For Quick Alerts
ALLOW NOTIFICATIONS  
For Daily Alerts

ಒಮಿಕ್ರಾನ್: ಲಸಿಕೆ ಪಡೆದವರಲ್ಲಿ ಸೋಂಕು ತಗುಲುವ ಸಾಧ್ಯತೆ 3 ಪಟ್ಟು ಕಡಿಮೆ

|

ಇದೀಗ ವಿಶ್ವದೆಲ್ಲಡೆ ಕೊರೊನಾ ಆತಂಕ ಶುರುವಾಗಿದೆ. ಓಮಿಕ್ರಾನ್‌ ಎಂಬ ಹೆಸರಿನ ಕೊರೊನಾ ರೂಪಾಂತರ ಇದೀಗ ಜಗತ್ತನ್ನು ತಲ್ಲಣಗೊಳಿಸುತ್ತಿದೆ. ಡೆಲ್ಟಾ ವೈರಸ್‌ಗಿಂತ ವೇಗವಾಗಿ ಈ ರೂಪಾಂತರ ಹರಡುವುದು ಎಂದು 'ವಿಶ್ವ ಆರೋಗ್ಯ ಸಂಸ್ಥೆ' ಹೇಳಿದೆ.

ಈಗ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆಯೆಂದರೆ ಈಗಿರುವ ಕೊರೊನಾ ಲಸಿಕೆಗಳು ಈ ರೂಪಾಂತರ ತಡೆಗಟ್ಟುವಲ್ಲಿ ಪರಿಣಾಮಕಾರಿಯೇ? ಅಲ್ಲವೇ ಎಂಬುವುದಾಗಿದೆ. ಒಟ್ಟು ಭಾರತದಲ್ಲಿ ಇದುವರೆಗೆ 333 ಕೋಟಿ ಜನರು ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ, ಕೋಟ್ಯಾಂತರ ಜನರಿಗೆ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಶೇ. 47.2ರಷ್ಟು ಜನರು ಸಂಪೂರ್ಣ ಡೋಸ್‌ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆದಿದ್ದೇವೆ ಎಂದು ನೆಮ್ಮದಿಯ ಉಸಿರು ಬಿಟ್ಟಿದ್ದ ಜನತೆ ಇದೀಗ ಹೊಸ ರೂಪಾಂತರದಿಂದ ಈ ಲಸಿಕೆ ಸುರಕ್ಷಿತೆ ನೀಡುವುದೇ ಎಂದು ಪ್ರಶ್ನಿಸುತ್ತಿದ್ದಾರೆ. ತಜ್ಞರು ಕೂಡ ಇದರ ಕುರಿತು ನಿಖರವಾಗಿ ಏನೂ ಹೇಳಿಲ್ಲ, ಇದರ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ. ಇದರ ಕುರಿತ ಹೆಚ್ಚಿನ ಮಾಹಿತಿ ತಿಳಿಯೋಣ:

ದಕ್ಷಿಣ ಆಫ್ರಿಕದ ಆಸ್ಪತ್ರೆಗಳ ವರದಿ ಏನು ಹೇಳುತ್ತಿದೆ?

ದಕ್ಷಿಣ ಆಫ್ರಿಕದ ಆಸ್ಪತ್ರೆಗಳ ವರದಿ ಏನು ಹೇಳುತ್ತಿದೆ?

ದಕ್ಷಿಣ ಆಫ್ರಿಕದಲ್ಲಿ ಒಮಿಕ್ರಾನ್‌ ವೈರಸ್‌ ಮಾರಾಣಾಂತಿಕವಾಗಿಲ್ಲ. ಅಲ್ಲದೆ ಆಸ್ಪತ್ರೆಯಲಲ್ಲಿ ದಾಖಲಾಗಿರುವವರ ಸಂಖ್ಯೆಯಲ್ಲಿ ಲಸಿಕೆ ಪಡೆದವರಿಗಿಂತ ಲಸಿಕೆ ಪಡೆಯದವರ ಸಂಖ್ಯೆ ಅಧಿಕವಾಗಿದೆ. ಲಸಿಕೆ ಪಡೆದವರಲ್ಲಿ ಒಮಿಕ್ರಾನ್‌ ಗಂಭೀರವಾಗಿ ಪರಿಣಾಮ ಬೀರುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಲಸಿಕೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ?

ಲಸಿಕೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ?

ಒಂದು ವೇಳೆ ಲಸಿಕೆ ಪಡೆದ ಮೇಲೂ ಡೆಲ್ಟಾ ರೂಪಾಂತರ ತಾಗಿದ್ದರೆ ಕೋವಿಡ್‌ 19ನಿಂದ ಸಾವನ್ನಪ್ಪುವ ಸಾಧ್ಯತೆ 9 ಪಟ್ಟು ಕಡಿಮೆ. ಅಲ್ಲದೆ ಸಂಪೂರ್ಣ ಲಸಿಕೆ (ಎರಡು ಡೋಸ್‌) ಪಡೆದಿದ್ದರೆ ಕೋವಿಡ್ 19 ತಗುಲುವ ಸಾಧ್ಯತೆ 3 ಪಟ್ಟು ಕಡಿಮೆ ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ.

ಕಾರ್ಡಿಫ್‌ ಯೂನಿವರ್ಸಿಟಿಯ ಪ್ರೊ. ಪೌಲ್‌ ಮೋರ್ಗಾನ್‌ ' ಓಮಿಕ್ರಾನ್‌ ವೈರಸ್‌ ಅತ್ಯಂತ ಸೋಂಕುಕಾರಿಯಾಗಿದ್ದರೂ, ಇದರಿಂದ ಸಂಪೂರ್ಣ ನಷ್ಟ (ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ಕುಗ್ಗಿಸುವುದು) ಆಗುತ್ತಿಲ್ಲ ಎಂದು ಹೇಳಿರುವುದಾಗಿ 'ದಿ ಗಾರ್ಡಿಯನ್ ' ಕೋಟ್ ಮಾಡಿದೆ.

ಲಸಿಕೆ ಪಡೆದವರು, ಹಾಗೂ ಒಮ್ಮೆ ಸೋಂಕು ತಗುಲಿದ್ದು ಲಸಿಕೆ ಪಡೆದವರು

ಲಸಿಕೆ ಪಡೆದವರು, ಹಾಗೂ ಒಮ್ಮೆ ಸೋಂಕು ತಗುಲಿದ್ದು ಲಸಿಕೆ ಪಡೆದವರು

ಲಸಿಕೆ ಇತರ ಕೊರೊನಾ ರೂಪಾಂತರ ತಡೆಗಟ್ಟುವಲ್ಲಿ ಸಮರ್ಥವಾಗಿದೆ ಎಂಬುವುದು ಸಾಬೀತಾಗೊದೆ. ಆದರೆ ಓಮಿಕ್ರಾನ್‌ ಹೊಸ ತಳಿ ದೇಹದ ಮೇಲೆ ದಾಳಿ ಮಾಡಿದಾಗ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಗುರಿತಿಸುವುದಿಲ್ಲ. ಆದ್ದರಿಂದ ಲಸಿಕೆ ಪರಿಣಾಮ ಬೀರದೇ ಹೋಗಬಹುದು.

ಒಂದು ವೇಳೆ ಈಗಾಗಲೇ ಡೆಲ್ಟಾ ವೈರಸ್ ತಗುಲಿದ್ದವರು ಕೋವಿಡ್‌ 19 ಲಸಿಕೆ ಪಡೆದಿದ್ದರೆ ಅವರು ಹೆಚ್ಚು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದುವರೆಗೆ ಲಸಿಕೆ ಪಡೆಯದೇ ಇದ್ದರೆ ಅಪಾಯ ಹೆಚ್ಚು

ಇದುವರೆಗೆ ಲಸಿಕೆ ಪಡೆಯದೇ ಇದ್ದರೆ ಅಪಾಯ ಹೆಚ್ಚು

ನಿಜವಾಗಿ ಆತಂಕ ಪಡಬೇಕಾಗಿರುವುದು ಇದುವರೆಗೆ ಕೊರೊನಾ ಲಸಿಕೆ ಪಡೆಯದೇ ಇರುವವರ ಬಗ್ಗೆ ಆಗಿದೆ. ಏಕೆಂದರೆ ಓಮಿಕ್ರಾನ್ ವಿರುದ್ದ ನೈಸರ್ಗಿಕವಾದ ಅಥವಾ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿ ಇಲ್ಲದೇ ಇರುವುದರಿಂದ ಒಮಿಕ್ರಾನ್‌ ತಗುಲಿದರೆ ಆಸ್ಪತ್ರೆಗೆ ದಾಖಲಾಗಬೇಕಾಗುವುದು.

ಒಮಿಕ್ರಾನ್‌ ರೂಪಾಂತ ಊಹಿಸಿದಕ್ಕಿಂತಲೂ ವೇಗವಾಗಿ ಹರಡುತ್ತಿರುವುದರಿಂದ ಲಸಿಕೆ ಪಡೆಯದೇ ಇರುವವರಲ್ಲಿ ಇದು ತುಂಬಾ ಕೆಟ್ಟ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

English summary

Fully-vaccinated? But Are you safe from Omicron Covid variant; Know in Kannada

Fully vaccinated people are said to have three times lower chances of catching infection compared to those unvaccinated. Know more in kannada.
Story first published: Wednesday, December 1, 2021, 15:01 [IST]
X
Desktop Bottom Promotion