For Quick Alerts
ALLOW NOTIFICATIONS  
For Daily Alerts

Health tips: ಮೊಬೈಲ್‌, ಕಂಪ್ಯೂಟರ್‌ನ ನೀಲಿ ಬೆಳಕಿನಿಂದ ಕಣ್ಣನ್ನು ರಕ್ಷಿಸಲು ನಿಯಮಿತವಾಗಿ ಸೇವಿಸಿ ಜೋಳ

|

ಜೋಳ ಅಥವಾ ಜೋಳದಿಂದ ತಯಾರಿಸಿದ ಖಾದ್ಯಗಳನ್ನು ಸವಿಯಲು ಯಾರಿಗೆ ತಾನೆ ಇಷ್ಟವಿಲ್ಲ. ಥರಾವರಿಯಾಗಿ ತಯಾರಿಸುವ ಸುಟ್ಟ ಜೋಳ, ಬೇಯಿಸಿದ ಜೋಳ, ಪಾಪ್‌ಕಾರ್ನ್‌, ಕಾರ್ನ್‌ ರೈಸ್‌ಬಾತ್‌, ಬೇಬಿ ಕಾರ್ನ್‌ ಮಂಚೂರಿಯನ್‌ ಆಹಾ.. ಕೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತೆ ಅಲ್ವಾ...

ಜೋಳ ಕೇವಲ ಬಾಯಿಯ ರುಚಿಯನ್ನು ತಣಿಸುವುದು ಮಾತ್ರವಲ್ಲದೆ, ನಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಫೈಬರ್‌ ಅಂಶ ಇರುವ ಆಹಾರಕ್ಕೆ ಅತ್ಯುತ್ತಮ ಉದಾಹರಣೆ ಈ ಜೋಳ. ಜೋಳ ನಮ್ಮ ದೇಹದಲ್ಲಿ ಮಧುಮೇಹ ನಿಯಂತ್ರಿಸುತ್ತದೆ, ಹೃದಯ ಸಮಸ್ಯೆ ತಡೆಯುತ್ತದೆ, ಶಕ್ತಿ ಹೆಚ್ಚಿಸುತ್ತದೆ ಅಷ್ಟೇ ಅಲ್ಲ, ನಮ್ಮ ಕಣ್ಣನ್ನು ಸಹ ಪೋಷಿಸುತ್ತದೆ.
ಜೋಳದಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆಯೇ ಹೇಗೆ ಮುಂದೆ ನೋಡೋಣ:

ನೀಲಿ ಬೆಳಕಿನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ

ನೀಲಿ ಬೆಳಕಿನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ

ನಾವು ದಿನವಿಡೀ ನಮ್ಮ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ನೋಡುತ್ತೇವೆ, ಇದರಿಂದ ಕಣ್ಣಿಗೆ ಆಗುತ್ತಿರುವ ಹಾನಿ ಅಪಾರ. ಆದರೆ ಮೆಕ್ಕೆ ಜೋಳದ ನಿಯಮಿತ ಸೇವನೆಯಿಂದ ನೀಲಿ ಬೆಳಕಿನಿಂದ ಉಂಟಾಗುವ ಆಕ್ಸಿಡೇಟಿವ್ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುತ್ತದೆ.

ಮೆಕ್ಕೆ ಜೋಳವು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಹೊಂದಿದ್ದು, ಕ್ಯಾರೊಟಿನಾಯ್ಡ್ ಉತ್ಕರ್ಷಣ ನಿರೋಧಕಗಳು ಕಣ್ಣಿನ ಆರೋಗ್ಯ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಉತ್ಕರ್ಷಣ ನಿರೋಧಕಗಳು ನೀಲಿ ಬೆಳಕಿನಿಂದ ಕಣ್ಣನ್ನು ಕಾಪಾಡುತ್ತದೆ, ಈ ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಮಟ್ಟಗಳು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಯ ಸಂಭವದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಹೃದಯದ ತೊಂದರೆ ತಡೆಯಬಹುದು

ಹೃದಯದ ತೊಂದರೆ ತಡೆಯಬಹುದು

ಮೆಕ್ಕೆ ಜೋಳದಲ್ಲಿ ಮೆಗ್ನೀಶಿಯಂ ಅಂಶ ಅಧಿಕವಾಗಿರುತ್ತದೆ. ದೇಹದಲ್ಲಿನ ಕಳಪೆ ಮೆಗ್ನೀಶಿಯಂ ಮಟ್ಟವು ಹೃದಯರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಹಠಾತ್ ಹೃದಯ ಸ್ಥಂಭನದಂಥ ಹೃದಯ ಸಮಸ್ಯೆಗಳ ಹೆಚ್ಚಿನ ಅಪಾಯ ಸಾಧ್ಯತೆ ಇದೆ. ಇದರ ಜೊತೆಗೆ, ಕಾರ್ನ್‌ನಲ್ಲಿರುವ ತಾಮ್ರವು ಸಹ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಪೂರೈಸುತ್ತದೆ, ಇದು ವಿಫಲವಾದರೆ, ನೀವು ಆರೋಗ್ಯ ಅಸ್ವಸ್ಥತೆಗಳ ಹೆಚ್ಚಿನ ಅಪಾಯವನ್ನು ಹೊಂದಿರಬಹುದು.

ರಕ್ತದ ಸಕ್ಕರೆಯ ನಿಯಂತ್ರಣವನ್ನು ಸುಧಾರಿಸುತ್ತದೆ

ರಕ್ತದ ಸಕ್ಕರೆಯ ನಿಯಂತ್ರಣವನ್ನು ಸುಧಾರಿಸುತ್ತದೆ

ಜೋಳದಲ್ಲಿರುವ ಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಇದರರ್ಥ ಜೋಳವು ನಿಧಾನವಾಗಿ ಸಕ್ಕರೆಯನ್ನು ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುತ್ತದೆ, ಯಾವುದೇ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ತಡೆಯುತ್ತದೆ. ಅದಕ್ಕಾಗಿಯೇ ನೀವು ಮಧುಮೇಹಿಗಳಾಗಿದ್ದರೆ ಪಿಷ್ಟ ಆಹಾರಗಳಿಗೆ ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಮೆಕ್ಕೆ ಜೋಳದಲ್ಲಿರುವ ಕಾರ್ಬೋಹೈಡ್ರೇಟ್‌ಗಳಲ್ಲಿ 56-69ರಷ್ಟು ಗ್ಲೈಸೆಮಿಕ್ ಸೂಚ್ಯಂಕ ಇರುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳ ಅತ್ಯುತ್ತಮ ಮೂಲವಾಗಿದೆ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದೆ ಶಕ್ತಿಯನ್ನು ನೀಡುತ್ತದೆ. ಕ್ರೀಡಾಪಟುಗಳು ಮತ್ತು ಶ್ರಮದಾಯಕ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಕಾರ್ನ್ ಅನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.

English summary

Health Benefits Of Corn And Its Nutritional Facts in Kannada

Here we are discussing about Health Benefits Of Corn And Its Nutritional Facts in Kannada. Read more.
X
Desktop Bottom Promotion