For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು, ಜ್ವರ ತಡೆಗಟ್ಟಲು ಕಷಾಯ

|

ಮಳೆಗಾಲದಲ್ಲಿ ಕೆಮ್ಮು, ಶೀತ, ಸಾಮಾನ್ಯ ಜ್ವರ ಈ ರೀತಿಯ ತೊಂದರೆಗಳು ಕಂಡು ಬರುವುದು ಸಹಜ. ಆದರೆ ಇಂಥ ಸಮಸ್ಯೆಗಳು ಕಂಡು ಬಂದಾಗ ಒಂದೋ ಮನೆಮದ್ದು ಮಾಡುವುದು, ಇಲ್ಲಾ ಆಸ್ಪತ್ರೆಗೆ ಹೋಗಿ ಆ್ಯಂಟಿ ಬಯೋಟಿಕ್ ತಂದು ಸೇವಿಸಿದರೆ ಕಡಿಮೆಯಾಗುವುದು.

Kadha For Cold, Flu And Monsoon Illnesses

ಆದರೆ ಈ ವರ್ಷ ಕೊರೊನಾದಿಂದಾಗಿ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಇಂಥ ಸಾಮಾನ್ಯ ಸಮಸ್ಯೆ ಕಮಡು ಬಂದರೂ ಅದು ಕೋವಿಡ್-19 ಲಕ್ಷಣಗಳಿರಬಹುದೇ ಎಂಬ ಭಯ ಶುರುವಾಗುತ್ತದೆ. ಇನ್ನು ಸಣ್ಣ-ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ಜನ ಭಯಪಡುತ್ತಿದ್ದಾರೆ.

ಮಳೆಗಾಲದಲ್ಲಿ ಡೆಂಗ್ಯೂ, ಟೈಫಾಯ್ಡ್, ಕಾಲರಾ ಈ ರೀತಿಯ ಗಂಭೀರ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು, ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು, ಮಕ್ಕಳಿಗೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಬೇಕು.

ಈ ಲೇಖನದಲ್ಲಿ ನಾವು ಆಯುಷ್ ನೀಡಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಷಾಯದ ರೆಸಿಪಿ ನೀಡಿದ್ದೇವೆ. ಇದು ಕೆಮ್ಮು, ಶೀತ, ಸಾಮಾನ್ಯ ಜ್ವರ ಕಡಿಮೆ ಮಾಡುವ ಪರಿಣಾಮಕಾರಿಯಾದ ಮನೆಮದ್ದಾಗಿದೆ:

ಆಯುಷ್ ಹೇಳಿದ ಕಷಾಯ (Kadha)ಮಾಡುವುದು ಹೇಗೆ?

ಆಯುಷ್ ಹೇಳಿದ ಕಷಾಯ (Kadha)ಮಾಡುವುದು ಹೇಗೆ?

ಈ ಕಷಾಯವನ್ನು ಗಿಡಮೂಲಿಕೆ ಹಾಕಿ ತಯಾರಿಸಲಾಗುವುದು. ಇದನ್ನು ಮಹಾಸುದರ್ಶನ್ ಕ್ವಾತ್, ಮಹಾಮಂಜಿಸ್ತಡಿ ಕ್ವಾತ್, ಭೂನಿಂಬಾಡಿ ಕ್ವಾತ್, ದಾಶ್ಮೂಲ್ ಕ್ವಾತ್, ಪುನರ್ಣವಾಸ್ತಕ್ ಕ್ವಾತ್, ವರುಣಡಿ ಕ್ವಾತ್ ಮತ್ತು ರಸ್ನಸಪ್ತಕ್ ಕ್ವಾತ್ ಹಾಕಿ ತಯಾರಿಸಲಾಗುವುದು.

ಈ ಹರ್ಬಲ್ ಡಿಕಾಷನ್‌ ಅನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯಬೇಕು. ಈ ಕಷಾಯದಿಂದ ಈ ರೀತಿಯ ಪ್ರಯೋಜನಗಳನ್ನು ಪಡೆಯಬಹುದು:

 1. ಮಳೆಗಾಲದ ಜ್ವರ, ಅಲರ್ಜಿ ಸಮಸ್ಯೆ ಕಡಿಮೆಯಾಗುವುದು

1. ಮಳೆಗಾಲದ ಜ್ವರ, ಅಲರ್ಜಿ ಸಮಸ್ಯೆ ಕಡಿಮೆಯಾಗುವುದು

ಇದರಲ್ಲಿರುವ ಒಣ ಶುಂಠಿ, ತುಳಸಿ, ಲವಂಗ ಹಾಗೂ ಗಿಡ ಮೂಲಿಕೆಗಳು ಕೆಮ್ಮು, ಜ್ವರ, ಗಂಟಲು ಕೆರೆತ ಕಡಿಮೆ ಮಾಡಲು ಸಹಕಾರಿ.

2. ಹೆಪಟಿಕ್ ಆರೋಗ್ಯ ಹೆಚ್ಚಿಸುತ್ತದೆ

2. ಹೆಪಟಿಕ್ ಆರೋಗ್ಯ ಹೆಚ್ಚಿಸುತ್ತದೆ

ಈ ಕಷಾಯ ಕುಡಿಯುವುದರಿಂದ ಕಿಡ್ನಿ, ಲಿವರ್‌ ಆರೋಗ್ಯ ಕೂಡ ಹೆಚ್ಚಿಸುತ್ತದೆ. ಇನ್ನು ಅರಿಶಿಣ ಕಾಮಲೆ, ಅಜೀರ್ಣ, ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ತಡೆಗಟ್ಟುವಲ್ಲಿಯೂ ಕೂಡ ಸಹಕಾರಿ. ಈ ಕಷಾಯದಲ್ಲಿರುವ ಪುನರ್ವಸ್ತಕ್ ಕ್ವಾತ್‌ ಕಿಡ್ನಿ ಹಾಗೂ ಲಿವರ್‌ ಆರೋಗ್ಯ ವೃದ್ಧಿಸುತ್ತದೆ.

3. ಇತರ ಆರೋಗ್ಯ ಸಮಸ್ಯೆ ಕೂಡ ನಿವಾರಿಸುತ್ತದೆ

3. ಇತರ ಆರೋಗ್ಯ ಸಮಸ್ಯೆ ಕೂಡ ನಿವಾರಿಸುತ್ತದೆ

ಕೆಲವೊಂದು ಹೃದಯ ಸಂಬಂಧಿ ಸಮಸ್ಯೆಗಳು, ಹೈಪರ್‌ ಅಸಿಡಿಟಿ, ತಲೆನೋವು, ಗ್ಯಾಸ್ಟ್ರಿಕ್, ವಾಂತಿ ಮುಂತಾದ ಸಮಸ್ಯೆಗಳು ಕೂಡ ಈ ಕಷಾಯ ಕುಡಿಯುವುದರಿಂದ ಕಡಿಮೆಯಾಗುವುದು. ಈ ಕಷಾಯ ಒಟ್ಟು ಮೊತ್ತ ಆರೋಗ್ಯ ವೃದ್ಧಿಸುತ್ತದೆ.

4. ಮೂತ್ರ ಸೋಂಕು ನಿವಾರಣೆ

4. ಮೂತ್ರ ಸೋಂಕು ನಿವಾರಣೆ

ಈ ಕಷಾಯ ಕುಡಿಯುವುದರಿಂದ ಮೂತ್ರ ಸೋಂಕು ಕೂಡ ಕಡಿಮೆಯಾಗುವುದು. ವರುಣಾದಿ ಕ್ವಾತ್ ತೆಗೆದುಕೊಳ್ಳುವುದರಿಂದ ನೀವು ಮತ್ತು ಊತ ಕಡಿಮೆಯಾಗುತ್ತದೆ. ಇದು UTI ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ.

5. ಮೂಳೆ ಹಾಗೂ ಸ್ನಾಯುಗಳ ಆರೋಗ್ಯ ವೃದ್ಧಿಸುತ್ತದೆ

5. ಮೂಳೆ ಹಾಗೂ ಸ್ನಾಯುಗಳ ಆರೋಗ್ಯ ವೃದ್ಧಿಸುತ್ತದೆ

ಕೆಲವೊಂದು ಆಯುರ್ವೇದ ಕಷಾಯಗಳು ಮೂಳೆ ಹಾಗೂ ಸ್ನಾಯುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಸಂಧಿವಾತ, ಮೂಳೆ, ಸ್ನಾಯುಗಳಲ್ಲಿ ನೋವು ಇದ್ದಾಗ ದಶಮೂಲ ತೆಗೆದುಕೊಳ್ಳುವುದು ಒಳ್ಳೆಯದು.

ಇಲ್ಲಿ ಕೆಲವೊಂದು ಕಷಾಯ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ

 ತುಳಸಿ ಕಷಾಯ

ತುಳಸಿ ಕಷಾಯ

  • ಒಂದು ಮುಷ್ಠಿಯಷ್ಟು ಕೃಷ್ಣ ತುಳಸಿಯನ್ನು ತೆಗೆದುಕೊಳ್ಳಿ
  • ತುಳಸಿಯನ್ನು ತೊಳೆದು ಕಾಳು ಮೆಣಸು ಹಾಗೂ ಶುಂಠಿ ಜೊತೆ ರುಬ್ಬಿ
  • ನಂತರ ಇದನ್ನು 2 ಲೀಟರ್ ನೀರಿಗೆ ಹಾಕಿ ಕುದಿಸಿ, ನೀರು ಒಂದು ಲೀಟರ್‌ ಆಗುವಷ್ಟು ಹೊತ್ತು ಕುದಿಸಿ, ನಂತರ ಸೋಸಿ, ಸ್ವಲ್ಪ ಜೇನು ಸೇರಿಸಿ ಕುಡಿಯಿರಿ.
  •  ಚಕ್ಕೆ ಕಷಾಯ

    ಚಕ್ಕೆ ಕಷಾಯ

    • ಒಂದು ಕಪ್ ನೀರಿಗೆ ಅರ್ಧ ಚಮಚ ಚಕ್ಕೆ ಪುಡಿ ಹಾಕಿ ಚೆನ್ನಾಗಿ ಕುದಿಸಿ.
    • ಆ ನೀರಿಗೆ ಜೇನು ಹಾಕಿ ಕುಡಿಯಿರಿ.
    • ಅಮೃತ ಬಳ್ಳಿಯ ಕಷಾಯ

      • ಅಮೃತ ಬಳ್ಳಿ ಎಲೆಯನ್ನು ರುಬ್ಬಿ, ಅರ್ಧ ಚಮಚ ಪೇಸ್ಟ್ ಅನ್ನು 1 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ.ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ.ಸಲಹೆ: ಈ ಕಷಾಯಗಳನ್ನು ದಿನದಲ್ಲಿ ಒಮ್ಮೆ ತಯಾರಿಸಿಟ್ಟರೆ ಬೇಕಾದಾಗ ಬಿಸಿ ಮಾಡಿ ಕುಡಿಯಿರಿ.
        • ದಿನದಲ್ಲಿ ಎರಡು ಲೋಟಕ್ಕಿಂತ ಹೆಚ್ಚು ಕಷಾಯ ಕುಡಿಯಬೇಡಿ.
        •  ಅಡ್ಡಪರಿಣಾಮ:

          ಅಡ್ಡಪರಿಣಾಮ:

          • ಇದು ಹೆಚ್ಚಾಗಿ ಕುಡಿದರೆ ಶುಂಠಿ, ತುಳಸಿ ಇವುಗಳಿಂದಾಗಿ ಎದೆ ಉರಿ, ಕಾಲು ಉರಿ ಸಮಸ್ಯೆ ಕಂಡು ಬರುವುದು
          • ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ.
English summary

Kadha Immune-Boosting Drink Benefits and How to Prepare

Here we will discuss one such preventive measure, an ayurvedic one, that can help build your immunity and prevent monsoon infections, cold and flu. Read on to know about kadha - an ayurvedic home remedy to fight against seasonal infections and diseases.
X
Desktop Bottom Promotion