Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳೇನು? ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳೇನು?
ಮನಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ವಿಶ್ವದಲ್ಲಿ ಆತಂಕ ಕೂಡ ಹೆಚ್ಚಾಗುತ್ತಿದೆ. ಈ ಮಂಕಿಪಾಕ್ಸ್ ಪ್ರಕರಣ ಲಿಂಗ, ವಯಸ್ಸು ಬೇಧವಿಲ್ಲದೆ ಎಲ್ಲರಲ್ಲೂ ಕಂಡು ಬರುತ್ತಿದೆ. ಈ ವೈರಸ್ 19 ರಾಷ್ಟ್ರಗಳಿಗೆ ಹರಡಿದೆ. ಇದು ಜೂನೋಟಿಕ್ ಡಿಸೀಜ್ ಅಂದರೆ ಪ್ರಾಣಿಗಳಿಂದ ಹರಡುವ ಕಾಯಿಲೆಯಾಗಿದೆ.
ಮಂಕಿಪಾಕ್ಸ್ ಲಕ್ಷಣಗಳು ಪ್ರಾರಂಭದಲ್ಲಿ ಚಿಕನ್‌ಪಾಕ್ಸ್‌ನಂತೆಯೇ ಕಂಡು ಬರುವುದರಿಂದ ಚಿಕನ್‌ಪಾಕ್ಸ್ ಬಂದರೂ ಪೋಷಕರು ಆತಂಕ ಪಡುತ್ತಿದ್ದಾರೆ. ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳೇನು, ಮಕ್ಕಳಿಗೆ ಇದು ಎಷ್ಟು ಅಪಾಯಕಾರಿ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಮಕ್ಕಳಲ್ಲಿ ರೋಗ ಲಕ್ಷಣಗಳು ಚಿಕನ್‌ಪಾಕ್ಸ್‌ನಂತೆಯೇ ಇರುತ್ತದೆ
ಮಕ್ಕಳಲ್ಲಿ ಮಂಕಿ ವೈರಸ್ ಚಿಕನ್‌ಪಾಕ್ಸ್‌ನಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ.

ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ
ಆರೋಗ್ಯ ತಜ್ಞರು 'ಮಂಕಿಪಾಕ್ಸ್ ಕುರಿತು ಜನರು ತುಂಬಾ ಆತಂಕ ಪಡಬೇಕಾಗಿಲ್ಲ, ಇದು ಕೋವಿಡ್ 19ನಂಥ ಕಾಯಿಲೆ ಅಲ್ಲ' ಎಂದು ಹೇಳುತ್ತಿದ್ದಾರೆ. ಮಂಕಿಪಾಕ್ಸ್‌ನಿಂದ ಆರೋಗ್ಯ ಸ್ಥಿತಿ ಗಂಭೀರವಾಗುವ `ಸಾಧ್ಯತೆ ಶೇ.1ರಷ್ಟಿದೆ.

ಮಂಕಿಪಾಕ್ಸ್ ಲಕ್ಷಣಗಳೇನು?
ಮಂಕಿಪಾಕ್ಸ್ ಪ್ರಮುಖ ಲಕ್ಷಣವೆಂದರೆ ಜ್ವರ ಹಾಗೂ ಮೈಕೈ ನೋವು. ಈ ಮಂಕಿಪಾಕ್ಸ್ ತಗುಲಿದಾಗ ಪ್ರಮುಖವಾಗಿ ದುಗ್ಧರಸ ಗ್ರಂಥಿಯ ಊತ ಕಂಡುಬರುವುದು. ನಂತರ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಗುಳ್ಳೆಗಳು ಏಳುವುದು, ಪ್ರಾರಂಭದಲ್ಲಿ ಚುಕ್ಕಿ-ಚುಕ್ಕಿಯಾಗಿ ಕಾಣುವ ಗುಳ್ಳೆಗಳು ದೊಡ್ಡದಾಗಿ ಕೀವು ತುಂಬಿಕೊಳ್ಳುವುದು. ನಂತರ ಒಣಗಿ ಬಿದ್ದು ಹೋಗುತ್ತೆ. ಈ ರೋಗ ಲಕ್ಷಣಗಳು 2-4 ವಾರಗಳ ಇರುತ್ತದೆ.

ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ
ಮಂಕಿ ವೈರಸ್ ತಗುಲಿ 3-4 ದಿನಗಳಲ್ಲಿ ಲಕ್ಷಣಗಳು ಕಂಡು ಬರುವುದು, ಮಕ್ಕಳಿಗೆ ಬಂದರೆ ಮಕ್ಕಳು ಬೇಗನೆ ಸುಸ್ತಾಗುತ್ತಾರೆ. ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ಕಂಡು ಬರುವುದು ಕಡಿಮೆ, ಆದರೆ ಇತರ ಲಕ್ಷಣಗಳು ಕಂಡು ಬರುವುದು. ಮಕ್ಕಳ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಮಂಕಿಪಾಕ್ಸ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳೇನು?
* ಪ್ರಮುಖವಾಗಿ ಕೈಗಳ ಸ್ವಚ್ಛತೆ ಕಡೆ ಗಮನ ನೀಡಬೇಕು(ಆಗಾಗ ಸೋಪು ಹಚ್ಚಿ ಕೈ ತೊಳೆಯಿರಿ)
* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟಲು ಸೋಂಕು ತಗುಲಿರುವ ಪ್ರಾಣಿಗಳನ್ನು ಬರಿಗೈಯಲ್ಲಿ ಮುಟ್ಟುವುದು ಅವುಗಳನ್ನು ಆರೈಕೆ ಮಾಡುವುದು ಮಾಡಬೇಡಿ.
* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ
* ವೈರಸ್ ತಗುಲಿರುವ ವ್ಯಕ್ತಿ ಅಥವಾ ವ್ಯಕ್ತಿಯ ಮೈ ಮೇಲೆ ಗುಳ್ಳೆಗಳು ಕಾಣಿಸಿಕೊಂಡರೆ ಅಂತರ ಕಾಯ್ದುಕೊಳ್ಳಿ.
* ಅವರ ಮಲ, ಮೂತ್ರ, ದೇಹದ ದ್ರವ ತಾಗದಂತೆ ಎಚ್ಚರವಹಿಸಿ.



Click it and Unblock the Notifications
