For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗಿಸುವುದೇ?

|

ಕೊರೊನಾವೈರಸ್‌ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ವಿಶ್ವದ ಹಲವಡೆ ಲಾಕ್‌ಡೌನ್‌ ಮಾಡಿ ಈ ಕ್ರೂರಿಯನ್ನು ತಡೆಗಟ್ಟಲು ಪ್ರಯತ್ನಿಸಿದರೂ ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ. ಇದೀಗ ಭಾರತದಲ್ಲಿಯೂ ಲಾಕ್‌ಡೌನ್‌ ಸಡಿಲಗೊಂಡ ಹಿನ್ನೆಲೆಯಲ್ಲಿ ಕೇಸ್‌ಗಳು ಒಂದು ಲಕ್ಷ ದಾಟಿದ್ದು, ಕರ್ನಾಟಕದಲ್ಲಿ 2000 ಗಡಿ ದಾಟಿ ಮುನ್ನುಗುತ್ತಲೇ ಇದೆ.

COVID-19: Does The Coronavirus Affect Male Fertility?

ಕೊರೊನಾವೈರಸ್‌ ಎಂಬ ಮಹಾಮಾರಿ ಬಂದರೆ ಅದರಿಂದ ಗುಣಮುಖವಾದರೂ ಅದರ ಕೆಟ್ಟ ಪರಿಣಾಮ ದೇಹದ ಮೇಲೆ ಇದ್ದೇ ಇರುತ್ತದೆ ಎನ್ನುವುದನ್ನು ಹಲವಾರು ಸಂಶೋಧನೆಗಳು ಹೇಳುತ್ತವೆ. ಕೊರೊನಾವೈರಸ್‌ ಬಂದಾಗ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ನಂತರ ಚೇತರಿಸಿಕೊಂಡರೂ ಅದು ಶ್ವಾಸಕೋಶವನ್ನು ಶಾಶ್ವತವಾಗಿ ಹಾಳು ಮಾಡಿರುತ್ತದೆ ಎಂಬುವುದನ್ನು ಅನೇಕ ಸಂಶೋಧನೆಗಳು ಹೇಳಿವೆ.

ಇತ್ತೀಚಿಗೆ ನಡೆಸಿದ ಸಂಶೋಧನೆಗಳು ಕೊರೊನಾವೈರಸ್ ಬಂದರೆ ಶ್ವಾಸಕೋಶ, ಕಿಡ್ನಿ ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲ ಇದು ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆ ಮಾಡುವುದು ಎಂದು ಹೇಳಿದೆ. ಆದರೆ ಇದರ ಬಗ್ಗೆ ಮತ್ತಷ್ಟು ಸಾಕ್ಷ್ಯಗಳು ಬೇಕಾಗಿದ್ದು ಇದರ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಕೊರೊನಾವೈರಸ್‌ ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗಿಸುವುದೇ?

ಕೊರೊನಾವೈರಸ್‌ ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗಿಸುವುದೇ?

ಅನೇಕ ಸಂಶೋಧನೆ ವರದಿಗಳು SARS-CoV-2 ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿವೆ. ಕೊರೊನಾವೈರಸ್‌ ದಾಳಿ ಮಾಡಿದಾಗ ಜ್ವರದಿಂದ ದೇಹದ ಉಷ್ಣತೆ ಹೆಚ್ಚಾಗುವುದು, ಇದು ಟೆಸ್ಟಿಕಲ್ಸ್ ಉಷ್ಣತೆ ಹೆಚ್ಚು ಮಾಡುವುದು ಇದರಿಂದ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಚೀನಾದಲ್ಲಿ ನಡೆಸಿದ ಪರೀಕ್ಷೆ

ಚೀನಾದಲ್ಲಿ ನಡೆಸಿದ ಪರೀಕ್ಷೆ

ಕೊರೊನಾವೈರಸ್‌ನ ಪ್ರಮುಖ ಲಕ್ಷಣ ತೀವ್ರ ಜ್ವರ, ಕೊರೊನಾ ವೈರಸ್‌ ಸೋಂಕು ತಗುಲಿದರೆ ಇದರಿಂದ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗುವುದೇ ಎಂದು ಚೀನಾದಲ್ಲಿ ಪರೀಕ್ಷೆ ನಡೆಸಲಾಯಿತು. ಕೊರೊನಾವೈರಸ್‌ ವ್ಯಕ್ತಿ ಬಂದಿದ್ದ ಪುರುಷನ ಸಂತಾನೋತ್ಪತ್ತಿ ಹಾರ್ಮೋನ್‌ಗೂ ಹಾಗೂ ಕೋವಿಡ್ 19 ಬಾರದೇ ಇದ್ದ ಪುರುಷನ ಸಂತಾನೋತ್ಪತ್ತಿ ಹಾರ್ಮೋನ್‌ಗೂ ವ್ಯತ್ಯಾಸ ಇರುವುದು ಅದರಿಂದ ತಿಳಿದುಬಂತು, ಆದರೆ ಅವರ ಟೆಸ್ಟೋಸ್ಟಿರೋನ್ ಪ್ರಮಾಣದಲ್ಲಿ ಏನೂ ವ್ಯತ್ಯಾಸ ಇರಲಿಲ್ಲ.

ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ

ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ

ನೋವೆಲ್ ಕೊರೊನಾವೈರಸ್‌ ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆ ಮಾಡುವ ಸಾಮಾರ್ಥ್ಯ ಹೊಂದಿದೆ, ಆದರೆಇದರ ಬಗ್ಗೆ ನಿಖರ ಪುರಾವೆಗಳಿಲ್ಲ, ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಆದ್ದರಿಂದ ಇದು ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗಿಸಿದೆಯೇ ಎಂದು ತಿಳಿಯಲು ಬಳಿಕ ಫರ್ಟಿಲಿಟಿ ಟೆಸ್ಟ್ ಮಾಡಿಸುವುದು ಒಳ್ಳೆಯದು.

ವೀರ್ಯಾಣುಗಳ ಸಂಖ್ಯೆ ಕುಗ್ಗಿದೆಯೇ

ವೀರ್ಯಾಣುಗಳ ಸಂಖ್ಯೆ ಕುಗ್ಗಿದೆಯೇ

ಕೊರೊನಾವೈರಸ್‌ನಿಂದ ಟೆಸ್ಟಸ್ ಹಾಳಾಗಿ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗಿದೆಯೇ ಎಂದು ತಿಳಿಯಲು ಪರೀಕ್ಷೆ ಮಾಡಿಸುವುದು ಒಳ್ಳೆಯದು. ಇದರಿಂದ ವೀರ್ಯಾಣುಗಳ ಸಂಖ್ಯೆ ಕುಗ್ಗಿದೆಯೇ ಎಂದು ತಿಳಿಯುತ್ತದೆ. ಪ್ರಾರಂಭದ ಹಂತದಲ್ಲಿ ತಿಳಿದರೆ ವೈದ್ಯರಿಗೆ ಚಿಕಿತ್ಸೆ ಮೂಲಕ ಸರಿಪಡಿಸಲು ಸಾಧ್ಯವಾಗಬಹುದು.

ಆತಂಕ ಬೇಡ

ಆತಂಕ ಬೇಡ

ಕೊರೊನಾವೈರಸ್‌ ಬಂದು ಅದರಿಂದ ಗುಣಮುಖರಾದವರು ತಮ್ಮ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗಿರಬಹುದು ಎಂದು ಆತಂಕ ಪಡುವ ಅವಶ್ಯಕತೆಯಿಲ್ಲ. ಇನ್ನು ಇದರ ಬಗ್ಗೆ ಹಲವಾರು ಅಧ್ಯಯನಗಳು ನಡೆಯುತ್ತಿವೆ. ಕೋವಿಡ್‌ 19ನಿಂದ ಗುಣಮುಖರಾದ ಬಳಿಕ ಸಂತಾನೋತ್ಪತ್ತಿ ಸಾಮಾರ್ಥ್ಯದ ಪರೀಕ್ಷೆ ನಡೆಸಿ,ಇದರಿಂದ ನಿಮ್ಮ ಫಲವತ್ತತೆ ಸಾಮಾರ್ಥ್ಯ ತಿಳಿಯುವುದು. ಇನ್ನೂ ಮದುವೆಯಾಗದೇ ಇರುವವರು, ಮಕ್ಕಳು ಆಗದೇ ಇರುವವರು ಕೊರೊನಾವೈರಸ್‌ನಿಂದ ಗುಣಮುಖರಾದ ಬಳಿಕ ಪರೀಕ್ಷೆ ಮಾಡಿಸಿದರೆ ಮುಂದೆ ಉಂಟಾಗುವ ಸಮಸ್ಯೆ ತಡೆಗಟ್ಟಬಹುದು.

English summary

COVID-19: Does The Coronavirus Affect Male Fertility?

A recent study has explored the effect the coronavirus has on male fertility, as previous reports that lacked proof had claimed that the virus can impact male fertility.
X
Desktop Bottom Promotion