For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಶೀತದಿಂದ ಉಂಟಾಗುವ ಕಿವಿನೋವಿಗೆ ಮನೆಮದ್ದು

|

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ತುಸು ಹೆಚ್ಚಾಗಿಯೇ ಕಾಡುತ್ತದೆ, ಅವುಗಳಲ್ಲೊಂದು ಕಿವಿನೋವು. ಶೀತದಿಂದಾಗಿ ಕಿವಿ ನೋವು ಕಂಡು ಬರುವುದು. ಮೂಗು ಮತ್ತು ಗಂಟಲುಗಳಿಗೆ ವೈರಸ್‌ಗಳು ತಾಗಿ ಶೀತ, ಗಂಟಲು ಕೆರೆತ ಉಂಟಾದಾಗ ಇವುಗಳ ಜೊತೆಯೇ ಕಿವಿ ಬ್ಲಾಕ್ ಆದಂತೆ ಅನಿಸುವುದು, ಕಿವಿಯಲ್ಲಿ ನೋವು ಈ ರೀತಿಯ ಸಮಸ್ಯೆಗಳೆಲ್ಲಾ ಕಂಡು ಬರುತ್ತದೆ.

Home Remedies For Ear Pain

ವೈರಲ್‌ ಸೋಂಕು ತಗಲು ಸಾಮಾನ್ಯ ಶೀತದ ಲಕ್ಷಣಗಳು ಕಂಡು ಬರುವ ಮುನ್ನ ಅಥವಾ ಕಂಡು ಬಂದ ನಂತರ ಕಿವಿಗಳಲ್ಲಿ ನೋವು ಕಂಡು ಬರುವುದು. ಕೆಲವೊಮ್ಮೆ ನೋವಿನ ತೀವ್ರತೆ ಕಡಿಮೆ ಪ್ರಮಾಣದಲ್ಲಿ ಇದ್ದರೆ, ಇನ್ನು ಕೆಲವರಿಗೆ ಉಳಿದೆಲ್ಲಾ ಆರೋಗ್ಯ ಸಮಸ್ಯೆಗಿಂತ ಕಿವಿನೋವೇ ಹೆಚ್ಚು ಕಿರಿಕಿರಿ ಅನಿಸುವುದು.

ಮೂಗು ಕಟ್ಟುವುದು, ಕಿವಿಯಲ್ಲಿ ನೋವು, ಸೈನಸ್ ಈ ರೀತಿಯ ಸಮಸ್ಯೆಗಳು ಸಾಮಾನ್ಯಶೀತದ ಲಕ್ಷಣಗಳಾಗಿದ್ದು, ಇಲ್ಲಿ ನಾವು ಕಿವಿ ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:
ಮನೆಮದ್ದುಗಳು....

1. ವಾರ್ಮ್‌ ಕಂಪ್ರೆಸ್

1. ವಾರ್ಮ್‌ ಕಂಪ್ರೆಸ್

ಶೀತದಿಂದ ಉಂಟಾದ ಕಿವಿನೋವು ಕಡಿಮೆ ಮಾಡಲು ಪರಿಣಾಮಕಾರಿಯಾದ ಮನೆಮದ್ದು ಎಂದರೆ ವಾರ್ಮ್‌ ಕಂಪ್ರೆಸ್, ಹೀಟಿಂಗ್ ಪ್ಯಾಡ್‌ ಅನ್ನು ಕಿವಿ, ಕೆನ್ನೆ ಮೇಲೆ ಇಡುವುದರಿಂದ ಕಿವಿ ನೋವು ಕಡಿಮೆಯಾಗುವುದು.

ಇಡುವುದು ಹೇಗೆ: ಹಾಟ್‌ ಪ್ಯಾಡ್‌ ಅನ್ನು 20 ನಿಮಿಷಗಳ ಕಾಲ ಇಡಬೇಕು, ಕಿವಿ, ಕುತ್ತಿಗೆ, ಕಿವಿಯ ಹಿಂಭಾಗ, ಕೆನ್ನೆ ಈ ಭಾಗದಲ್ಲಿ ಇಡಿ.

ಸೂಚನೆ: ಹೀಟಿಂಗ್ ಪ್ಯಾಡ್‌ ತುಂಬಾ ಬಿಸಿ ಇಡಬೇಡಿ ಅಲ್ಲದೆ ಅದನ್ನು ಇಟ್ಟು ಹಾಗೇ ನಿದ್ದೆಗೆ ಜಾರಬೇಡಿ.

2. ಕೋಲ್ಡ್ ಕಂಪ್ರೆಸ್

2. ಕೋಲ್ಡ್ ಕಂಪ್ರೆಸ್

ಕಿವಿ ನೋವು ಕಡಿಮೆಯಾಗಲು ಹೀಟ್‌ ಕಂಪ್ರೆಸ್‌ನಷ್ಟೆ, ಕೋಲ್ಡ್‌ ಕಂಪ್ರೆಸ್‌ ಕೂಡ ಪರಿಣಾಮಕಾರಿ. ಐಸ್‌ ಇಡುವಾಗ ನೇರವಾಗಿ ಇಡಬೇಡಿ, ಅದನ್ನು ಯಾವುದಾದರೂ ಬಟ್ಟೆಯಲ್ಲಿ ಸುತ್ತಿ ಇಡಿ.

ಇಡುವುದು ಹೇಗೆ?

ಐಸ್ ಅನ್ನು ಬಟ್ಟೆಯಲ್ಲಿ ಸುತ್ತಿ, ಕಿವಿಯ ಕೆಳಭಾಗದಲ್ಲಿ 20 ನಿಮಿಷ ಇಡಿ.

ಸೂಚನೆ: ಕೆಲವರು ಕಿವಿನೋವಿಗೆ ಹಾಟ್ ಅಂಡ್‌ ಕೋಲ್ಡ್ ಕಂಪ್ರೆಸ್ ಎರಡೂ ಬಳಸುತ್ತಾರೆ. 20 ನಿಮಿಷ ಹಾಟ್‌ ಕಂಪ್ರೆಸ್ ಬಳಸಿದರೆ, 20 ನಿಮಿಷ ಕೋಲ್ಡ್ ಕಂಪ್ರೆಸ್‌ ಇಡಿ.

 3. ಬೆಳ್ಳುಳ್ಳಿ

3. ಬೆಳ್ಳುಳ್ಳಿ

ಇನ್ನು ಬೆಳ್ಳುಳ್ಳಿ ಕೂಡ ಕಿವಿನೋವು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಬೆಳ್ಳುಳ್ಳಿ ರಸ ಬಳಸಿ ಕಿವಿ ನೋವು ಕಡಿಮೆ ಮಾಡಬಹುದು.

ಬಳಸುವುದು ಹೇಗೆ:

ಎರಡು ಚಮಚ ಸಾಸಿವೆ ಎಣ್ಣೆಯಲ್ಲಿ 3-4 ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ, ನಂತರ ಸೋಸಿ, ಆ ಎಣ್ಣೆಯನ್ನು ಕಿವಿಯ ಎರಡು ಬದಿಗೆ ಉಜ್ಜಿ.

ಸೂಚನೆ: ಕಿವಿ ಒಳಗೆ ಹಾಕಬೇಡಿ. ಇನ್ನು ಆಹಾರದಲ್ಲಿ ಬಳಸಿ, ಇದರಿಂದ ಬೇಗ ಗುಣಮುಖವಾಗುವುದು.

4. ಆಲೀವ್‌ ಎಣ್ಣೆ

4. ಆಲೀವ್‌ ಎಣ್ಣೆ

ಆಲೀವ್ ಎಣ್ಣೆ ಕೂಡ ಸಾಮಾನ್ಯ ಶೀತದಿಂದ ಉಂಟಾದ ಕಿವಿನೋವು ಕಡಿಮೆಯಾಗಲು ಸಹಕಾರಿ. ಕೆಲವೊಂದು ವೈದ್ಯರು ಕೂಡ ಇದನ್ನು ಸೂಚಿಸುತ್ತಾರೆ, ಆದರೆ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.

ಬಳಸುವುದು ಹೇಗೆ: ಆಲೀವ್‌ ಎಣ್ಣೆ ಸ್ವಲ್ಪ ಬಿಸಿ ಮಾಡಿ ಅದು ತಣ್ಣಗಾದ ಮೇಲೆ ನೋವು ಇರುವ ಕಿವಿಗೆ ಎರಡು ಹನಿ ಹಾಕಿ.

ಸೂಚನೆ.: ಕಿವಿಗೆ ಇಯರ್‌ ಡ್ರಮ್ ಅಥವಾ ಇಯರ್‌ ಟ್ಯೂಬ್ ಬಳಸುವವರು ಇದನ್ನು ಬಳಸಬಾರದು.

5. ಈರುಳ್ಳಿ

5. ಈರುಳ್ಳಿ

ಈರುಳ್ಳಿಯನ್ನು ಕೂಡ ಕಿವಿನೋವು ಕಡಿಮೆ ಮಾಡಲು ಮನೆಮದ್ದಾಗಿ ಬಳಸಬಹುದು. ಇದನ್ನು ಬಳಸಿದರೆ ನೋವು ತಕ್ಷಣವೇ ಕಡಿಮೆಯಾಗುವುದು.

ಬಳಸುವುದು ಹೇಗೆ?

ಈರುಳ್ಳಿ ಸುಡಬೇಕು, ನಂತರ ಅದರ ರಸ ಜಜ್ಜಿ ತೆಗೆಯಿರಿ, ಆ ರಸವನ್ನು ಕಿವಿಗೆ ಹಾಕಿ 10 ನಿಮಿಷ ಮಲಗಬೇಕು.

ಸೂಚನೆ: ಇದನ್ನು ಆ್ಯಂಟಿಬಯೋಟಿಕ್‌ಗೆ ಪರ್ಯಾಯವಾಗಿ ಬಳಸಬೇಡಿ.

6. ಎದೆಹಾಲು

6. ಎದೆಹಾಲು

ಎದೆಹಾಲು ಮಕ್ಕಳಿಗೆ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುವುದು, ಇದನ್ನು ದೊಡ್ಡವರಿಗೂ ಬಳಸಬಹುದು. ಇದರಲ್ಲಿರುವ ಆ್ಯಂಟಿಮೈಕ್ರೋಬಯಲ್ ಅಂಶ ಮಕ್ಕಳಲ್ಲಿ ಕಿವಿ ನೋವು ಕಡಿಮೆ ಮಾಡುತ್ತದೆ, ಅಲ್ಲದೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.

7. ಮಸಾಜ್

7. ಮಸಾಜ್

ಕಿವಿ ನೋವು ಇರುವ ಕಡೆ ಮೆಲ್ಲನೆ ಮಸಾಜ್ ಮಾಡುವುದರಿಂದಲೂ ಕಿವಿ ನೋವು ಕಡಿಮೆಯಾಗುವುದು. ಮಸಾಜ್ ಕಿವಿಯಲ್ಲಿ ತುಂಬಿರುವ ಅಧಿಕ ನೀರು ಹೊರ ಹಾಕುವಲ್ಲಿ, ನೋವು ಕಡಿಮೆ ಮಾಡುವಲ್ಲಿ ಸಹಕಾರಿ.

ಬಳಸುವುದು ಹೇಗೆ: ಕಿವಿ ಹಿಂಭಾಗ, ಕುತ್ತಿಗೆ, ಕೆನ್ನೆ ಭಾಗಕ್ಕೆ ಎಣ್ಣೆ ಹಾಕಿ ಮಸಾಜ್ ಮಾಡಬೇಕು.

 ಶೀತದ ಇತರ ಲಕ್ಷಣಗಳು

ಶೀತದ ಇತರ ಲಕ್ಷಣಗಳು

ಸಾಮಾನ್ಯ ಶೀತ ಉಂಟಾದಾಗ ಕಿವಿ ನೋವು ಜೊತೆಗೆ ಇತರ ಲಕ್ಷಣಗಳು ಕಂಡು ಬರುವುದು:

  • ಮೂಗು ಕಟ್ಟುವುದು
  • ಕೆಮ್ಮು
  • ಗಂಟಲು ಕೆರೆತ
  • ಶೀತ
  • ಮೈಕೈ ನೋವು
  • ಸೀನು
  • ಜ್ವರ
  • ಸುಸ್ತು
  •  ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

    ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

    ಸಾಮಾನ್ಯ ಶೀತ ಮನೆಮದ್ದುಗಳಿಗೆ ಕಡಿಮೆಯಾಗುವುದು, ಆದರೆ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ

    • ಎರಡೂ ಕಿವಿಯಲ್ಲಿ ನೋವು
    • ಕಿವಿ ನೋವು ಹೆಚ್ಚಾಗುವುದು
    • ಮನೆಮದ್ದುಗಳಿಗೆ ಕಿವಿ ನೋವು ಕಡಿಮೆಯಾಗದೇ ಹೋದರೆ
    • ಕಿವಿ ಕೇಳದಿದ್ದರೆ
    • ಸಲಹೆ: ಕಿವಿ ತುಂಬಾ ಸೂಕ್ಷ್ಮ ಭಾಗವಾಗಿದ್ದು ಕಿವಿಯೊಳಗೆ ಕಡ್ಡಿ ಅಥವಾ ಬಡ್ಸ್ ಹಾಕಿ ತಿರುಗಿಸುವುದು, ಬಿಸಿ ಎಣ್ಣೆ ಸುರಿಯುವುದು ಅಥವಾ ವೈದ್ಯರ ಸಲಹೆ ಇಲ್ಲದೆ ಡ್ರಾಪ್ಡ್ ಹಾಕುವುದು ಮಾಡಬೇಡಿ.

English summary

Home Remedies for Ear Pain Due to Cold

This earache caused by a common cold can be relieved with the help of some easy and quick remedies. Take a look at some of the most common and effective home remedies for ear pain.
X
Desktop Bottom Promotion