For Quick Alerts
ALLOW NOTIFICATIONS  
For Daily Alerts

ಕಿವಿಯಲ್ಲಿ ಫಂಗಸ್‌ ಸಮಸ್ಯೆ: ಯಾರಿಗೆ ಉಂಟಾಗುತ್ತದೆ, ಲಕ್ಷಣಗಳೇನು?

|

ಕಿವಿಯಲ್ಲಿ ಫಂಗಸ್‌ ಆಗುವುದು ಇಯರ್‌ ಫಂಗಲ್‌ ಇನ್‌ಫೆಕ್ಷನ್‌ ಅನೇಕರನ್ನು ಕಾಡುವ ಕಿವಿಯ ಸಮಸ್ಯೆಯಾಗಿದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ otomycosis (ಒಟೊಮೈಕೋಸಿಸ್) ಎಂದು ಕರೆಯಲಾಗುವುದು.

ಕಿವಿಯ ಫಂಗಸ್ ಸೋಂಕು ಎಂದರೇನು? ಲಕ್ಷಣಗಳೇನು, ಯಾರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುವುದು, ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ:

ಕಿವಿಯಲ್ಲಿ ಫಂಗಸ್‌ ಸಮಸ್ಯೆ ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು

ಕಿವಿಯಲ್ಲಿ ಫಂಗಸ್‌ ಸಮಸ್ಯೆ ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು

* ಕಿವಿಯಲ್ಲಿ ಒಂಥರಾ ತುರಿಕೆ ಕಂಡು ಬರುವುದು. ತುಂಬಾ ಹೆಚ್ಚಾದರೆ ನೋವು ಕಂಡು ಬರುವುದು.

* ಕಿವಿಯ ಒಳಭಾಗದ ಸಿಪ್ಪೆ ಏಳುವುದು

* ಕಿವಿಯಲ್ಲಿ ಗುಗ್ಗೆ ತುಂಬಾ ಇರದಿದ್ದರೂ ಕಿವಿಯಲ್ಲಿ ತುಂಬಾ ತುರಿಕೆ, ಕಿರಿಕಿರಿ ಉಂಟಾಗುವುದು.

* ಊತ

* ಕಿವಿ ಒಳಗ್ಗೆ ಕೆಂಪಾಗುವುದು

* ಕಿವಿ ಬಂದ್ ಆದಂತೆ ಅನಿಸುವುದು

* ಕೇಳುವುದಕ್ಕೆ ತೊಂದರೆ

ಯಾರಿಗೆ ಫಂಗಲ್ ಇಯರ್‌ ಇನ್‌ಫೆಕ್ಷನ್ ಸೋಂಕು ಬರುತ್ತದೆ?

ಯಾರಿಗೆ ಫಂಗಲ್ ಇಯರ್‌ ಇನ್‌ಫೆಕ್ಷನ್ ಸೋಂಕು ಬರುತ್ತದೆ?

ಉಷ್ಣವಲಯದಲ್ಲಿ ವಾಸಿಸುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಲ್ಲದೆ ವಾಟರ್‌ ಸ್ಪೋರ್ಟ್ಸ್‌ನಲ್ಲಿ ಇರುವವರಿಗೆ, ಸ್ವಿಮ್ಮಿಂಗ್‌ ಮಾಡುವವರಿಗೆ ಈ ಸಮಸ್ಯೆ ಕಂಡು ಬರುವುದು.

ಫಂಗಲ್ ಇಯರ್‌ ಇನ್‌ಫೆಕ್ಷನ್‌ ಹೇಗೆ ಉಂಟಾಗುತ್ತದೆ?

ಫಂಗಲ್ ಇಯರ್‌ ಇನ್‌ಫೆಕ್ಷನ್‌ ಹೇಗೆ ಉಂಟಾಗುತ್ತದೆ?

ಕಿವಿಯಲ್ಲಿ ಗುಗ್ಗೆ ಬ್ಯಾಕ್ಟಿರಿಯಾಗಳಿಂದ ಕಿವಿಯನ್ನು ರಕ್ಷಣೆ ಮಾಡುತ್ತದೆ. ಗುಗ್ಗೆ ಕಮ್ಮಿಯಾದಾಗ ಬ್ಯಾಕ್ಟಿರಿಯಾಗಳು ಕಿವಿಯೊಳಗೆ ಹೋಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

* ಅಧಿಕ ಉಷ್ಣಾಂಷ ಇರುವ ಹಾಗೂ ತುಂಬಾ ಶೀತ ಇರುವ ಕಡೆ ವಾಸಿಸುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದು.

* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಥವಾ ಕಿವಿಯ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು.

* ಗಂಭೀರ ಚರ್ಮ ಸಮಸ್ಯೆ ಇರುವವರಲ್ಲಿಯೂ ಈ ಸಮಸ್ಯೆ ಕಂಡು ಬರುವುದು.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವಾಗ ವೈದ್ಯರನ್ನು ಕಾಣಬೇಕು?

ಕಿವಿಯಲ್ಲಿ ನೋವು, ತುರಿಕೆ ಅಥವಾ ಇತರ ಕಿರಿಕಿರಿ ಇದ್ದರೆ ವೈದ್ಯರನ್ನು ಕಾಣಬೇಕು. ವೈದ್ಯರು ಕಿವಿ, ಕಿವಿ ತಮಟೆ ಪರೀಕ್ಷಿಸಿ ಸೂಕ್ತ ಔಷಧಿ ಸೂಚಿಸಬಹುದು.

*ಕಿವಿಯನ್ನು ಸ್ವಚ್ಛ ಮಾಡಿ ಮಾತ್ರೆ ನೀಡಬಹುದು

* ಕೆಲವರಿಗೆ ಇಯರ್‌ ಡ್ರಾಪ್ ನೀಡಬಹುದು (ಕಿವಿ ಸಮಸ್ಯೆ ತುಂಬಾ ಇದ್ದರೆ ಮಾತ್ರ ಡ್ರಾಪ್ ನೀಡುತ್ತಾರೆ) ಹಾಗೂ ಈ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕೆಂಬ ಸಲಹೆ ನೀಡುತ್ತಾರೆ.

ತಡೆಗಟ್ಟಲು ಏನು ಮಾಡಬೇಕು?

ತಡೆಗಟ್ಟಲು ಏನು ಮಾಡಬೇಕು?

* ಸ್ವಿಮ್ಮಿಂಗ್ ಮಾಡುವಾಗ ಅಥವಾ ಸರ್ಫಿಂಗ್ ಮಾಡುವಾಗ ಕಿವಿಗೆ ನೀರು ನುಗ್ಗದಂತೆ ಎಚ್ಚರವಹಿಸಿ

* ಸ್ನಾನ ಮಾಡಿದ ಬಳಿಕ ಕಿವಿಯಲ್ಲಿರುವ ನೀರಿನಂಶ ಮೃದುವಾದ ಟವಲ್‌ನಿಂದ ತೆಗೆಯಿರಿ (ಬಡ್ಸ್ ಬಳಸಬೇಡಿ, ಬಳಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚುವುದು)

* ಹತ್ತಿಯ ಉಂಡೆಗಳನ್ನು ಕಿವಿಗೆ ಇಡಬೇಡಿ (ಸ್ನಾನ ಮಾಡುವಾಗ ಮಾತ್ರ ಇಡಿ)

* ಕಿವಿಯನ್ನು ತುರಿಸುವುದು, ಉಜ್ಜುವುದು ಮಾಡಬೇಡಿ

*ಕಿವಿಗೆ ನೀರು ಹೋದರೆ acetic acid ಇಯರ್ ಡ್ರಾಪ್ ಬಳಸಿ.

English summary

Fungal Ear Infection Causes, Symptoms and Treatment in Kannada

Fungal ear infection causes, symptoms and treatment in Kannada, read on...
Story first published: Wednesday, July 21, 2021, 10:34 [IST]
X
Desktop Bottom Promotion