For Quick Alerts
ALLOW NOTIFICATIONS  
For Daily Alerts

ಮಧುಮೇಹದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಸತ್ಯಾಂಶಗಳು

|

ಮಧುಮೇಹ ಮೊದಲೆಲ್ಲಾ ತುಂಬಾ ಕಡಿಮೆ ಕಂಡು ಬರುತ್ತಿತ್ತು. ನಂತರದ ದಿನಗಳಲ್ಲಿ ವಯಸ್ಸು ನಲ್ವತ್ತು ದಾಟುತ್ತಿದ್ದಂತೆ ಮಧುಮೇಹ ಸಮಸ್ಯೆ ಬರತೊಡಗಿದರಿಂದ ವಯಸ್ಸು ನಲ್ವತ್ತು ದಾಟಿದೆಯೇ ಮಧುಮೇಹ ಸಾಮಾನ್ಯ ಎಂಬಂತೆ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಮಧುಮೇಹ ಹೆಚ್ಚಾಗುತ್ತಿರಲು ಪ್ರಮುಖ ಕಾರಣ ಜೀವನಶೈಲಿ.

ದೈಹಿಕ ವ್ಯಾಯಾಮ ಇಲ್ಲದೇ ಇರುವುದು, ಅನಾರೋಗ್ಯಕರ ಆಹಾರಶೈಲಿಯಿಂದಾಗಿ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುತ್ತದೆ . ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ದೇಹವು ಇನ್ಸುಲಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಮಾಡಿದಾಗ ಅಥವಾ ಜೀವಕಣಗಳು ಉತ್ಪತ್ತಿಯಾದ ಇನ್ಸುಲಿನ್‌ಗೆ ಪ್ರತಿಕ್ರಿಯಿಸಿದೆ ಇದ್ದಾಗ ಮಧುಮೇಹ ಉಂಟಾಗುತ್ತದೆ.

Myths About Diabetes

ಮಧುಮೇಹದ ಪ್ರಮುಖ ಲಕ್ಷಣಗಳೆಂದರೆ ಆಗಾಗ ಮೂತ್ರವಿಸರ್ಜನೆಗೆ ಹೋಗುವುದು, ಅತಿಯಾದ ಬಾಯಾರಿಕೆ, ತಲೆಸುತ್ತು, ತೂಕ ಇಳಿಕೆ, ಕಣ್ಣು ಮಂಜಾಗುವುದು, ಗಾಯವಾದರೆ ಬೇಗನೆ ಒಣಗಿದಿರುವುದು, ದೇಹದಲ್ಲಿ ಉರಿಯೂತ ಮುಂತಾದವುಗಳು. ಮಧುಮೇಹ ಬಂದರೆ ಅದನ್ನು ಆಹಾರಕ್ರಮದ ಮೂಲಕ ನಿಯಂತ್ರಣದಲ್ಲಿಡಬಹುದಾಗಿದೆ.

ಇಂಟರ್‌ನ್ಯಾಷನಲ್ ಡಯಾಬಿಟಿಕ್ ಫೌಂಡೇಷನ್ ಪ್ರಕಾರ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅಧಿಕವಿದೆ ಹಾಗೂ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. ನಮ್ಮ ದೇಶದಲ್ಲಿ 62 ಮಿಲಿಯನ್ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಮಧುಮೇಹ ಕಾಯಿಲೆ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ತಪ್ಪು ಕಲ್ಪನೆಗಳನ್ನು ನಿಜವೆಂದು ನಂಬಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಇಲ್ಲಿ ನಾವು ಮಧುಮೇಹದ ಬಗ್ಗೆ ಇರುವ ತಪ್ಪುಗಳೇನು, ಆದರೆ ನಿಜವಾದ ಅಂಶಗಳಾವುವು ಎಂದು ವಿವರಿಸಿದ್ದೇವೆ ನೋಡಿ:

ತಪ್ಪು ಕಲ್ಪನೆ 1: ಮಧುಮೇಹಿಗಳು ಸಕ್ಕರೆ ತಿನ್ನಬಾರದು

ತಪ್ಪು ಕಲ್ಪನೆ 1: ಮಧುಮೇಹಿಗಳು ಸಕ್ಕರೆ ತಿನ್ನಬಾರದು

ಸತ್ಯಾಂಶ: ಮಧುಮೇಹಿಗಳು ಸಕ್ಕರೆ ತಿನ್ನಬಾರದು ಎಂದು ಬಹುತೇಕ ಮಧುಮೇಹಿಗಳು ನಂಬಿದ್ದಾರೆ. ಒಮ್ಮೆ ಮಧುಮೇಹ ಬಂದರೆ ಶುಗರ್‌ಫ್ರೀ ಡಯಟ್ ಅಂದರೆ ಸಕ್ಕರೆ ಹಾಕದ ಆಹಾರಕ್ರಮ ಪಾಲಿಸಬೇಕೆಂದೇ ನಂಬಿರುತ್ತಾರೆ. ಮಧುಮೇಹಿಗಳು ಸಕ್ಕರೆ ತಿನ್ನಲೇಬಾರದು ಅಂತೇನಿಲ್ಲ, ಮಿತಿಯಲ್ಲಿ ಸಿಹಿ ಪದಾರ್ಥಗಳನ್ನು ತಿನ್ನಬಹುದು. ಮಧುಮೇಹಿಗಳು ಮೊದಲು ಗಮನ ನೀಡಬೇಕಾಗಿರುವುದು ಕಾರ್ಬೋಹೈಡ್ರೇಟ್ಸ್ ಇರುವ ಆಹಾರದ ಕಡೆಗೆ. ಕಾರ್ಬೋಹೈಡ್ರೇಟ್ಸ್ ಆಹಾರ ಕಡಿಮೆ ತಿಂದಷ್ಟೂ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಸಕ್ಕರೆಯಂಶ ಇರುವ ಆಹಾರ ಬಿಟ್ಟು ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದಿಲ್ಲ.

ತಪ್ಪು ಕಲ್ಪನೆ 2: ಟೈಪ್ 2 ಮಧುಮೇಹ ಬಂದರೆ ಹೆಚ್ಚಿನ ತೊಂದರೆಯಿಲ್ಲ

ತಪ್ಪು ಕಲ್ಪನೆ 2: ಟೈಪ್ 2 ಮಧುಮೇಹ ಬಂದರೆ ಹೆಚ್ಚಿನ ತೊಂದರೆಯಿಲ್ಲ

ಟೈಪ್‌ 2 ಮಧುಮೇಹ ಬಂದಾಗ ಅದನ್ನು ನಿಯಂತ್ರಣದಲ್ಲಿ ಇಡದೇ ಹೋದರೆ ಇದರಿಂದ ಮುಂದೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮಧುಮೇಹದ ವಿಧ ಯಾವುದೇ ಆಗಿರಲಿ ಒಮ್ಮೆ ಬಂತೆಂದರೆ ಎಚ್ಚರಿಕೆವಹಿಸುವುದು ಅತ್ಯಗತ್ಯ. ಮಧುಮೇಹ ನಿಯಂತ್ರಣದಲ್ಲಿ ಮಾಡಬೇಕಾಗಿರುವುದು ಆಹಾರಕ್ರಮದ ಪಾಲನೆ ಹಾಗೂ ವ್ಯಾಯಾಮ.

ತಪ್ಪು ಕಲ್ಪನೆ 3: ಅತಿಯಾದ ಮೈತೂಕವಿದ್ದರೆ ಮಧುಮೇಹ ಬರುವುದು

ತಪ್ಪು ಕಲ್ಪನೆ 3: ಅತಿಯಾದ ಮೈತೂಕವಿದ್ದರೆ ಮಧುಮೇಹ ಬರುವುದು

ಮಧುಮೇಹ ಸಮಸ್ಯೆಗೆ ಒಬೆಸಿಟಿ ಅಥವಾ ಮೈ ಬೊಜ್ಜು ಒಂದು ಕಾರಣ ಹೌದು. ಆದರೆ ದಪ್ಪಗಿರುವ ಎಲ್ಲರಿಗೂ ಮಧುಮೇಹ ಬರುತ್ತದೆ ಎನ್ನುವುದು ಸುಳ್ಳು. ತುಂಬಾ ತೆಳ್ಳಗಿದ್ದವರಿಗೂ ಮಧುಮೇಹ ಬರುತ್ತದೆ. ಮಧುಮೇಹಿಗಳಲ್ಲಿ ಶೇ. 20ರಷ್ಟು ಜನರು ಸಾಮಾನ್ಯ ಮೈ ಕಟ್ಟು ಹೊಂದಿರುತ್ತಾರೆ. ಆದ್ದರಿಂದ ದಪ್ಪಗಿದ್ದವರಿಗೆ ಮಾತ್ರ ಮಧುಮೇಹ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ. ದೈಹಿಕ ವ್ಯಾಯಾಮ ಕಡಿಮೆಯಾಗಿ, ಆರೋಗ್ಯಕರ ಅಹಾರಕ್ರಮ ಪಾಲಿಸದಿದ್ದರೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು.

ತಪ್ಪು ಕಲ್ಪನೆ 4: ಮಧುಮೇಹ ಬಂದರೆ ಹಣ್ಣುಗಳನ್ನು ತಿನ್ನಬಾರದು

ತಪ್ಪು ಕಲ್ಪನೆ 4: ಮಧುಮೇಹ ಬಂದರೆ ಹಣ್ಣುಗಳನ್ನು ತಿನ್ನಬಾರದು

ಹಣ್ಣುಗಳು ಸಿಹಿಯಾಗಿರುತ್ತದೆ, ಆದ್ದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು ಎಂದು ಹೆದರಿ ಕೆಲ ಮಧುಮೇಹಿಗಳು ಹಣ್ಣುಗಳನ್ನು ತಿನ್ನುವುದಿಲ್ಲ. ಆದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ತಿಂದಾಗ. ಹಣ್ಣುಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಆದ್ದರಿಂದ ಹಣ್ಣುಗಳನ್ನು ಮಿತಿಯಲ್ಲಿ ತಿನ್ನಬಹುದು.

ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂದು ವೈದ್ಯರ ಬಳಿ ಸಲಹೆ ಕೇಳಿದ ಬಳಿಕವಷ್ಟೇ ಸೇವಿಸಿ.

ತಪ್ಪು ಕಲ್ಪನೆ 5: ಮಧುಮೇಹಿಗಳು ವ್ಯಾಯಾಮ/ಆಟ ಆಡಬಾರದು

ತಪ್ಪು ಕಲ್ಪನೆ 5: ಮಧುಮೇಹಿಗಳು ವ್ಯಾಯಾಮ/ಆಟ ಆಡಬಾರದು

ಇದು ಶುದ್ಧ ತಪ್ಪು ಕಲ್ಪನೆ. ಮಧುಮೇಹಿಗಳು ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ಏರೋಬಿಕ್ಸ್, ಯೋಗ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಿ, ದೇಹದ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ವ್ಯಾಯಾಮ ತುಂಬಾ ಸಹಕಾರಿ. ದಿನದಲ್ಲಿ ಅರ್ಧ ಗಂಟೆ ನಡೆಯುವ ವ್ಯಾಯಾಮ ತಪ್ಪದೆ ಮಾಡಿ.

ತಪ್ಪು ಕಲ್ಪನೆ 6: ಸಿಹಿ ಪದಾರ್ಥ ಹೆಚ್ಚು ತಿನ್ನುವುದರಿಂದ ಮಧುಮೇಹ ಬರುವುದು

ತಪ್ಪು ಕಲ್ಪನೆ 6: ಸಿಹಿ ಪದಾರ್ಥ ಹೆಚ್ಚು ತಿನ್ನುವುದರಿಂದ ಮಧುಮೇಹ ಬರುವುದು

ಸತ್ಯಾಂಶ: ಸಿಹಿ ಪದಾರ್ಥ ಹೆಚ್ಚು ತಿನ್ನುವುದರಿಂದ ಮಧುಮೇಹ ಬರಲ್ಲ, ಮಧುಮೇಹ ಬಂದ ಸಿಹಿ ಪದಾರ್ಥಗಳ ಸೇವನೆ ನಿಯಂತ್ರಣದಲ್ಲಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಟೈಪ್ 1 ಮಧುಮೇಹ ವಂಶವಾಹಿನಿಯಿಂದ ಹಾಗೂ ಮತ್ತಿತರ ಕಾರಣಗಳಿಂದ ಉಂಟಾಗುವುದು. ಟೈಪ್ 2 ಮಧುಮೇಹ ವಂಶಪಾರಂಪರ್ಯವಾಗಿ ಹಾಗೂ ಜೀವನಶೈಲಯಿಂದಾಗಿ ಉಂಟಾಗುವುದು. ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಅಪ್ಪ-ಅಮ್ಮನಿಗೆ ಮಧುಮೇಹವಿದ್ದರೂ ನಮಗೆ ಮಧುಮೇಹ ಬರದಂತೆ ತಡಗಟ್ಟಬಹುದಾಗಿದೆ.

ತಪ್ಪು ಕಲ್ಪನೆ 7: ಎಲ್ಲಾ ಬಗೆಯ ಮಧುಮೇಹ ಒಂದೇ

ತಪ್ಪು ಕಲ್ಪನೆ 7: ಎಲ್ಲಾ ಬಗೆಯ ಮಧುಮೇಹ ಒಂದೇ

ಮಧುಮೇಹದಲ್ಲಿ 3 ವಿಧ. ಟೈಪ್ 1 ಮಧುಮೇಹ, ಟೈಪ್‌ 2 ಮಧುಮೇಹ ಹಾಗೂ ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ. ಆದ್ದರಿಂದ ಎಲ್ಲಾ ಬಗೆಯ ಮಧುಮೇಹ ಒಂದೇ ಅಲ್ಲ. ಪ್ರತಿಯೊಂದು ಬಗೆಯ ಮಧುಮೇಹ ವಿಭಿನ್ನವಾಗಿದೆ. ಇವುಗಳಲ್ಲಿ ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ಹೆರಿಗೆಯಾದ ಬಳಿಕ ಇಲ್ಲವಾಗುವುದು. ಆದರೆ ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದಿದ್ದರೆ ಮುಂದೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ.

ತಪ್ಪು ಕಲ್ಪನೆ 8: ಧ್ಯಾನ ಮಾತ್ರ ಮಾಡುವ ಮೂಲಕ ಮಧುಮೇಹ ನಿಯಂತ್ರಣದಲ್ಲಿಡಬಹುದು

ತಪ್ಪು ಕಲ್ಪನೆ 8: ಧ್ಯಾನ ಮಾತ್ರ ಮಾಡುವ ಮೂಲಕ ಮಧುಮೇಹ ನಿಯಂತ್ರಣದಲ್ಲಿಡಬಹುದು

ಧ್ಯಾನ ಮಾತ್ರ ಮಾಡುವುರಿಂದ ಮಧುಮೇಹ ನಿಯಂತ್ರಣದಲ್ಲಿಡಲು ಸಾಧ್ಯವಿಲ್ಲ. ಧ್ಯಾನ ಮಾನಸಿಕ ಒತ್ತಡವನ್ನು ಹೊರಹಾಕಲು ಸಹಾಯ ಮಾಡುತ್ತದೆ,ಇದರ ಜೊತೆಗೆ ವ್ಯಾಯಾಮ ಹಾಗೂ ಆಹಾರಕ್ರಮ ಪಾಲಿಸಲೇಬೇಕು. ಇನ್ನು ಕೆಲವರಿಗೆ ಬರೀ ಆಹಾರಕ್ರಮದಿಂದ ಮಧುಮೇಹ ನಿಯಂತ್ರಣದಲ್ಲಿಲು ಸಾಧ್ಯವಾಗುವುದಿಲ್ಲ, ಅಂಥವರು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ.

ತಪ್ಪು ಕಲ್ಪನೆ 9: ಇನ್ಸುಲಿನ್ ತೆಗೆದುಕೊಳ್ಳುವುದರಿಂದ ತೊಂದರೆಗಳು ಉಂಟಾಗುತ್ತದೆ

ತಪ್ಪು ಕಲ್ಪನೆ 9: ಇನ್ಸುಲಿನ್ ತೆಗೆದುಕೊಳ್ಳುವುದರಿಂದ ತೊಂದರೆಗಳು ಉಂಟಾಗುತ್ತದೆ

ಇನ್ಸುಲಿನ್ ಅಪಾಯಕಾರಿ ಎನ್ನುವುದು ತಪ್ಪು ಕಲ್ಪನೆ. ಮಧುಮೇಹಿಗಳಿಗೆ ವೈದ್ಯರು ಮೊದಲಿಗೆ ಅಹಾರಕ್ರಮ ಹಾಗೂ ವ್ಯಾಯಾಮ ಮಾಡಲು ಸೂಚಿಸುತ್ತಾರೆ. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬಂದರೆ ಹಾಗೇ ಮುಂದುವರೆಸಿಕೊಂಡು ಹೋಗಲು ಸೂಚಿಸುತ್ತಾರೆ. ಆದರೆ ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಾರದಿದ್ದಾಗ ಇನ್ಸುಲಿನ್ ತೆಗೆದುಕೊಳ್ಳಲೇಬೇಕು. ಒಮ್ಮೆ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಂಡರೆ ನಂತರ ಅದನ್ನು ಮುಂದುವರೆಸಬೇಕಾಗಿರುವುದರಿಂದ ಮೊದಲಿಗೆ ಆಹಾರಕ್ರಮದಲ್ಲಿ ನಿಯಂತ್ರಣ ಮಾಡಲು ಸೂಚಿಸುತ್ತಾರೆ.

ತಪ್ಪು ಕಲ್ಪನೆ 10: ಮಧುಮೇಹ ಬಂದರೆ ಇನ್ಸುಲಿನ್ ಮಾತ್ರೆ ತೆಗೆದುಕೊಳ್ಳಲೇಬೇಕು

ತಪ್ಪು ಕಲ್ಪನೆ 10: ಮಧುಮೇಹ ಬಂದರೆ ಇನ್ಸುಲಿನ್ ಮಾತ್ರೆ ತೆಗೆದುಕೊಳ್ಳಲೇಬೇಕು

ಈ ಮೊದಲೇ ಹೇಳಿದಂತೆ ಮಧುಮೇಹ ಬಂದವರು ಎಲ್ಲರೂ ಇನ್ಸುಲಿನ್ ತೆಗೆದುಕೊಳ್ಳಬೇಕಾಗಿಲ್ಲ. ಅದು ಅವರ ದೇಹದಲ್ಲಿ ಇನ್ಸುಲಿನ್ ಎಷ್ಟು ಬಿಡುಗಡೆಯಾಗುತ್ತದೆ, ರಕ್ತದಲ್ಲಿ ಸಕ್ಕರೆಯಂಶ ಎಷ್ಟಿದೆ ಎಂಬುವುದನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಟೈಪ್ 1 ಮಧುಮೇಹ ಬಂದರ ದೇಹವು ಇನ್ಸುಲಿನ್ ಉತ್ಪತ್ತಿ ಕಡಿಮೆ ಮಾಡುವುದರಿಂದ ಇನ್ಸುಲಿನ್ ತೆಗೆದುಕೊಳ್ಳಬೇಕು. ಟೈಪ್ 2 ಇರುವವರಿಗೆ ಮಾತ್ರೆ ಹಾಗೂ ಆಹಾರಕ್ರಮದಿಂದ ನಿಯಂತ್ರಿಸಬಹುದು.

English summary

Common Myths And Its Facts About Diabetes

Misconceptions about diabetes could affect how diabetic patients take care of themselves. Eating well when you have diabetes can be a tough task but, it's not difficult either
X
Desktop Bottom Promotion