For Quick Alerts
ALLOW NOTIFICATIONS  
For Daily Alerts

ವಿಶ್ವ ಅಲ್ಜೈಮರ್ಸ್ ದಿನ: ಈ ಕಾಯಿಲೆ ಬಗ್ಗೆ ಪ್ರತಿಯೊಬ್ಬರು ತಿಳಿದಿರಲೇಬೇಕಾದ ಅಂಶಗಳು

|

ಅಲ್ಜೈಮರ್ಸ್ ಎನ್ನುವುದು ಮರೆವಿನ ಮತ್ತೊಂದು ಹಂತದ ಕಾಯಿಲೆಯಾಗಿದೆ ಅಂದರೆ ತೀವ್ರ ತರದ ಮರೆವಿನ ಕಾಯಿಲೆಯಾಗಿದೆ. ಅಲ್ಜೈಮರ್ಸ್ ಮೆದುಳಿಗೆ ಏನಾದರೂ ಹಾನಿಯಾಗಿದ್ದರೆ ಅಥವಾ ಕಾಯಿಲೆಯಿಂದಾಗಿ ಯೋಚನಾಶಕ್ತಿ, ನೆನಪಿನ ಶಕ್ತಿ ಹಾಗೂ ನಡುವಳಿಕೆ ಮೇಲೆ ಪ್ರಭಾವ ಬೀರುವುದು. ಅಲ್ಜೈಮರ್ಸ್ ಬಂದ ವ್ಯಕ್ತಿಗೆ ತನ್ನ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವುದು ಕೂಡ ಕಷ್ಟವಾಗುತ್ತದೆ.

ಎಲ್ಲಿಗೆ ಹೋಗುತ್ತಿದ್ದೇನೆ, ಏಕೆ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಹೀಗೆ ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.

World Alzheimer’s Da

ಅಲ್ಜೈಮರ್ಸ್ ಕಾಯಿಲೆ ಬಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಮೊದಲನೇ ಹಂತದಲ್ಲಿ ಗುರುತಿಸಿದರೆ ಅಲ್ಜೈಮರ್ಸ್ ಕಾಯಿಲೆ ಉಲ್ಭಣಗೊಳ್ಳುವುದನ್ನು ನಿಧಾನಗೊಳಿಸಬಹುದು ಅಷ್ಟೇ. ಅಲ್ಜೈಮರ್ಸ್ ಕಾಯಿಲೆ 65 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ಕಂಡು ಬರುತ್ತದೆ.

ಅಲ್ಜೈಮರ್ಸ್ ಅಸೋಸಿಯೇಷನ್ ಪ್ರಕಾರ ಮರೆವು ಶೇ. 80ರಷ್ಟು ಅಧಿಕವಾದರೆ ಅದು ಅಲ್ಜೈಮರ್ಸ್ ಕಾಯಿಲೆಯಾಗಿದೆ.

 ಅಲ್ಜೈಮರ್ಸ್ ಬಗ್ಗೆ ಕೆಲವೊಂದು ಅಂಶಗಳು

ಅಲ್ಜೈಮರ್ಸ್ ಬಗ್ಗೆ ಕೆಲವೊಂದು ಅಂಶಗಳು

ಅಲ್ಜೈಮರ್ಸ್ ಕಾಯಿಲೆ ಬಗ್ಗೆ ಕೇಳಿರುತ್ತೀರಿ, ಈ ಕಾಯಿಲೆ ಬಗ್ಗೆ ಹೇಳುವುದಾದರೆ

  • ಅಲ್ಜೈಮರ್ಸ್ ಗುಣಪಡಿಸಲಾಗದ ಕಾಯಿಲೆಯಾಗಿದೆ.
  • ಇದರ ಲಕ್ಷಣಗಳು ನಿಧಾನಕ್ಕೆ ಕಂಡು ಬರುವುದು, ಇದು ಮೆದುಳಿಗೆ ಹಾನಿಯುಂಟು ಮಾಡಿ ನೆನಪಿನ ಶಕ್ತಿ ನಶಿಸುವಂತೆ ಮಾಡುವುದು.
  • ಅಲ್ಜೈಮರ್ಸ್ ಎನ್ನುವುದು ಯಾರಿಗೆ ಬೇಕಾದರೂ ಬರಬಹುದು. ಆದರೆ ಕೆಲವರಿಗೆ ಅಂದರೆ ಕುಟುಂಬದಲ್ಲಿ ಈ ಕಾಯಿಲೆಯ ಇತಿಹಾಸ ಇರುವವರಿಗೆ ಬರುವ ಸಾಧ್ಯತೆ ಹೆಚ್ಚು.
  • ಅಲ್ಜೈಮರ್ಸ್ ಹಾಗೂ ಮರೆವು ಒಂದೇ ಬಗೆಯ ಕಾಯಿಲೆಯಲ್ಲ. ಅಲ್ಜೈಮರ್ಸ್ ಎನ್ನುವುದು ಮರೆವಿನ ಒಂದು ಬಗೆಯಾಗಿದೆ.
  • ಅಲ್ಜೈಮರ್ಸ್ ಬಂದರೆ ಕೆಲವರು ತುಂಬಾ ಕಾಲ ಬದುಕಿರುತ್ತಾರೆ, ಇನ್ನು ಕೆಲವರಿಗೆ ಈ ಕಾಯಿಲೆಯ ಲಕ್ಷಣಗಳು ಒಂದೆರಡು ವರ್ಷದಲ್ಲಿಯೇ ತುಂಬಾ ಅಧಿಕವಾಗುವುದು.
  • ಅಲ್ಜೈಮರ್ಸ್ VS ಮರೆವು

    ಅಲ್ಜೈಮರ್ಸ್ VS ಮರೆವು

    ಮೊದಲೇ ಹೇಳಿದಂತೆ ಅಲ್ಜೈಮರ್ಸ್ ಹಾಗೂ ಮರೆವಿನ ಕಾಯಿಲೆ ಈ ಎರಡೂ ಒಂದೇ ಅಲ್ಲ. ಮರೆವು ಕಾಯಿಲೆಯಲ್ಲಿ ನೆನಪಿನ ಶಕ್ತಿ ಇಲ್ಲದಿರುವುದು, ಒಂದು ರೀತಿಯ ಗೊಂದಲದ ಸ್ಥಿತಿ ಇರುತ್ತದೆ. ಆದರೆ ಅಲ್ಜೈಮರ್ಸ್ ಪಾರ್ಕಿನ್‌ಸನ್ಸ್ ಕಾಯಿಲೆ ಮೆದುಳಿಗೆ ತುಂಬಾ ಹಾನಿಯುಂಟು ಮಾಡಿ ಇದರಿಂದಾಗಿ ಮರೆವು ಉಂಟಾಗುವುದು. ಈ ಕಾಯಿಲೆಗಳಿಗೆ ಚಿಕಿತ್ಸಾ ವಿಧಾನವೂ ಭಿನ್ನವಾಗಿದೆ.

    ಯಾರಿಗೆ ಅಲ್ಜೈಮರ್ಸ್ ಕಾಯಿಲೆ ಅಪಾಯ ಹೆಚ್ಚು

    ಯಾರಿಗೆ ಅಲ್ಜೈಮರ್ಸ್ ಕಾಯಿಲೆ ಅಪಾಯ ಹೆಚ್ಚು

    ವಯಸ್ಸು: 65 ವರ್ಷ ಮೇಲ್ಪಟ್ಟವರಲ್ಲಿ ಅಲ್ಜೈಮರ್ಸ್ ಕಾಯಿಲೆಯ ಅಪಾಯ ಹೆಚ್ಚು.

    ಕುಟುಂಬದ ಇತಿಹಾಸ: ಕುಟುಂಬದಲ್ಲಿ ಯಾರಿಗಾದರೂ ಅಲ್ಜೈಮರ್ಸ್ ಸಮಸ್ಯೆಯಿದ್ದರೆ ಬರುವ ಸಾಧ್ಯತೆ ಇದೆ.

    • ಅನುವಂಶೀಯವಾಗಿಯೂ ಬರುವ ಸಾಧ್ಯತೆ ಇದೆ.
    • ಅಲ್ಜೈಮರ್ಸ್ ಲಕ್ಷಣಗಳು

      ಅಲ್ಜೈಮರ್ಸ್ ಲಕ್ಷಣಗಳು

      • ದಿನನಿತ್ಯದ ಚಟುವಟಿಕೆ ಮಾಡಲು ಕೂಡ ನೆನಪು ಇಲ್ಲದಿರುವುದು ಉದಾರಣೆಗೆ ಗ್ಯಾಸ್‌ ಹಚ್ಚುವುದು ಹೇಗೆ ಎಂಬುವುದು ಕೂಡ ಮರೆತು ಹೋಗುವುದು
      • ಆಹಾರ ನುಂಗಲು ಕಷ್ಟವಾಗುವುದು
      • ಬರೆಯಲು ಹಾಗೂ ಮಾತನಾಡಲು ತೊಂದರೆ ಉಂಟಾಗುವುದು ಅಂದರೆ ಏನು ಮಾತನಾಡಬೇಕು ಎಂಬುವುದೇ ತಿಳಿಯದೆ ಮರೆತು ಹೋಗುವುದು.
      • ಸ್ಥಳಗಳನ್ನು ಮರೆತು ಹೋಗುವುದು, ತನ್ನ ಮನೆಗೆ ಬರುವ ದಾರಿಯನ್ನೇ ಮರೆತು ಹೋಗುವುದು.
      • ಶುಚಿತ್ವ ಕಡೆ ಗಮನ ಕಡಿಮೆಯಾಗುವುದು
      • ನಡುವಳಿಕೆಯಲ್ಲಿ ವ್ಯತ್ಯಾಸ
      • ಕುಟುಂಬದವರಿಂದ, ಸ್ನೇಹಿತರ ಜೊತೆ ಬೆರೆಯದೆ ಒಂಟಿಯಾಗಿರುವುದು
      • ಅಲ್ಜೈಮರ್ಸ್‌ನ ವಿವಿಧ ಹಂತಗಳು

        ಅಲ್ಜೈಮರ್ಸ್‌ನ ವಿವಿಧ ಹಂತಗಳು

        ಅಲ್ಜೈಮರ್ಸ್‌ ಅನ್ನು ಏಳು ಹಂತಗಳಲ್ಲಿ ವಿಂಗಡಿಸಲಾಗಿದೆ.

        ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ಕುಟುಂಬದ ಇತಿಹಾಸವಿದ್ದರೆ ಅವರು 60 ವರ್ಷದ ನಂತರ ಪರೀಕ್ಷೆ ಮಾಡಿಸಿದರೆ ಮೊದಲನೇ ಹಂತದಲ್ಲಿಯೇ ಗುರುತಿಸಬಹುದು.

        ಎರಡನೇ ಹಂತದಲ್ಲಿ ಕಂಡು ಬರುವ ಲಕ್ಷಣವೆಂದರೆ ಮರೆವು

        ಮೂರನೇಯ ಹಂತದಲ್ಲಿ ತುಂಬಾ ಸಮೀಪದ ವ್ಯಕ್ತಿಯನ್ನು ಕೂಡ ಗುರುತಿಸಲು ಸಾಧ್ಯವಾಗದಿರುವುದು.

        ನಾಲ್ಕನೇ ಹಂತವನ್ನು ಕೂಡ ಅಷ್ಟು ಗಂಭೀರವಾದ ಹಂತ ಎಂದು ಪರಿಗಣಿಸುವುದಿಲ್ಲ, ಈ ಹಂತದಲ್ಲಿ ದಿನನಿತ್ಯದ ಕೆಲಸ ಕಾರ್ಯಗಳು ಮರೆತು ಹೋಗುವುದು.

        5ನೇ ಹಂತದಲ್ಲಿ ತನ್ನ ದಿನಚರಿ ಮಾಡಲು ಇತರರ ಸಹಾಯ ಬೇಕಾಗುವುದು

        6 ಹಾಗೂ 7ನೇ ಹಂತ ಗಂಭೀರ ಹಂತವಾಗಿದ್ದು ಈ ಹಂತದಲ್ಲಿ ತಿನ್ನುವುದು, ಕುಡಿಯುವುದು ಕೂಡ ಮರೆತು ಹೋಗುವುದು, ಇವರ ಎಲ್ಲಾ ಕಾರ್ಯವನ್ನು ಬೇರೆಯವರು ಮಾಡಬೇಕಾಗುತ್ತದೆ.

         ಅಲ್ಜೈಮರ್ಸ್ ತಡೆಗಟ್ಟಬಹುದೇ?

        ಅಲ್ಜೈಮರ್ಸ್ ತಡೆಗಟ್ಟಬಹುದೇ?

        ಅಲ್ಜೈಮರ್ಸ್ ಬಂದರೆ ಹೇಗೆ ಗುಣಮುಖರಾಗಲು ಸಾಧ್ಯವಿಲ್ಲವೋ ಅದೇ ರೀತಿ ಅದನ್ನು ತಡೆಗಟ್ಟಲು ನಿಖರವಾದ ಮಾರ್ಗಗಳಿಲ್ಲ. ಆದರೆ ಕೆಲವೊಂದು ಜೀವನಶೈಲಿ ಅಭ್ಯಾಸಗಳು ಅಲ್ಜೈಮರ್ಸ್ ಕಾಯಿಲೆ ತಡೆಗಟ್ಟಲು ಸಹಕಾರಿ ಎಂದು ಹೇಳಲಾಗುತ್ತದೆ.

        • ನೆನಪಿನ ಶಕ್ತಿ ಹೆಚ್ಚಿಸುವ ಆಟ ಆಡುವುದು, ಯೋಗ ಅಭ್ಯಾಸ ಮಾಡುವುದು
        • ಧೂಮಪಾನ ಮಾಡದಿರುವುದು
        • ಪ್ರತಿದಿನ ವ್ಯಾಯಾಮ ಮಾಡುವುದು
        • ಸೊಪ್ಪು-ತರಕಾರಿ ಹೆಚ್ಚಾಗಿ ತಿನ್ನುವುದು
        • ಆ್ಯಂಟಿಆಕ್ಸಿಡೆಂಟ್ ಇರುವ ಆಹಾರ ಸೇವಿಸುವುದು
        • ಅಲ್ಜೈಮರ್ಸ್ ರೋಗಿಗಳ ಆರೈಕೆ

          ಅಲ್ಜೈಮರ್ಸ್ ರೋಗಿಗಳ ಆರೈಕೆ

          ಅಲ್ಜೈಮರ್ಸ್ ಕುಟುಂಬದಲ್ಲಿ ಹಿರಿಯರಿಗೆ ಬಂದಾಗ ಮನೆಯವರು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಅವರನ್ನು ನೋಡಿಕೊಳ್ಳುವುದು ಶ್ರಮದ ಕೆಲಸವಾದರೂ ನಮ್ಮ ಪ್ರೀತಿ ಪಾತ್ರರಾಗಿ ನಾವು ಮಾಡಬೇಕಾಗುತ್ತದೆ. ಏಕೆಂದರೆ ಅವರಿಗೆ ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ, ಏನು ಮಾಡಬೇಕೆಂದೂ ಗೊತ್ತಿರುವುದಿಲ್ಲ. ಅವರು ಬದುಕಿರುವಷ್ಟು ಸಮಯ ಅವರನ್ನು ಆರೈಕೆ ಮಾಡುವುದು ಕರ್ತವ್ಯವಾಗಿದೆ.

English summary

Everything You Need to Know About Alzheimer’s Disease in kannada

September 21 observed as world Alzheimer’s day. Here are everything you need to know about Alzheimer’s Disease, read on,
X
Desktop Bottom Promotion