For Quick Alerts
ALLOW NOTIFICATIONS  
For Daily Alerts

ಟ್ಯಾಂಫೂನ್‌ ಅಥವಾ ಪ್ಯಾಡ್‌ ಅನ್ನು ಎಷ್ಟು ಗಂಟೆಗೊಮ್ಮೆ ಬದಲಾಯಿಸಬೇಕು ಗೊತ್ತೇ?

|

ಹೆಚ್ಚಿನ ಹೆಣ್ಣುಮಕ್ಕಳು ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್‌, ಟ್ಯಾಂಫೂನ್‌ ಬಳಸುವುದು ಸಾಮಾನ್ಯ. ಹೆಚ್ಚು ರಕ್ತಸ್ರಾವವಾದಾಗ ಆಗಾಗ ಪ್ಯಾಡ್‌ ಬದಲಾವಣೆ ಮಾಡಬೇಕಾಗುತ್ತೆ. ಆದರೆ ಹೆಚ್ಚಿನವರು ಕಡಿಮೆ ರಕ್ತಸ್ರಾವವಿದ್ದಾಗ ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ.

how many pads is normal for a period per day,

ಈ ರೀತಿ ಹೆಚ್ಚು ಅವಧಿಯವರೆಗೆ ಒಂದೇ ಪ್ಯಾಡ್‌ ಅಥವಾ ಟ್ಯಾಂಫೂನ್‌ ಬಳಸಬಹುದೇ..? ಎಷ್ಟು ಗಂಟೆಗಳಿಗೊಮ್ಮೆ ಬದಲಾವಣೆ ಮಾಡಬೇಕು..? ಇದರ ಬಳಕೆ ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟ್ಯಾಂಪೂನ್‌ ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು..?

ಟ್ಯಾಂಪೂನ್‌ ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು..?

ನೀವು ಮುಟ್ಟಿನ ಅವಧಿಯಲ್ಲಿ ಟ್ಯಾಂಫೂನ್‌ ಬಳಸುತ್ತಿದ್ದಲ್ಲಿ ಪ್ರತಿ 3ರಿಂದ 5ಗಂಟೆಗಳಿಗೊಮ್ಮೆ ಬದಲಾಯಿಸಬೇಕು. ಈ ರೀತಿಯಲ್ಲಿ ಮರೆಯದೇ ನೀವು ಟ್ಯಾಂಫೂನ್‌ ಬದಲಾಯಿಸುತ್ತಿದ್ದರೆ ವಿಷಕಾರಿ ಆಘಾತ ಸಿಂಡ್ರೋಮ್‌ ಅಂದರೆ ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌ ಎನ್ನುವ ಸಂಭಾವ್ಯ ಮಾರಣಾಂತಿಕ ರೋಗವನ್ನು ತಡೆಗಟ್ಟಬಹುದು. ಅದೂ ಸಾಧ್ಯವಾಗದಿದ್ದಲ್ಲಿ ನಾಲ್ಕರಿಂದ ಎಂಟು ಗಂಟೆಗಳಿಗೊಮ್ಮೆಯಾದರೂ ಟ್ಯಾಂಫೂನ್‌ ಬದಲಾಯಿಸಲು ಮರೆಯಬೇಡಿ.

ನಿಮ್ಮ ಮುಟ್ಟಿನ ಅವಧಿಯಲ್ಲಿ ಪ್ರತಿ ದಿನವೂ ನೀವು ಅನುಭವಿಸುತ್ತಿರುವ ಮುಟ್ಟಿನ ಹರಿವಿನ ಪ್ರಮಾಣಕ್ಕೆ ತಕ್ಕಂತೆ ಕಡಿಮೆ ಹೀರಿಕೊಳ್ಳುವ ಟ್ಯಾಂಪೂನ್ ಅನ್ನು ನೀವು ಯಾವಾಗಲೂ ಬಳಸಬೇಕು. ಕಡಿಮೆ ರಕ್ತಸ್ರಾವವಾಗುವ ದಿನದಂದು ಸೂಪರ್-ಅಬ್ಸಾರ್ಬೆನ್ಸಿ ಟ್ಯಾಂಪೂನ್‌ಗಳನ್ನು ಬಳಸುವುದು ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌ ಅಪಾಯವನ್ನು ಹೆಚ್ಚಿಸಬಹುದು.

ಬೆಳಿಗ್ಗೆ ನಿಮ್ಮ ಟ್ಯಾಂಪೂನ್ ಅನ್ನು ಬದಲಾಯಿಸಿದರೆ ನಂತರ ಮತ್ತೊಮ್ಮೆ ಮಧ್ಯಾಹ್ನ ಊಟದ ಅವಧಿಯಲ್ಲಿ, ಮತ್ತೊಮ್ಮೆ ಸಂಜೆ ಕಾಫಿಯ ಸಮಯದಲ್ಲಿ ಮತ್ತು ನಂತರ ಮಲಗುವ ಮುನ್ನ ಬದಲಾಯಿಸುವುದು ಆರೋಗ್ಯಕರ ಅಭ್ಯಾಸ. ಶಾಲೆಗೆ ಅಥವಾ ಕೆಲಸಕ್ಕೆ ಹೋಗುವ ಮೊದಲು, ಹೆಚ್ಚುವರಿ ಎರಡು ಅಥವಾ ಮೂರು ಟ್ಯಾಂಪೂನ್ಗಳನ್ನು ತೆಗೆದುಕೊಂಡು ಹೋಗಿ, ಆದ್ದರಿಂದ ನೀವು ಅಗತ್ಯವಿರುವಾಗ ಅವುಗಳನ್ನು ಬಳಸಬಹುದು. ನೀವು ಟ್ಯಾಂಫೂನ್‌ ಬಳಸಿಯೂ ಸೋರಿಕೆಯಾಗುತ್ತಿದ್ದಲ್ಲಿ, ಹೆಚ್ಚು ರಕ್ತಸ್ರಾವವಾಗುತ್ತಿದ್ದಲ್ಲಿ ಕಪ್‌ ಅಥವಾ ಡಿಸ್ಕ್‌ ಕೂಡಾ ಬಳಸಬಹುದು.

ಕೆಲವೊಂದು ಟ್ಯಾಂಫೂನ್‌ಗಳಿಂದ ಮಾತ್ರ ಅಪಾಯವಿದೆ ಎನ್ನುವುದನ್ನು ನೀವು ಕೇಳಿಸಿಕೊಂಡರೂ, ನೀವು ಟ್ಯಾಂಫೂನ್‌ ಬದಲಾಯಿಸುವುದನ್ನು ಮರೆಯಬೇಡಿ. ಯಾಕೆಂದರೆ ಟ್ಯಾಂಪೂನ್ ಅನ್ನು ಶುದ್ಧವಾದ ಹತ್ತಿ ಅಥವಾ ರೇಯಾನ್‌ನಿಂದ ಮಾಡಿದ್ದರೂ, ಎಲ್ಲಾ ಟ್ಯಾಂಪೂನ್‌ಗಳು ಸರಿಯಾಗಿ ಬಳಸದಿದ್ದಲ್ಲಿ ವಿಷಕಾರಿ ಆಘಾತ ಸಿಂಡ್ರೋಮ್‌ನ ಅಪಾಯವನ್ನುಂಟುಮಾಡಬಹುದು.

ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು..?

ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು..?

ನಿಮ್ಮ ಮುಟ್ಟಿನ ಅವಧಿಯಲ್ಲಿ ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದರೆ, ನೀವು ಹೆಚ್ಚು ರಕ್ತಸ್ರಾವವಾಗಿ ಪ್ಯಾಡ್‌ ಫುಲ್‌ ಆಗಿ ಎಂದು ಅನಿಸಿದಾಗ ನೀವು ಚೇಂಜ್‌ ಮಾಡಬಹುದು. ಪ್ಯಾಡ್‌ಗಳನ್ನು ಬಳಸುವುದಾದರೆ ವಿಷಕಾರಿ ಆಘಾತ ಸಿಂಡ್ರೋಮ್‌ನ ಅಪಾಯವಿರದು. ನೀವು ರಾತ್ರಿಯಿಡೀ ಅಥವಾ ದಿನವಿಡೀ ಕೂಡಾ ಬಳಸಬಹುದು. ಪ್ಯಾಡ್‌ ಬದಲಾಯಿಸುವುದು ನಿಮ್ಮ ಮುಟ್ಟಿನ ಅವಧಿಯಲ್ಲಿ ಎಷ್ಟು ರಕ್ತಸ್ರಾವವಾಗುತ್ತಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚು ರಕ್ತಸ್ರಾವ ಹೊಂದಿದ್ದರೆ, ಅನೇಕ ಬಾರಿ ಬದಲಾಯಿಸಬೇಕಾಗುತ್ತದೆ.

ಪ್ಯಾಡ್‌ ಹೆಚ್ಚು ಅವಧಿಯವರೆಗೂ ಬಳಸಿದರೆ ಅದರಿಂದ ಒಂದು ರೀತಿಯ ವಾಸನೆ ಹೊರಹೊಮ್ಮುವುದನ್ನು ನೀವು ಗಮನಿಸಿರಬಹುದು. ಈ ಕಾರಣದಿಂದಾಗಿ ನೀವು ಪ್ಯಾಡ್‌ ಬದಲಾಯಿಸಲೇಬೇಕಾಗುತ್ತದೆ. ಹೆಚ್ಚು ಅವಧಿಯವರೆಗೂ ಒಂದೇ ಪ್ಯಾಡ್‌ ಬಳಸಿದಲ್ಲಿ ಚರ್ಮದ ಕಿರಿಕಿರಿ ಅಥವಾ ತುರಿಕೆಗೆ ಕಾರಣವಾಗುತ್ತದೆ.

ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳು

ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳು

ಮುಟ್ಟಿಗೆ ಸಂಬಂಧಿಸಿದ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅಪರೂಪದ ಆದರೆ ಸಂಭಾವ್ಯ ಮಾರಣಾಂತಿಕ ಕಾಯಿಲೆಯಾಗಿದ್ದು, ಸ್ಟ್ಯಾಫಿಲೋಕೊಕಸ್ ಔರೆಸ್ ಅಥವಾ ಗ್ರೂಪ್ ಎ ಸ್ಟ್ರೆಪ್ಟೋಕೊಕಸ್ ಎರಡು ವಿಭಿನ್ನ ರೀತಿಯ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಯೋನಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಮತ್ತು ಟ್ಯಾಂಪೂನ್ ಹೆಚ್ಚು ಸಮಯದವರೆಗೆ ಇರುವಾಗ ಅವು ನಿಯಂತ್ರಣದಿಂದ ಹೊರಬರಬಹುದು. ಈ ರೋಗ ಕಾಣಿಸಿಕೊಂಡರೆ ವಿಶೇಷವಾಗಿ ಮುಟ್ಟಿನ ಪ್ರಾರಂಭದ ಮೂರು ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಯಾವುವೆಂದರೆ,

* ಶೀತದೊಂದಿಗೆ ಅಥವಾ ಶೀತವಿಲ್ಲದೆ ಜ್ವರ

* ವೇಗದ ಹೃದಯ ಬಡಿತ

* ಕಡಿಮೆ ರಕ್ತದೊತ್ತಡ, ಇದು ಕೆಲವೊಮ್ಮೆ ಕುಳಿತಾಗ, ನಿಂತಿರುವಾಗ ತಲೆತಿರುಗುವಿಕೆ ಅಥವಾ ತಲೆತಿರುಗಿದಂತೆ ಭಾವನೆ

* ಸನ್ ಬರ್ನ್, ಅಥವಾ ಬಾಯಿ, ಕಣ್ಣುಗಳು ಅಥವಾ ಯೋನಿಯೊಳಗಿನ ಅಂಗಾಂಶದಲ್ಲಿ ಕೆಂಪು ಬಣ್ಣದಂತೆ ಕಾಣುವ ಚರ್ಮದ ಬದಲಾವಣೆಗಳು

* ಇತರ ಕಡಿಮೆ ಸಾಮಾನ್ಯ ಲಕ್ಷಣಗಳೆಂದರೆ ವಾಂತಿ, ಅತಿಸಾರ ಮತ್ತು ಸ್ನಾಯು ನೋವು ಮುಂತಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದನ್ನು ಮರೆಯಬೇಡಿ.

ಟಾಕ್ಸಿಕ್ ಶಾಕ್ ಸಿಂಡ್ರೋಮ್ ಬರಬಾರದೆಂದರೆ ಹೀಗೆ ಮಾಡಿ

ಟಾಕ್ಸಿಕ್ ಶಾಕ್ ಸಿಂಡ್ರೋಮ್ ಬರಬಾರದೆಂದರೆ ಹೀಗೆ ಮಾಡಿ

* ಪ್ರತಿ ನಾಲ್ಕರಿಂದ ಎಂಟು ಗಂಟೆಗಳಿಗೊಮ್ಮೆ ಟ್ಯಾಂಪೂನ್‌ಗಳನ್ನು ಮರೆಯದೇ ಬದಲಾಯಿಸಿ.

* ಅಧಿಕ ಹೀರಿಕೊಳ್ಳುವ ಟ್ಯಾಂಪೂನ್‌ಗಳನ್ನು ನಿಮ್ಮ ಮುಟ್ಟಿನ ಅತಿ ಹೆಚ್ಚು ರಕ್ತಸ್ರಾವದ ದಿನಗಳಲ್ಲಿ ಮಾತ್ರ ಬಳಸಿ, ಕಡಿಮೆ ರಕ್ತಸ್ರಾವದ ದಿನಗಳಲ್ಲಿ, ಕಡಿಮೆ ಹೀರಿಕೊಳ್ಳುವಿಕೆಯ ಟ್ಯಾಂಪೂನ್ಗಳನ್ನು ಬಳಸಿ

* ನಿಮ್ಮ ಅವಧಿಯಲ್ಲಿ ಟ್ಯಾಂಪೂನ್‌ಗಳು ಮತ್ತು ಪ್ಯಾಡ್‌ಗಳನ್ನು ಪರ್ಯಾಯವಾಗಿ ಬದಲಾಯಿಸುವ ಮೂಲಕ TSS ಪಡೆಯುವ ಅಪಾಯವನ್ನು ಕಡಿಮೆ ಮಾಡಬಹುದು

ಹಗಲಿನಲ್ಲಿ ಮಾತ್ರ ಟ್ಯಾಂಪೂನ್ಗಳನ್ನು ಮತ್ತು ರಾತ್ರಿಯಲ್ಲಿ ಪ್ಯಾಡ್‌ಗಳನ್ನು ಬಳಸಿ.

* ಮುಟ್ಟಿನ ಸಮಯದಲ್ಲಿ ಮಾತ್ರ ಟ್ಯಾಂಪೂನ್ಗಳನ್ನು ಬಳಸಿ. ಮುಟ್ಟಾಗುವ ಮುನ್ನ ಸುರಕ್ಷತೆಗಾಗಿ ಅಥವಾ ಬಿಳಿಸೆರಗಿನ ಸಮಸ್ಯೆಯಿದ್ದಲ್ಲಿ ಮಿನಿ ಪ್ಯಾಡ್‌ಗಳ ಬಳಕೆ ಅತ್ಯುತ್ತಮ.

English summary

How Often to Change Tampons or Pads During Your Period in Kannada

Dear ladies Do you know how often to change tampons or pads during your period, read on....
X
Desktop Bottom Promotion