For Quick Alerts
ALLOW NOTIFICATIONS  
For Daily Alerts

ಹುರುಳಿ ಟೀ ಟೇಸ್ಟ್‌ ಮಾಡಿದ್ದೀರಾ? ಇದನ್ನು ಕುಡಿದರೆ ಆರೋಗ್ಯಕ್ಕೆ 6 ಲಾಭ

|

ನೀವು ಹುರುಳಿ ಪಲ್ಯ, ಹುರುಳಿ ಸಾರು, ಹುರುಳಿ ಚಟ್ನಿ ಅಂತ ಹುರುಳಿ ಕಾಳು ಬಳಸಿ ಅನೇಕ ಬಗೆಯ ಖಾದ್ಯಗಳನ್ನು ಮಾಡಿರುತ್ತೀರಿ, ಆದರೆ ಎಂದಾದರೂ ಹುರುಳಿ ಟೀ ರುಚಿ ನೋಡಿದ್ದೀರಾ? ಹರ್ಬಲ್‌ ಟೀಯಷ್ಟೇ ಪ್ರಯೋಜನಕಾರಿಯಾದ ಈ ಟೀ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಈ ಹುರುಳಿ ಟೀಯನ್ನು ಹುರುಳಿಕಾಳು ಅಥವಾ ಅದರ ಸೊಪ್ಪಿನಿಂದಲೂ ತಯಾರಿಸಬಹುದು. ಇದರಲ್ಲಿ ಫ್ಲೇವೋನಾಯ್ಡ್‌ ಅಂಶಗಳಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Buckwheat Tea

ಹುರುಳಿ ಟೀ ಪ್ರಯೋಜನಗಳು

1. ಮಧುಮೇಹ ನಿಯಂತ್ರಣದಲ್ಲಿಡುತ್ತದೆ

ಮಧುಮೇಹಿಗಳು ಈ ಟೀ ಕುಡಿಯುವುದರಿಂದ ತಮ್ಮ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು. ಈ ಟೀ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಾಪಾಡಿ ಹಾಗೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಅಗ್ರಿಕಲ್ಚರ್ ಅಂಡ್‌ ಫುಡ್‌ ಕೆಮಿಸ್ಟ್ರಿ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ. ಆದ್ದರಿಂದ ಮಧುಮೇಹಿಗಳು ಈ ಟೀ ಕುಡಿಯುವುದರಿಂದ ತಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

2. ತೂಕ ಇಳಿಕೆಗೆ ಸಹಕಾರಿ

ಹುರುಳಿಕಾಳು ತೂಕ ಇಳಿಕೆಯಲ್ಲಿ ತುಂಬಾ ಸಹಕಾರಿ. ಇದರಲ್ಲಿ ಕಡಿಮೆ ಕ್ಯಾಲೋರಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಊಟವಾದ ಬಳಿಕ ಟೀ ಕುಡಿದರೆ ಚಯಪಚಯ ಕ್ರಿಯೆಗೆ ತುಂಬಾ ಸಹಕಾರಿ. ಚಯಪಚಯ ಕ್ರಿಯೆ ಉತ್ತಮವಾಗಿದ್ದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಇದರಿಂದ ತೂಕ ಇಳಿಕೆಗೆ ಸಹಕಾರಿ.

3. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಈ ಟೀ ದಿನಾ ಕುಡಿಯುವುದರಿಂದ ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಇದರಿಂದ ಪಾರ್ಶ್ವವಾಯು, ಹೃದಯಾಘಾತ ಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

4. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಆಗಾಗ ಹೊಟ್ಟೆ ಉಬ್ಬುವ ಸಮಸ್ಯೆಯಿದ್ದರೆ ಈ ಟೀ ಕುಡಿಯುವುದು ಒಳ್ಳೆಯದು.

5. ಕ್ಯಾನ್ಸರ್‌ ತಡೆಗಟ್ಟುತ್ತದೆ

ಹುರುಳಿಕಾಳಿನಲ್ಲಿರುವ ರುಟಿನ್ ಅಂಶ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತದೆ. ಫ್ಲೇವೋನಾಯ್ಡ್ ಅಂಶವಿರುವ ಆಹಾರ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಿಡ್ನಿ, ಗರ್ಭಕೋಶದ ಕ್ಯಾನ್ಸರ್ ಮುಂತಾದ ತೊಂದರೆಗಳು ಉಂಟಾಗುವುದಿಲ್ಲ.

6. ನರಗಳಿಗೆ ಸಂಬಂಧಿಸಿದ ಸಮಸ್ಯೆ CVI ತಡೆಗಟ್ಟಲು ಸಹಕಾರಿ

ನರಗಳ ಸಮಸ್ಯೆ ಹೋಗಲಾಡಿಸುವಲ್ಲಿ ಹುರುಳಿ ಟೀ ಪ್ರಯೋಜನಕಾರಿ ಎಂದು ಕ್ಲಿನಿಕಲ್ ಪಾರ್ಮಕೋಲಜಿ ಎಂಬ ಯೋರೋಪಿಯನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಕುರಿತು ನಡೆಸಿದ ಅಧ್ಯಯನದಲ್ಲಿ

ಸಿವಿಐ ಸಮಸ್ಯೆಇರುವ 67 ಪುರುಷ ಹಾಗೂ ಮಹಿಳಾ ರೋಗಿಗಳಿಗೆ ಹುರುಳಿಯನ್ನು ಚಿಕಿತ್ಸೆಯಲ್ಲಿ ನೀಡಲಾಗುತ್ತಿತ್ತು. ಆಗ ಹುರುಳಿ ಟೀ ಅವರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿರುವುದು ಪರೀಕ್ಷೆಯಲ್ಲಿ ತಿಳಿದು ಬಂತು.

ಹುರುಳಿ ಟೀ ಮಾಡುವುದು ಹೇಗೆ?

*ಮುಕ್ಕಾಲು ಲೀಟರ್ ನೀರಿಗೆ 2 ಚಮಚ ಹುರುಳಿಕಾಳನ್ನು ಹುರಿದು ಪುಡಿ ಮಾಡಿ ಹಾಕಿ ಕುದಿಸಿ, ನಂತರ ಸೋಸಿ ಬಿಸಿ-ಬಿಸಿಯಾಗಿ ಕುಡಿಯಿರಿ.

ಇದಕ್ಕೆ ಸಕ್ಕರೆ ಹಾಕಬೇಡಿ, ಸ್ವಲ್ಪ ರುಚಿ ಇಷ್ಟವಾಗದಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೋಡಿ.

Read more about: tea health ಟೀ ಆರೋಗ್ಯ
English summary

Health Benefits Of Buckwheat Tea

Buckwheat tea is the new health trend nowadays, because it provides so any health benefits. This tea helps to to loose weight, control diabetes, cholesterol.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more