For Quick Alerts
ALLOW NOTIFICATIONS  
For Daily Alerts

ಬಜೆಟ್‌ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ

|

2023 ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದೆ ಎಂದು ನೋಡುವಾಗ ಆರೋಗ್ಯ ಸಮಸ್ಯೆ ತೊಡೆದು ಹಾಕಲು ಒಂದು ಭದ್ರಅಡಿಪಾಯ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು. ಆರೋಗ್ಯ ಕ್ಷೇತ್ರದಲ್ಲೂ ತಂತ್ರಜ್ಞಾನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ.

Health Budget 2023 Highlights in kannada

2023ರ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೇನು ಎಂದು ನೋಡುವುದಾದರೆ...

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ಶ್ರಮ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ, ಔಷಧ, ವೈದ್ಯಕೀಯ ಸಾಧನಗಳಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಜೆಟ್‌ನಲ್ಲಿ ಶೇ.2.1 ರಷ್ಟು ಮೀಸಲಿಟ್ಟಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಲಿದೆ.

157 ಹೊಸ ನರ್ಸಿಂಗ್ ಕಾಲೇಜುಗಳು

2014ರಿಂದ ಸ್ಥಾಪಿತವಾಗಿರುವ 157 ವೈದ್ಯಕೀಯ ಕಾಲೇಜಗಳೊಂದಿಗೆ 157 ಹೊಸ ನರ್ಸಿಂಗ್‌ ಕಾಲೇಜು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಿಕೆಲ್‌ ಸೆಲ್‌ ಅನಿಮಿಯಾ (ರಕ್ತಹೀನತೆ) ತೊಡೆದು ಹಾಕಲು ನಿರ್ಧಾರ

ಸಿಕಲ್‌ ಸೆಲ್ ರಕ್ತಹೀನತೆ ಎಂಬುವುದು ನಿಮ್ಮ ರಕ್ತಕಣಗಳ ಆಕಾರವನ್ನು ಬದಲಾಯಿಸುತ್ತದೆ ಅಲ್ಲದೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಈ ಬಗೆಯ ಸಮಸ್ಯೆ 50ರ ಹರೆಯದಲ್ಲಿ ಹೆಚ್ಚಾಗಿ ಕಂಡು ಬರುವುದು. 2047ರಷ್ಟರಲ್ಲಿ ಈ ಸಮಸ್ಯೆ ಸಂಪೂರ್ಣ ತೊಡೆದು ಹಾಕಲು ಮಿಷನ್‌ ಸ್ಥಾಪನೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಲಾಗಿದೆ.

ಫಾರ್ಮಾ ಸಂಶೋಧನೆಯಲ್ಲಿ ಹೂಡಿಕೆಗೆ ಉತ್ತೇಜನೆ

ಕೇಂದ್ರ 2023ರ ಬಜೆಟ್‌ನಲ್ಲೊ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸಂಶೋಧನೆಗಾಗಿ ಹೊಸ ಕಾರ್ಯಕ್ರಮವನ್ನು ರೂಪಿಸಲಾಗುವುದು ಮತ್ತು ಸಂಶೋಧನೆಯಲ್ಲಿ ಹೂಡಿಕೆ ಮಾಡಲು ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಐಸಿಎಂಆರ್ ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ

ಐಸಿಎಂಆರ್ ಲ್ಯಾಬ್​ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ನೀಡಲಾಗುವುದು, ಈ ಕಾರಣಕ್ಕಾಗಿ ದೇಶದಲ್ಲಿ ಐಸಿಎಂಆರ್ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಅದಲ್ಲದೆ ಈ ಬಜೆಟ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಒಟ್ಟಿನಲ್ಲಿ ಈ ಸಾಲಿನ ಆರೋಗ್ಯ ಕ್ಷೇತ್ರದ ದೃಷ್ಟಿಯಿಂದ ನೋಡುವುದಾದರೆ ಉತ್ತಮವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆಯಾದರೆ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿ, ಈ ನಿಟ್ಟಿನಲ್ಲಿ ಈ ಸಾಲಿನ ಬಜೆಟ್ ಮೂಲಕ ಕೇಂದ್ರ ಸರ್ಕಾರ ವಿಶೇಷ ಕೊಡುಗೆ ನೀಡಿದೆ.

ಆರೋಗ್ಯ ಬಜೆಟ್‌ ಬಗ್ಗೆ ನಿಮ್ಮ ಅನಿಸಿಕೆಯೇನು ಕಮೆಂಟ್ ಮಾಡಿ.

English summary

Health Budget 2023 Highlights in kannada

Health Budget 2023 Highlights: More contribution to the health sector, read on.....
Story first published: Wednesday, February 1, 2023, 17:18 [IST]
X
Desktop Bottom Promotion