For Quick Alerts
ALLOW NOTIFICATIONS  
For Daily Alerts

ಹಿಮೋಫಿಲಿಯಾ Bಗೆ ನೀಡುವ ಜೀನ್‌ ಥೆರಪಿ ಬೆಲೆ ಕೇಳಿದರೆ ಮೂರ್ಛೆ ಹೋಗುವಿರಿ

|

ಯುಎಸ್‌ ಆರೋಗ್ಯ ನಿಯಂತ್ರಣ ಸಂಸ್ಥೆ ಹಿಮೋಫಿಲಿಯಾ B ಕಾಯಿಲೆಗೆ ಸಿದ್ಧಪಡಿಸಿರುವ ಜೀನ್‌ ಥೆರಪಿ ಔಷಧಿಗೆ ಅನುಮತಿ ಸೂಚಿಸಿದೆ. ಈ ಔಷಧ ಅತ್ಯಂತ ದುಬಾರಿಯಾಗಿದ್ದು ಇದರ ಬೆಲೆ ಒಂದು ಡೋಸ್‌ಗೆ $3.5 ಮಿಲಿಯನ್‌ ಇದೆ. ಇಂದಿನ ಬೆಲೆ ಒಂದು ಡಾಲರ್‌ ಅಂದ್ರೆ (81.73ರೂ), ಹಾಗಾದರೆ ಈ ಔಷಧ ಎಷ್ಟು ದುಬಾರಿಯೆಂಬುವುದು ನೀವೇ ಊಹಿಸಿ. ಲೆಕ್ಕ ಹಾಕಿದರೆ ರೂ. 28,59,06,250.00 ಬರುತ್ತದೆ!

ಹಿಮೋಫಿಲಿಯಾ B ಎಂಬುವುದು ಅಪರೂಪದ ರಕ್ತದ ಕಾಯಿಲೆ, ಈ ಕಾಯಿಲೆ ಇರುವವರಿಗೆ ಇತರರಂತೆ ರಕ್ತ ಹೆಪ್ಪು ಗಟ್ಟುವುದಿಲ್ಲ, ಈ ಸಮಸ್ಯೆ ಇರುವವರಿಗೆ ರಕ್ತ ಹೆಪ್ಪುಗಟ್ಟುವುದೇ ಇಲ್ಲ, ಇದರಿಂದ ಒಂದು ಗಾಯವಾದರೆ ತುಂಬಾನೇ ಕಷ್ಟವಾಗುವುದು.

ಚಿಕ್ಕ ಪುಟ್ಟ ಗಾಯಗಳಾದರೆ ತೊಂದರೆಯೇನು ಇಲ್ಲ, ಆದರೆ ದೇಹದೊಳಗಡೆ ಏನಾದರೂ ಸಮಸ್ಯೆಯಾದರೆ ಮಾತ್ರ ಕಷ್ಟ, ರಕ್ತಸ್ರಾವ ನಿಲ್ಲುವುದೇ ಇಲ್ಲ. ಇದರಿಂದಾಗಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಹಿಮೋಫಿಲಿಯ ಯಾರಲ್ಲಿ ಕಂಡು ಬರುತ್ತದೆ? ಹಿಮೋಫಿಲಿಯಾ ಎಂಬುವುದು ವಂಶವಾಹಿಯಾಗಿ ಬರುವ ಸಮಸ್ಯೆಯಾಗಿದೆ. ಇದಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವ ಚಿಕಿತ್ಸೆ ಅಗ್ಯತವಿದೆ. ಇದೀಗ ಅಮೆರಿಕದಲ್ಲಿ Hemgenix ಐವಿ ಟ್ರೀಟ್ಮೆಂಟ್‌ಗೆ ಒಪ್ಪಿಗೆ ಸಿಕ್ಕಿದೆ. ಈ ಸಮಸ್ಯೆ ಹೆಚ್ಚಾಗಿ ಪುರುಷರಲ್ಲಿ ಕಂಡು ಬರುತ್ತದೆ.

ಈ ಚಿಕಿತ್ಸೆ ಪಡೆದರೆ ರಕ್ತ ಹೆಪ್ಪುಗಟ್ಟುವಂತೆ ಮಾಡಿ, ರಕ್ತಸ್ರಾವ ತಡೆಗಟ್ಟಬಹುಉದು.

 ಹಿಮೋಫಿಲಿಯ ಲಕ್ಷಣಗಳೇನು:

ಹಿಮೋಫಿಲಿಯ ಲಕ್ಷಣಗಳೇನು:

* ಬಿದ್ದು ಅಥವಾ ಏನಾದರೂ ತಾಗಿ ಗಾಯವಾದಾಗ ರಕ್ತಸ್ರಾವ ನಿಲ್ಲದೇ ಇರುವುದು. ಇವರಿಗೆ ಹಲ್ಲು ಕೀಳಿಸುವುದು ಕೂಡ ಕಷ್ಟ. ಏಕೆಂದರೆ ರಕ್ತಸ್ರಾವ ಪ್ರಾರಂಭವಾದರೆ ನಿಲ್ಲುವುದೇ ಲ್ಲ.

* ಲಸಿಕೆ ಪಡೆದ ಬಳಿಕ ರಕ್ತಸ್ರಾವವಾಗುವುದು

* ಒಂದು ಚಿಕ್ಕ ಗಾಯವಾದರೂ ನಿಲ್ಲದೆ ರಕ್ತ ಸುರಿಯುವುದು

* ಮೂತ್ರದಲ್ಲಿ ರಕ್ತ ಕಂಡು ಬರುವುದು

* ಕಾರಣವಿಲ್ಲದೆ ಮೂಗಿನಲ್ಲಿ ರಕ್ತಸ್ರಾವ

* ಚಿಕ್ಕ ಮಕ್ಕಳಾಗಿದ್ದರೆ ಕಾರಣವಿಲ್ಲದೆ ತುಂಬಾನೇ ಕಿರಿಕಿರಿ ಮಾಡುತ್ತಾರೆ.

ಮೆದುಳಿನಲ್ಲಿ ರಕ್ತಸ್ರಾವ

ಯಾರಿಗೆ ಹಿಮೋಫಿಲಿಯ ಜಾಸ್ತಿ ಆಗಿದೆಯೋ ಅವರಿಗೆ ಮದುಳಿನಲ್ಲೂ ರಕ್ತಸ್ರಾವ ಕಂಡು ಬರಬಹುದು, ಆಗ ಈ ಲಕ್ಷಣಗಳು ಕಂಡು ಬರುವುದು

* ತಲೆನೋವು

* ವಾಂತಿ

* ನಿದ್ದೆ

* ಕಣ್ಣು ಮಂಜಾಗುವುದು

* ಸುಸ್ತು

ಯಾವಾಗ ವೈದ್ಯರಿಗೆ ತೋರಿಸಬೇಕು?

ಯಾವಾಗ ವೈದ್ಯರಿಗೆ ತೋರಿಸಬೇಕು?

* ಈ ಸಮಸ್ಯೆ ಇರುವವರು ಒಂದು ಪುಟ್ಟ ಗಾಯ ಕೂಡ ಆಗದಂತೆ ತುಂಬಾನೇ ಎಚ್ಚರವಹಿಸಬೇಕು.

* ಒಂದು ಗಾಯವಾದಾಗ ಅದರಿಂದ ರಕ್ತಸ್ರಾವ ನಿಲ್ಲದೇ ಹೋದರೆ ಕೂಡಲೇ ಆಸ್ಪತ್ರೆಗೆ ಹೋಗಿ

* ಸಂಧುಗಳಲ್ಲಿ ಊತ, ಅದನ್ನು ಮುಟ್ಟುವಾಗ ನೋವು ಇದ್ದರೆ ವೈದ್ಯರಿಗೆ ತೋರಿಸಿ.

ಹಿಮೋಫಿಲಿಯಾ ಕುಟುಂಬದಲ್ಲಿ ಯಾರಿಗೂ ಇಲ್ಲದಿದ್ದರೂ ಬರುವುದೇ?

ಹಿಮೋಫಿಲಿಯಾ ಕುಟುಂಬದಲ್ಲಿ ಯಾರಿಗೂ ಇಲ್ಲದಿದ್ದರೂ ಬರುವುದೇ?

ಕೆಲವರಲ್ಲಿ ಈ ಬಗೆಯ ಸಮಸ್ಯೆ ಉಂಟಾಗುತ್ತದೆ, ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ acquired hemophilia ಎಂದು ಕರೆಯಲಾಗುವುದು. ಈ ಸಂದರ್ಭಗಳಲ್ಲಿ ಈ ರೀತಿಯಾಗುವುದುಂಟು

* ಹೆರಿಗೆಯ ಸಮಯದಲ್ಲಿ

* ಅಟೊಇಮ್ಯೂನೆ ಕಂಡೀಷನ್

* ಕ್ಯಾನ್ಸರ್

* ಔಷಧ ಅಡ್ಡಪರಿಣಾಮ ಬೀರಿದಾಗ

English summary

FDA approves most expensive drug costing $3.5 million-per-dose gene therapy for hemophilia B

Hemophilia B:FDA approves most expensive drug costing $3.5 million-per-dose gene therapy for hemophilia B, read on....
Story first published: Thursday, November 24, 2022, 12:30 [IST]
X
Desktop Bottom Promotion