For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಕಪ್: ಯಾರು ಬಳಸಬಾರದು?

|

ಭಾರತದಲ್ಲಿ ಲಭ್ಯವಿರುವ ಅನೇಕ ಮೆನ್‌ಸ್ಟ್ರೆಲ್‌ ಕಪ್‌ಗಳು ಚೈನಾ ಮೂಲದ್ದು ಆಗಿದೆ, ಆ ಕಪ್‌ಗಳಿಗಿಂತ ಗುಣಮಟ್ಟ ಹಾಗೂ ಸುರಕ್ಷತೆಯ ಮೆನ್‌ಸ್ಟ್ರೆಲ್ ಕಪ್‌ ಅನ್ನು ತಯಾರಿಸಲಾಗಿದೆ ಎಂದು ತಯಾರಕ ಕಂಪನಿ ಹೇಳಿದೆ . ಇದಕ್ಕೆ 'AmTrue' Q ಕಪ್ಸ್ ಎಂದು ಹೆಸರಿಡಲಾಗಿದ್ದು ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಾಗಿದೆ.

ಈ ಕಪ್‌ ಆರ್ಗಾನಿಕ್ ಆಗಿದ್ದು ಎಲ್ಲಾ ಬಗೆಯ ಸೋಂಕುಗಳಿಂದ ಪೂರ್ಣ ಸುರಕ್ಷಿತೆ ನೀಡಲಿದೆ ಎಂದು ಕಂಪನಿ ಹೇಳಿದೆ.

Menstrual Cup

ಇತ್ತೀಚಿನ ದಿನಗಳಲ್ಲಿ ಮೆನ್‌ಸ್ಟ್ರೆಲ್‌ ಕಪ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ ಕಾರಣ ಇದು ತುಂಬಾನೇ ಕಂಫರ್ಟ್ ಹಾಗೂ ಎಕಾನಮಿ ಫ್ರೆಂಡ್ಲಿ. ಮೆನ್‌ಸ್ಟ್ರೆಲ್ ಕಪ್‌ ಇದ್ದರೆ ಅದನ್ನು ದೀರ್ಘ ಸಮಯದವರೆಗೆ ಬಳಸಬಹುದಾಗಿದೆ, ಅದೇ ಪ್ಯಾಡ್ ಆದರೆ ದಿನದಲ್ಲಿ 3-4 ಬಾರಿ ಪ್ಯಾಡ್ ಬದಲಾಯಿಸಬೇಕು, ಅಲ್ಲದೆ ಮೆನ್‌ಸ್ಟ್ರೆಲ್‌ ಕಪ್‌ನಷ್ಟು ಕಂಫರ್ಟ್ ನೀಡುವುದಿಲ್ಲ. ಆದ್ದರಿಂದ ಮೆನ್‌ಸ್ಟ್ರೆಲ್ ಕಪ್‌ ನಿಧಾನಕ್ಕೆ ಮಹಿಳೆಯರ ಆಯ್ಕೆ ಆಗುತ್ತಿದೆ.

ಈ ಮೆನ್‌ಸ್ಟ್ರಲ್ ಕಪ್‌ ಪ್ಯಾಡ್‌ಗಿಂತ ಉತ್ತಮ ಹೌದು ಆದರೆ ಇವರು ಬಳಸುವಂತಿಲ್ಲ:

1. ಸಿಲಿಕಾನ್ ಅಲರ್ಜಿ : ಮುಟ್ಟಿನ ಕಪ್ ಅಥವಾ ಮೆನ್‌ಸ್ಟ್ರಲ್ ಕಪ್‌ ಅನ್ನು ಸಿಲಿಕಾನ್‌ನಿಂದ ಮಾಡಲಾಗಿದೆ. ಏಕೆಂದರೆ ಇದನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಸಿಲಿಕಾನ್‌ನಿಂದ ತಯಾರಿಸಲಾಗುವುದು. ಕೆಲವರಿಗೆ ಇದನ್ನು ಧರಿಸಿದಾಗ ಅಲರ್ಜಿ ಉಂಟಾಗಿ ಊತ, ತುರಿಕೆ ಬರಬಹುದು. ಆದ್ದರಿಂದ ಅಲರ್ಜಿ ಇದ್ದರೆ ಬಳಕೆ ಮಾಡುವಂತಿಲ್ಲ.

2. ಗರ್ಭನಿರೋಧಕ ಐಯುಡಿ ಬಳಸುತ್ತಿದ್ದರೆ: ಸಣ್ಣ ಟಿ-ಆಕಾರದ ತಾಮ್ರದ ವಸ್ತು ವೀರ್ಯಾಣುಗಳು ಅಂಡಾಣುಗಳ ಸಂಪರ್ಕ ಬರುವುದನ್ನು ತಡೆಯುತ್ತದೆ, ಇದರಿಂದ ಗರ್ಭಧಾರಣೆ ತಡೆಗಟ್ಟಬಹುದು. ನೀವು ಐಯುಡಿ ಹಾಕಿದರೂ ಬಳಸಬಹುದು, ಆದರೆ ಐಯುಡಿಗೆ ತಗುಲಿದರೆ ಅದರ ಸ್ಥಾನ ಸ್ವಲ್ಪ ಬದಲಾದರೂ ಗರ್ಭಧಾರಣೆ ಸಾಧ್ಯತೆ ಇರುವುದರಿಂದ ನೀವು ಗರ್ಭಧಾರಣೆ ತಡೆಗಟ್ಟಲು ಈ ವಿಧಾನ ಬಳಸುತ್ತಿದ್ದರೆ ಮೆನ್‌ಸ್ಟ್ರಲ್‌ ಕಪ್ ಬಳಸಬೇಡಿ.

3. ಯೋನಿ ಶಸ್ತ್ರಚಿಕಿತ್ಸೆ : ಯೋನಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರೆ ಬಳಸಬೇಡಿ. ನೀವು ವೈದ್ಯರ ಸಲಹೆ ಪಡೆದು ಬಳಸಬಹುದು.

4. ಹೆರಿಗೆಯಾದಾಗ: ಹೆರಿಗೆಯಾದಾಗ ಮುಟ್ಟಿನ ಕಪ್‌ ಅಥವಾ ಟ್ಯಾಂಪೂನ್ ಗಳನ್ನು ಬಳಸಬೇಡಿ. ಈ ಸಮಯದಲ್ಲಿ ಪ್ಯಾಡ್‌ ಬಳಸಿ.

ಮುಟ್ಟಿನ ಕಪ್‌ ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?
ನೀವು ಗುಣಮಟ್ಟದ ಮುಟ್ಟಿನ ಕಪ್‌ ಖರೀದಿಸಬೇಕು. ಅಲ್ಲದೆ ಖರೀದಿಸುವ ಮುನ್ನ ಸರಿಯಾದ ಗಾತ್ರದ ಕಪ್ ಖರೀದಿಸಿ. ಮದುವೆಯಾಗಿರದಿದ್ದರೆ ಸ್ಮಾಲ್ ಸೈಜ್, ಮದುವೆಯಾಗಿದ್ದರೆ ಮೀಡಿಯಂ, ನಾರ್ಮಲ್ ಡೆಲಿವರಿಯಾಗಿದ್ದರೆ ಲಾರ್ಜ್ ಸೈಜ್ ಬಳಸಿ.

ಮುಟ್ಟಿನ ಕಪ್‌ ಬಳಸುವಾಗ ಶುಚಿತ್ವ ತುಂಬಾ ಮುಖ್ಯ
ಮುಟ್ಟಿನ ಕಪ್ ಬಲಸುವಾಗ ಸ್ವಚ್ಛತೆ ಕಡೆ ಗಮನ ನೀಡಬೇಕು. ಇದನ್ನು ಚೆನ್ನಾಗಿ ಕುದಿಸಿ ನಂತರ ಬಳಸಿ. ಮುಟ್ಟಿನ ದಿನಗಳು ಕಳೆದ ಮೇಲೂ ಚೆನ್ನಾಗಿ ಕುದಿಸಿ, ಸ್ವಚ್ಛ ಬಟ್ಟೆಯಲ್ಲಿ ಒರೆಸಿ ತೆಗೆದಿಡಿ. ನಂತರ ಕೂಡ ಬಳಸುವ ಮುನ್ನ ಕುದಿಸಿ ಬಳಸಿ. ಈ ರೀತಿ ಮಾಡುವುದರಿಂದ ಸೋಂಕು ತಡೆಗಟ್ಟಬಹುದು.

English summary

Menstrual Cup: Who Can Use it and Should Avoid These Cup

Menstrual Cup: Who Can Use and Should Avoid These Cup, read on...
Story first published: Friday, December 2, 2022, 23:02 [IST]
X
Desktop Bottom Promotion