For Quick Alerts
ALLOW NOTIFICATIONS  
For Daily Alerts

ಇಂದಿನ ಪೀಳಿಗೆಯವರಿಗೆ ಈ 9 ಆರೋಗ್ಯ ಸಮಸ್ಯೆಯ ಅಪಾಯವಿದೆ

|

ಕಾಲಗಳು ಬದಲಾದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ. ಅದರಲ್ಲೂ 2000ರದ ನಂತರ ಹುಟ್ಟಿದ ಪೀಳಿಗೆಯ ಜೀವನಶೈಲಿ ಸಂಪೂರ್ಣ ಭಿನ್ನವಾಗಿದೆ. ಇವರನ್ನು ಮಿಲೇನಿಯಲ್ಸ್ ಎಂದು ಕರೆಯಲಾಗುವುದು. 2000ದ ನಂತರ ಅಂದರೆ ಆರ್ಥಿಕಾಭಿವೃದ್ಧಿ, ಜಾಗತೀಕರಣದ ನಂತರ ತಂತ್ರಜ್ಞಾನದ ಸೌಲಭ್ಯವನ್ನು ಅನುಭವಿಸುತ್ತಿರುವ ವರ್ಗ.

1980-90ವರೆಗಿನ ಆರ್ಥಿಕ ಪರಿಸ್ಥಿತಿಯೇ ಭಿನ್ನವಾಗಿತ್ತು. ಅವರ ಕೈಯಲ್ಲಿ ಮೊಬೈಲ್ ಇರಲಿಲ್ಲ, ಎಟಿಎಂ ಕಾರ್ಡ್‌ಗಳಿರಲಿಲ್ಲ, ಆನ್‌ಲೈನ್‌ ಶಾಪಿಂಗ್‌ಗಳಿರಲಿಲ್ಲ. ಆದರೆ ಈಗ ಮೊಬೈಲ್ ಇಲ್ಲದೆ ಒಂದು ಕ್ಷಣ ಇರಲಾರರು, ಸಮಸ್ಯೆಗೆ ಗೂಗಲ್ ಮೂಲಕ ಉತ್ತರ ಕಂಡು ಕೊಳ್ಳುವ ಚಾಣಾಕ್ಷರು. ಕುಳಿತಲ್ಲಿಯೇ ಜಗತ್ತಿನ ಆಗು ಹೋಗುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ.

Millennials

ಇವರು ಆಧುನಿಕತೆಯ ಜೀವನ ಶೈಲಿ ತುಂಬಾ ಇಷ್ಟಪಡುತ್ತಾರೆ. ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಇವರು ಸ್ವಲ್ಪ ದುರ್ಬಲರು ಎಂದೇ ಹೇಳಬಹುದು. ತುಂಬಾ ಚಿಕ್ಕ ಪ್ರಾಯದಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಬಗ್ಗೆ BCBSA (Blue Cross Blue Shield Association) ಇತ್ತೀಚೆಗೆ ಮಾಹಿತಿಯನ್ನು ಕಲೆ ಹಾಕಿತು. ಅದರಲ್ಲಿ 1990ರ ನಂತರ ಹುಟ್ಟದವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಆಗ ಮಿಲೇನಿಯಲ್ಸ್‌ ಈ ಕೆಳಗಿನ ಸಾಮಾನ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
1. ಮಧುಮೇಹ

1. ಮಧುಮೇಹ

ಅನೇಕ ಸಂಶೋಧನೆ ಹಾಗೂ ವರದಿಗಳಿಂದ ಮಿಲೇನಿಯಲ್ಸ್ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಲ್ಲಿ ವಯಸ್ಸು 35 ತುಂಬುವುದಕ್ಕೆ ಮೊದಲೇ ಟೈಪ್‌ 2 ಮಧುಮೇಹದಂತಹ ಸಮಸ್ಯೆ ಕಂಡು ಬರುತ್ತಿದೆ ಎಂದು ತಿಳಿದು ಬಂದಿದೆ. ಈ ಪೀಳಿಗೆಯವರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ಚಿಕ್ಕ ಪ್ರಾಯದಲ್ಲಿಯೇ ಕಂಡು ಬರುತ್ತಿದೆ.

ಕೂತಲ್ಲಿಯೇ ಕೂತು ಕೆಲಸ ಮಾಡುವುದು, ಯಾವುದೇ ದೈಹಿಕ ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಈ ಪೀಳಿಗೆಯವರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇನ್ನು ಆಹಾರಶೈಲಿ ಕೂಡ ಹೆಚ್ಚಾಗಿ ರೆಡಿಮೇಡ್ ಹಾಗೂ ಫಾಸ್ಟ್‌ಫುಡ್ಸ್ ಬಳಸುತ್ತಿದ್ದಾರೆ. ಇವೆಲ್ಲಾ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

2. ತಂಬಾಕು ಸಂಬಂಧಿತ ಕಾಯಿಲೆ

2. ತಂಬಾಕು ಸಂಬಂಧಿತ ಕಾಯಿಲೆ

ಈ ಪೀಳಿಗೆಯವರಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚಾಗಿ ಇದೆ. ಫ್ಯಾಷನ್‌ಗಾಗಿ ಪ್ರಾರಂಭಿಸಿದ ಧೂಮಪಾನ ನಂತರ ಚಟವಾಗಿ ಬದಲಾಗುತ್ತಿದೆ. ಇದರಿಂದ ಅವರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ. ಕ್ಯಾನ್ಸರ್, ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನಕ್ಕೆ ಧೂಮಪಾನ ಅಭ್ಯಾಸ ಪ್ರಮುಖ ಕಾರಣವಾಗುತ್ತಿದೆ. ಧೂಮಪಾನ ಚಟದಿಂದ ಶ್ವಾಸಕೋಶದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ.

3. ಅಧಿಕ ಕೊಲೆಸ್ಟ್ರಾಲ್

3. ಅಧಿಕ ಕೊಲೆಸ್ಟ್ರಾಲ್

ನೀವು ಹೆಚ್ಚೇನು ದಪ್ಪವಿಲ್ಲದಿದ್ದರೂ ಕೂಡ ಹೃದಯದ ಆರೋಗ್ಯದ ಕಡೆ ಗಮನ ಕೊಡಲೇಬೇಕು. 20-30 ವರ್ಷದಲ್ಲಿಯೇ ಹೃದಯಾಘಾತ ಸಮಸ್ಯೆ ಕಂಡು ಬರುತ್ತಿದೆ. ಕೊಲೆಸ್ಟ್ರಾಲ್ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಕಂಡು ಬರುತ್ತಿದೆ. ಕೊಲೆಸ್ಟ್ರಾಲ್‌ ಅನ್ನು ಚಿಕ್ಕ ಪ್ರಾಯದಲ್ಲಿಯೇ ನಿಯಂತ್ರಣದಲ್ಲಿ ಇಡದಿದ್ದರೆ ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮೊಬೈಲ್‌ ಕಳೆಯುವ ಸಮಯದಲ್ಲಿ ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಟ್ಟರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 4. ಕರುಳು, ಅಲ್ಸರ್ ಸಂಬಂಧಿಸಿದ ಸಮಸ್ಯೆ

4. ಕರುಳು, ಅಲ್ಸರ್ ಸಂಬಂಧಿಸಿದ ಸಮಸ್ಯೆ

ಅಜೀರ್ಣ, ಹೊಟ್ಟೆಉರಿ, ಗ್ಯಾಸ್ಟ್ರಿಕ್ ಸಮಸ್ಯೆ ಇವೆಲ್ಲಾ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ಎಣ್ಣೆಯಿರುವ, ಮಸಾಲೆ ಹೆಚ್ಚಿರುವ ಆಹಾರಗಳ ಸೇವನೆ, ಅಧಿಕ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದು, ತಂಪು ಪಾನೀಯ ಸೇವನೆ, ನಾರಿನ ಪದಾರ್ಥಗಳನ್ನು ಕಡಿಮೆ ಸೇವಿಸುವುದು, ಆರೋಗ್ಯಕರ ಆಹಾರದ ಬದಲಿಗೆ ಬಾಯಿಗೆ ರುಚಿಯಾದ ಆರೋಗ್ಯಕ್ಕೆ ಹಾನಿಕಾರಕವಾದ ಆಹಾರಗಳ ಸೇವನೆ ಇವುಗಳಿಮದ ಅಜೀರ್ಣ, ಅಲ್ಸರ್, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿದೆ.

5. ಮಾನಸಿಕ ಸಮಸ್ಯೆ

5. ಮಾನಸಿಕ ಸಮಸ್ಯೆ

ಮಿಲೇನಿಯಲ್ಸ್ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತುಂಬಾ ಚಿಕ್ಕ ಪ್ರಾಯದಲ್ಲಿ ಕಲಿಕೆಯ ಒತ್ತಡ ಅವರ ಮೇಲೆ ಇರುತ್ತದೆ. ಕಲಿಕೆಯ ಬಳಿಕ ಕೆಲಸದ ಒತ್ತಡ ಹೀಗೆ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಒಂಟಿತನ, ನಿರಾಸೆ, ಅತೀಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಾ ಬೇರೆಯವರೊಂದಿಗೆ ಬೆರೆಯದೆ ಇರುವುದು ಇವೆಲ್ಲಾ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತಿದೆ

6. ಹೈಪರ್ ಆ್ಯಕ್ಟಿವ್

6. ಹೈಪರ್ ಆ್ಯಕ್ಟಿವ್

ಹೈಪರ್ ಆ್ಯಕ್ಟಿವ್ ಮಕ್ಕಳು ಒಂದು ಕಡೆ ಕೂರಲ್ಲ, ಏನಾದರೂ ಒಂದು ಮಾಡುತ್ತಲೇ ಇರುತ್ತವೆ. ಅತಿಯಾಗಿ ಮಾತನಾಡುವುದು, ಓಡಾಡುವುದು ಎಲ್ಲಾ ಮಾಡುತ್ತಿರುತ್ತಾರೆ. ಇದು ಒಂದು ರೀತಿಯ ಸಮಸ್ಯೆಯೇ. ತುಂಬಾ ಭಿನ್ನವಾಗಿ ವರ್ತಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ.

7. ಮದ್ಯಪಾನದಿಂದ ಬರುವ ಆರೋಗ್ಯ ಸಮಸ್ಯೆ

7. ಮದ್ಯಪಾನದಿಂದ ಬರುವ ಆರೋಗ್ಯ ಸಮಸ್ಯೆ

ಶೇ. 25ರಷ್ಟು ಮಿಲೇನಿಯಲ್ಸ್ ಮದ್ಯಪಾನ ಚಟಕ್ಕೆ ದಾಸರಾಗುತ್ತಿದ್ದಾರೆ. ಕೆಲವರು ಸಹವಾಸದಿಂದ ಮದ್ಯಪಾನ ಮಾಡುವುದು ಕಲಿತರೆ, ಇನ್ನು ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಮದ್ಯಪಾನ ಮೊರೆ ಹೋಗುತ್ತಾರೆ. ಮದ್ಯಪಾನ ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲ ಮಾನಸಿಕ ಸ್ವಾಸ್ಥ್ಯವನ್ನು ಕೂಡ ಹಾಳು ಮಾಡುತ್ತದೆ.

8. ಚಟ

8. ಚಟ

ಮಿಲೇನಿಯಲ್ಸ್ ಮತ್ತೊಂದು ಸಮಸ್ಯೆಯೆಂದರೆ ಡ್ರಗ್ಸ್ ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಚಟದಿಂದಾಗಿ ಆರೋಗ್ಯವನ್ನು ಕಳೆದುಕೊಂಡು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಚಟಕ್ಕೆ ಚಿಕಿತ್ಸೆ ನೀಡಿದರೆ ಈ ಚಟದಿಂದ ಹೊರಬರಬಹುದು.

 9. ಖಿನ್ನತೆ

9. ಖಿನ್ನತೆ

ಇತ್ತೀಚಿನ ಪೀಳಿಗೆಯವರಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ. ಶೇ.40 ಮಿಲೇನಿಯಲ್ಸ್ ಈ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಖಿನ್ನತೆ ಎನ್ನುವುದು ತುಂಬಾ ಅಪಾಯಕಾರಿ ಸಮಸ್ಯೆಯಾಗಿದೆ. ಇದನ್ನು ಪ್ರಾರಂಭದಲ್ಲಿಯೇ ಗುರುತಿಸದಿದ್ದರೆ ವ್ಯಕ್ತಿ ಆತ್ಮಹತ್ಯೆ ಮಾಡುವ ಸಾಧ್ಯತೆ ಇರುತ್ತದೆ. ಖಿನ್ನತೆ ಇರುವವರು ಇತರರ ಜತೆ ಸೇರುವುದಿಲ್ಲ. ಮೇಲ್ನೋಟಕ್ಕೆ ಎಲ್ಲಾ ಸರಿಯಾಗಿದೆ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ತಮ್ಮ ಆಪ್ತರು ಖಿನ್ನತೆಯಿಂದ ಬಳಲುತ್ತಿದ್ದರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು.

English summary

Common Health Conditions Affecting Millennials

The data gathered a list of the common health problems affecting the millennials and they are as follows. Take a look.
X
Desktop Bottom Promotion