Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭಾರತಕ್ಕೂ ಲಗ್ಗೆ ಇಟ್ಟಿತೇ ಮಂಕಿಪಾಕ್ಸ್? ಕೊಲ್ಕತ್ತಾದ ಯುವಕನಲ್ಲಿ ರೋಗದ ಲಕ್ಷಣ : ರೋಗ ಲಕ್ಷಣಗಳೇನು?
ಕೊರೊನಾ....ಇದು ಜಗತ್ತನ್ನೇ ತಲ್ಲಣಗೊಳಿಸಿದ ಹೆಸರು. ಈ ಹೆಸರನ್ನ ಕೇಳಿದರೆ ಈಗಲೂ ಜನರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿದ ಸಾವು-ನೋವು ಅಷ್ಟಿಷ್ಟಲ್ಲ. ಕೊರೊನಾ ಎಂಬ ಮಹಾಮಾರಿ ಬಗ್ಗೆ ಅಪಾರ ಭಯವಿದೆ.

ಆದರೆ ಲಸಿಕೆ, ಸರಿಯಾದ ಆರೋಗ್ಯ ಕ್ರಮಗಳಿಂದ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಆದರೂ ಮತ್ತೆ ಹೊಸ ಅಲೆ ಬರುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಯೂ ಆರೋಗ್ಯ ಇಲಾಖೆ ನೀಡುತ್ತಿದೆ. ಇದೀಗ ಈ ಮಧ್ಯೆ ಜನರ ನಿದ್ದೆಯನ್ನು ಕೆಡಿಸಿರುವುದು, ಮಂಕಿ ಪಾಕ್ಸ್ ಕಾಯಿಲೆ. ಹೌದು, ಜಗತ್ತಿನಲ್ಲಿ ಇದೀಗ ಮಂಕಿ ಪಾಕ್ಸ್ ಅಥವಾ ಮಂಗನ ಸಿಡುಬು ಕಾಯಿಲೆ ಲಗ್ಗೆ ಇಟ್ಟಿದ್ದು ಮತ್ತೆ ಜನರನ್ನು ಭಯಬೀಳುವಂತೆ ಮಾಡಿದೆ.
ಮೂಲತಃ ಆಫ್ರಿಕಾ ಖಂಡದ ಮಳೆಗಾಡುಗಳ ದೇಶಗಳಿಗೆ ಸೀಮಿತವಾಗಿದ್ದ ಮಂಕಿಪಾಕ್ಸ್ ಈಗ ಜಾಗತಿಕವಾಗಿ ಹಬ್ಬುತ್ತಿದೆ.
ಇನ್ನು ಭಾರತಕ್ಕೂ ಲಗ್ಗೆ ಇಟ್ಟಿದ್ದು, ಕೊಲ್ಕತ್ತಾ ಮೂಲದ ಯುವಕನಲ್ಲಿ ಮಂಕಿ ಪಾಕ್ಸ್ ನ ಲಕ್ಷಣ ಕಂಡು ಬಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ಏನಿದು ಮಂಕಿಪಾಕ್ಸ್?
ಮಂಕಿಪಾಕ್ಸ್ ಎಂದರೆ ಸಿಡುಬಿನ ಒಂದು ಪ್ರಭೇದ. 1958ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿತ್ತು. ಇದು ಮನುಷ್ಯರಲ್ಲೂ ಕಾಣುತ್ತದೆ ಎಂದು 1970ರಲ್ಲಿ ತಿಳಿದುಬಂದಿತು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್, ಓರ್ವ ಕಾಯಿಲೆಪೀಡಿತ ವ್ಯಕ್ತಿಯಿಂದ ಮತ್ತೊಬ್ಬನಿಗೆ ಹರಡುತ್ತದೆ. ಇದೀಗ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಮಂಕಿಪಾಕ್ಸ್ ರೋಗ ಕಂಡುಬಂದಿದ್ದು, ಬಳಿಕ ಆಫ್ರಿಕಾ ಹಾಗೂ ಯುರೋಪ್ ಗೂ ಹಬ್ಬಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಈವರೆಗೆ ಜಗತ್ತಿನ ಅನೇಕ ದೇಶಗಳಲ್ಲಿ ಮಂಕಿ ಪಾಕ್ಸ್ ಕಾಯಿಲೆ ಕಂಡುಬಂದಿದೆಯಂತೆ. ವೇಗವಾಗಿ ದೇಶಗಳೊಳಗೆ ಮಂಕಿ ಪಾಕ್ಸ್ ಕಾಯಿಲೆ ಹಬ್ಬುತ್ತಿದೆ. ಈವರೆಗೆ ಜಗತ್ತಿನ 6000 ಮಂದಿಯಲ್ಲಿ ಪಾಂಕಿ ಪಾಕ್ಸ್ ಸೋಂಕು ಕಂಡುಬಂದಿದೆ ಎಂದು ಮಾಹಿತಿ ನೀಡಿದೆ. ಆದರೆ ಯಾರು ಕೂಡ ಮಂಕಿ ಪಾಕ್ಸ್ ನಿಂದ ಸತ್ತಿಲ್ಲ ಆದರೆ ಇದು ತೀವ್ರ ತರದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಮಾಡುತ್ತಿದೆ ಎಂದು ಕೂಡ ಎಚ್ಚರಿಸಿದೆ.

ಮಂಕಿ ಪಾಕ್ಸ್ ನ ಲಕ್ಷಣಗಳೇನು?
ಇತರ ಸಿಡುಬುಗಳಲ್ಲಿ ಬರುವಂತೆ ಇದರಲ್ಲೂ ಜ್ವರ, ತಲೆನೋವು, ಬೆನ್ನುನೋವು, ಮೈ-ಕೈ ನೋವು, ಸುಸ್ತು ಕಾಡುತ್ತವೆ. ಗಡ್ಡದ ಬಳಿ, ಕಂಕುಳಿನಲ್ಲಿ ಸಣ್ಣ ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣುತ್ತವೆ. ದುಗ್ಧಗ್ರಂಥಿಗಳು ನಮ್ಮ ಶರೀರದ ರಕ್ಷಕ ವ್ಯವಸ್ಥೆಯ ಭಾಗಗಳು.
ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಇರುವ ಇವು, ಶರೀರಕ್ಕೆ ರೋಗ ಬಂದಾಗ ಹಿರಿದಾಗುತ್ತವೆ. ಜ್ವರ ಆರಂಭವಾದ ಮೂರು ದಿನಗಳ ಒಳಗೆ ಚರ್ಮ ಕೆಂಪಾಗಿ, ಸಬ್ಬಕ್ಕಿ ಕಾಳಿನ ಗಾತ್ರದ ಬೊಕ್ಕೆಗಳು ಏಳುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನಂತಹ ದ್ರಾವಣ ಇರುತ್ತದೆ. ಕೆಲವೊಮ್ಮೆ ಈ ದ್ರಾವಣದ ಬಣ್ಣ ತುಸು ಹಳದಿ ಇರಬಹುದು.
ಒಬ್ಬ ವ್ಯಕ್ತಿಯ ಮೈ ಮೇಲೆ ಬೆರಳೆಣಿಕೆಯಷ್ಟು ಸಂಖ್ಯೆಯಿಂದ ಹಿಡಿದು ಸಾವಿರಾರು ಬೊಕ್ಕೆಗಳು ಕಾಣಬಹುದು. ಇವು ಮುಖ್ಯವಾಗಿ ಮುಖ, ಅಂಗೈ ಮತ್ತು ಅಂಗಾಲುಗಳ ಮೇಲೆ ಇರುತ್ತದಾದರೂ, ತೀವ್ರವಾದ ಸೋಂಕಿನಲ್ಲಿ ಬಾಯಿ, ಕಣ್ಣು ಸೇರಿ ಶರೀರದ ಎಲ್ಲೆಡೆ ಬರಬಹುದು.ಈ ಲಕ್ಷಣಗಳು ಸುಮಾರು 2ರಿಂದ 4 ವಾರಗಳ ಕಾಲ ಇರುತ್ತವೆ. ಆನಂತರ ಯಾವುದೇ ಚಿಕಿತ್ಸೆ ಇಲ್ಲದೆಯೂ ತಂತಾನೇ ಸರಿಹೋಗುತ್ತವೆ.
ಆದರೆ, ನವಜಾತ ಶಿಶುಗಳಲ್ಲಿ, ಕ್ಯಾನ್ಸರ್ ರೋಗಿಗಳಲ್ಲಿ, ಸ್ಟೀರಾಯ್ಡ್ ಔಷಧದ ಚಿಕಿತ್ಸೆ ಪಡೆಯುವವರಲ್ಲಿ, ಅನಿಯಂತ್ರಿತ ಮಧುಮೇಹಿಗಳಲ್ಲಿ, ಶರೀರದ ರಕ್ಷಕ ವ್ಯವಸ್ಥೆ ದುರ್ಬಲವಾಗಿರುವವರಲ್ಲಿ ಮಂಕಿಪಾಕ್ಸ್ ಪ್ರಾಣಾಂತಕವಾಗಬಹುದು.

ತೀವ್ರ ತರದ ಆರೋಗ್ಯ ಸಮ್ನಸ್ಯೆ ಕಾಡುತ್ತದೆ!
ಮಂಕಿ ಪಾಕ್ಸ್ ನಿಂದ ಕೇವಲ ಜ್ವರ ಬರುವುದು ಮಾತ್ರವಲ್ಲ. ತೀವ್ರ ತರದ ಆರೋಗ್ಯ ಸಮಸ್ಯೆ ಕೂಡ ಕಾಡುತ್ತದೆ. ಕೆಲವರಲ್ಲಿ ಬೊಕ್ಕೆಗಳು ಒಡೆದು, ಆ ಜಾಗಗಳಲ್ಲಿ ವ್ರಣವಾಗಬಹುದು;
ಶ್ವಾಸಕೋಶವನ್ನು ಸೇರಿದ ವೈರಸ್ ತೀವ್ರ ನ್ಯುಮೋನಿಯಾವನ್ನು ಉಂಟುಮಾಡಬಹುದು; ಕಣ್ಣಿನಲ್ಲಿ ಕಾಣುವ ಬೊಕ್ಕೆಗಳು ಕಣ್ಣಿನ ಸೋಂಕು ಉಂಟುಮಾಡಿ, ಅಂಧತ್ವಕ್ಕೆ ಕಾರಣವಾಗಬಹುದು. ನೂರು ಮಂದಿ ಮಂಕಿಪಾಕ್ಸ್ ರೋಗಿಗಳಲ್ಲಿ ಸುಮಾರು ಐದು ಜನರಿಗೆ ಈ ರೀತಿಯ ಸಮಸ್ಯೆಗಳು ಕಾಣಬಹುದು ಎಂದು ಅಂದಾಜಿಸಲಾಗಿದೆ. ಈ ಮೊದಲು ಮಂಕಿ ಪಾಕ್ಸ್ ಪ್ರಾಣಿಗಳ ನಡುವೆ ಮಾತ್ರ ಹರಡುವ ಕಾಯಿಲೆ ಎಂದು ಅಂದಾಜಿಸಲಾಗಿತ್ತು. ಇದೀಗ ಇದು ಮನುಷ್ಯ-ಮನುಷ್ಯನಿಗೂ ಹರಡುತ್ತದೆ ಎಂದು ತಿಳಿದುಬಂದಿದೆ.
ರೋಗದಿಂದ ಬಳಲುವ ಯಾವುದೇ ವ್ಯಕ್ತಿ ಸುಮಾರು ಎರಡರಿಂದ ನಾಲ್ಕು ವಾರಗಳ ಕಾಲ ಮಂಕಿಪಾಕ್ಸ್ ವೈರಸ್ ಅನ್ನು ಹರಡಬಲ್ಲರು. ಬೊಕ್ಕೆಗಳು, ಅದರ ಒಳಗಿನ ದ್ರವ, ಬೊಕ್ಕೆಗಳು ಒಡೆದಾಗ ಬರಬಹುದಾದ ರಕ್ತ, ಮೊದಲಾದುವು ವೈರಸ್ ಹರಡುವಿಕೆಗೆ ದಾರಿಯಾಗುತ್ತವೆ. ರೋಗಿಯ ಬಟ್ಟೆ, ಹಾಸಿಗೆ, ಟವೆಲ್, ಅವರು ಊಟ ಮಾಡಿದ ತಟ್ಟೆ, ಬಟ್ಟಲುಗಳ ಮೇಲೆಯೂ ಮಂಕಿಪಾಕ್ಸ್ ವೈರಸ್ ಕೆಲಕಾಲ ಜೀವಂತ ಇರುತ್ತದೆ.

ಕೊಲ್ಕತ್ತಾದ ಯುವಕನಿಗೆ ಮಂಕಿ ಪಾಕ್ಸ್ ಲಕ್ಷಣ!
ವಿದೇಶಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಂಕಿ ಪಾಕ್ಸ್ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿದೆ. ಕೊಲ್ಕತ್ತಾದ ಯುವಕನಲ್ಲಿ ಮಂಕಿ ಪಾಕ್ಸ್ ಲಕ್ಷಣ ಕಂಡುಬಂದಿದೆ. ಈ ಹಿನ್ನೆಲೆ ಈತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತ ಇತ್ತೀಚೆಗಷ್ಟೇ ಯುರೋಪ್ ದೇಶದಿಂದ ಬಂದಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಯುವಕನ ಸ್ಯಾಂಪಲನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕಳುಹಿಸಲಾಗಿದ್ದು, ಯುವಕನನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ. ವರದಿ ಬಳಿಕ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.



Click it and Unblock the Notifications











