತ್ತದೆ. ಮೀನನ್ನು ತಿನ್ನದವರು ಅಥವಾ ಸಸ್ಯಹಾರಿಗಳು ಮೀನಿನ ಎಣ್ಣೆಯ ಮಾತ್ರೆಗಳು ಲಭ್ಯವಿದೆ ಇದನ್ನು ಸಹ ಸೇವಿಸಬಹುದು. ಮೀನಿನಲ್ಲಿ ಒಮೆಗಾ-3 ಎಂಬ ಕೊಬ್ಬಿನಾಮ್ಲವಿದೆ ಇದು ಕಣ್ಣಿಗೆ ಅಗತ್ಯ ವಿಟಮಿನ್‌ ಅನ್ನು ಪೂರೈಸುತ್ತದೆ. ಇನ್ನೂ ವಿಶೇಷವಾಗಿ ಹೆಚ್ಚು ಸಮಯ ಕಂಪ್ಯೂಟರ್‌ ನೋಡುವವರು ಅಥವಾ ಒಣಕಣ್ಣು (ಡ್ರೈ ಐ) ಉಳ್ಳವರು ಮೀನನ್ನು ಹೆಚ್ಚು ತಿನ್ನುವುದರಿಂದ ಕಣ್ಣಿನಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಕಣ್ಣಿನ ಒಳಗಿರುವ ರೆಟಿನಾಗೆ ಮೀನು ಬಹಳ ಸಹಕಾರಿ.

2. ಕ್ಯಾರೆಟ್

2. ಕ್ಯಾರೆಟ್

ಕ್ಯಾರೆಟ್‌ ಎಂದಿಗೂ ನಯನಕ್ಕೆ ಅತ್ಯುತ್ತಮ ಪೋಷಕಾಂಶ ಒದಗಿಸುವ ತರಕಾರಿ. ಕ್ಯಾರೆಟ್‌ ನಲ್ಲಿ ಅತ್ಯಧಿಕ ವಿಟಮಿನ್‌ ಎ ಮತ್ತು ಬೆಟಾ ಕೆರೋಟಿನ್ ಅಂಶ ಇರುತ್ತದೆ. ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಅತ್ಯುತ್ತಮವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ರೊಡೋಫ್ಸಿನ್ ಎಂಬ ಅಂಶ ರೆಟಿನಾ ಬೆಳಕನ್ನು ಗ್ರಹಿಸಲು ಸಹಕಾರಿಯಾಗುವಂತೆ ಮಾಡುತ್ತದೆ.

3. ಡ್ರೈ ಫ್ರೂಟ್ಸ್

3. ಡ್ರೈ ಫ್ರೂಟ್ಸ್

ಡ್ರೈ ಫ್ರೂಟ್ಸ್ ನಲ್ಲಿ ಸಹ ಒಮೆಗಾ-3 ಎಂಬ ಕೊಬ್ಬಿನಾಮ್ಲ ಮತ್ತು ಹೆಚ್ಚಿನ ಪ್ರಮಾಣದ ವಿಟಮಿನ್ ಇ ಇರುತ್ತದೆ. ವಯೋಸಹಜ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಡ್ರೈ ಫ್ರೂಟ್ಸ್ ಹೆಚ್ಚು ಸಹಕಾರಿಯಾಗಿದೆ. ನಿತ್ಯ ನಿಯಮಿತ ಡ್ರೈ ಫ್ರೂಟ್ಸ್ ಸೇವನೆಯಿಂದ ಇತರೆ ದೈಹಿಕ ಆರೋಗ್ಯದ ಜತೆಗೆ ಕಣ್ಣಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

ಅದರಲ್ಲೂ ಬಾದಾಮಿ ವಿಟಮಿನ್ ಇ ಅನ್ನು ಹೊಂದಿದ್ದು, ಕಣ್ಣಿನ ಆರೋಗ್ಯಕರ ಟಿಶ್ಯುಗಳ ಮೇಲೆ ಅಸ್ಥಿರ ಕಣಗಳು ದಾಳಿ ಮಾಡುವುದನ್ನು ತಪ್ಪಿಸುತ್ತದೆ.

4. ಧಾನ್ಯಗಳು

4. ಧಾನ್ಯಗಳು

ಧಾನ್ಯಗಳು ಸಹ ಡ್ರೈ ಫ್ರೂಟ್ಸ್ ನಂತೆ ಒಮೆಗಾ-3 ಕೊಬ್ಬಿನಾಮ್ಲ ಹಾಗೂ ವಿಟಮಿನ್ ಇ ಇರುತ್ತದೆ. ಇದು ಸಹ ಕಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಪರಿಣಾಮಕಾರಿ.

5. ಸಿಟ್ರಸ್ ಹಣ್ಣುಗಳು

5. ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ಇದು ಕಣ್ಣಿಗೆ ಅತ್ಯುತ್ತಮ ಆ್ಯಂಟಿಆಕ್ಸಿಡೆಂಟ್ ಆಗಿದೆ. ವಿಟಮಿನ್ ಇ ನಂತೆ ವಿಟಮಿನ್ ಸಿ ಸಹ ವಯೋಸಹಜ ಕಣ್ಣಿನ ಸಮಸ್ಯೆಗಳಿಗೆ ಎದುರಾಗುವುದನ್ನು ತಪ್ಪಿಸುತ್ತದೆ. ಉದಾಹರಣೆಗೆ: ಲಿಂಬೆಹಣ್ಣು, ಆರೆಂಜ್, ದ್ರಾಕ್ಷಿ

6. ಹಸಿರು ತರಕಾರಿ

6. ಹಸಿರು ತರಕಾರಿ

ಹಸಿರು ತರಕಾರಿಗಳಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ ಸಿ ಜತೆಗೆ ಲುಟೇನ್ ಮತ್ತು ಜೆಂಕ್ಷಾಂತೀನ್ ಎಂಬ ನಯನಸ್ನೇಹಿ ಅಂಶಗಳನ್ನು ಒಳಗೊಂಡಿದೆ. ಹಸಿರು ಬಣ್ಣದ ಸೊಪ್ಪು ಅಥವಾ ತರಕಾರಿಗಳು ಮೇಲಿನ ಅಂಶಗಳು ಅಧಿಕವಿರುವ ಕಾರಣ ಕಣ್ಣಿನ ಸಮಸ್ಯೆ ಎದುರಾದವರು ಅಥವಾ ಮುಂಜಾಗ್ರತಾ ಕ್ರಮವಾಗಿ ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ.

7. ಸಿಹಿ ಗೆಣಸು

7. ಸಿಹಿ ಗೆಣಸು

ಕ್ಯಾರೆಟ್‌ ನಂತೆಯೇ ಸಿಹಿಗೆಣಸಿನಲ್ಲಿ ಸಹ ಬೆಟಾ ಕೆರೋಟಿನ್ ಅಂಶ ಹೆಚ್ಚಿದ್ದು, ಇದರಲ್ಲೂ ಆ್ಯಂಟಿಆಕ್ಸಿಡೆಂಟ್ ವಿಟಮಿನ್ ಇ ಇದೆ. ಇದು ಕಣ್ಣಿನ ದೃಷ್ಟಿ ಸುಧಾರಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ.

8. ಮೊಟ್ಟೆ

8. ಮೊಟ್ಟೆ

ಮೊಟ್ಟೆಯಲ್ಲಿ ಲುಟೇನ್ ಹಾಗೂ ಜೆಂಕ್ಷಾಂತೀನ್ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿದೆ. ಅಲ್ಲದೇ ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ಸಿ, ಇ ಮತ್ತು ಜಿಂಕ್ ಇದೆ. ವಿಟಮಿನ್ ಎ ಕಾರ್ನಿಯಾವನ್ನು ರಕ್ಷಿಸುತ್ತದೆ. ಲುಟೇನ್ ಹಾಗೂ ಜೆಂಕ್ಷಾಂತೀನ್ ವಯೋಸಹಜ ಸಮಸ್ಯೆಗಳಿಂದ ಕಣ್ಣನ್ನು ಕಾಪಾಡುತ್ತದೆ. ನಿತ್ಯ ಒಂದು ಮೊಟ್ಟೆ ಸೇವಿಸುವುದರಿಂದ ವಯಸ್ಸಾದ ನಂತರ ಎದುರಾಗಬಹುದಾದ ದೃಷ್ಟಿ ಸಮಸ್ಯೆಗಳು ಕಾಣುವುದಿಲ್ಲ.

9. ನೀರು

9. ನೀರು

ನಿಮಗೆ ಅಚ್ಚರಿಯಾಗಬಹುದು ನೀರು ಹೇಗೆ ಕಣ್ಣಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ, ಹೇಗೆ ಸಹಕಾರಿ ಎಂದು. ನಿತ್ಯ ಅಧಿಕ ಪ್ರಮಾಣದ ನೀರು ಸೇವಿಸುವುದರಿಂದ ದೇಹದ ನಿರ್ಜಲೀಕರಣ (ಡಿಹೈಡ್ರೇಷನ್) ವನ್ನು ನಿವಾರಿಸುತ್ತದೆ. ಇದರಿಂದ ಕಣ್ಣು ಒಣಗುವುದನ್ನು ಸಹ ಇದು ತಪ್ಪಿಸುತ್ತದೆ.

10. ಹಾಲಿನ ಉತ್ಪನ್ನಗಳು

10. ಹಾಲಿನ ಉತ್ಪನ್ನಗಳು

ವಿಟಮಿನ್ ಎ ಮತ್ತು ಜಿಂಕ್ ಅಂಶವನ್ನು ಹೊಂದಿರುವ ಹಾಲು, ಮೊಸರು ಕಣ್ಣಿನ ದೃಷ್ಟಿ ಸುಧಾರಿಸಲು ಉತ್ತಮ ಆಹಾರ. ವಿಟಮಿನ್ ಎ ಕಾರ್ನಿಯಾವನ್ನು ರಕ್ಷಿಸಿದರೆ ಜಿಂಕ್ ಕಣ್ಣಿನ ಮೂಲಕ ಯಕೃತ್‌ಗೆ ವಿಟಮಿನ್‌ ಅನ್ನು ಪೂರೈಸುತ್ತದೆ. ಈ ಎರಡೂ ಪೋಷಕಾಂಶಗಳು ರಾತ್ರಿಯ ದೃಷ್ಟಿ ಹಾಗೂ ಕಣ್ಣಿನ ಪೊರೆಯ ರಕ್ಷಣೆಗೆ ಸಾಕಷ್ಟು ಉಪಕಾರಿಯಾಗಿದೆ.

English summary

Natural Foods That Improve And Protect Your Eyesight

Maintaining a well-balanced, healthy diet is key to keeping your eyes healthy, and may help reduce your risk for developing eye conditions. Serious eye conditions may be avoided if you include foods that contain a range of vitamins, nutrients, and minerals, known as antioxidants. Eye conditions that you may be able to prevent with a healthy diet plan. here are the healthy food list.
X
Desktop Bottom Promotion