For Quick Alerts
ALLOW NOTIFICATIONS  
For Daily Alerts

ಈ ಜೀವನಶೈಲಿ ನಿಮ್ಮದಾದರೆ ಹಾರ್ಮೋನ್ಸ್‌ ಅಸಮತೋಲನ ಸಮಸ್ಯೆ ಇರಲ್ಲ

|

ಪ್ರಕೃತಿಯು ಮನುಷ್ಯನ ದೇಹದ ರಚನೆಯಲ್ಲಿ ಪ್ರತಿಯೊಂದು ಸಮತೋಲನದಲ್ಲಿ ಇರಬೇಕು ಎನ್ನುವ ನಿಯಮ ಪಾಲಿಸಿದೆ. ದೇಹದಲ್ಲಿ ಯಾವುದೇ ಒಂದು ಅಂಶ ವ್ಯತ್ಯಯವಾದರೂ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದರೆ ಮಧುಮೇಹವು ಬರುವುದು.

hormones balance

ಯಾವುದೇ ವಿಟಮಿನ್ ಅಥವಾ ಖನಿಜಾಂಶದ ಕೊರತೆ ಆದರೆ ಅದರಿಂದ ದೇಹದಲ್ಲಿ ಏನಾದರೂ ಅನಾರೋಗ್ಯ ಬರಬಹುದು. ಹೀಗೆ ಯಾವುದೇ ಅಂಶವು ಹೆಚ್ಚು ಅಥವಾ ಕಡಿಮೆ ಆದರೆ ತಕ್ಷಣವೇ ನಮ್ಮ ದೇಹವು ಅದರ ಲಕ್ಷಣಗಳನ್ನು ತೋರಿಸಲು ಆರಂಭಿಸುವುದು. ಇದಕ್ಕೆ ಪ್ರತಿಯೊಂದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕಾದರೆ ಆರೋಗ್ಯಕರವಾಗಿ ಜೀವನ ಸಾಗಿಸಬೇಕು.

ನಮ್ಮ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳಿದ್ದು, ಇವುಗಳು ಕೂಡ ನಮ್ಮ ಆರೋಗ್ಯ ಹಾಗೂ ಮನಸ್ಥಿತಿ ಮೇಲೆ ಪರಿಣಾಮ ಬೀರುವುದು. ಅದರಲ್ಲೂ ಮಹಿಳೆಯರಲ್ಲಿ ಋತುಚಕ್ರ ಹಾಗೂ ಗರ್ಭಧಾರಣೆ ವೇಳೆ ಹಾರ್ಮೋನ್ ಬದಲಾವಣೆಗಳು ಆಗುವುದು. ಹಾರ್ಮೋನ್ ಗಳು ಅಸಮತೋಲನವಾದರೆ ಆಗ ಮನಸ್ಥಿತಿ, ಹಸಿವಿನ ಮೇಲೆ ಪರಿಣಾಮ ಆಗಬಹುದು.

ನಮ್ಮ ಜೀವನ ಶೈಲಿ ಹಾಗೂ ಆಹಾರವು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಯೋ ಅದೇ ರೀತಿಯಾಗಿ ಇದು ಹಾರ್ಮೋನ್ ಗಳ ಮೇಲೂ ಪರಿಣಾಮ ಬೀರುವುದು. ದೇಹದಲ್ಲಿನ ಹಾರ್ಮೋನ್ ವ್ಯವಸ್ಥೆಯು ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡುವುದು. ಹಾರ್ಮೋನ್ ಮಟ್ಟದಲ್ಲಿ ಸಣ್ಣ ಬದಲಾವಣೆ ಆದರೂ ಅದು ವ್ಯತಿರಿಕ್ತ ಪರಿಣಾಮ ಬೀರುವುದು. ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಆಗ ಖಂಡಿತವಾಗಿಯೂ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಬಹುದು.

1. ಸರಿಯಾಗಿ ನಿದ್ರೆ ಮಾಡಿ

1. ಸರಿಯಾಗಿ ನಿದ್ರೆ ಮಾಡಿ

ನಿದ್ರೆಯು ಪ್ರತಿಯೊಬ್ಬನ ಆರೋಗ್ಯಕ್ಕೆ ಅತೀ ಅಗತ್ಯ. ನಿದ್ರಾಹೀನತೆಯಿಂದ ಹಲವಾರು ಕಾಯಿಲೆಗಳು ಬರಬಹುದು. ಹಾರ್ಮೋನ್ ಅಸಮತೋಲನದಲ್ಲಿ ನಿದ್ರೆಯು ಪ್ರಮುಖ ಪಾತ್ರ ವಹಿಸುವುದು. ಗುಣಮಟ್ಟದ ನಿದ್ರೆಯು ಬೀಳದೆ ಇದ್ದರೆ ಆಗ ದಿನವಿಡಿ ಹಾರ್ಮೋನ್ ಗಳಲ್ಲಿ ಏರಿಳಿತವು ಆಗುತ್ತಲಿರಬಹುದು. ಕೆಲವೊಂದು ಅಧ್ಯಯನಗಳು ಹೇಳಿರುವ ಪ್ರಕಾರ ನಿದ್ರಾಹೀನತೆಯಿಂದಾಗಿ ಹಾರ್ಮೋನ್ ಗಳ ಅಸಮತೋಲನ ಉಂಟಾಗಿ ಅದರಿಂದ ಬೊಜ್ಜು, ಮಧುಮೇಹ, ಹಸಿವಿನ ಸಮಸ್ಯೆ ಕಾಡುವುದು. ಹೀಗಾಗಿ ಸರಿಯಾಗಿ ಅಡೆತಡೆಯಿಲ್ಲದೆ ಇರುವ ನಿದ್ರೆ ಮಾಡಿದರೆ ಅದರಿಂದ ದೇಹವು ಹಾರ್ಮೋನ್ ಸಮತೋಲನ ಕಾಪಾಡುವುದು.

2. ರಾತ್ರಿ ವೇಳೆ ಅತೀ ಪ್ರಖರ ಬೆಳಕಿನಿಂದ ದೂರವಿರಿ

2. ರಾತ್ರಿ ವೇಳೆ ಅತೀ ಪ್ರಖರ ಬೆಳಕಿನಿಂದ ದೂರವಿರಿ

ಮೊಬೈಲ್ ಫೋನ್ ಗಳು ಹಾಗೂ ಕಂಪ್ಯೂಟರ್ ಸ್ಕ್ರೀನ್ ನಿಂದ ಬರುವ ನೀಲಿ ಬೆಳಕು ನಿದ್ರೆಗೆ ತೊಂದರೆ ಉಂಟು ಮಾಡುವುದು. ಬೆಳಕಿನಿಂದಾಗಿ ದೇಹವು ನಾವು ಹಗಲಿನಲ್ಲೇ ಇದ್ದೇವೆ ಎನ್ನುವಂತೆ ವರ್ತಿಸುವುದು ಮತ್ತು ಹಾರ್ಮೋನ್ ಇದಕ್ಕೆ ತಕ್ಕಂತೆ ವರ್ತಿಸುವುದು. ರಾತ್ರಿ ವೇಳೆ ತುಂಬಾ ಪ್ರಖರ ಕೃತಕ ಬೆಳಕಿನಿಂದಾಗಿ ದೇಹವು ಗೊಂದಲಕ್ಕೆ ಒಳಗಾಗುವುದು ಮತ್ತು ಮೆಲಟೊನಿನ್ ಎನ್ನುವ ಹಾರ್ಮೋನ್ ಬಿಡುಗಡೆ ಮಾಡುವುದು ಮತ್ತು ಇದರಿಂದ ಹಲವಾರು ದೇಹದ ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಕೃತಕ ಬೆಳಕು ಕಡೆಗಣಿಸಿದರೆ ಆಗ ಹಾರ್ಮೋನ್ ನಿಯಂತ್ರಿಸಲು ನೆರವಾಗುವುದು.

3. ಒತ್ತಡ ನಿಭಾಯಿಸಿ

3. ಒತ್ತಡ ನಿಭಾಯಿಸಿ

ಒತ್ತಡವು ಹಲವಾರು ಸಮಸ್ಯೆಗಳಿಗೆ ಕಾರಣವಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿಯಾಗಿ ಒತ್ತಡದಿಂದ ಹಾರ್ಮೋನ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಹಾರ್ಮೋನ್ ಮಟ್ಟದಲ್ಲಿ ಅಸಮತೋಲನ ಉಂಟಾಗುವುದು. ಅಧ್ಯಯನಗಳು ಹೇಳುವ ಪ್ರಕಾರ ಸಣ್ಣ ಮಟ್ಟದ ಒತ್ತಡವು ಹಾರ್ಮೋನ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ದೇಹದಲ್ಲಿ ಒತ್ತಡವು ಹೆಚ್ಚಾದರೆ ಆಗ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಹೆಚ್ಚಾಗುವುದು. ಈ ಎರಡು ಹಾರ್ಮೋನ್ ಗಳು ಅತಿಯಾಗಿದ್ದರೆ ಆಗ ಸಂಪೂರ್ಣ ಸಮತೋಲನದ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಬೊಜ್ಜು, ಮನಸ್ಥಿತಿ ಬದಲಾವಣೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸುವುದು. ಇದಕ್ಕಾಗಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಒತ್ತಡ ಕಡಿಮೆ ಮಾಡಲು ಸಂಗೀತ ಕೇಳಿ. ಇದು ಮನಸ್ಸನ್ನು ಮುದಗೊಳಿಸುವುದು.

4. ವ್ಯಾಯಾಮ

4. ವ್ಯಾಯಾಮ

ನಿಯಮಿತವಾಗಿ ವ್ಯಾಯಾಮ ಮಾಡಿದರೆ ಅದು ಆರೋಗ್ಯವನ್ನು ಕಾಪಾಡುವುದು. ಅದೇ ರೀತಿಯಾಗಿ ಹಾರ್ಮೋನ್ ಗ ಅಸಮತೋಲನದಿಂದಾಗಿ ಅತಿಯಾಗಿ ತಿನ್ನುವ ಸಮಸ್ಯೆಯನ್ನು ಇದು ತಡೆಯುವುದು. ವ್ಯಾಯಾಮವು ಹಸಿವನ್ನು ನಿಯಂತ್ರಿಸುವ ಹಾರ್ಮೋನ್ ಗಳನ್ನು ನಿಯಂತ್ರಿಸಲು ನೆರವಾಗುವುದು ಎಂದು ಅಧ್ಯಯನಗಳು ತಿಳಿಸಿವೆ. ನಿಯಮಿತವಾಗಿ ದೈಹಿಕ ಚಟುವಟಿಕೆ ನಡೆಸಿದರೆ ಅದರಿಂದ ಇನ್ಸುಲಿನ್ ಪ್ರತಿರೋಧಕ ಅಪಾಯ, ಚಯಾಪಚಯ ಸಿಂಡ್ರೋಮ್ ಮತ್ತು ಟೈಪ್ 2 ಮಧುಮೇಹ ಕಡಿಮೆ ಮಾಡುವುದು.

5. ಸಕ್ಕರೆ ಕಡಿಮೆ ಮಾಡಿ

5. ಸಕ್ಕರೆ ಕಡಿಮೆ ಮಾಡಿ

ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ ಅದರಿಂದ ಚಯಾಪಚಯ ಕಾಯಿಲೆ ಮತ್ತು ಇನ್ಸುಲಿನ್ ಪ್ರತಿರೋಧಕ ಸಮಸ್ಯೆಯು ಕಂಡುಬರುವುದು. ಆಹಾರ ಕ್ರಮದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿದರೆ ಅದರಿಂದ ಹಾರ್ಮೋನ್ ಮಟ್ಟವು ಸಮತೋಲನದಲ್ಲಿ ಇರುವುದು ಮತ್ತು ಇನ್ಸುಲಿನ್ ಕೂಡ ಸರಿಯಾಗಿ ಇರುವುದು. ಕೆಲವು ಜನರು ಕೆಲವೊಂದು ವಿಧದ ಸಕ್ಕರೆ ಕಡೆಗಣಿಸುವರು. ಆದರೆ ಜರ್ನಲ್ ಆಫ್ ನ್ಯೂಟ್ರಿಷನ್ ಪ್ರಕಾರ ಟೇಬಲ್ ಸಕ್ಕರೆ, ಅಧಿಕ ಪ್ರಾಕ್ಟೋಸ್ ಇರುವ ಸಿರಫ್ ಮತ್ತು ಜೇನುತುಪ್ಪ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡುವುದು. ಇದರಿಂದ ಎಲ್ಲಾ ರೀತಿಯ ಸಕ್ಕರೆ ಅಂಶವನ್ನು ಕಡಿಮೆ ಮಾಡಿ.

6. ಆರೋಗ್ಯಕರ ಕೊಬ್ಬು ಸೇವಿಸಿ

6. ಆರೋಗ್ಯಕರ ಕೊಬ್ಬು ಸೇವಿಸಿ

ಆರೋಗ್ಯಕರ ಕೊಬ್ಬು ಸೇವಿಸಿದರೆ ಆಗ ಹಸಿವು, ಚಯಾಪಚಯ ಮತ್ತು ಹೊಟ್ಟೆ ತುಂಬುವ ಹಾರ್ಮೋನ್ ಗಳು ನಿಯಂತ್ರಣದಲ್ಲಿ ಇರುವುದು. ತೆಂಗಿನ ಎಣ್ಣೆ ಅಥವಾ ಕೆಂಪು ತಾಳೆ ಎಣ್ಣೆಯಲ್ಲಿ ಇರುವಂತಹ ಮಧ್ಯಮ ಪ್ರಮಾಣದ ಕೊಬ್ಬಿನಾಮ್ಲವು ದೇಹವು ಇನ್ಸುಲಿನ್ ಗೆ ಪ್ರತಿಕ್ರಿಯೆ ನೀಡುವ ಅಂಗಾಂಶಗಳನ್ನು ನಿಯಂತ್ರಿಸಲು ಕಾರಣವಾಗಿರುವುದು. ಆಲಿವ್ ತೈಲವು ಹಸಿವನ್ನು ನಿಯಂತ್ರಿಸುವ ಮತ್ತು ಕೊಬ್ಬು ಹಾಗೂ ಪ್ರೋಟೀನ್ ಜೀರ್ಣಿಸುವ ಕ್ರಮವನ್ನು ನಿಯಂತ್ರಿಸುವ ಹಾರ್ಮೋನ್ ಮಟ್ಟದ ಸಮತೋಲನ ಕಾಪಾಡುವ ಅಂಶ ಹೊಂದಿದೆ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಹೇಳಿದೆ.

7. ನಾರಿನಾಂಶ ಅಧಿಕ ಸೇವಿಸಿ

7. ನಾರಿನಾಂಶ ಅಧಿಕ ಸೇವಿಸಿ

ಹೊಟ್ಟೆಯ ಆರೋಗ್ಯದಲ್ಲಿ ನಾರಿನಾಂಶವು ಪ್ರಮುಖ ಪಾತ್ರ ವಹಿಸುವುದು ಮತ್ತು ಇದು ಇನ್ಸುಲಿನ್ ನಂತ ಹಾರ್ಮೋನ್ ಸಮತೋಲನದಲ್ಲಿ ಇಡಲು ನೆರವಾಗುವುದು. ಕೆಲವೊಂದು ರೀತಿಯ ನಾರಿನಾಂಶವು ಹಾರ್ಮೋನ್ ಮಟ್ಟವನ್ನು ಕಾಪಾಡಲು ನೆರವಾಗುವುದು ಮತ್ತು ಇದರಿಂದಾಗಿ ದೇಹದ ತೂಕವನ್ನು ಆರೋಗ್ಯವಾಗಿಡಲು ಸಾಧ್ಯವಾಗುವುದು.

8. ಕೊಬ್ಬಿನಾಂಶವಿರುವ ಮೀನು ಸೇವಿಸಿ

8. ಕೊಬ್ಬಿನಾಂಶವಿರುವ ಮೀನು ಸೇವಿಸಿ

ಸಮುದ್ರಾಹಾರವಾಗಿರುವಂತಹ ಮೀನು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮುಖ್ಯವಾಗಿ ಮೀನಿನಲ್ಲಿ ಇರುವ ಉನ್ನತ ಮಟ್ಟದ ಕೊಬ್ಬಿನಾಮ್ಲವು ಹೃದಯ ಮತ್ತು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡುವುದು. ಇದು ಮೆದುಳು ಹಾಗೂ ಕೇಂದ್ರ ನರಮಂಡಲ ವ್ಯವಸ್ಥೆಗೆ ಲಾಭಕರವಾಗಿರಲಿದೆ. ಕೊಬ್ಬಿನಾಮ್ಲವು ಅಧಿಕವಾಗಿ ಇರುವಂತಹ ಮೀನುಗಳನ್ನು ತಿಂದರೆ ಅದರಿಂದ ಮನಸ್ಥಿತಿ ಬದಲಾವಣೆ ಸಮಸ್ಯೆಗಳಾಗಿರುವಂತಹ ಖಿನ್ನತೆ ಮತ್ತು ಆತಂಕವನ್ನು ತಡೆಯಬಹುದು ಎಂದು ಅಧ್ಯಯನಗಳು ತಿಳಿಸಿವೆ. ಆಹಾರ ಕ್ರಮದಲ್ಲಿ ಕೊಬ್ಬಿನಾಮ್ಲವಿರುವ ಮೀನುಗಳ ಸೇರ್ಪಡೆಯು ತುಂಬಾ ನೆರವಾಗಲಿದೆ. ಒಮೆಗಾ¬3 ಕೊಬ್ಬಿನಾಮ್ಲವು ಮನಸ್ಥಿತಿ ಸಮತೋಲನದಲ್ಲಿ ಇಡಲು ನೆರವಾಗುವುದು.

9. ಅತಿಯಾಗಿ ತಿನ್ನಬೇಡಿ

9. ಅತಿಯಾಗಿ ತಿನ್ನಬೇಡಿ

ನಿಯಮಿತವಾಗಿ ನೀವು ಅತಿಯಾಗಿ ತಿಂದರೆ ಅದರಿಂದ ಚಯಾಪಚಯದ ಸಮಸ್ಯೆಯು ಕಾಣಿಸಿಕೊಳ್ಳುವುದು. ಆದರೆ ಕೆಲವು ಸಲ ನೀವು ಅತಿಯಗಿ ತಿಂದರೆ ಅದು ಕೊಬ್ಬಿನ ಮಟ್ಟದಲ್ಲಿ ಬದಲಾವಣೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವುದು. ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಇದರಿಂದಾಗಿ ಚರ್ಮದಲ್ಲಿರುವಂತಹ ಕೊಬ್ಬಿನ ಅಂಗಾಂಶ ಸೆರಾಮೈಡ್ ಗಳು ಕೂಡ ಹೆಚ್ಚಾಗುವುದು. ಇದರ ಹೆಚ್ಚಳದಿಂದಾಗಿ ಇನ್ಸುಲಿನ್ ಪ್ರತಿರೋಧಕ ಉಂಟು ಮಾಡಬಹುದು.

10. ಗ್ರೀನ್ ಟೀ ಕುಡಿಯಿರಿ

10. ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪಾನೀಯ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಚಯಾಪಚಯ ಆರೋಗ್ಯ ಹೆಚ್ಚಿಸುವ ಅಂಶಗಳು ಇವೆ. ಗ್ರೀನ್ ಟೀಯಿಂದಾಗಿ ಇನ್ಸುಲಿನ್ ಮಟ್ಟವು ಕಡಿಮೆ ಆಗಿರುವುದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಅಧ್ಯಯನ ವರದಿಯು ಹೇಳಿದೆ. ಗ್ರೀನ್ ಟೀಯಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ನೆರವಾಗುವುದು.

11. ತಂಬಾಕು ಸೇದುವುದನ್ನು ಬಿಟ್ಟುಬಿಡಿ

11. ತಂಬಾಕು ಸೇದುವುದನ್ನು ಬಿಟ್ಟುಬಿಡಿ

ಧೂಮಪಾನವು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿರುವಂತಹ ವಿಚಾರ. ತಂಬಾಕು ನೇರವಾಗಿ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುವುದು. ಧೂಮಪಾನದಿಂದಾಗಿ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಎಚ್ಚರಿಸುವುದು, ಕಫ ಸ್ರಾವಕ ಹಾರ್ಮೋನ್ ನ್ನು ಉತ್ತೇಜಿಸುವುದು ಮತ್ತು ಒತ್ತಡಕ್ಕೆ ಕಾರಣವಾಗುವಂತಹ ಕಾರ್ಟಿಸೋಲ್ ನಂತಹ ಸ್ಟಿರಾಯ್ಡ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವುದು.

English summary

How To Balance Hormones In Body

Here we are discussing about how to balance hormones in body. Even small changes in hormone levels can result in adverse effects, including extra stress on the body. Symptoms can grow worse over time, and a hormonal imbalance can lead to chronic issues. Read more.
X
Desktop Bottom Promotion