For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19ನಿಂದ ಚೇತರಿಸಿದವರನ್ನು ಕಾಡುತ್ತಿರುವ ಸ್ತ್ರೀರೋಗಗಳು

|

ಕೋವಿಡ್‌ 19ನಿಂದ ಚೇತರಿಸಿಕೊಂಡ ಬಳಿಕ ಅನೇಕರು ಬೇರೆ-ಬೇರೆ ರೀತಿಯ ಆರೋಗ್ಯ ಸಮಸ್ಯೆ ಕಂಡು ಬರುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರಿಗೆ ಕೊರೊನಾದಿಂದ ಚೇತರಿಸಿ 3-4 ತಿಂಗಳಾದರೂ ಸುಸ್ತು ಕಡಿಮೆಯಾಗುತ್ತಿಲ್ಲ, ಉಸಿರಾಟದ ತೊಂದರೆಗಳು ಕಂಡು ಬರುತ್ತಿವೆ, ಜೊತೆಗೆ ನಿದ್ರಾಹೀನತೆಯಂಥ ಸಮಸ್ಯೆ ಕಂಡು ಬರುವುದಾಗಿ ಹೇಳುತ್ತಿದ್ದಾರೆ.

ಅದರಲ್ಲೂ ಮಹಿಳೆಯರಿಗೆ ಸ್ತ್ರೀರೋಗ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಕೋವಿಡ್‌ನಿಂದ ಚೇತರಿಸಿದ ಕೆಲ ಮಹಿಳೆಯರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ:

1. ಅನಿಯಮಿತ ಮುಟ್ಟು

1. ಅನಿಯಮಿತ ಮುಟ್ಟು

ಕೆಲವರಲ್ಲಿ ಕೋವಿಡ್ 19 ಬಳಿಕ ಮುಟ್ಟಿನಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂದರೂ ನಂತರ ಸರಿ ಹೋಗಿದೆ. ಆದರೆ ಮತ್ತೆ ಕೆಲವರಲ್ಲಿ ಕೋವಿಡ್‌ 19ನಿಂದ ಚೇತರಿಸಿ ಸ್ವಲ್ಪ ಸಮಯವಾದರೂ ಹಾಗೇ ಇವೆ. Journal Reproductive BioMedicine Online in 2021 ಸಮೀಕ್ಷೆಯ ವರದಿ ಪ್ರಕಾರ ಕೋವಿಡ್ 19ನಿಂದ ಚೇತರಿಸಿಕೊಂಡ ಮಹಿಳೆಯರಲ್ಲಿ ಸ್ತ್ರೀರೋಗ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಸಮೀಕ್ಷೆಯಲ್ಲಿ 177 ಮಹಿಳೆಯರು ಭಾಗವಹಿಸಿದ್ದರು. ಅವರಲ್ಲಿ

* 45 ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವದಲ್ಲಿ ವ್ಯತ್ಯಾಸ ಉಂಟಾಗಿತ್ತು. ಕೆಲವರಲ್ಲಿ ರಕ್ತಸ್ರಾವ ಹೆಚ್ಚಾದರೆ ಇನ್ನು ಕೆಲವರಿಗೆ ಮಾಮೂಲಿಗಿಂತ ತುಂಬಾ ಕಡಿಮೆ ರಕ್ತಸ್ರಾವವಾಗಿತ್ತು.. 50 ಮಹಿಳೆಯರು ಮುಟ್ಟಿನ ದಿನಾಂಕದಲ್ಲಿ ವ್ಯತ್ಯಾಸವಾಗಿರುವುದಾಗಿ ತಿಳಿಸಿದ್ದರು. ಕೆಲವರಿಗೆ ಬೇಗ ಮುಟ್ಟಾದರೆ ಇನ್ನು ಕೆಲವರಿಗೆ ತುಂಬಾ ವಿಳಂಬವಾಗಿತ್ತು.

* ಕೆಲವರಲ್ಲಿ ರಕ್ತಸ್ರಾವ ಕಡಿಮೆ ಇದ್ದು ತುಂಬಾ ದಿನಗಳವರೆಗೆ ರಕ್ತಸ್ರಾವ ಇತ್ತು.

* ಕೆಲವರಿಗೆ ಅತ್ಯಧಿಕ ರಕ್ತಸ್ರಾವ ಕಂಡು ಬಂದಿದೆ. ಮುಟ್ಟಾಗಿ 25-30 ದಿನಗಳಾದರೂ ರಕ್ತಸ್ರಾವ ನಿಂತಿರಲಿಲ್ಲ.

* ಸೆಕ್ಸ್‌ ಹಾರ್ಮೋನ್‌ನಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ ಎಂದು ಸಮೀಕ್ಷೆ ಹೇಳಿದೆ.

* ಕೆಲವರಲ್ಲಿ ಮುಟ್ಟಿನಲ್ಲಿ ವ್ಯತ್ಯಾಸ ಆದರೂ 1-2 ತಿಂಗಳು ಕಳೆಯುವಷ್ಟರಲ್ಲಿ ಸರಿಯಾಗಿತ್ತು.

ಲೈಂಗಿಕ ಆಸಕ್ತಿ ಕುಗ್ಗುವುದು

ಲೈಂಗಿಕ ಆಸಕ್ತಿ ಕುಗ್ಗುವುದು

ಅತ್ಯಧಿಕ ಮಾನಸಿಕ ಒತ್ತಡ, ಖಿನ್ನತೆಯಿಂದಾಗಿ ಈ ಸಾಂಕ್ರಾಮಿಕ ಸಮಯದಲ್ಲಿ ಹಲವರಲ್ಲಿ ಲೈಂಗಿಕಾಸಕ್ತಿ ಕುಗ್ಗಿದೆ. ಅಧ್ಯಯನದ ಪ್ರಕಾರ ಕೋವಿಡ್‌ 19ನಿಂದ ಚೇತರಿಸಿದವರಲ್ಲಿಯೂ ಈ ರೀತಿಯ ಸಮಸ್ಯೆ ಕಂಡು ಬಂದಿದೆ.

* ಕೋವಿಡ್‌ 19 ಬಂದಾಗ ಐಸೋಲೇಷನ್‌ನಲ್ಲಿ ಇದ್ದದ್ದು ಕೆಲವರಲ್ಲಿ ಖಿನ್ನತೆ ಉಂಟು ಮಾಡಿದೆ. ಖಿನ್ನತೆ ಉಂಟಾದರೆ ಹ್ಯಾಪಿ ಹಾರ್ಮೋನ್‌ ಕಡಿಮೆಯಾಗುವುದು. ಇದರಿಂದ ಈಸ್ಟ್ರೋಜಿನ್ ಉತ್ಪತ್ತಿ ಕಡಿಮೆ ಮಾಡುವುದು. ಇದರಿಂದಾಗಿ ಕೋವಿಡ್‌ 19ನಿಂದ ಚೇತರಿಸಿಕೊಂಡವರಲ್ಲಿ ಕೆಲವರಲ್ಲಿ ಲೈಂಗಿಕಾಸಕ್ತಿ ಕುಗ್ಗಿದೆ.

ಕೋವಿಡ್‌ 19ನಿಂದ ಮುಟ್ಟಿನಲ್ಲಿ ವ್ಯತ್ಯಾಸವಾಗುವುದೇ?

ಕೋವಿಡ್‌ 19ನಿಂದ ಮುಟ್ಟಿನಲ್ಲಿ ವ್ಯತ್ಯಾಸವಾಗುವುದೇ?

ಕೋವಿಡ್ ವ್ಯಾಕ್ಸಿನ್ ತೆಗೆದ ಬಿಳಿಕ ಕೆಲವರಲ್ಲಿ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಉಂಟಾಗಿದೆ. ಆದರೆ ತಜ್ಞರ ಪ್ರಕಾರ ಭಯ ಪಡಬೇಕಾಗಿಲ್ಲ, ಈ ರೀತಿಯ ವ್ಯತ್ಯಾಸ ತಾತ್ಕಾಲಿಕವಾಗಿದೆ. ಕೆಲವರಲ್ಲಿ ಈ ಮುಟ್ಟಿನಲ್ಲಿ ಈ ವ್ಯತ್ಯಾಸ ಕಂಡು ಬಂದಿವೆ:

* ಅತ್ಯಧಿಕ ರಕ್ತಸ್ರಾವ

* ಋತುಚಕ್ರ ಬೇಗನೆ ಆಗುವುದು.

* ಮುಟ್ಟಾದ 21 ದಿನಕ್ಕೆ ಮೊದಲೇ ಮುಟ್ಟಾಗುವುದು

* ಮೆನೋಪಾಸ್ ಬಳಿಕ ಕೂಡ ರಕ್ತಸ್ರಾವ

ಕೋವಿಡ್‌ 19 ಚೇತರಿಸಿದ ಬಳಿಕ ಮಹಿಳೆಯರು ಏನು ಮಾಡಬೇಕು?

ಕೋವಿಡ್‌ 19 ಚೇತರಿಸಿದ ಬಳಿಕ ಮಹಿಳೆಯರು ಏನು ಮಾಡಬೇಕು?

* ಧ್ಯಾನ ಅಭ್ಯಾಸ ಮಾಡಿ.

* ಪ್ರಾಣಯಾಮ ಮಾಡಿ.

* ಕಬ್ಬಿಣದಂಶದ ಆಹಾರ ಮತ್ತು ಕ್ಯಾಲ್ಸಿಯಂ ಅಧಿಕ ಇರುವ ಆಹಾರ ಸೇವಿಸಿ. ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

* ಡ್ರೈಫ್ರೂಟ್ಸ್ ಸೇವಿಸಿ.

* ಸ್ವಲ್ಪ ವ್ಯಾಯಾಮ ಮಾಡಿ.

* ಏನಾದರೂ ಆರೋಗ್ಯ ಸಮಸ್ಯೆ ಕಂಡರೆ ಸ್ತ್ರೀ ರೋಗ ತಜ್ಞರ ಭೇಟಿ ಮಾಡಿ ಸಲಹೆ ಪಡೆಯಿರಿ.

English summary

Gynaecological problems Post COVID-19 recovery in Kannada

Gynaecological problems Post COVID-19 recovery in Kannada, read on...
Story first published: Friday, August 27, 2021, 15:55 [IST]
X
Desktop Bottom Promotion