For Quick Alerts
ALLOW NOTIFICATIONS  
For Daily Alerts

ಮಧುಮೇಹದ ಜತೆ ಸಾಕಷ್ಟು ಕಾಯಿಲೆಗಳಿಗೆ ಆರೋಗ್ಯದ ಗಣಿ ಗೋಧಿಹುಲ್ಲು

|

ಧಾನ್ಯಗಳನ್ನು ಮೊಳಕೆ ಭರಿಸಿ ತಿಂದರೆ ಅದರಲ್ಲಿ ಅತ್ಯಧಿಕವಾದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಗೋಧಿಯನ್ನು ಮೊಳಕೆ ಭರಿಸಿ ಅದರ ಹುಲ್ಲನ್ನು ಬಳಸಿದರೆ ಅದರಲ್ಲೂ ಹಲವಾರು ವಿಧದ ಪೋಷಕಾಂಶಗಳು ಇವೆ ಎನ್ನಲಾಗುತ್ತದೆ. ಹೆಚ್ಚಾಗಿ ಗೋಧಿ ಹುಲ್ಲನ್ನು ಜ್ಯೂಸ್ ಮಾಡಿಕೊಂಡು ಕುಡಿಯುತ್ತಾರೆ. ಇದು ಪೋಷಕಾಂಶಗಳ ಆಗರ ಎಂದು ಪರಿಗಣಿಸಲಾಗಿದೆ.

Health Benefits Of Wheat grass And Nutrition

ಜ್ಯೂಸ್ ಮಾಡಿಕೊಂಡು ಕುಡಿಯುವಂತಹ ಗೋಧಿ ಹುಲ್ಲು ಕ್ಯಾಪ್ಸೂಲ್ಸ್, ಪೌಡರ್ ಮತ್ತು ಮಾತ್ರೆಗಳಲ್ಲೂ ಲಭ್ಯವಿದೆ. ಇದನ್ನು ದಿನನಿತ್ಯವೂ ಬಳಸುವವರು ಇದ್ದಾರೆ. ಗೋಧಿ ಹುಲ್ಲಿನಲ್ಲಿ ಪ್ರಮುಖ ಆಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ವಿರೋಧಿ ಮತ್ತು ನರಗಳ ರಕ್ಷಿಸುವ ಗುಣಗಳು ಇವೆ. ಈ ಜ್ಯೂಸ್ ನಿಂದ ಕೊಲೆಸ್ಟ್ರಾಲ್ ತಗ್ಗಿಸಬಹುದು, ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಮಧುಮೇಹಕ್ಕೆ ಒಳ್ಳೆಯದು, ಉರಿಯೂತ ಕಡಿಮೆ ಮಾಡುವುದು ಮತ್ತು ತೂಕ ಇಳಿಸಲು ಇದು ಸಹಕಾರಿ.

ಗೋಧಿ ಹುಲ್ಲಿನಲ್ಲಿ ಇರುವಂತಹ ಆರೋಗ್ಯ ಲಾಭಗಳು, ಪೋಷಕಾಂಶಗಳು ಮತ್ತು ಅದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಸಲಿದ್ದೇವೆ. ಗೋಧಿ ಹುಲ್ಲನ್ನು ಬಳಸುವ ಮತ್ತು ಸೇವಿಸುವ ಕೆಲವು ವಿಧಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

ಗೋಧಿ ಹುಲ್ಲಿನ ಲಾಭಗಳು

ಗೋಧಿ ಹುಲ್ಲಿನ ಲಾಭಗಳು

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು

ಗೋಧಿ ಹುಲ್ಲು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಎಂದು ಕೆಲವು ಅಧ್ಯಯಗಳು ಹೇಳಿವೆ. ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನದಲ್ಲಿ ಅತ್ಯಧಿಕ ಮಟ್ಟದ ಕೊಲೆಸ್ಟ್ರಾಲ್ ಇದ್ದ ಮೊಲಗಳಿಗೆ ಗೋಧಿ ಹುಲ್ಲಿನ ಆಹಾರ ನೀಡಲಾಯಿತು. ಗೋಧಿ ಹುಲ್ಲಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು.

ಇಲಿಗಳ ಮೇಲೆ ನಡೆಸಿರುವಂತಹ ಇನ್ನೊಂದು ಅಧ್ಯಯನದ ಪ್ರಕಾರ ಗೋಧಿ ಹುಲ್ಲಿನ ಜ್ಯೂಸ್ ಕೊಲೆಸ್ಟ್ರಾಲ್ ತಗ್ಗಿಸಲು ನೆರವಾಗುವುದು ಪತ್ತೆಯಾಗಿದೆ. ಆದರೆ ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ.

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ಗೋಧಿ ಹುಲ್ಲಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಇವೆ ಮತ್ತು ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವುದು. ಕ್ಯಾನ್ಸರ್ ಕೋಶಗಳು ಕಡಿಮೆ ಆಮ್ಲಜನಕ ಇರುವಲ್ಲಿ ಬದುಕುವುದು. ಗೋಧಿ ಹುಲ್ಲು ದೇಹದ ಅಂಗಾಂಶಗಳಿಗೆ ಹೆಚ್ಚಿನ ಆಮ್ಲಜನಕ ಒದಗಿಸುವುದು ಮತ್ತು ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ.

ಸುಮಾರು 60 ಮಂದಿ ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ನಡೆಸಿರುವಂತಹ ಅಧ್ಯನದ ಪ್ರಕಾರ ಕಿಮೋಥೆರಪಿಯಿಂದ ರಕ್ತದಲ್ಲಿ ಆಗುವಂತಹ ವಿಷಕಾರಿ ಅಂಶವನ್ನು ಗೋಧಿ ಹುಲ್ಲು ಕಡಿಮೆ ಮಾಡುವುದು ಎಂದು ತಿಳಿದುಬಂದಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕು.

ಮಧುಮೇಹ ಚಿಕಿತ್ಸೆಗೆ ಸಹಕಾರಿ

ಮಧುಮೇಹ ಚಿಕಿತ್ಸೆಗೆ ಸಹಕಾರಿ

ಗೋಧಿ ಹುಲ್ಲು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಗೋಧಿ ಹುಲ್ಲಿನಲ್ಲಿ ಇರುವಂತಹ ಆಕ್ಸಿಡೇಟಿವ್ ಕಿಣ್ವಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವುದು ಎಂದು ಟೈಪ್ 2 ಮಧುಮೇಹ ಇರುವ ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿದೆ.

ಸುಮಾರು 30 ದಿನಗಳ ಕಾಲ ಇಲಿಗಳಿಗೆ ಗೋಧಿ ಹುಲ್ಲಿನ ಸಾರವನ್ನು ನೀಡಿದ ವೇಳೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಂಡುಬಂದಿದೆ. ಇನ್ನಷ್ಟು ಅಧ್ಯಯನಗಳು ಈ ಬಗ್ಗೆ ನಡೆಯಬೇಕಾಗಿದೆ.

ಉರಿಯೂತ ಕಡಿಮೆ ಮಾಡುವುದು

ಉರಿಯೂತ ಕಡಿಮೆ ಮಾಡುವುದು

ದೀರ್ಘಕಾಲಿಕ ಉರಿಯೂತವನ್ನು ಗೋಧಿ ಹುಲ್ಲು ಕಡಿಮೆ ಮಾಡುವುದು. ಗೋಧಿ ಹುಲ್ಲಿನ ಜ್ಯೂಸ್ ಜಠರಕರುಳಿನ ಪರಿಸ್ಥಿತಿಯ ಉರಿಯೂತ ತಗ್ಗಿಸಲು ನೆರವಾಗುವುದು. ಗೋಧಿ ಹುಲ್ಲಿನಲ್ಲಿ ಉನ್ನತ ಮಟ್ಟದ ಕ್ಲೋರೊಫಿಲ್ ಇದೆ ಮತ್ತು ಇದು ಉರಿಯೂತ ಶಮನಕಾರಿ ಆಗಿದೆ. ಇನ್ನೊಂದು ಅಧ್ಯಯನದ ಪ್ರಕಾರ ಕ್ಲೋರೊಫಿಲ್ ಇರುವ ಅಂಶವು ಮನುಷ್ಯರ ಮಹಾಪಧಮನಿ ಉರಿಯೂತ ಕಡಿಮೆ ಮಾಡುವುದು.

ತೂಕ ಇಳಿಸಲು

ತೂಕ ಇಳಿಸಲು

ಗೋಧಿ ಹುಲ್ಲಿನ್ನು ಸೇವಿಸಿದರೆ ಅದು ತೂಕ ಇಳಿಸಲು ಸಹಕಾರಿ ಆಗುವುದು. ಅಧ್ಯಯನಗಳು ಹೇಳುವ ಪ್ರಕಾರ ಗೋಧಿ ಹುಲ್ಲಿನಲ್ಲಿ ಇರುವಂತಹ ಥೈಲಾಕೋಯಿಡ್ಸ್ ಅಂಶವು ಜಠರವು ಖಾಲಿ ಆಗುವುದನ್ನು ನಿಧಾನಗೊಳಿಸುವುದು. ಹೀಗಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಜತೆಗೆ ಸೇವನೆ ಮಾಡಿದರೆ ಅದರಿಂದ ಹಸಿವು ಕಡಿಮೆ ಆಗುವುದು.

ಹೀಗಾಗಿ ದೇಹದ ತೂಕವು ಇಳಿಯುವುದು. ಥೈಲಾಕೋಯಿಡ್ಸ್ ಅಂಶವು ಬಯಕೆಯನ್ನು ಕಡಿಮೆ ಮಾಡುವ ಮೂಲಕ ಆಹಾರ ತಿನ್ನುವುದನ್ನು ಕಡಿಮೆ ಮಾಡಿಸುವುದು. ಥೈಲಾಕೋಯಿಡ್ಸ್ ಬಯಕೆಯ ಹಾರ್ಮೋನ್ ಆಗಿರುವಂತಹ ಘ್ರೆಲಿನ್ ಮೇಲೆ ಪರಿಣಾಮ ಬೀರಿ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಜೀರ್ಣಕ್ರಿಯೆ ಆರೋಗ್ಯ ಸುಧಾರಿಸುವುದು

ಜೀರ್ಣಕ್ರಿಯೆ ಆರೋಗ್ಯ ಸುಧಾರಿಸುವುದು

ಗೋಧಿ ಹುಲ್ಲು ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ಆರೋಗ್ಯವು ಉತ್ತಮವಾಗುವುದು. ಗೋಧಿ ಹುಲ್ಲಿನಲ್ಲಿ ಜೀರ್ಣಕ್ರಿಯೆ ಕಿಣ್ವಗಳು ಇವೆ ಮತ್ತು ಇದು ಜೀರ್ಣಕ್ರಿಯೆಯನ್ನು ವೃದ್ಧಿಸುವುದು. ಇದರ ಜ್ಯೂಸ್ ಕರುಳಿನ ಕ್ರಿಯೆಗಳನ್ನು ಹೆಚ್ಚಿಸುವುದು. ಗೋಧಿ ಹುಲ್ಲಿನ ಜ್ಯೂಸ್ ಕರುಳನ್ನು ಶುಚಿಗೊಳಿಸುವುದು ಮತ್ತು ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡುವುದು. ಆದರೆ ಇದರ ಬಗ್ಗೆ ದೃಢವಾಗಿ ಹೇಳಲು ಇನ್ನಷ್ಟು ಅಧ್ಯಯನಗಳು ಬೇಕಾಗಿರುವುದು.

ಚಯಾಪಚಯ ವೃದ್ಧಿ

ಚಯಾಪಚಯ ವೃದ್ಧಿ

ಗೋಧಿ ಹುಲ್ಲು ಸೇವನೆ ಮಾಡಿದರೆ ಅದರಿಂದ ಚಯಾಪಚಯ ವೃದ್ಧಿಸುವುದು. ಗೋಧಿ ಹುಲ್ಲಿನ ಹುಡಿ ಸೇವಿಸಿದರೆ ಅದರಿಂದ ಥೈರಾಯ್ಡ್ ಗ್ರಂಥಿಗಳು ಉತ್ತೇಜನಗೊಂಡು ದೇಹದ ತೂಕವನ್ನು ನಿಯಂತ್ರಿಸಲು ನೆರವಾಗುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಚಯಾಪಚಯ ಸುಧಾರಣೆ ಆಗುವುದು ಮತ್ತು ಅಜೀರ್ಣವು ನಿವಾರಣೆ ಆಗುವುದು. ಇದನ್ನು ಪುಷ್ಠೀಕರಿಸಲು ಇನ್ನಷ್ಟು ಅಧ್ಯಯನಗಳು ಬೇಕಾಗಿದೆ.

ಪ್ರತಿರೋಧಕ ಶಕ್ತಿ ವೃಧ್ಧಿ

ಪ್ರತಿರೋಧಕ ಶಕ್ತಿ ವೃಧ್ಧಿ

ಗೋಧಿ ಹುಲ್ಲು ಪ್ರತಿರೋಧಕ ವ್ಯವಸ್ಥೆಯ ಆರೋಗ್ಯವನ್ನು ವೃದ್ಧಿಸುವುದು. ಇದು ಕೆಂಪು ರಕ್ತ ಕಣ ಮತ್ತು ಬಿಳಿ ರಕ್ತದ ಕಣಗಳನ್ನು ಹೆಚ್ಚು ಮಾಡಲು ನೆರವಾಗುವುದು. ಇದು ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಹೀಗಾಗಿ ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು.

ರಕ್ತದೊತ್ತಡ ಕಡಿಮೆ ಮಾಡುವುದು

ರಕ್ತದೊತ್ತಡ ಕಡಿಮೆ ಮಾಡುವುದು

ಕ್ಲೋರೊಫಿಲ್ ಅಂಶವನ್ನು ಹೊಂದಿರುವಂತಹ ಗೋಧಿ ಹುಲ್ಲು ರಕ್ತದ ಕೋಶಗಳ ಉತ್ಪತ್ತಿಯನ್ನು ಹೆಚಿಸುವುದು. ಇದರಿಂದ ರಕ್ತದೊತ್ತಡ ನಿಯಂತ್ರಿಸಲು ನೆರವಾಗುವುದು. ಆದರೆ ಇದನ್ನು ಸಾಬೀತು ಮಾಡಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಅರಿವಿನ ಕಾರ್ಯ ಸುಧಾರಿಸುವುದು

ಅರಿವಿನ ಕಾರ್ಯ ಸುಧಾರಿಸುವುದು

ಗೋಧಿ ಹುಲ್ಲಿನ ಇರುವಂತಹ ನರ ರಕ್ಷಣೆ ಪರಿಣಾಮವು ಅರಿವಿನ ಕಾರ್ಯವನ್ನು ಸುಧಾರಣೆ ಮಾಡುವುದು ಮತ್ತು ದೀರ್ಘಕಾಲಿಕ ಆಯಾಸವನ್ನು ಕಡಿಮೆ ಮಾಡುವುದು. ನೆನಪಿನ ಶಕ್ತಿ ದುರ್ಬಲತೆಯನ್ನು ಕೂಡ ಇದು ನಿವಾರಣೆ ಮಾಡುವುದು ಎಂದು ಕೊರಿಯಾದ ವಿಶ್ವ ವಿದ್ಯಾಲಯವೊಂದು ನಡೆಸಿದ ಅಧ್ಯಯನವು ಹೇಳಿದೆ.

ಸಂಧಿವಾತಕ್ಕೆ ಚಿಕಿತ್ಸೆ

ಸಂಧಿವಾತಕ್ಕೆ ಚಿಕಿತ್ಸೆ

ಗೋಧಿ ಹುಲ್ಲು ಸಂಧಿವಾತವನ್ನು ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸಂಧಿವಾತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಶಕ್ತಿಯ ಮಟ್ಟ ವೃದ್ಧಿ

ಶಕ್ತಿಯ ಮಟ್ಟ ವೃದ್ಧಿ

ಗೋಧಿ ಹುಲ್ಲಿನ ಇರುವಂತಹ ಪ್ರೋಟೀನ್ ಹಲವಾರು ಕಾಯಿಲೆಗಳನ್ನು ತಡೆಯುವುದು ಮತ್ತು ದೇಹಕ್ಕೆ ಶಕ್ತಿ ನೀಡುವುದು. ಪ್ರತಿರೋಧಕ ಶಕ್ತಿಯು ದುರ್ಬಲವಾಗಿದ್ದರೆ ಅದರಿಂದ ಬಳಲಿದಂತೆ ಆಗುವುದು ಕ್ಲೋರೊಫಿಲ್ ಅಂಶವು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ ಮತ್ತು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದರ ಬಗ್ಗೆ ಅಧ್ಯಯನಗಳು ಇನ್ನೂ ನಡೆಸಬೇಕಾಗಿದೆ.

ಕಿಡ್ನಿ ಸಮಸ್ಯೆಗೆ ಪರಿಹಾರ

ಕಿಡ್ನಿ ಸಮಸ್ಯೆಗೆ ಪರಿಹಾರ

ಈ ವಿಚಾರದ ಬಗ್ಗೆ ತುಂಬಾ ಕಡಿಮೆ ಅಧ್ಯಯನಗಳು ನಡೆದಿದೆ. ಆದರೆ ಗೋಧಿ ಹುಲ್ಲು ಸೇವಿಸಿದರೆ ಅದರಿಂದ ಕಿಡ್ನಿ ಸಮಸ್ಯೆ ನಿವಾರಣೆ ಮಾಡಬಹುದು ಎಂದು ಕೆಲವು ಸಾಕ್ಷ್ಯಗಳು ಹೇಳಿವೆ. ಗೋಧಿ ಹುಲ್ಲಿನ ಹುಡಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆ ಆಗುವುದು ಮತ್ತು ಕಿಡ್ನಿ ಕಲ್ಲು ಬೆಳೆಯುವುದನ್ನು ನಿಧಾನಗೊಳಿಸುವುದು.

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯಕ್ಕೆ

ವಿಟಮಿನ್ ಎ ಹೊಂದಿರುವಂತಹ ಗೋಧಿ ಹುಲ್ಲು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಇದರ ಬಗ್ಗೆ ನಡೆಸಿರುವಂತಹ ಅಧ್ಯಯನದಲ್ಲಿ ಕೂಡ ಇದು ಸಾಬೀತು ಆಗಿದೆ. ಸೋರಿಯಾಸಿಸ್ ಮತ್ತು ಇಸಬು ಇರುವಂತಹ ಜನರು ಗೋಧಿ ಹುಲ್ಲಿನ ಜ್ಯೂಸ್ ಕುಡಿಯಬೇಕು. ಆದರೆ ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆದು ಇದನ್ನು ದೃಢಪಡಿಸಬೇಕು.

ಗೋಧಿ ಹುಲ್ಲಿನ ಪೋಷಕಾಂಶ ಮೌಲ್ಯಗಳು

ಗೋಧಿ ಹುಲ್ಲಿನ ಪೋಷಕಾಂಶ ಮೌಲ್ಯಗಳು

ಗೋಧಿ ಹುಲ್ಲಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ನೂರು ಗ್ರಾಂ ಗೋಧಿ ಹುಲ್ಲಿನ ಹುಡಿಯಲ್ಲಿ

ಶಕ್ತಿ-312 ಕೆಸಿಎಎಲ್

ಪ್ರೋಟೀನ್-12.5 ಗ್ರಾಂ

ಕಾರ್ಬೋಹೈಡ್ರೇಟ್ಸ್-75 ಗ್ರಾಂ

ಆಹಾರದ ನಾರಿನಾಂಶ-50 ಗ್ರಾಂ

ಕ್ಯಾಲ್ಸಿಯಂ-300 ಮಿ.ಗ್ರಾಂ.

ಕಬ್ಬಿನಾಂಶ-12.5 ಮಿ.ಗ್ರಾಂ

ಗೋಧಿ ಹುಲ್ಲಿನಲ್ಲಿ ಉನ್ನತ ಮಟ್ಟದ ಪ್ರೋಟೀನ್, ಆಂಟಿಆಕ್ಸಿಡೆಂಟ್, ಬಯೊಫ್ಲಾವನಾಯ್ಡ್ ಮತ್ತು ಅಮಿನೋ ಆಮ್ಲಗಳು ಇವೆ. ಗೋಧಿ ಹುಲ್ಲಿನಲ್ಲಿ 17 ವಿವಿಧ ರೀತಿಯ ಅಮಿನೋ ಆಮ್ಲಗಳು ಇವೆ ಮತ್ತು ಇದರಲ್ಲಿ 8 ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿರುವುದು. ಇದರಲ್ಲಿ ಇರುವಂತಹ ಕ್ಲೋರೊಫಿಲ್ ಎನ್ನುವಂತಹ ಹಸಿರು ವರ್ಣದ್ರವ್ಯವು ಹಲವಾರು ಆರೋಗ್ಯ ಗುಣಗಳನ್ನು ಹೊಂದಿದೆ.

ಗೋಧಿ ಹುಲ್ಲಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣವು ಕೋಶಗಳಿಗೆ ಆಗುವ ಆಕ್ಸಿಡೇಟಿವ್ ಹಾನಿ ತಗ್ಗಿಸುವುದು. ಗೋಧಿ ಹುಲ್ಲನ್ನು ಸೇವಿಸುವುದು ತುಂಬಾ ಆರೋಗ್ಯಕಾರಿ. ಆದರೆ ಇದರ ಕೆಲವು ಅಡ್ಡಪರಿಣಾಮಗಳು ಕೂಡ ಇದೆ.

English summary

Health Benefits Of Wheat grass And Nutrition

Here we are discussing about Health Benefits Of Wheatgrass And Nutrition. Wheatgrass is also known as green blood. It is prepared from freshly sprouted leaves of the wheat plant (Triticum aestivum). It is considered a superfood with its rich nutritional profile. Read more.
X
Desktop Bottom Promotion