For Quick Alerts
ALLOW NOTIFICATIONS  
For Daily Alerts

ಮದ್ಯ ಮತ್ತು ಮಾದಕ ದ್ರವ್ಯ ಆಸೆ ತಡೆಗಟ್ಟುವ ಆಹಾರಗಳಿವು

|

ವ್ಯಸನವೆಂದರೆ ಯಾವುದಾದರೊಂದು ಆಹಾರ ಅಥವಾ ವಿಷಯಕ್ಕೆ ಅತಿ ಹೆಚ್ಚು ದೇಹ ಒಗ್ಗಿಕೊಳ್ಳುವಂತೆ, ಇದನ್ನು ಬಿಟ್ಟಿರಲಾರದೇ ಇರದಷ್ಟು ಪ್ರಭಾವಕ್ಕೆ ಒಳಗಾಗಿರುವುದು. ಮದ್ಯಪಾನ, ಧೂಮಪಾನ ಹಾಗೂ ಮಾದಕದ್ರವ್ಯಗಳ ವ್ಯಸನ ಅತಿ ಮಾರಕವಾಗಿದ್ದು ಇದರಿಂದ ಹೊರಬರುವುದು ಬಹುತೇಕ ಅಸಾಧ್ಯವೆನ್ನುವಷ್ಟು ಕಷ್ಟವಾಗಿದೆ.

Foods To Avoid Alcohol carving

ಆದರೆ ದೃಢ ಮನಸ್ಸು ಮತ್ತು ಸೂಕ್ತ ಕ್ರಮಗಳಿಂದ ಈ ಅಸಾಧ್ಯವನ್ನೂ ಸಾಧ್ಯವಾಗಿಸಬಹುದು. ಆರೋಗ್ಯ ತಜ್ಞರ ಪ್ರಕಾರ ಧೂಮಪಾನ, ಮದ್ಯಸೇವನೆ ಮತ್ತು ಮಾದಕವಸ್ತು ಸೇವನೆ (ಸಣ್ಣ ಬಳಕೆ) ಯ ಅಭ್ಯಾಸವನ್ನು ತ್ಯಜಿಸಿದ ನಂತರ, ಇದು ಕಡುಬಯಕೆಗಳಿಂದಾಗಿ ಚೇತರಿಸಿಕೊಳ್ಳುವ ವ್ಯಕ್ತಿಗಳಲ್ಲಿ ಸುಮಾರು 50 ಪ್ರತಿಶತದಷ್ಟು ಜನರಿಗೆ ಈ ವ್ಯಸನ ಮರುಕಳಿಸಲು ಕಾರಣವಾಗುತ್ತದೆ.

ಚೇತರಿಕೆಯ ಆರಂಭಿಕ ಹಂತಗಳಲ್ಲಿ, ಕಡುಬಯಕೆಗಳು ಅಸಹನೀಯವಾಗಬಹುದು, ಆಗಾಗ್ಗೆ ದೈಹಿಕ ಕಿರಿಕಿರಿ ಮತ್ತು ವಾಂತಿ, ತಲೆತಿರುಗುವಿಕೆ, ಹಸಿವಿನ ಕೊರತೆ ಮುಂತಾದ ತೊಂದರೆಗಳು ಎದುರಾಗಬಹುದು.

ದೀರ್ಘಕಾಲೀನ ಮತ್ತು ಸಂಪೂರ್ಣ ಚೇತರಿಕೆಗೆ, ಸರಿಯಾದ ಪೋಷಣೆ ಮತ್ತು ಸಾಕಷ್ಟು ನೀರನ್ನು ಕುಡಿಯುತ್ತಿರುವುದು ಅಗತ್ಯವಾಗಿದೆ. ಚೇತರಿಕೆಯ ಸಮಯದಲ್ಲಿ ಸರಿಯಾದ ಆಹಾರ ಮತ್ತು ಅಗತ್ಯ ಪೋಷಕಾಂಶಗಳ ಸಹಾಯದಿಂದ ಔಷಧ ಮತ್ತು ಮದ್ಯಸೇವನೆಯ ಕಡುಬಯಕೆಗಳನ್ನು ನಿರ್ವಹಿಸಬಹುದು ಎಂದು ಅಧ್ಯಯನಗಳು ಸೂಚಿಸಿವೆ.

ಚೇತರಿಕೆಯ ಸಮಯದಲ್ಲಿ ಆಲ್ಕೋಹಾಲ್ ಮತ್ತು ಮಾದಕದ್ರವ್ಯ ಸೇವನೆಯ ಕಡುಬಯಕೆ

ಚೇತರಿಕೆಯ ಸಮಯದಲ್ಲಿ ಆಲ್ಕೋಹಾಲ್ ಮತ್ತು ಮಾದಕದ್ರವ್ಯ ಸೇವನೆಯ ಕಡುಬಯಕೆ

ಮದ್ಯವ್ಯಸನಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾದಾಗ ಇವರ ಮದ್ಯಪಾನದ ಹಂಬಲ ಭುಗಿಲೇಳುತ್ತದೆ. ತಕ್ಷಣವೇ ಸಕ್ಕರೆ ಅಂಶವಿರುವ ಆಹಾರ ಅಥವಾ ತಿಂಡಿ ತಿನ್ನುವ ಮೂಲಕ ಇದನ್ನು ಸೂಕ್ತವಾಗಿ ನಿರ್ವಹಿಸಬಹುದು ಆದರೆ ಇದು ಆ ಕ್ಷಣದ ಪರಿಹಾರ ಮಾತ್ರ.

ದೀರ್ಘಕಾಲೀನ ಪರಿಹಾರಕ್ಕಾಗಿ ಇದರ ಬದಲು ಸಕ್ಕರೆಯ ಅಂಶ ಹೆಚ್ಚಿರುವ ಹಣ್ಣಿನ ತುಂಡು ಅಥವಾ ಕೆಲವು ಚೀಸ್ ನಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದರೆ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸೂಕ್ತ ಮಟ್ಟದಲ್ಲಿ ಇರಿಸಲು ನೆರವಾಗುವ ಮೂಲಕ ಈ ಬಯಕೆಗಳು ಭುಗಿಲೇಳದಂತೆ ನಿರ್ವಹಿಸಬಹುದು.

ಮಾದಕದ್ರವ್ಯಗಳು ವ್ಯನಸಿಯ ದೇಹದಿಂದ ಅಗತ್ಯವಾದ ಅಮೈನೊ ಆಮ್ಲಗಳ ನಷ್ಟಕ್ಕೂ ಕಾರಣವಾಗುತ್ತದೆ, ಇದು ನಿಮ್ಮ ಕಡುಬಯಕೆಗಳನ್ನು ನಿರ್ವಹಿಸುವ ಮತ್ತು ಅಂತಿಮವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಆಹಾರಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳುವುದು ಅಗತ್ಯ. ಹೆರಾಯಿನ್, ಆಲ್ಕೋಹಾಲ್, ತಂಬಾಕು, ಗಾಂಜಾ, ಕೊಕೇನ್, ಸ್ಪೀಡ್ ಹಾಗೂ ಎಕ್ಸ್ಟಸಿ ಎಂಬ ಮಾತ್ರೆಗಳು ಇತ್ಯಾದಿಗಳ ಅತಿಯಾದ ಬಳಕೆಯು ಈ ಕೆಳಗಿನ ಆರೋಗ್ಯ (ಮಾನಸಿಕ ಮತ್ತು ದೈಹಿಕ) ಸಮಸ್ಯೆಗಳಿಗೆ ಕಾರಣವಾಗಬಹುದು:

  • ರಿವಾರ್ಡ್ ಡೆಫಿಶಿಯೆನ್ಸಿ ಸಿಂಡ್ರೋಮ್ (Reward Deficiency Syndrome (RDS)
  • ಖಿನ್ನತೆ
  • ಶಕ್ತಿ ಉಡುಗುವಿಕೆ
  • ಏಕಾಗ್ರತೆಯ ಕೊರತೆ
  • ಮಾದಕ ದ್ರವ್ಯದ ಕಡುಬಯಕೆಗಳು
  • ಕುಂದುವ ಸ್ವಾಭಿಮಾನ
  • ಗೀಳು / ಕಡ್ಡಾಯ ಎನ್ನುವಂತಹ ನಡವಳಿಕೆಗಳು
  • ನಿದ್ರೆಯ ತೊಂದರೆಗಳು
  • ಶಾಖ ಅಸಹಿಷ್ಣುತೆ
  • ಫೈಬ್ರೊಮೈಯಾಲ್ಗಿಯ (Fibromyalgia)
  • ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆ (Seasonal affective disorder)
  • ಉದ್ವಿಗ್ನ ಸ್ನಾಯುಗಳು
  • ಮನಸ್ಥಿತಿಯ ಏರು ಪೇರು
  • ಮಾನಸಿಕ ಒತ್ತಡ
  • ಹೈಪೊಗ್ಲಿಸಿಮಿಯಾ (Hypoglycemia)
  • ಮಾದಕ ದ್ರವ್ಯ ಮತ್ತು ಮದ್ಯದ ವ್ಯಸನ ನಿಮ್ಮ ದೇಹವು ಅನಾರೋಗ್ಯದಿಂದಿರಲು ಕಾರಣವಾಗುತ್ತದೆ ಮತ್ತು ನಿಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಗಳನ್ನು ಕಳೆದುಕೊಳ್ಳುತ್ತದೆ. ನೀವು ಕಳೆದುಕೊಳ್ಳುವ ಕೆಲವು ಪ್ರಮುಖ ಅಮೈನೋ ಆಮ್ಲಗಳೆಂದರೆ ಎಲ್-ಫಿನೈಲಾಲನೈನ್ (L-Phenylalanine) ಅಥವಾ L-Tyrosine ಮತ್ತು ಗಾಬಾ (GABA (Gamma-aminobutyric acid)) ಹಾಗೂ ಇನ್ನಿತರ ಅಮೂಲ್ಯ ಪೋಷಕಾಂಶಗಳು.

    ಎಲ್-ಫಿನೈಲಾಲನೈನ್ ಅತ್ಯಗತ್ಯವಾದ ಅಮೈನೊ ಆಮ್ಲವಾಗಿದ್ದು, ಮೆದುಳಿನಲ್ಲಿ ಎಲ್-ಟೈರೋಸಿನ್ ಮತ್ತು ಇತರ ಟ್ರಾನ್ಸ್ಮಿಟರುಗಳಾದ ಡೋಪಮೈನ್, ಎಪಿನೆಫ್ರಿನ್, ಸಿರೊಟೋನಿನ್ ಮತ್ತು ನೋರೆಪಿನೆಫ್ರಿನ್ ಗಳನ್ನು ತಯಾರಿಸಲು ದೇಹವು ಬಳಸುತ್ತದೆ. ಗಾಬಾ (ಗಾಮಾ-ಅಮೈನೊಬ್ಯುಟ್ರಿಕ್ ಆಮ್ಲ) ನೈಸರ್ಗಿಕ ಶಾಂತಗೊಳಿಸುವ ಮತ್ತು ಎಪಿಲೆಪ್ಟಿಕ್ ವಿರೋಧಿ ಏಜೆಂಟ್ ಮತ್ತು ಎಂಡಾರ್ಫಿನ್‌ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ, ಇದು ನಿಮಗೆ ಸಂತೋಷವನ್ನುಂಟುಮಾಡುವ ರಾಸಾಯನಿಕಗಳಾಗಿವೆ.

    ಕೆಲವು ಆಹಾರವನ್ನು ಸೇವಿಸುವುದರಿಂದ ಕಳೆದುಹೋದ ಅಮೈನೋ ಆಮ್ಲಗಳನ್ನು ಮತ್ತೊಮ್ಮೆ ದೇಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಒಟ್ಟಾರೆ ದೈಹಿಕ ಕಾರ್ಯಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಔಷಧ ಮತ್ತು ಮದ್ಯಸೇವನೆಯ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ. ನೋಡೋಣ:

    1. ಕೆಂಪುಮೆಣಸು (ಲಾಲ್ ಮಿರ್ಚಿ) ಅಥವಾ Cayenne Pepper

    1. ಕೆಂಪುಮೆಣಸು (ಲಾಲ್ ಮಿರ್ಚಿ) ಅಥವಾ Cayenne Pepper

    ಖಾರದ ಮೆಣಸು ಅಥವಾ ಕೆಂಪುಮೆಣಸು ನಿಮ್ಮ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಎಂಡಾರ್ಫಿನ್‌ಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ತನ್ಮೂಲಕ ಎಲ್ಲಾ ಅಗತ್ಯ ಭಾಗಗಳಿಗೆ ರಕ್ತವನ್ನು ಹರಿಸಲು ನೆರವಾಗುತ್ತದೆ. ಕೆಂಪುಮೆಣಸು ಆಲ್ಕೊಹಾಲ್ ಕಡುಬಯಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ವಾಕರಿಕೆ ಮತ್ತು ವಾಂತಿ ಮುಂತಾದ ಮದ್ಯಕ್ಕೆ ಮತ್ತೊಮ್ಮೆ ಶರಣಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಒಟ್ಟಾರೆ ಹಸಿವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಈ ಮಸಾಲೆಯುಕ್ತ ಅದ್ಭುತವಾದ ಹಸಿವನ್ನು ಉಂಟುಮಾಡುವ ಸಾಮರ್ಥ್ಯವು ಆಲ್ಕೊಹಾಲ್ ಸೇವನೆಯ ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹಸಿವಾಗದೇ ಇರುವುದು ಮತ್ತು ವಾಕರಿಕೆ ಮದ್ಯಕ್ಕೆ ಮತ್ತೊಮ್ಮೆ ಶರಣಾಗುವಿಕೆಗೆ ಸಂಬಂಧಿಸಿದ ಪ್ರಾಥಮಿಕ ಕಾಳಜಿಗಳಾಗಿವೆ.

    2. ಕಾವಾ (Kava)

    2. ಕಾವಾ (Kava)

    ಕಾವಾ ಎಂಬ ಗಿಡಮೂಲಿಕೆಯು ಕೊಕೇನ್, ಹೆರಾಯಿನ್, ಆಲ್ಕೋಹಾಲ್ ಮತ್ತು ತಂಬಾಕಿನ ವ್ಯಸನಕ್ಕೆ ಸಂಬಂಧಿಸಿದ ಕಡುಬಯಕೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಇದರಲ್ಲಿರುವ ಕವಲಕ್ಟೋನ್ಸ್ (kavalactones) ಎಂಬ ಸಕ್ರಿಯ ಘಟಕಾಂಶವು ಔಷಧದ ಕಡುಬಯಕೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾವಾವನ್ನು ಮಾತ್ರೆಗಳು, ಚಹಾ ಮತ್ತು ಟಿಂಚರ್ (ಚರ್ಮದ ಮೇಲೆ ಪಟ್ಟಿಗಳ ರೂಪದಲ್ಲಿ ಹಚ್ಚುವುದು) ರೂಪದಲ್ಲಿ ಸೇವಿಸಬಹುದು. ಆದರೆ ಕವಲಕ್ಟೋನ್ಸ್ ದೈನಂದಿನ ಪ್ರಮಾಣ 250 ಮಿಗ್ರಾಂ ಮೀರಬಾರದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

    3. ಮಿಲ್ಕ್ ಥಿಸಲ್ (ಗೋಖ್ರು)

    3. ಮಿಲ್ಕ್ ಥಿಸಲ್ (ಗೋಖ್ರು)

    ಮಿಲ್ಕ್ ಥಿಸಲ್ ಒಂದು ಬಗೆಯ ಸಸ್ಯವಾಗಿದ್ದು, ಇದನ್ನು ಯಕೃತ್ತು ಮತ್ತು ಪಿತ್ತಕೋಶದ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಈ ಸಸ್ಯವು ಸಿಲಿಮರಿನ್ (silymarin) ಎಂಬ ಸಕ್ರಿಯ ವಸ್ತುವನ್ನು ಹೊಂದಿರುತ್ತದೆ ಮತ್ತು ಇದು ಮದ್ಯವ್ಯಸನ ವಿರೋಧಿ ಗುಣಗಳಿಗೆ ಬಳಸಲಾಗುವ ಪರಿಣಾಮಕಾರಿ ಸಸ್ಯವಾಗಿದೆ. ಮದ್ಯ ಸೇವನೆಯ ಕಡುಬಯಕೆಗಳನ್ನು ನಿಯಂತ್ರಿಸುವುದರ ಜೊತೆಗೆ, ಸಿಲಿಮರಿನ್ ಅಂಗಾಂಗಗಳನ್ನು ಗುಣಪಡಿಸುವಲ್ಲಿಯೂ ಸಹಾಯ ಮಾಡುತ್ತದೆ. ಮಿಲ್ಕ್ ಥಿಸಲ್ ಮದ್ಯವ್ಯಸನಿಯ ಪಿತ್ತಜನಕಾಂಗದ ಕಾಯಿಲೆಯ ಪ್ರಗತಿಯನ್ನು ತಡೆಯಬಹುದೇ ಎಂದು ಪರೀಕ್ಷಿಸಲು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುತ್ತಿದೆ, ಏಕೆಂದರೆ ಇದು ಸುಧಾರಿತ ಮದ್ಯವ್ಯಸನದ ಪಿತ್ತಜನಕಾಂಗದ ಕಾಯಿಲೆ ಇರುವವರಲ್ಲಿ ರೋಗಲಕ್ಷಣಗಳನ್ನು ನಿರ್ವಹಿಸುತ್ತದೆ ಎಂದು ತೋರಿಸಲಾಗಿದೆ.

    4. ಡಾಂಡೇಲಿಯನ್ (sinhaparnee)

    4. ಡಾಂಡೇಲಿಯನ್ (sinhaparnee)

    ಶುದ್ಧೀಕರಣ ಮೂಲಿಕೆಯಾಗಿರುವ ಮದ್ಯವ್ಯಸನ ಹಿಮ್ಮೆಟ್ಟಿಸಲು ಮತ್ತು ಮದ್ಯ ವ್ಯಸನ ಹಿಂತೆಗೆದುಕೊಳ್ಳುವಾಗ ಎದುರಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಲಾಗಿದೆ. ಸಕ್ಕರೆಯ ಸೇವನೆಯ ಕಡುಬಯಕೆಗಳನ್ನು ನಿಗ್ರಹಿಸಲು ಗಿಡಮೂಲಿಕೆ ಸಹ ಪ್ರಯೋಜನಕಾರಿಯಾಗಿದೆ. ಇದರ ಹೂವಿನ ದಳಗಳನ್ನು ಒಣಗಿಸಿ ನಿಮ್ಮ ಚಹಾದಲ್ಲಿ ಸೇರಿಸುವ ಮೂಲಕ ಅಥವಾ ನಿಮ್ಮ ತಾಜಾ ದಂಡೇಲಿಯನ್ ಗಡ್ಡೆಗಳನ್ನು ತೆಳುವಾಗಿ ಕತ್ತರಿಸಿ ನಿಮ್ಮ ಸಲಾಡ್‌ಗೆ ಸೇರಿಸಿಕೊಳ್ಳುವ ಮೂಲಕ ನೀವು ಡಾಂಡೇಲಿಯನ್ ಅನ್ನು ಸೇವಿಸಬಹುದು. ಒಣಗಿದ ಬೇರುಗಳನ್ನು 3 ರಿಂದ 5 ಮಿಗ್ರಾಂ ನಷ್ಟು ಪ್ರಮಾಣವನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು.

    5. ಸೇಂಟ್ ಜಾನ್ಸ್ ವೋರ್ಟ್ (St. John’s Wort (ಚೋಲಿ ಫುಲ್ಯಾ))

    5. ಸೇಂಟ್ ಜಾನ್ಸ್ ವೋರ್ಟ್ (St. John’s Wort (ಚೋಲಿ ಫುಲ್ಯಾ))

    ತೀವ್ರವಾದ ಖಿನ್ನತೆಗೆ ಚಿಕಿತ್ಸೆ ನೀಡಲು ಸೇಂಟ್ ಜಾನ್ಸ್ ವೋರ್ಟ್ ಎಂಬ ಮೂಲಿಕೆಯನ್ನು ಬಳಸಲಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ, ಏಕೆಂದರೆ ಇದರ ಪರಿಣಾಮವು ಅನೇಕ ಸಲಹೆ ಮಾಡಲಾದ ಖಿನ್ನತಾ-ಶಮನಕಾರಿ ಔಷಧಿಗಳೊಂದಿಗೆ ಹೋಲುತ್ತದೆ. ಗಿಡಮೂಲಿಕೆಗಳ ಖಿನ್ನತೆ-ಶಮನಕಾರಿಯು ಹೈಪರ್ಫೊರಿನ್ (hyperforin) ಎಂಬ ರಾಸಾಯನಿಕವನ್ನು ಹೊಂದಿರುತ್ತದೆ, ಇದು ಮದ್ಯ ಸೇವನೆಯನ್ನು ಕಡಿಮೆ ಮಾಡಲು ನೇರವಾಗಿ ಕಾರಣವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

    6. ಪ್ಯಾಶನ್ ಹೂ (Passion Flower (ಜುಮಾಕಾ ಲತಾ))

    6. ಪ್ಯಾಶನ್ ಹೂ (Passion Flower (ಜುಮಾಕಾ ಲತಾ))

    ಆತಂಕ, ನಿದ್ರಾಹೀನತೆ ಮತ್ತು ಹೊಟ್ಟೆಯ ತೊಂದರೆಗಳಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರಯೋಜನಕಾರಿ ಎಂದು ಸಾಬೀತಾಗಿರುವ ಈ ಹೂವು ಮದ್ಯಸೇವನೆಯಿಂದ ಉಂಟಾಗುವ ಹುಣ್ಣುಗಳು ಶೀಘ್ರವಾಗಿ ಗುಣವಾಗಲು ಸಹಾಯ ಮಾಡುತ್ತದೆ. ಮಾದಕದ್ರವ್ಯಗಳ ಸೇವನೆಯ ಕಡುಬಯಕೆಗಳ ಮೇಲೆ ಸಸ್ಯವು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನಗಳು ಅಗತ್ಯವಾಗಿವೆ.

    7. ಕುಡ್ಜು (Kudzu (ಸುರಲ್))

    7. ಕುಡ್ಜು (Kudzu (ಸುರಲ್))

    ಜಪಾನೀಸ್ ಅರಾರೋಟು (Japanese arrowroot) ಎಂದೂ ಕರೆಯಲ್ಪಡುವ ಈ ಕಾಡಿನ ವೈನ್‌ನಲ್ಲಿ ಡೈಡ್ಜಿನ್ (daidzin) ಎಂಬ ರಾಸಾಯನಿಕವಿದೆ, ಇದು ಮದ್ಯಸೇವನೆಯ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ. ನೀವು ಇದನ್ನು ಚಹಾದಂತೆ ಸೇವಿಸಬಹುದು ಅಥವಾ ಟಿಂಚರ್ ರೂಪದಲ್ಲಿ (ಈ ಅಂಶವನ್ನು ನೆನೆಸಿದ ಪಟ್ಟಿಗಳನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದು) ಬೆಚ್ಚಗಿನ ನೀರಿನಲ್ಲಿ ದಿನಕ್ಕೆ ಮೂರರಿಂದ ಐದು ಬಾರಿ ಬಳಸಬಹುದು. ಕುಡ್ಜು ಮೂಲದ ಪ್ರಮಾಣಿತ ಪ್ರಮಾಣವೆಂದರೆ ದಿನಕ್ಕೆ 30 ರಿಂದ 150 ಮಿಗ್ರಾಂ.

    8. ಗಿಂಗ್ಕೊ ಬಿಲೋಬಾ (Gingko Biloba-ಬಾಲ್ ಕುಮಾರಿ)

    8. ಗಿಂಗ್ಕೊ ಬಿಲೋಬಾ (Gingko Biloba-ಬಾಲ್ ಕುಮಾರಿ)

    ಗಿಂಕ್ಗೊ ಬಿಲೋಬವನ್ನು ಹೆಚ್ಚಾಗಿ ವೃದ್ದರಿಗೆ ಎದುರಾಗುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಆದರೆ ಎಲ್ಲಾ ವಯಸ್ಸಿನ ಜನರಿಗೆ ಇದು ಸಮಾನವಾಗಿ ಪ್ರಯೋಜನಕಾರಿಯಾಗಿದೆ. ಗಿಂಕ್ಗೊ ಬಿಲೋಬಾ ಪೂರಕಗಳು ಲಿಪಿಡ್ ಪೆರಾಕ್ಸಿಡೀಕರಣವನ್ನು (lipid peroxidation) ಕಡಿಮೆ ಮಾಡಲು ಅನುಕೂಲವಾಗುವ ಮೂಲಕ ಆಲ್ಕೊಹಾಲ್-ಪ್ರಭಾವ ಪೀಡಿತ-ಪಿತ್ತಜನಕಾಂಗದ ಗಾಯದಿಂದ (alcohol-induced liver) ರಕ್ಷಿಸಬಹುದು ಎಂದು ಅಧ್ಯಯನಗಳು ತೋರಿಸಿವೆ. ಕೆಲವು ಔಷಧಿಗಳ ವ್ಯಸನದಿಂದ ಹಿಮ್ಮರಳುವಾಗ ಎದುರಾಗುವ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಮತ್ತು ಮದ್ಯಪಾನದ ವ್ಯಸನವನ್ನು ಇಲ್ಲವಾಗಿಸಲೂ ಈ ಮೂಲಿಕೆಯನ್ನು ಬಳಸಲಾಗುತ್ತದೆ.

    9. ಜಿನ್ಸೆಂಗ್ (Ginseng - ಅಶ್ವಗಂಧ)

    9. ಜಿನ್ಸೆಂಗ್ (Ginseng - ಅಶ್ವಗಂಧ)

    ಹಸಿಶುಂಠಿಯನ್ನು ಹೋಲುವ ಈ ಚೀನಾದ ಮೂಲಿಕೆ ಮದ್ಯ ಮತ್ತು ಮಾದಕವಸ್ತುಗಳ ವ್ಯಸನ ಹಿಂತೆಗೆದುಕೊಳ್ಳುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಡುಬಯಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜಿನ್ಸೆಂಗ್ ಜೀವರಾಸಾಯನಿಕ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮದ್ಯವನ್ನು ತ್ವರಿತವಾಗಿ ಒಡೆಯಲು ಸಹಾಯ ಮಾಡುತ್ತದೆ, ಹೀಗಾಗಿ ಮದ್ಯವ್ಯಸನದಿಂದ ಉಂಟಾಗಿದ್ದ ಕಲ್ಮಶಗಳನ್ನು ನಿವಾರಿಸಲೂ ಸಹಾಯ ಮಾಡುತ್ತದೆ. ಇದು ದೇಹದಿಂದ ಇತರ ವಿಷಕಾರಿ ಅಂಶಗಳನ್ನು ತೆಗೆದುಹಾಕಲೂ ನೆರವಾಗುತ್ತದೆ.

    10. ಲಿಕೋರೀಸ್ (Liquorice - ಮುಲೇತಿ)

    10. ಲಿಕೋರೀಸ್ (Liquorice - ಮುಲೇತಿ)

    ಲಿಕೋರೀಸ್ ಎಂಬ ಸಸ್ಯದ ಬೇರುಗಳು ಬಲವಾದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿವೆ, ಇದು ಆಲ್ಕೊಹಾಲ್ ವ್ಯಸನದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಒಂದು ಕಪ್ ಲಿಕೋರೀಸ್ ಚಹಾವನ್ನು ಕುಡಿಯುವುದರಿಂದ ಆಲ್ಕೋಹಾಲ್ ಹಿಂತೆಗೆದುಕೊಳ್ಳುವ ಲಕ್ಷಣಗಳನ್ನು ನಿರ್ವಹಿಸಲು ಬಹಳವೇ ಸಹಾಯವಾಗುತ್ತದೆ.

    11. ವಿಟಮಿನ್ ಬಿ

    11. ವಿಟಮಿನ್ ಬಿ

    ನಿಮ್ಮ ದೇಹವು ಔಷಧ ಅಥವಾ ಮದ್ಯದ ಅತಿ ಸೇವನೆಯ ನಿಂದನೆಯಿಂದ ವಿಟಮಿನ್ ಬಿ ಅನ್ನು ಕಳೆದುಕೊಳ್ಳುತ್ತದೆ, ಇದು ನರಮಂಡಲವನ್ನು ಸ್ಥಿರಗೊಳಿಸಲು ಕಾರಣವಾಗಿದೆ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಾಗ, ಕಡುಬಯಕೆ ನಿಯಂತ್ರಿಸಲು ಸಹಾಯ ಮಾಡಲು B1, B3, B6 ಮತ್ತು B12 ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

    ಚೇತರಿಕೆಯ ಸಮಯದಲ್ಲಿ ಆಲ್ಕೋಹಾಲ್ ಮತ್ತು ಮಾದಕವಸ್ತುಗಳ ಕಡುಬಯಕೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಇತರ ಕೆಲವು ಗಿಡಮೂಲಿಕೆಗಳು ಮತ್ತು ಸಸ್ಯಗಳು ಹೀಗಿವೆ:

    • ಗೋಲ್ಡನ್‍ಸೀಲ್ (Goldenseal)
    • ಇಬೋಗಾ-Iboga
    • ಏಂಜೆಲಿಕಾ-Angelica
    • ಸ್ಕಲ್‌ಕ್ಯಾಪ್-Skullcap
    • ಇವ್ನಿಂಗ್ ಪ್ರೈಮ್ರೋಸ್ ಎಣ್ಣೆ-Evening primrose oil
    • ದ್ರಾಕ್ಷಿಗಳು
    • ಹಸಿರು ಚಹಾ
    • ನೆಲ್ಲಿಕಾಯಿ
    • ಕಡೆಯದಾಗಿ....

      ಕಡೆಯದಾಗಿ....

      ವ್ಯಕ್ತಿಯು ಚೇತರಿಕೆಯ ಪ್ರಕ್ರಿಯೆಯಲ್ಲಿದ್ದಾಗ ಮೇಲೆ ತಿಳಿಸಿದ ಗಿಡಮೂಲಿಕೆಗಳು ಮತ್ತು ಪರಿಹಾರಗಳು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿವೆ.. ಮಾದಕದ್ರವ್ಯದ ವ್ಯಸನ ಭೀತಿಗೊಳಿಸುವಷ್ಟು ಪ್ರಬಲವಾದ ಅಭ್ಯಾಸವಾಗಿದ್ದರೆ ಇವುಗಳು ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಅಷ್ಟೊಂದು ಸಹಾಯ ಮಾಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ವೈದ್ಯರನ್ನು ಸಂಪರ್ಕಿಸುವುದು ಮತ್ತು ಅಗತ್ಯವಾದ ಚಿಕಿತ್ಸೆಯ ಆಯ್ಕೆಗಳನ್ನು ಚರ್ಚಿಸುವುದು ಮತ್ತು ಮನೆಮದ್ದುಗಳ ಬಳಕೆಯ ಬಗ್ಗೆ ಅವರೊಂದಿಗೆ ಮಾತನಾಡುವುದು ಮುಖ್ಯವಾಗಿದೆ. ಈ ಆಯ್ಕೆಗಳು ನಿಮಗೆ ಪೂರಕವಾಗಿರಬೇಕೇ ಹೊರತು ಮದ್ಯವ್ಯಸನ ಕೇಂದ್ರದ ತಜ್ಞರು ಅಥವಾ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಯ ಪ್ರಕಾರವೇ ಮುಂದುವರೆಯುವುದು ಅವಶ್ಯವಾಗಿದೆ.

English summary

List Of Foods That Help Manage Drug And Alcohol Cravings

Studies have pointed out that drug and alcohol cravings, during recovery can be managed by the help of the right diet and essential nutrients [3].
X
Desktop Bottom Promotion