For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಹೇಗೆ ಮಂಕಿಪಾಕ್ಸ್ ಹಬ್ಬುತ್ತೆ? ಇದರ ಲಕ್ಷಣಗಳೇನು? ಪೋಷಕರು ವಹಿಸಬೇಕಾದ ಎಚ್ಚರಿಕೆಗಳೇನು?

|

ಮಂಕಿ ಪಾಕ್ಸ್ ಸದ್ಯ ಜಗತ್ತಿನಾದ್ಯಂತ ಜನರನ್ನು ಭಯ ಹುಟ್ಟಿಸಿರುವಂತ ವೈರಸ್. ಹೌದು. ಮಂಕಿಪಾಕ್ಸ್ ಸದ್ಯ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಮುಂದುವರಿದ ದೇಶಗಳಾದ ಅಮೆರಿಕ, ಯುರೋಪ್ ನಲ್ಲಿ ತೀವ್ರ ತರದಲ್ಲಿ ಮಂಕಿಪಾಕ್ಸ್ ಹಬ್ಬುತ್ತಿದೆ. ಅದರಲ್ಲೂ ವಿಶ್ವ ಆರೋಗ್ಯ ಸಂಸ್ಥೆ (WHO) ಹಲವು ವರ್ಷಗಳ ಬಳಿಕ ಮಂಕಿಪಾಕ್ಸ್ ಹಿನ್ನೆಲೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಮಕ್ಕಳಿರುವ ಪೋಷಕರಿಗೂ ಮಂಕಿಪಾಕ್ಸ್ ಭಯ ಮೂಡಿಸಿದೆ. ತಮ್ಮ ಮಕ್ಕಳಿಗೂ ಮಂಕಿಪಾಕ್ಸ್ ರೋಗ ತಟ್ಟಬಹುದು ಎನ್ನುವ ಅಂಜಿಕೆ ಇದೆ. ಹಾಗಾದರೆ ಈ ಮಂಕಿಪಾಕ್ಸ್ ಮಕ್ಕಳಿಗೆ ಹೇಗೆ ಹರಡುತ್ತೆ? ಇದನ್ನು ತಪ್ಪಿಸುವುದು ಹೇಗೆ? ಎನ್ನುವುದರ ಬಗ್ಗ ಮಾಹಿತಿ ಆಧಾರಿತ ಸ್ಟೋರಿ ಇಲ್ಲಿದೆ ಓದಿ.

ಮಂಕಿ ಪಾಕ್ಸ್ ಎಂದರೇನು?

ಮಂಕಿ ಪಾಕ್ಸ್ ಎಂದರೇನು?

ಮಂಕಿಪಾಕ್ಸ್ ಎಂದರೆ ಸಿಡುಬಿನ ಒಂದು ಪ್ರಭೇದ. 1958ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿತ್ತು. ಆದರೆ ಈ ಮಂಗಗಳಿಗೆ ಹೇಗೆ ಈ ರೋಗ ಬಂತು ಅನ್ನುವುದು ಇನ್ನು ನಿಗೂಡವಾಗಿದೆ. ಇನ್ನು ಈ ಮಂಕಿಪಾಕ್ಸ್ ರೋಗ 1970ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲೂ ಕಂಡುಬಂತು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್, ಓರ್ವ ಕಾಯಿಲೆಪೀಡಿತ ವ್ಯಕ್ತಿಯಿಂದ ಮತ್ತೊಬ್ಬನಿಗೆ ಹರಡುತ್ತದೆ. ಇದೀಗ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಮಂಕಿಪಾಕ್ಸ್ ರೋಗ ಕಂಡುಬಂದಿದ್ದು, ಬಳಿಕ ಆಫ್ರಿಕಾ ಹಾಗೂ ಯುರೋಪ್ ಗೂ ಹಬ್ಬಿದೆ.

ಇದೀಗ ಅಮೆರಿಕಾದಲ್ಲಿ ಮಂಕಿಪಾಕ್ಸ್ ಅಟ್ಟಹಾಸ ಮೆರೆಯುತ್ತಿದೆ. ಜುಲೈ 27ರವರೆಗೆ ಅಮೆರಿಕ್ದಲ್ಲಿ 4,639 ಮಂದಿಗೆ ಮಂಕಿಪಾಕ್ಸ್ ರೋಗ ವಕ್ಕರಿಸಿದೆ. ಇನ್ನು ಭಾರತಕ್ಕೂ ಮಂಕಿಪಾಕ್ಸ್ ಲಗ್ಗೆ ಇಟ್ಟಿದ್ದು ಈವರೆಗೆ ನಾಲ್ಕು ಮಂದಿಯಲ್ಲಿ ಮಂಕಿಪಾಕ್ಸ್ ರೋಗ ಕಾಣಿಸಿಕೊಂಡಿದೆ. ಇನ್ನು ಅಮೆರಿಕದಲ್ಲಿ ಗೇ ಸೆಕ್ಸ್ ಮಾಡುತ್ತಿರುವ ಪುರುಷರಲ್ಲಿ ಅತೀ ಹೆಚ್ಚು ಮಂಕಿ ಪಾಕ್ಸ್ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನಗಳು ತಿಳಿಸಿವೆ. ಅದೇನೆ ಇದ್ದರೂ ಮಂಕಿಪಾಕ್ಸ್ ಸದ್ಯ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದೆ. ಹಾಗಾದರೆ ಮಕ್ಕಳಿಗೆ ಇದು ಹೇಗೆ ಹರಡುತ್ತೆ ಇದರ ಲಕ್ಷಣ ಮಕ್ಕಳ ಮೇಲೆ ಹೇಗೆ ಇರುತ್ತದೆ? ಅನ್ನೋದಕ್ಕೆ ಮುಂದೆ ಓದಿ.

ಶಿಶುಗಳು ಮತ್ತು ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಹೇಗೆ ಇರುತ್ತದೆ?

ಶಿಶುಗಳು ಮತ್ತು ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಹೇಗೆ ಇರುತ್ತದೆ?

ಶಿಶುಗಳು ಮತ್ತು ಮಕ್ಕಳಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿದ್ದರೆ ಇದರ ಲಕ್ಷಣಗಳು ಕಾಣಲು ಐದು ದಿನಗಳಿಂದ ಮೂರು ವಾರಗಳವರೆಗೆ ಹಿಡಿಯಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ. ಹಾಗಾದರೆ ಯಾವೆಲ್ಲ ಲಕ್ಷಣಗಳು ಮಕ್ಕಳಲ್ಲಿ ಮತ್ತು ಶಿಶುಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಸಾಮಾನ್ಯದಂತೆ ಮಕ್ಕಳಲ್ಲೂ ಮಂಕಿಪಾಕ್ಸ್ ರೋಗ ತಗುಲಿದರೆ ದೇಹದ ಮೇಲೆ ದದ್ದುಗಳು ಉಂಟಾಗುತ್ತದೆ. ಈ ದದ್ದುಗಳು ಮೊಡವೆಗಳು ಅಥವಾ ಗುಳ್ಳೆಗಳಂತೆ ಕಾಣಬಹುದು. ಇವುಗಳು ಮುಖದ ಮೇಲೆ, ಬಾಯಿಯೊಳಗೆ ಮತ್ತು ಕೈಗಳು, ಪಾದಗಳು ಅಥವಾ ಎದೆಯಂತಹ ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು.

ಈ ರೀತಿ ಇದ್ದರೆ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಇದರ ಜೊತೆಗೆ ಸಾಮಾನ್ಯವಾಗಿ ಮಕ್ಕಳು ಮತ್ತು ಶಿಶಿಗಳಲ್ಲಿ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಬಳಲಿಕೆ ಅಥವಾ ಆಯಾಸವು ಉಂಟಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಬೆಸ್ಟ್.

ಹೇಗೆ ಮಂಕಿಪಾಕ್ಸ್ ಮಕ್ಕಳಿಗೆ ಹರಡಬಹುದು?

ಹೇಗೆ ಮಂಕಿಪಾಕ್ಸ್ ಮಕ್ಕಳಿಗೆ ಹರಡಬಹುದು?

ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ಹರಡುತ್ತದೆ. ಅಂದರೆ ಸೋಂಕಿತ ರೋಗಿಯ ಸಂಪರ್ಕದ ಮೂಲಕ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ಬಿರುಕು ಬಿಟ್ಟ ಚರ್ಮ, ಉಸಿರಾಟದ ಪ್ರದೇಶ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ವೈರಸ್ ಪ್ರವೇಶಿಸಬಹುದು. ಇದಲ್ಲದೇ ದೈಹಿಕ ಸಂಪರ್ಕ ಅಂದರೆ ಮಕ್ಕಳಿಗೆ ಸೋಂಕಿತ ವ್ಯಕ್ತಿ ಕಿಸ್ ಕೊಡುವುದು, ಆಲಿಂಗನ ಮಾಡುವುದು, ಎತ್ತಿಕೊಳ್ಳುವುದರ ಮೂಲಕವು ಸೋಂಕು ತಗುಲಬಹುದು.

ಇದಲ್ಲದೇ, ಸೋಂಕಿತ ಮುಟ್ಟಿದಂತಹ ಹಾಸಿಗೆ ಮತ್ತು ಬಟ್ಟೆಯಂತಹ ಕಲುಷಿತವಾಗಿರುವ ವಸ್ತುಗಳ ಸಂಪರ್ಕದ ಮೂಲಕವೂ ವೈರಸ್ ಹರಡುತ್ತದೆ. ಇನ್ನು ಗರ್ಭಿಣಿ ತಾಯಿಗೆ ಮಂಕಿಪಾಕ್ಸ್ ಇದ್ದರೆ ಅವರ ಶಿಶುವಿಗೂ ಮಂಕಿಪಾಕ್ಸ್ ರೋಗ ಕಾಣಿಸಿಕೊಳ್ಳಬಹುದು. ಇನ್ನು ಸೋಂಕಿತ ಪ್ರಾಣಿಗಳು ನಿಮ್ಮ ಮಕ್ಕಳಿಗೆ ಕಚ್ಚಿದರೆ ಅಥಾವ ಅವುಗಳ ಉಗುರು ತಾಗಿ ಚರ್ಮದಲ್ಲಿ ಗೀಚುಗಳಾದರೆ ಅವುಗಳಿಂದ ಮಂಕಿಪಾಕ್ಸ್ ತಗುಲಬಹುದು.

ಮಕ್ಕಳು ಮತ್ತು ಗರ್ಭಿಣಿಯರಿಗೆ ಮಂಕಿಪಾಕ್ಸ್ ಅಪಾಯಕಾರಿಯೇ?

ಮಕ್ಕಳು ಮತ್ತು ಗರ್ಭಿಣಿಯರಿಗೆ ಮಂಕಿಪಾಕ್ಸ್ ಅಪಾಯಕಾರಿಯೇ?

ಮಂಕಿಪಾಕ್ಸ್ ಅನ್ನುವ ರೋಗ ವಿಭಿನ್ನ ರೋಗವಾಗಿದ್ದು ಇದೀಗ ಜಗತ್ತಿನಾದ್ಯಂತ ತೀವ್ರ ತರದಲ್ಲಿ ಹರಡುತ್ತಿದೆ ಇನ್ನು ಸಿಡಿಎಸ್ ಪ್ರಕಾರ, 8 ವರ್ಷ ಕೆಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಮಂಕಿಪಾಕ್ಸ್ ಅಪಾಯಕಾರಿ ಎಂದು ಹೇಳಿದೆ. ಗರ್ಭಿಣಿಯಾಗಿರುವ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಹೀಗಾಗಿ ಬೇಗನೆ ಮಂಕಿಪಾಕ್ಸ್ ರೋಗಕ್ಕೆ ಅವರು ತುತ್ತಾಗಬಹುದು. ಆದರೂ ಸಾವಿನ ಭಯ ಬೇಡ ಎಂದು ಸಿಡಿಎಸ್ ಹೇಳಿದೆ. ಎಚ್ಚರಿಕೆಯಿಂದ ಇದ್ದರೆ ಸಮಸ್ಯೆಗಳನ್ನು ದೂರ ಇಡಬಹುದು ಎಂದು ಹೇಳಿದೆ. ಯಾಕೆಂದರೆ ಗರ್ಭಿಣಿ ಮಹಿಳೆಯರಿಗೆ ಮಂಕಿಪಾಕ್ಸ್ ಲಸಿಕೆ ಕೂಡ ನೀಡಲು ಆಗುವುದಿಲ್ಲ.

ಮದ್ದು ಸೇವಿಸಿದರೆ ಬೇರೆ ಬೇರೆ ಸಮಸ್ಯೆಗಳು ಕಾಡಬಹುದು. ಇನ್ನು ಗರ್ಭೀಣಿ ತಾಯಿಗೆ ಮಂಕಿಪಾಕ್ಸ್ ಬಂದರೆ ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೆಯೂ ಬೀರಬಹುದು ಎಂದು ವೈದ್ಯರು ಕೂಡ ಹೇಳಿದ್ದಾರೆ. ಹೀಗಾಗಿ ಜಾಗೃತರಾಗಿರಿ ಎಂದಿದೆ. ಇನ್ನು ಎಂಟು ವರ್ಷದ ಕೆಳಗಿನ ಮಕ್ಕಳಿಗೂ ಕೊರೊನಾ ವೈರಸ್ ಅಪಾಯಕಾರಿ ಎಂದು ಹೇಳಿರುವ ಸಿಡಿಎಸ್, ಅವರಿಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹೀಗಾಗಿ ಬೇಗ ವೈರಸ್ ತಗುಲಬಹುದು. ಅಲ್ಲದೇ ಮೆಲ್ಲಗೆ ಗುಣವಾಗುವ ಸಾಧ್ಯತೆ ಎಂದಿದೆ.

ಮಂಕಿಪಾಕ್ಸ್ ಬಗ್ಗೆ ಪೋಷಕರು ಏನು ತಿಳಿದುಕೊಳ್ಳಬೇಕು?

ಮಂಕಿಪಾಕ್ಸ್ ಬಗ್ಗೆ ಪೋಷಕರು ಏನು ತಿಳಿದುಕೊಳ್ಳಬೇಕು?

ಕೊರೊನಾ ಕಡಿಮೆಯಾಗುತ್ತಿದ್ದಂತೆ ಇದೀಗ ಮಂಕಿಪಾಕ್ಸ್ ಲಗ್ಗೆ ಇಟ್ಟಿದೆ. ಹೀಗಾಗಿ ಮಂಕಿಪಾಕ್ಸ್ ಏನು, ಇದರ ಲಕ್ಷಣ ಏನು ಎನ್ನುವುದನ್ನು ಮೊದಲು ಪೋಷಕರು ತಿಳಿದುಕೊಳ್ಳಬೇಕು. ಜೊತೆಗೆ ಮಕ್ಕಳ ಲಸಿಕೆ ಬಗ್ಗೆಯೂ ಪೋಷಕರು ಗಮನಹರಿಸುವುದು ಉತ್ತಮ. ಇದರ ಜೊತೆಗೆ ಮಕ್ಕಳಿಗೆ ಮಂಕಿಪಾಕ್ಸ್ ರೋಗ ತಟ್ಟದಂತೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಹಾಗಾದರೆ ಮುಂಜಾಗ್ರತಾ ಕ್ರಮಗಳು ಏನು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಮಂಕಿಪಾಕ್ಸ್ ಶಂಕಿತ ಹಾಗೂ ಸೋಂಕಿತರಿಂದ ದೂರ ಇರಿಸುವುದು!

ಮಂಕಿಪಾಕ್ಸ್ ಶಂಕಿತ ಹಾಗೂ ಸೋಂಕಿತರಿಂದ ದೂರ ಇರಿಸುವುದು!

ಮೊದಲು ಪೋಷಕರು ಮಾಡಬೇಕಾದ ಕೆಲಸ ಎಂದರೆ ಮಂಕಿಪಾಕ್ಸ್ ಶಂಕಿತ ಹಾಗೂ ಸೋಂಕಿತರಿಂದ ಮಕ್ಕಳನ್ನು ದೂರ ಇರಿಸಬೇಕು. ಅಲ್ಲದೇ, ಯಾವುದಾದರು ವ್ಯಕ್ತಿ ಮೇಲೆ ಮಂಕಿಪಾಕ್ಸ್ ನ ರೀತಿಯ ಗುಳ್ಳೆಗಳಿದ್ದರೆ ಅವರಿಂದ ಮಕ್ಕಳನ್ನು ದೂರ ಇರಿಸಬೇಕು. ಅಲ್ಲದೇ ಅಂತಹ ವ್ಯಕ್ತಿಗಳ ಕೈಯಲ್ಲಿ ಮಕ್ಕಳನ್ನು ಕೊಡುವುದು, ಅವರೊಂದಿಗೆ ಬೆಡ್ ಶೇರ್ ಮಾಡಿಕೊಳ್ಳುವುದು, ಯಾವುದೇ ರೀತಿಯ ಸಂಪರ್ಕ ಆಗದಂತೆ ನೋಡಿಕೊಳ್ಳಬೇಕಾದದ್ದು ಪೋಷಕರ ಜವಾಬ್ಧಾರಿ. ಅಥಾವ ಪೋಷಕರಿಗೆ ಇಂತಹ ಲಕ್ಷಣ ಅಥವಾ ಸೋಂಕು ಇದ್ದರೆ ಮಕ್ಕಳಿಂದ ದೂರ ಉಳಿಯುವುದು ಒಳ್ಳೆಯದು.

ಕೈಯನ್ನು ವಾಶ್ ಮಾಡಿ!

ಕೈಯನ್ನು ವಾಶ್ ಮಾಡಿ!

ಪೋಷಕರು ನಿಮ್ಮ ಮಕ್ಕಳನ್ನು ಅಥವಾ ಮಕ್ಕಳನ್ನು ಮುಟ್ಟುವಾಗ ಕೈ ವಾಶ್ ಮಾಡಿ ಮುಟ್ಟುವುದು ಒಳ್ಳೆಯದು. ಹೊರಎ ಹೋದರೆ ಅಥವಾ ಏನಾದರೂ ವಸ್ತು ಮುಟ್ಟಿದರೆ ಸೋಪ್, ನೀರು ಅಥವಾ ಸ್ಯಾನಿಟೈಜರ್ ನಿಂದ ವಾಶ್ ಮಾಡಬೇಕು. ಇನ್ನು ಮಕ್ಕಳು ಕೂಡ ಹೊರಗೆ ಹೋಗಿ ಬಂದರೆ ಅವರ ಕೈ ಕಾಲು ತೊಳೆಸಿ ಅವರ ಸುರಕ್ಷತೆಯನ್ನು ಕಾಪಾಡಬಹುದು.

ಮಾಸ್ಕ್ ಧರಿಸುವುದು!

ಮಾಸ್ಕ್ ಧರಿಸುವುದು!

ಕೊರೊನಾ ಬಂದ ಮೇಲೆ ಮನುಷ್ಯನ ಜೀವನದಲ್ಲಿ ಮಾಸ್ಕ್ ಒಂದು ಅಂಗವಾಗಿ ಬದಲಾಗಿದೆ. ಇದು ಒಳ್ಳೆಯದೆ. ಇದು ಸರ್ವ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಮಾಸ್ಕ್ ಧರಿಸಿದರೆ ನಮ್ಮ ಉಸಿರಾಟದ ಗಾಳಿ, ಮಾತುಕತೆಯ ವೇಳೆಗಿನ ಗಾಳಿ, ಕೆಮ್ಮಿನ ಗಾಳಿ, ಸೀನು ಹೀಗೆ ಮಂಕಿಪಾಕ್ಸ್ ಹರಡಲು ಬೇಕಾಗಿರುವ ಎಲ್ಲಾ ಚಟುವಟಿಕೆಗೆ ಬ್ರೇಕ್ ಬೀಳುತ್ತದೆ. ಅಂದರೆ ನಾವು ಈ ಎಲ್ಲಾ ಚಟುವಟಿಕೆ ನಡೆಸಿದರು ಯಾವುದೇ ರೀತಿಯ ಪರಿಣಾಮ ಬೇರೆಯವರಿಗೆ ಬೀಳೋದಿಲ್ಲ. ಅಲ್ಲದೇ ಬೇರೆಯವರಿಂದ ನಮಿಗೂ ಮಾಸ್ಕ್ ಹಾಕುವುದರಿಂದ ರಕ್ಷಣೆ ಸಿಗುತ್ತದೆ. ಹೀಗಾಗಿ ಶಿಶುವನ್ನು ಕೈಯಲ್ಲಿ ಹಿಡಿಯುವಾಗ, ಮಕ್ಕಳ ಜೊತೆ ಮಾತನಾಡುವಾಗ ಮಾಸ್ಕ್ ಹಾಕಿದರೆ ಉತ್ತಮ. ಇನ್ನು ಮಕ್ಕಳು ಹೊರಗೆ ಹೋಗುವಾಗ ಮಾಸ್ಕ್ ಹಾಕಬಹುದು.

ಲಸಿಕೆ ಹಾಕಿಸುವುದು!

ಲಸಿಕೆ ಹಾಕಿಸುವುದು!

ಮಂಕಿಪಾಕ್ಸ್ ಸೋಂಕಿಗೆ ಸಂಬಂಧಪಟ್ಟ ಎರಡು ಲಸಿಕೆಗಳು ಅಮೆರಿಕದಲ್ಲಿದೆ ಹೀಗಾಗಿ ಲಸಿಕೆಯನ್ನು ರೋಗ ಬರುವ ಮುನ್ನವೇ ನಿಯಂತ್ರಣ ರೂಪದಲ್ಲಿ ಹಾಕಿಕೊಂಡರೆ ಮಂಕಿಪಾಕ್ಸ್ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಇನ್ನು ಮಂಕಿಪಾಕ್ಸ್ ತೀವ್ರ ರೀತಿಯ ಲಕ್ಷ್ಣವಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಔಷಧಿ ತೆಗೆದುಕೊಳ್ಳಬಹುದು. ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತನೊಬ್ಬ ಔಷಧಿ ಮೂಲಕ ಗುಣಮುಖನಾಗಿದ್ದಾನೆ.

ಹೀಗೆ ಈ ಎಲ್ಲಾ ಮಾಹಿತಿಗಳ ಮೂಲಕ ಮಕ್ಕಳಿಗೆ ಮಂಕಿಪಾಕ್ಸ್ ಬರದಂತೆ ನೋಡಿಕೊಳ್ಳಬಹುದು. ಜಾಗೃತೆ ವಹಿಸಿದರೆ ಯಾವುದೇ ರೋಗವು ತಟ್ಟುವುದಿಲ್ಲ

English summary

Monkeypox & Children: Symptoms, Vaccines and More Parent FAQs in kannada

Monkeypox & Children: Symptoms, Vaccines and More Parent FAQs in kannada Read On
Story first published: Tuesday, August 2, 2022, 18:07 [IST]
X
Desktop Bottom Promotion