For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್: ಸಲಿಂಗಿಗಳು, ಮಾಂಸಾಹಾರಿಗಳಿಗೆ ಈ ಕಾಯಿಲೆ ಹರಡುವುದೇ? ಮಂಗನಿಂದ ಇದು ಹರಡುತ್ತಿಯೇ?

|

ಕಳೆದ ಮೂರು ವರ್ಷಗಳಿಂದ ಜಗತ್ತು ಕೊರೊನಾ ಎಂಬ ಮಹಾಮಾರಿಯಿಂದಾಗಿ ಸಾಕಾಗಿ ಹೋಗಿದೆ, ಅದರ ಜೊತೆಗೆ ಹೊಸ-ಹೊಸ ಕಾಯಿಲೆಗಳು ಕೇಳಿ ಬರುತ್ತಲೇ ಇವೆ. ಕೆಲವೊಂದು ಕಾಯಿಲೆಗಳು ಈ ಹಿಂದೆ ಕಂಡು ಬಂದಿದ್ದರೂ ಆಗ ಅಷ್ಟು ಜನರಿಗೆ ಹರಡಿರಲಿಲ್ಲ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದು ಜಗತ್ತಿಗೆ ಆತಂಕ ಸೃಷ್ಟಿಸುತ್ತಿದೆ, ಮಂಕಿ ಪಾಕ್ಸ್‌ ಕೂಡ ಅಂಥದ್ದೇ ಕಾಯಿಲೆಯಾಗಿದೆ.

ಈಗಾಗಲೇ 19 ರಾಷ್ಟ್ರಗಳಲ್ಲಿ ಈ ಮಂಕಿವೈರಸ್‌ ಕಂಡು ಬಂದಿರುವುದರಿಂದ ನಿರ್ಲಕ್ಷ್ಯ ಮಾಡುವ ವಿಷಯವೇ ಅಲ್ಲ. ಇದು ಪ್ರಮುಖವಾಗಿ ಪ್ರಾಣಿಗಳಿಗೆ ಬರುವ ಕಾಯಿಲೆಯಾಗಿದ್ದು ಈಗ ಮನುಷ್ಯರಲ್ಲಿ ಕಂಡು ಬರುತ್ತಿದೆ.

ಮಂಕಿಪಾಕ್ಸ್‌ ರೋಗ ಲಕ್ಷಣಗಳು ಗಂಭೀರವಾದರೆ ಆರೋಗ್ಯಕ್ಕೆ ಅಪಾಯ. ಮಂಕಿಪಾಕ್ಸ್‌ಗೇ ಅಂತ ನಿರ್ದಿಷ್ಟವಾದ ಲಸಿಕೆಯಿಲ್ಲ, ಆದರೆ ಸಾಮೂಹಿಕವಾಗಿ ಚಿಕನ್‌ಪಾಕ್ಸ್ ಲಸಿಕೆ ಮೂಲಕ ಶೇ. 80ರಷ್ಟು ಕಾಯಿಲೆ ಹರಡುವುದನ್ನು ತಡೆಗಟ್ಟಬಹುದು ಎಂಬುವುದು ತಜ್ಞರ ಸಲಹೆಯಾಗಿದೆ.

ಮಂಕಿಪಾಕ್ಸ್ ಹರಡುವಿಕೆ ಹೆಚ್ಚುತ್ತಿದೆ, ಜೊತೆಗೆ ಸಾಮಾಜಿಕ ತಾಣದಲ್ಲಿ ಇದರ ಕುರಿತ ಕೆಲವೊಂದು ತಪ್ಪು ಕಲ್ಪನೆಗಳು ಕೂಡ ಹೆಚ್ಚಾಗುತ್ತಿದೆ, ಏನದು ತಪ್ಪು ಕಲ್ಪನೆಗಳು, ವಾಸ್ತವಂಶವೇನು ಎಂದು ನೋಡೋಣ ಬನ್ನಿ:

ಸುಳ್ಳು ಸುದ್ದಿ 1

ಸುಳ್ಳು ಸುದ್ದಿ 1

ಮಂಕಿಪಾಕ್ಸ್‌ ಮಂಕಿಗಳಿಂದ ಮಾತ್ರ ಹರಡುತ್ತಿದೆ

ಈ ಕಾಯಿಲೆಯ ಹೆಸರು ಮಂಕಿಪಾಕ್ಸ್‌,ಆಗಿರುವ ಕಾರಣ ಇದು ಮಂಗಗಳಿಂದ ಹರಡುತ್ತಿದೆ ಎಂದು ಕೆಲವರು ತಪ್ಪಾಗಿ ಭಾವಿಸುತ್ತಿದ್ದಾರೆ. ಮಂಕಿಪಾಕ್ಸ್‌ ಯಾವುದೇ ಪ್ರಾಣಿಗಳಿಂದಲೂ ಮನುಷ್ಯನಿಗೆ ಹರಡಬಹುದು. ಮಂಕಿಪಾಕ್ಸ್‌ ಸೋಂಕು ತಗುಲಿರುವ ಪ್ರಾಣಿಯ ಮಾಂಸ ಸೇವನೆಯಿಂದ ಅಥವಾ ಆ ಪ್ರಾಣಿಯನ್ನು ಮುಟ್ಟುವುದು, ಅದರ ಮಲ, ಮೂತ್ರ ತಾಗಿದಾಗ ಹರಡುವುದು.

ಸುಳ್ಳು ಸುದ್ದಿ 2

ಸುಳ್ಳು ಸುದ್ದಿ 2

ಮಾಂಸಾಹಾರ ಸೇವನೆಯಿಂದ ಮಂಕಿಪಾಕ್ಸ್ ಹರಡುವುದು

ಮಾಂಸಾಹಾರ ಸೇವನೆಯಿಂದ ಮಂಕಿಪಾಕ್ಸ್‌ ಹರಡುತ್ತಿಲ್ಲ. ಮಂಕಿಪಾಕ್ಸ್‌ ವೈರಸ್‌ ತಗುಲಿರುವ ಪ್ರಾಣಿಯ ಮಾಂಸಾ ಸೇವನೆ ಮಾಡಿದಾಗ ಹರಡುವುದು, ಮಾಂಸಾ ಚೆನ್ನಾಗಿ ಬೆಂದಿದ್ದರೆ ಭಯವಿಲ್ಲ. ಈ ಸಮಯದಲ್ಲಿ ಯಾವುದೇ ಪ್ರಾಣಿಯ ಮಾಂಸಾಹಾರ ಸೇವಿಸುವುದಾದರೆ ಚೆನ್ನಾಗಿ ಬೇಯಿಸಿ ತಿನ್ನಿ.

ಸುಳ್ಳು ಸುದ್ದಿ 3

ಸುಳ್ಳು ಸುದ್ದಿ 3

ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆಯಿಂದಾಗ ಮಂಕಿಪಾಕ್ಸ್ ಬರುತ್ತಿದೆ

ಪ್ರಮುಖವಾಗಿ ಬ್ರಿಟನ್‌ನಲ್ಲಿ ಈ ಬಗೆಯ ಸುಳ್ಳು ಸುದ್ದಿಗಳು ಹರಡುತ್ತಿದೆ. ತಜ್ಞರು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದು ಈ ಬಗೆಯ ಸುಳ್ಳು ಸುದ್ದಿ ಹರಡದಂತೆ ಜನರಲ್ಲಿ ಕೇಳಿಕೊಂಡಿದ್ದಾರೆ.

ಸುಳ್ಳು ಸುದ್ದಿ 4

ಸುಳ್ಳು ಸುದ್ದಿ 4

ಮಂಕಿಪಾಕ್ಸ್‌ ಕೋವಿಡ್‌ 19ಗಿಂತ ಭಯಾನಕ

ಮಂಕಿಪಾಕ್ಸ್‌ ಕೋವಿಡ್‌ 19ನಷ್ಟು ಭೀಕರವಾಗಿಲ್ಲ ಎಂದು NTAGI (National Technical Advisory Group on Immunisation) ಹೇಳಿದೆ. ಆದರೆ ಇದು ಹರಡುತ್ತಿರುವುದು ಆತಂಕ ಹೆಚ್ಚಿಸಿದೆ. ಭಾರತದಲ್ಲಿ ಇದುವರೆಗೆ ಮಂಕಿಪಾಕ್ಸ್ ಪತ್ತೆಯಾಗಿಲ್ಲ.

ಸುಳ್ಳು ಸುದ್ದಿ 5

ಸುಳ್ಳು ಸುದ್ದಿ 5

ಗೇ ಅಥವಾ ಬೈಸೆಕ್ಷ್ಯೂಯಲ್‌ ಪುರುಷರಿಗೆ ಮಾತ್ರ ಹರಡುವುದು

ಇದು ತಲೆ-ಬುಡವಿಲ್ಲದ ಸುಳ್ಳು-ಸುದ್ದಿಯಾಗಿದೆ. ಕೆಲವು ಗೇ ವ್ಯಕ್ತಿಗಳಲ್ಲೂ ಈ ವೈರಸ್‌ ಕಂಡು ಬಂದಿರುವುದರಿಂದ ಈ ರೀತಿಯ ಸುದ್ದಿ ಹರಡುತ್ತಿದೆ. ಈ ವೈರಸ್‌ಗೆ ಲಿಂಗ ಅಥವಾ ಯಾವುದೇ ಬೇಧವಿಲ್ಲ, ಯಾರಿಗೂ ಬೇಕಾದರೂ ಹರಡಬಹುದು. ಮಂಕಿವೈರಸ್‌ ತಗುಲಿರುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಅಥವಾ ಅವರ ದೇಹದ ದ್ರವ ತಾಗಿದಾಗ, ಅವರು ಕೆಮ್ಮಿದಾಗ, ಸೀನಿದಾಗ, ತುಂಬಾ ಹೊತ್ತು ಅವರ ಎದುರು ನಿಂತು ಕೊಂಡರೂ ಮಂಕಿವೈರಸ್‌ ಹರಡುತ್ತದೆ.

English summary

Myths about the monkeypox virus debunked in Kannada

Monkeypox Myths : Here are the common Myths about the monkeypox virus that are debunked in Kannada. Read on.
Story first published: Friday, May 27, 2022, 12:22 [IST]
X
Desktop Bottom Promotion